ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನರಿಗಳು ಕಾಯುತ್ತಿವೆ
ಕುರಿಗಳನ್ನು
ಏಳು ದಶಕಗಳ ಹಿಂದೆ
ಕೆಂಪು ಮಂಗಗಳು
ನಮ್ಮ ನೆಲ ನಮಗೆ
ಕೊಟ್ಟು ಹೋದರು
ಹುಲ್ಲು ಮೇಯ್ದು
ಬದುಕಬೇಕೆನ್ನುವ ನಮಗೆ
ಕಾಡು ಕೋಣ ಎಮ್ಮೆಗಳ
ಭೀತಿ ಕಾಟ ಬೆದರಿ
ನರಿಯ ಆಜ್ಞೆಯಂತೆ
ಪಡಿತರ ಚೀಟಿಯ ಆಹಾರಕ್ಕೆ
ಮಾರು ಹೋಗಿ
ಕೊಟ್ಟಷ್ಟು ತಿಂದು
ದಿನ ನೂಕಿದೆವು
ಅಲ್ಲಿಯೂ ಹೆಗ್ಗಣಗಳದ್ದೇ
ಸಿಂಹ ಪಾಲು
ಉಗ್ರಾಣ ಕಾಯುವ
ನಾಯಿಗಳಿಗಿಲ್ಲ
ಒಪ್ಪತ್ತಿನ ಕೂಳು
ಒಮ್ಮೊಮ್ಮೆ ಕೊಬ್ಬಿದ ಕುರಿಗಳು
ಮಾಯವಾಗುತ್ತಿದ್ದವು
ಅವು ಸೈನ್ಯ ಸೇರಿದವು
ನರಿ ಪತ್ರಿಕಾ ಹೇಳಿಕೆ
ಮರುದಿನ ದೊಡ್ಡಿಯ ಪಕ್ಕದ
ಹಳ್ಳದ ದಂಡೆಯ ಮೇಲೆ
ಕುರಿಗಳ ಉಣ್ಣೆ ಎಲವು ಬಿದ್ದಿದ್ದವು
ದೇವರಿಗೆ ಎಡೆಯಾದವು ಕುರಿಗಳು
ಎಂಬ ನಂಬಿಕೆ ಹುಟ್ಟಿತು
ಹುಲಿ ಸಿಂಹ ಚಿರತೆಯಿಂದ
ರಕ್ಷಿಸುವ ನರಿಯ ಭರವಸೆ
ಹತ್ತು ವರುಷಕ್ಕೊಮ್ಮೆ
ಕುರಿ ಗಣತಿ
ನಮ್ಮೊಳಗಿನ ಒಂದು ಕುರಿ
ನರಿಯ ಅರಮನೆ ಹೊಕ್ಕಿ ನೋಡಿತು
ನಡೆದಿತ್ತು ಕುರಿಗಳ ಮಾರಣ ಹೋಮ
ಪುಲ್ವಾಮಾ ಭೀತಿ ರಾಮನ ಭಕ್ತಿ
ಮತ್ತೆ ಸಾಲಿನಲ್ಲಿ ನಿಂತು
ಮತ ಚಲಾಯಿಸುತ್ತಿದ್ದೇವೆ
ನರಿಗಳು ತೋರಿದ ಚಿಹ್ನೆಗೆ
ಕಾಡು ಉಳಿಸಿ ನಾಡು ಬೆಳೆಸಿ
ಟಿವಿ ಮಾಧ್ಯಮದಲ್ಲಿ
ಕಾಗೆ ಗೂಬೆಗಳ ನಿರಂತರ ಚರ್ಚೆ
ಮತ್ತೆ ಐದು ವರುಷ
ನಾವು ಏನೂ ಹೇಳುವ ಹಾಗಿಲ್ಲ
ನರಿ ಕಾಯುತ್ತಿವೆ
ನಮ್ಮಂತಹ ಕುರಿಗಳನ್ನು

ನಮ್ಮಂತಹ ಕುರಿಗಳನ್ನು


About The Author

16 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಕಾಯುತ್ತಿವೆ”

    1. ಸುಂದರವಾದ ಶಬ್ದಗಳಿಂದ ಅಲಂಕೃತವಾದ ಕವಿತೆ ಸರ್

  1. ಬ್ರಾಹ್ಮಣರ ಅನಾರೋಗ್ಯ, ಅನುಪಯುಕ್ತ ಸಂತಾನಕ್ಕಾಗಿ ರಾಯಧನದ ಅಸಾಧಾರಣ ಲಾಭದಾಯಕ ನಿಬಂಧನೆಗಳು ಬ್ರಾಹ್ಮಣ್ಯವಾಗಿದೆ.

  2. ರಾಜಕೀಯ ವಿದ್ಯಮಾನಗಳ ವಿಡಂಬನಾತ್ಮಕ
    ಕವನ ಎಲ್ಲರೂ ವಿಚಾರವಿಮರ್ಶೆ ಮಾಡುವ ಹಾಗೆ ಮೂಡಿ ಬಂದಿದೆ … ಸರ್

  3. ಕಟು ಸತ್ಯ. ಈ ಕುರಿತು ಎಲ್ಲರೂ ವಿಚಾರಿಸಲೇ ಬೇಕು. ಕುರಿಗಳಂತೆ ಇರುವ ಜನರನ್ನು ಜಾಗೃತಗೊಳಿಸುವ ಕವನ.

  4. ಕಟು ಸತ್ಯ..ಈ ಕುರಿತು ಎಲ್ಲರೂ ವಿಚಾರಿಸಲೇ ಬೇಕು. ಕುರಿಗಳಂತೆ ಇರುವ ಜನರನ್ನು ಜಾಗೃತಗೊಳಿಸುವ ಕವನ.

  5. ಡಾ ಶರಣಮ್ಮ ಗೋರೆಬಾಳ

    ಎಷ್ಟು ಕಠೋರ ಸತ್ಯ ಹೇಳುವ ಅತ್ಯಂತ ಸುಂದರ ವಿಡಂಬನೆಯ ಕವನ ಸರ್

  6. ಸುಮ ಕಲಬುರ್ಗಿ

    ಸುಂದರ ಕಟು ಸತ್ಯವನ್ನು ಕಾಣುವ ಹೊಸ ಕವನ ಸರ್

Leave a Reply

You cannot copy content of this page

Scroll to Top