ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಉದಯನ ಒಡ್ಡೋಲಗಕ್ಕೆ ಬಿತ್ತೀಗ ತೆರೆ
ಆಗಸದ ತುಂಬೆಲ್ಲ ಮೋಡಗಳ ಗೆರೆ
ಮಿಂಚಿನ ಚಕಮಕಿಗೆ ಸಿಡಿಲ ಅಬ್ಬರದ ಮೊರೆ
ಗಾಳಿಯ ವೇಗಕೆ ಗಿಡ ಮರಗಳು ನೃತ್ಯದಿ ಸೆರೆ

ಬಾನೊಳು ಚಿಮ್ಮಿತು ಸೋನೆಯ ಮಳೆ
ಧರೆಯೊಡಲಲಿ ಪಸರಿತು ವೈಭವದ ಕಳೆ
ಜೀವನಾಡಿಗಿದು ಸಂಭ್ರಮದ ವೇಳೆ
ಎಲ್ಲೆಲ್ಲೂ ವರ್ಷದ ಹರ್ಷದ ಹೊಳೆ

ಹರಿಯಿತು ನೀರಿನ ಸೊಬಗಿನ ತೇರು
ಉಸಿರಿಗೆ ಹಸಿರಿನ ನಲ್ಮೆಯ ಬಸಿರು
ಪ್ರಕೃತಿಗೆ ಸೌಂದರ್ಯದ ಹೆಮ್ಮೆಯ ಮೇರು
ಬದುಕಲಿ ಉಕ್ಕಿತು ಉತ್ಸಾಹದ ಹೊಸ ಚಿಗುರು

ಮರಗಿಡಗಳಲಿ ತುಂಬಿದ ಜೀವನ ಸೆಲೆ
ಮ್ರಗಪಕ್ಷಿಗಳಲಿ ಹಿಗ್ಗಿದ ಭರವಸೆಯ ಅಲೆ
ಹೂಗಳು ಕರೆದಿವೆ ಬೀರುತ ಕಂಪಿನ ಮಳೆ
ಹಣ್ಣು ಹಂಪಲು ತಾಜಾ ರಸದ ಸ್ವಾದದ ಸೊಳೆ

ಮಳೆ ತಂದಿದೆ ಇಳೆಗೆ ಭರವಸೆಯ ಕವಿತೆ
ಹನಿ ಹನಿಯಲ್ಲೂ ಹೊಸ ಹಂಬಲದ ಒರತೆ
ಅವಘಡ ಅವಾಂತರದ ಆಘಾತಗಳ ಜೊತೆ
ಅವಿತಿದೆ ಬದುಕಿನ ಉತ್ಕಟ ಉತ್ಕರ್ಷದ ಚರಿತೆ


About The Author

6 thoughts on “ಶಾಲಿನಿ ಕೆಮ್ಮಣ್ಣು ಕವಿತೆ-ಜೀವ ಸೆಲೆ”

Leave a Reply

You cannot copy content of this page

Scroll to Top