ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಹಣತೆಯೊಳಗಿನ ಮಾತು

ಹಣತೆಯೊಳಗಿನ ಮಾತು
ಜೀವಿತದ ನಲುಮೆಯ ಸೇತು
ಒಲುಮೆಯ ಒಳಗಿನ ನುಡಿ
ಪ್ರೀತಿ ಸ್ನೇಹದ ಗುರುತಿನ ಗುಡಿ
ಹಣತೆಯೊಳಗಿನ ಬೆಳಕು
ಬದುಕು ಶಾಂತಿ ನೆಮ್ಮದಿಗೆ ಹೊಳಪು
ಕತ್ತಲೋಡಿಸಿ ಮನೆ ತುಂಬಿದೆ ಹರುಷ
ಅಂತರಂಗದಿ ದೀಪವನಿಡುವ ನಿಮಿಷ
ಹಬ್ಬದ ಸಾಲು ದೀಪಗಳ ಮೆರವಣಿಗೆ
ಬದುಕಿನ ಒಲವಿಗೆ ತೋರಣದ ಪುರವಣಿಗೆ
ದೀಪವೊಂದು ಅರಿವಿಗೆ
ನಾಳೆಯೆಂಬ ಭರವಸೆಗೆ
ಪ್ರೀತಿಯಲ್ಲಿ ಮಾತು ಹರಡಿ
ಕುಳಿತು ನಲಿವಿನ ಬೆಸುಗೆಗೆ
ಮನದ ನೋವ ಕರಗಿಸಿ ಸುಮ್ಮನೇ
ಕುಳಿತು ಬಿಡಲಿ ಉರಿಯುತ ತಾನೇ
ಸತ್ವವಾಗಲಿ ಸಾತ್ವಿಕತೆಯ ಹರಿವು
ಹಣತೆಯೊಂದು ಬದುಕಿನ ಚೆಲುವು
ಅರ್ಥವಾಗಲಿ ಹಣತೆಯ ಬೆಳಕು
ಜೊತೆ ನಿಲ್ಲಲು ಅನುಬಂಧ ಬೇಕು
ಮನುಜನ ಬದುಕೊಂದು ಹಣತೆ
ಪ್ರೀತಿ ಹಂಚುವ ಒಲವಿನ ಒರತೆ


ನಾಗರಾಜ ಬಿ.ನಾಯ್ಕ

About The Author

3 thoughts on “ನಾಗರಾಜ ಬಿ.ನಾಯ್ಕ ಕವಿತೆ-ಹಣತೆಯೊಳಗಿನ ಮಾತು”

  1. ಕತ್ತಲ ಕಳೆಯುವುದು ಬೆಳಕು.. ಮನವ ಬೆಳಗುವುದು ಬೆಳಕು.. ಬೆಳಕು ಅನ್ನುವುದು ಜೀವಂತಿಕೆಯ ಸಂಕೇತ. ಬದುಕಿನ ಸಂಭ್ರಮಕ್ಕೆ ಇರಬೇಕು ಬಣ್ಣ
    ಬಣ್ಣದ ಬೆಳಕು..

    ನಾನಾ

Leave a Reply

You cannot copy content of this page

Scroll to Top