ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಚಂದ್ರಯಾನ

1. ಯಾನ.!

ಚಂದ್ರಯಾನ ಮೂರು
ಕನಸುಗಳು ನೂರಾರು
ಸಾವಿರದ ಸಾವಿರಾರು
ಸದ್ಭಾವನೆಗಳ ತವರು
ನೂರುಕೋಟಿ ಉಸಿರು
ಪ್ರಾರ್ಥನೆಗಳ ತೇರು.!

2. ಪ್ರಾರ್ಥನೆ.!

ಓ.. ಮುದ್ದು ಚಂದಮಾಮ
ನೀ ನಮ್ಮೆಲ್ಲರ ಅಮ್ಮನ ತಮ್ಮ
ನಮ್ಮ ಕನಸಿನಕೂಸು ವಿಕ್ರಮ
ಬರುತಿಹನು ನಿನ್ನಲ್ಲಿಗೆ ಮಾಮ
ಇಳಿಸಿಕೋ ಮುದ್ದಿನಲಿ ಅವನ
ನೀಡೆಮಗೆ ಯಶಸ್ಸಿನ ಸಂಭ್ರಮ.!

3. ಆಶಯ.!

ಸುವರ್ಣಾಕ್ಷರದಿ ದಾಖಲಾಗಲಿ
ಈ ದಿನವದು ಯುಗಯುಗದಲಿ
ಯಶಸ್ವಿಯಾಗಲಿ ಚಂದ್ರಯಾನ
ಮೊಳಗಲಿ ದೇಶದಿ ಹರ್ಷಗಾನ
ಸುಗ್ಗಿ ಸಂತಸಗಳ ಸಂಕೀರ್ತನ.!

4. ನಿರೀಕ್ಷೆ.!

ನೂರಾರು ವಿಜ್ಞಾನಿ ತಂತ್ರಜ್ಞಾನಿಗಳ
ವರ್ಷಗಳ ಅಹರ್ನಿಶಿ ಪರಿಶ್ರಮ ತಪಸ್ಸು
ಭವ್ಯ ಭಾರತದ ತಂತ್ರಜ್ಞಾನ ವರ್ಚಸ್ಸು
ಚಂದ್ರನಂಗಳದಿ ಆಗಲಿದೆಯಿಂದು ಯಶಸ್ಸು
ಕಾತುರದಿ ಕಾದಿವೆ ಕೋಟಿ ಕೋಟಿ ಮನಸ್ಸು.!

5. ಬಾಗಿನ.!

ಚಂದಿರನೂರಿಗೆ ಭಾರತಿಯ ಬಾಗಿನ
ಹೊತ್ತುಯ್ಯುತಿಹನು ನಭದಿ ವಿಕ್ರಮ
ನಗುನಗುತ ಸ್ವಾಗತಿಸಿಹನು ಚಂದ್ರಮ
ಕೋಟಿಕಂಗಳಲಿ ಆನಂದಭಾಷ್ಪದುಗಮ
ಬುವಿ ಬಾನು ಸಮ್ಮಿಲನದ ಸಂಭ್ರಮ.!

6. ಆಕಾಶವಾಣಿ.!

ಇಳಿಯುತಿಹನಿಂದು ವಿಕ್ರಮ
ಹೊತ್ತು ಭಾರತಿಯ ಸಂದೇಶ
ಕಾದು ನಿಂತಿಹನು ಚಂದ್ರಮ
ಅಂತರಿಕ್ಷದಲ್ಲೊಂದು ನವಭಾಷ್ಯ
ಹರ್ಷದಿ ಹರಸುತಿವೆ ದಿಗ್ದಿಗಂತ
“ವಿಜಯಶಾಲಿಯಾಗು ಭಾರತ”


ಎ.ಎನ್.ರಮೇಶ್. ಗುಬ್ಬಿ.

About The Author

1 thought on “ಎ.ಎನ್.ರಮೇಶ್. ಗುಬ್ಬಿ. ಚಂದ್ರಯಾನ”

Leave a Reply

You cannot copy content of this page

Scroll to Top