ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಸ್ವಾರ್ಥ

ಪುಷ್ಪಾ ಮಾಳಕೊಪ್ಪ

.

ನಿಃಸ್ವನದ ಪಥದಲ್ಲಿ ಸಂಸ್ಕಾರದೆತ್ತರಕೆ
ಸೃಷ್ಟಿವೈವಿಧ್ಯತೆಯ ವ್ಯಾಪಕತ್ವ |
ಸದ್ಭಾವ ಸುವಿಚಾರ ಅಂತರಂಗದ ಸತ್ವ
ಕಲ್ಪತರುವಿನ ತೆರದ ನಿಸ್ವಾರ್ಥ ತತ್ವ ||

ಪಂಚಮದ ಇಂಚರದಿ ರೋಮಾಂಚನವನೀವ
ಗೊರವಂಕ ಗಿಳಿವುಲಿವ ಕೂಜನ ಸುಧೆ|
ಕುದಿಯುತಿಹ ಒಡಲುರಿಯ
ಹಾಗೆ ತನ್ನೊಳಗಿಟ್ಟು
ಹಸಿದವಗೆ ಆಹಾರವೀವ ವಸುಧೆ||

ತಮವ ತರಿಯಲಿಕೆಂದೆ
ಹೊತ್ತಿ ಕಮರಿದ ಹತ್ತಿ ಆಂತರ್ಯದೊಳಗಣ್ಣ ತುಂಬಿ ಅಮೃತ|
ನೊರೆಹಾಲಿನಲಿ ಹುಳಿಯನೇ ಬೆರೆಸಿ ಮಥಿಸಿದರು
ನಾಲಗೆಗೆ ಆಸ್ವಾದವೀವ ನವನೀತ||

ದ್ಯುತಿಯ ಬೆಳಗಿಸಿ ಮತಿಯ ಶುದ್ಧಭಾವದೊಳಿರಿಸಿ
ನಿತ್ಯ ನೇಮದೊಳಿರ್ಪ ದಿನಕರನ ಪಾಠ|
ದಣಿದವಗೆ ಮಣಿದವಗೆ ಮಮಕಾರದೊಡಲೀವ
ಪ್ರಕೃತಿಯುತ್ಸಂಗದಲಿ ಸಾನುಭೂತಿಯ ಊಟ ||


About The Author

2 thoughts on “ಪುಷ್ಪಾ ಮಾಳಕೊಪ್ಪ-ನಿಸ್ವಾರ್ಥ”

  1. ರವಿ ದೇವರಡ್ಡಿ

    ಮತ್ತೆ ಮತ್ತೆ ಓದಿದಾಗ ಹೊಳೆವ ಭಾವಾರ್ಥ ಭಿನ್ನ ರೂಪ ತಳೆಯಿತು.

Leave a Reply

You cannot copy content of this page

Scroll to Top