ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಈಶ್ವರ ಸಂಪಗಾವಿ

ಗಜ಼ಲ್.

ಗೋಡೆಯಲೊಂದು ಕಿವಿ ಮೂಡಿ ಈ ಮನವ ಹಿಂಸಿಸಿತೇ
ಎದೆಯಲೊಂದು ವಿರಹಗೀತೆ ಹಾಡಿ ಈ ಮನವ ಹಿಂಸಿಸಿತೇ

ಕಂಪಿತ ಕರಗಳು ಮುದುಡಿದರು ಹಾಳೆಗಳು ಬಿಚ್ಚಿಕೊಳುತಿವೆ
ಸುಖ ನಿದಿರೆಯಲಿಂದು ಕನಸು ಬಾಡಿ ಈ ಮನವ ಹಿಂಸಿಸಿತೇ

ಕಂಗಳ ಬಣ್ಣ ಬಯಲಾದರೂ ರೆಪ್ಪೆಗಳು ತೆರೆದುಕೊಳುತಿವೆ
ಕಾನನದಲೊಂದು ಮೃಗವು ಓಡಿ ಈ ಮನವ ಹಿಂಸಿಸಿತೇ

ಕಾರ್ಯಕಾರಣ ತಿಳಿಯದೆ ಗೊಂದಲಗಳು ತಲೆಯ ತಿನ್ನುತಿವೆ
ಮಾತಲೊಂದು ಕಿರುನಗೆಯ ಮೋಡಿ ಈ ಮನವ ಹಿಂಸಿಸಿತೇ

ಭಾವಕೋಟೆಯ ಸುತ್ತಲೂ ಸ್ವಪ್ನಗಳು ಪಹರೆ ನಡೆಸುತಲಿವೆ
ತಿಳಿಗೊಳದಲೊಂದು ಹಂಸ ಜೋಡಿ ಈ ಮನವ ಹಿಂಸಿಸಿತೇ

ನವಪ್ರೇಮಿಗಳ ಮಿಲನಕೆ ಕುತ್ತಾದ ಕಿವಿಗಳ ಕತ್ತರಿಸಬೇಕಿದೆ
ಅವಸರದಲೊಂದು ಮರವ ನೋಡಿ ಈ ಮನವ ಹಿಂಸಿಸಿತೇ

ಕಣಕಣಗಳಲೂ ಕೇಳುವ ಕುಹಕತೆ ಈಶನ ಶಾಂತಿ ಕದಡಿದೆ
ಕಾಡಿನಲೊಂದು ತಿಳಿ ನೀರ ಕೋಡಿ ಈ ಮನವ ಹಿಂಸಿಸಿತೇ


About The Author

1 thought on “ಈಶ್ವರ ಸಂಪಗಾವಿ.”

Leave a Reply

You cannot copy content of this page

Scroll to Top