ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತರಹಿ ಗಜಲ್

ನಯನ ಭಟ್ ಅವರ ಸಾನಿ ಮಿಸ್ರಾ

ವಿಹಗಗಳ ಸುಸ್ವರದ ಧ್ವನಿಯ ಆಸ್ವಾದಿಸುತ ಮುದದಿ ಸಾಕಲ್ಯವಾಗಿದೆ ಉದಯಾದ್ರಿ
ನಿರವಿಸುವ ನೀರವತೆಯಲಿ ಅನುರಣಿಸುವ ಹಸನು ಲಾಲಿತ್ಯವಾಗಿದೆ ಉದಯಾದ್ರಿ

ಮೆರುಗಾಗಿದೆ ಮುತ್ತಂತೆ ಪೊಣಿಸಿರುವ ತುಷಾರಗಳ ಗಡಣಕೆ ಉಷೆಯ ಕಿರಣಗಳು
ವಿಕ್ಷಿಪ್ತ ನಿಶೆಯನು ಹಳವಂಡಗೊಳಿಸುತಲಿ ಅಚಲಕೆ ಕೌಸ್ತುಭವಾಗಿದೆ ಉದಯಾದ್ರಿ

ವಹ್ನಿಯಂತಿರುವ ದಿಪಸ್ಪತಿಗೆ ಕಂದರ್ಪನ ದೌಲತ್ತು ನೀಡಿದೆ ಮೂಡಣದ ಅಂಬರ
ಶಾಡ್ವಲದ ಸಿರಿಯನ್ನು ಹುಲುಸುಗೊಳಿಸುವ ನಿತ್ಯ ಪಿಯೂಷವಾಗಿದೆ ಉದಯಾದ್ರಿ

ಕೌಮುದಿಯ ಸರಿಸಿ ಬಂದ ದಿನಪನ ಪ್ರದೀಪದಲಿ ಧರಣಿಯು ದೇದೀಪ್ಯಮಾನ
ಔಡಲಕೂ ಔರಸ ಒದಗಿಸಲು ಬಂದ ಅಂಶುವಿನಲಿ ಓಜಸ್ವಿಯಾಗಿದೆ ಉದಯಾದ್ರಿ

ದ್ಯುತಿಯ ಹಿತ ಸ್ಪರ್ಶದಲಿ ಅರಳುವ ತೋಯಜವು ನಿಷ್ಕಳಂಕ ನಿಷ್ಕಲ್ಮಶ ಅರ್ಚನಾ
ಸಮ್ಮೋದದಲಿ ಸರಸಗೈವ ಸಪ್ತಾಶ್ವನ ಶೃಂಗಾರದಲಿ ಮುಕುರವಾಗಿದೆ ಉದಯಾದ್ರಿ


About The Author

4 thoughts on “ಅರ್ಚನಾ ಯಳಬೇರು-ತರಹಿ ಗಜಲ್”

  1. ನಯನ. ಜಿ. ಎಸ್

    ಉದಯಾದ್ರಿಯಲಿ ಮಿನುಗುತ ಉದಯಿಸಿದ ಮಯೂಖನಿಂದ ನಿರ್ಮಿತವಾದ ಸೊಬಗಿನ ವರ್ಣನೆ ಸೊಗಸಾಗಿದೆ ಡಿಯರ್

    1. ಅರ್ಚನಾ ಯಳಬೇರು

      ತುಂಬು ಹೃದಯದ ಧನ್ಯವಾದಗಳು ಡಿಯರ್ ❣️❣️

    1. ಅರ್ಚನಾ ಯಳಬೇರು

      ಧನ್ಯವಾದಗಳು ಮೇಡಂ ಮುಂದಿನ ಬರಹದಲ್ಲಿ ಖಂಡಿತಾ ಪಾಲಿಸುವ ಪ್ರಯತ್ನ ಮಾಡ್ತೀನಿ

Leave a Reply

You cannot copy content of this page

Scroll to Top