ಮಲಯಾಳಂ ಕವಿತೆ-ನನ್ನ ಪ್ರೀತಿಯ ಹುಡುಗಿಗೆ!?.ಕನ್ನಡಾನುವಾದ
ನಾನು ‘ ಮರೆತು’ ಬಿಟ್ಟೆ
ಎಂದು ನಿನ್ನ ‘ಮನಸ್ಸು’
ಹೇಳಲು ಪ್ರಾರಂಭಿಸಿದ್ದರೇ ಹುಡುಗಿ……,
ನೀನು ಸಂಕೋಚವ ಪಡದೇ
ನನ್ನ ಬಳಿಗೆ ಬಂದು ಬಿಡು….!
ನೀನು ಬರುವಾಗ
ನಾನು ಒಳ್ಳೆಯ
ಮಧುರವಾದ ‘ ನಿದ್ರೆ’ಯಲ್ಲಿ
ಇರುವೆ…..!
ನಷ್ಟಗಳನ್ನು ಮಾತ್ರ
‘ಹೃದಯ’ಕ್ಕೆ ಸೇರಿಸಿ ತಬ್ಬಿಕೊಂಡು
ನಿನ್ನನ್ನು ಕಾಯುತ್ತಾ ಮಲಗಿರುವೆ…!
ಕೊನೆದಾಗಿ ನೀನು
ನನ್ನನ್ನು ನಗು- ನಗುತ್ತಾ
‘ ಯಾತ್ರೆ’ ಕಳಿಸಬೇಕು…!
ನೀನು ಕಣ್ಣೀರು ಸುರಿಸಿದ್ದರೇ
ನನಗೆ ನಗುತ್ತಾ ಆನಂದದಿಂದ
ಯಾತ್ರೆ ಸಾಗಲು ಸಾಧ್ಯವಿಲ್ಲ..!
ಅಲ್ಲಿ ನನ್ನ ‘ಅಂತಿಮದರ್ಶನ’ಕ್ಕೆ
ಸೇರಿರುವ ನೂರಾರು ಮಂದಿ
ನೀನು ನನ್ನ ಪಾಲಿಗೆ
ಯಾರು ಎಂದು ಕೇಳಬಹುದು….!!?
ಆಗ ತುಸು ಸಂಕೋಚವ
ಪಡದೇ ಹೇಳಬೇಕು….!
ನೀನು ಮರೆತು ಬಿಟ್ಟರೂ
ನಿನ್ನನ್ನು ಮಾತ್ರ ಪ್ರೀತಿಸಿ
ಸೋತು ಹೋದ
ಒರ್ವ ಪಾಪದ ಮನುಷ್ಯ…!!!
ಮಲಯಾಳಂ ಕವಿತೆ-ನನ್ನ ಪ್ರೀತಿಯ ಹುಡುಗಿಗೆ!?.ಕನ್ನಡಾನುವಾದ Read Post »









