ಮೊನಿಕ ಮತಾಯಸ್ ಡಬ್ಲಿನ್ ಅವರ ಇಂಗ್ಲೀಷ್ ಕವಿತೆಯ ಅನುವಾದ
ಅನುವಾದ ಸಂಗಾತಿ
ಇಂಗ್ಲಿಷ್ ಮೂಲ ಮೊನಿಕ ಮತಾಯಸ್ ಡಬ್ಲಿನ್
ಕನ್ನಡಕ್ಕೆ:ಕೃಷ್ಣಮೂರ್ತಿ ಬಾಗೇಪಲ್ಲಿ
ಮೊನಿಕ ಮತಾಯಸ್ ಡಬ್ಲಿನ್ ಅವರ ಇಂಗ್ಲೀಷ್ ಕವಿತೆಯ ಅನುವಾದ Read Post »
ಅನುವಾದ ಸಂಗಾತಿ
ಇಂಗ್ಲಿಷ್ ಮೂಲ ಮೊನಿಕ ಮತಾಯಸ್ ಡಬ್ಲಿನ್
ಕನ್ನಡಕ್ಕೆ:ಕೃಷ್ಣಮೂರ್ತಿ ಬಾಗೇಪಲ್ಲಿ
ಮೊನಿಕ ಮತಾಯಸ್ ಡಬ್ಲಿನ್ ಅವರ ಇಂಗ್ಲೀಷ್ ಕವಿತೆಯ ಅನುವಾದ Read Post »
ದಿನಾಂಕ 19.2.2023 ರವಿವಾರದಂದು ಮಾನವಿಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ಇವರು ರಚಿಸಿರುವ “ಮೌನದೊಡಲ ಮಾತು” ಗಜಲ್ ಸಂಕಲನ ಲೋಕಾರ್ಪಣೆಗೊಳ್ಳುತ್ತಿದೆ.ಜೊತೆಗೆ ಮೊದಲ ಗೋಷ್ಠಿಯಲ್ಲಿ “ಮಹಿಳೆಯರ ಸಾಮಾಜಿಕ ಸ್ಥಿತಿಗತಿಗಳು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದೇನೆ. ತಾವು, ತಮ್ಮ ಸ್ನೇಹಿತರು ಮತ್ತು ಬಂಧು ಬಳಗದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿ ಹಾರೈಸಬೇಕೆಂದು ತಮ್ಮನ್ನೆಲ್ಲ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
“ಮೌನದೊಡಲ ಮಾತು” ಗಜಲ್ ಸಂಕಲನ-ಬಿಡುಗಡೆ Read Post »
ಕಾವ್ಯ ಸಂಗಾತಿ
ನಾ…ನೀ
ವಿಶಾಲಾ ಆರಾಧ್ಯ
ವಿಶಾಲಾ ಆರಾಧ್ಯ ಕವಿತೆ- ನಾ…ನೀ Read Post »
ಮಕ್ಕಳ ಸಂಗಾತಿ
“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ
ಪ್ರಭುರಾಜ ಅರಣಕಲ್
“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ Read Post »
ಕಾವ್ಯ ಸಂಗಾತಿ
ಬಹು ಕಾಫಿಯಾ ಗಜಲ್
ನಯನ. ಜಿ. ಎಸ್.
ನಯನ. ಜಿ. ಎಸ್.-ಬಹು ಕಾಫಿಯಾ ಗಜಲ್ * Read Post »
ಕಥಾ-ಸಂಗಾತಿ.
ವಿಶ್ವನಾಥ ಎನ್ ನೇರಳಕಟ್ಟೆ
ಅವಳು ಬರೆದ ಪತ್ರ
ಅವಳು ಬರೆದ ಪತ್ರ-ವಿಶ್ವನಾಥ ಎನ್ ನೇರಳಕಟ್ಟೆ Read Post »
ಅಂಕಣ ಸಂಗಾತಿ ಸಕಾಲ ಶಿವಲೀಲಾ ಹುಣಸಗಿ “ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ “ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹೌದಲ್ಲ ಇವತ್ತು ಪ್ರೇಮಿಗಳ ದಿನ ಅದೆಷ್ಟೋ ನವಪ್ರೇಮಿಗಳು ಬಣ್ಣಬಣ್ಣದ ಕನಸುಗಳನ್ನು ಹೊತ್ತು ಕಂಡವರೆದುರು ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತ ಮೈಮೇಲೆ ಏನೋ ಆವರಿಸಿದಂತೆ ತನ್ನದೇ ಪ್ರಪಂಚದಲ್ಲಿ ಮುಳುಗುವ ಕ್ಷಣಿಕ ಆಸೆಗಳಿಗೆ ಪ್ರೀತಿಯ ಲೇಪನ ಬಡಿದು ನಂತರ ಗರಬಡಿದವರಂತೆ ದಿಕ್ಕು ಕಾಣದೇ ಪರಿತಪಿಸುವ ಪ್ರೇಮಿಗಳು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಕಣ್ಮುಂದೆ ಬರುತ್ತಾರೆ.ಹಾಗಂತ ಫೆಬ್ರವರಿ ೧೪ ಮಾತ್ರ ಪ್ರೇಮಿಗಳ ದಿನ ಅಲ್ಲ.ಪ್ರೀತಿ ಹೆಸರಲ್ಲಿ ಮೋಸ ಮಾಡುವ ಮೂಲಕ ಪ್ರೀತಿ ಅನ್ನೊ ಶಬ್ಧ ಮೂಕವೇದನೆಯನ್ನು ಅನುಭವುಸುತ್ತಿರುವುದನ್ನು ನೋಡುವ ಹೃದಯದ ಕಂಗಳಿಗೆ ಮಾತ್ರ ಗೋಚರಿಸುವುದು.ಅಯ್ಯೋ ಹಾಗಂತ ಪ್ರೀತಿಸುವುದು ತಪ್ಪು ಅಂತ ಹೇಳೋಕಾಗಲ್ಲ.ನಿಷ್ಕಲ್ಮಶ ಪ್ರೀತಿ ಎಂದೆಂದಿಗೂ ಅಮರ.ಲೈಲಾ,ಮಜನು ರೋಮಿಯೋ,ಜೂಲಿಯೆಟ್ ಕಥೆಗಳು ನಮ್ಮ ಮುಂದಿವೆ. ಜಾತಿ,ಧರ್ಮ,ಆಸ್ತಿ,ಅಂತಸ್ತು,ಕಪ್ಪು,ಬಿಳುಪು,ಬಡವ,ಶ್ರೀಮಂತ ಎಂಬ ಎಲ್ಲೆಯನ್ನು ಮೀರಿ ಆತ್ಮದಲ್ಲಿ ಮೊಳಕೆಯೊಡೆಯುವ ಪ್ರೀತಿಗೆ ಉದಾ. ರಾಧಾಕೃಷ್ಣ ರ ಪ್ರೇಮದ ಮುಂದೆ ಮತ್ಯಾವ ಪ್ರೇಮವು ನಿಲ್ಲಲಾರದು. ನನಗೂ ಈ ಪ್ರೀತಿಯ ಬಗ್ಗೆ ಆಗಾಗ ಸಂಶಯ ಮೂಡಿದ್ದಿದೆ.ಪ್ರೇಮವೆಂಬ ಎರಡಕ್ಷರ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ.ಅದು ಕ್ಷಾಮವಾಗದೆ ಕ್ಷೇಮವಾದರೆ ಮಾತ್ರ ಅದಕ್ಕೊಂದು ಬೆಲೆ.ಈ ಪ್ರೇಮಿಗಳ ದಿನದ ಹಿಂದಿರುವ ಮಹತ್ವ ಅಷ್ಟೊಂದು ಗಾಢವಾಗಿ ನಮ್ಮ ಮೇಲೆ ಪ್ರಭಾವ ಬೀರಿತಾ ಎಂಬ ಪುಟ್ಟ ಪ್ರಶ್ನೆ ಮನದೊಳಗೆ.ನಮ್ಮಪ್ಪ ಅಮ್ಮ ಮದುವೆಯಾದ ಮೇಲೆ ಪ್ರೀತಿ ಮಾಡಿದ್ದು.ಈಗಿನಂತೆ ಆಗ ಹೆಣ್ಣು,ಗಂಡು ಸ್ವಚ್ಛಂದವಾಗಿ ಬೆರೆಯುವುದೇ ಕಮ್ಮಿ.ಪ್ರೀತಿ ಪ್ರೇಮದಲ್ಲಿ ಬಿದ್ದವರ ಬದುಕು ನರಕ ಸದೃಶವಾಗುತ್ತಿತ್ತು.ಈಗಲೂ ಅಲ್ಲಲ್ಲಿ ಮರ್ಯಾದಾ ಹತ್ಯೆ ಕಣ್ಮುಂದೆ ಕಾಣದಿರದು.ಇರಲಿ ಕಾಲಬದಲಾದರೂ,ಜನರ ಮನಸ್ಥಿತಿ ಬದಲಾಗಿಲ್ಲ.ಆಡಂಬರ,ಡೊಂಬರಾಟಗಳಿಗೆ ಮಾರುಹೋಗುವವರ ನಡುವೆ ಪ್ರೀತಿಗೆ ಬೆಲೆಯೆಲ್ಲಿಂದ ಬರಬೇಕು. ಹಾಗಿದ್ದ ಮೇಲೆ ಈ “ವ್ಯಾಲೆಂಟೈನ್ಸ್ ಡೇ” ಆಚರಿಸುವ ಹುಚ್ಚಾದರೂ ಎಲ್ಲಿಂದ ಬಂತು? ವ್ಯಾಲೆಂಟೈನ್ಸ್,ಡೇಇದನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಅಥವಾ ಸೇಂಟ್ ವ್ಯಾಲೆಂಟೈನ್ಸ್ ಫೀಸ್ಟ್ ಎಂದೂ ಕರೆಯುತ್ತಾರೆ. ವಾರ್ಷಿಕವಾಗಿ ಫೆಬ್ರವರಿ ೧೪ ರಂದು ಆಚರಿಸಲಾಗುತ್ತದೆ.ಇದು ಕ್ರಿಶ್ಚಿಯನ್ ಹಬ್ಬದ ದಿನವಾಗಿ ಹುಟ್ಟಿಕೊಂಡಿತು.ಸೇಂಟ್ ವ್ಯಾಲೆಂಟೈನ್ ಎಂಬ ಹೆಸರಿನ ಒಬ್ಬ ಅಥವಾ ಇಬ್ಬರು ಆರಂಭಿಕ ಕ್ರಿಶ್ಚಿಯನ್ ಹುತಾತ್ಮರನ್ನು ಗೌರವಿಸುತ್ತದೆ ಮತ್ತು ನಂತರದ ಜಾನಪದ ಮೂಲಕ ಸಂಪ್ರದಾಯಗಳು,ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಪ್ರಣಯ ಮತ್ತು ಪ್ರೀತಿಯ ಗಮನಾರ್ಹ ಸಾಂಸ್ಕೃತಿಕ,ಧಾರ್ಮಿಕ ಮತ್ತು ವಾಣಿಜ್ಯ ಆಚರಣೆಯಾಗಿದೆ.ಅತೀ ದುಬಾರಿ ಬೆಲೆಯ ಗಿಫ್ಟ್ ಖರೀದಿಸುವುದು. ಹೊಟೇಲ್, ಪಾರ್ಕ,ಹಾಲ್ ಗಳಲ್ಲಿ ಪಾರ್ಟಿ ಮಾಡುವುದು.ಕುಡಿದು ಕುಪ್ಪಳಿಸಿ ಮಜಾ ಮಾಡಲು ಹಾತೊರೆಯುವ ಜನಾಂಗದ ಮುಂದೆ ನಮ್ಮಂತಹ ಸಿದಾಸಾದಾ ಪ್ರೇಮಿಗಳು,ದೂರದ ಬೆಟ್ಟದ ನಾಯಕ/ಕಿ ಡಾ.ರಾಜಕುಮಾರ, ಭಾರತಿ ವಿಷ್ಣುವರ್ಧನಯವರ ಬದುಕಿನಂತೆ. “ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯವು ಗಾದಿನೇ, ನನ್ನ ನಿನ್ನ ಪಾಲಿಗೆ,ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ನೀ ಪಕ್ಕ ಇದ್ರೆ ಹಿಂಗೆ ಬೆಟ್ಟಾನ್ ಎತ್ತೀನ್ ಬೆಳ್ನಾಗೆ ಏಸೇ ಕಷ್ಟ ಬಂದ್ರು ನಮಗೇ, ಗೌದ ಏಸೇ ಕಷ್ಟ ಬಂದ್ರು ನಮಗೇ, ಮೀಸೆ ಬುಡ್ತೀನ್ ಸುಂಗೇ ಈ ಜೀವ ನಿಮ್ಮದೇನೆ, ನಿಮ್ಮ ಪೂಜೆ ಹೂವು ನಾನೇ ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೇ” ಜೀವನದ ನೌಕೆಯನ್ನು ಪ್ರೀತಿಸುವ ನಾವು ಹಾಗೆಯೇ ಬದುಕಲು ಪ್ರಯತ್ನ ಮಾಡಬೇಕು. ೮ನೇ ಶತಮಾನದ ಗೆಲಾಸಿಯನ್ ಸ್ಯಾಕ್ರಮೆಂಟರಿಯು ಫೆಬ್ರುವರಿ ೧೪ರಂದು ಸಂತ ವ್ಯಾಲೆಂಟೈನ್ ಹಬ್ಬದ ಆಚರಣೆಯನ್ನು ದಾಖಲಿಸಿದೆ. ೧೪ನೇ ಮತ್ತು ೧೫ನೇ ಶತಮಾನಗಳಲ್ಲಿ ಪ್ರಣಯ ಪ್ರೇಮದೊಂದಿಗೆ ಸಂಬಂಧ ಹೊಂದಿದ್ದ ದಿನವು ೧೪ನೇ ಮತ್ತು ೧೫ನೇ ಶತಮಾನಗಳಲ್ಲಿ ಪ್ರಣಯ ಪ್ರೇಮದ ಕಲ್ಪನೆಗಳು ಪ್ರವರ್ಧಮಾನಕ್ಕೆ ಬಂದವು, ಸ್ಪಷ್ಟವಾಗಿ ಅವರ ಸಹಯೋಗದಿಂದ ವಸಂತಕಾಲದ ಆರಂಭದಲ್ಲಿ ” ಪ್ರೇಮ ಪಕ್ಷಿಗಳು “.೧೮ನೇ ಶತಮಾನದ ಇಂಗ್ಲೆಂಡ್‌ನಲ್ಲಿ, ದಂಪತಿಗಳು ಹೂವುಗಳನ್ನು ಪ್ರಸ್ತುತಪಡಿಸುವ ಮೂಲಕ, ಮಿಠಾಯಿಗಳನ್ನು ನೀಡುವ ಮೂಲಕ ಮತ್ತು ಶುಭಾಶಯ ಪತ್ರಗಳನ್ನು “ವ್ಯಾಲೆಂಟೈನ್ಸ್” ಎಂದು ಕರೆಯಲಾಗುತ್ತದೆ.ಈ ರೀತಿ ಕಳುಹಿಸುವ ಮೂಲಕ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುವ ಸಂದರ್ಭವಾಗಿ ಬೆಳೆಯಿತು. ಇಂದು ಬಳಸಲಾಗುವ ವ್ಯಾಲೆಂಟೈನ್ಸ್ ಡೇ ಚಿಹ್ನೆಗಳು ಹೃದಯದ ಆಕಾರದ ಬಾಹ್ಯರೇಖೆ, ಪಾರಿವಾಳಗಳು ಮತ್ತು ರೆಕ್ಕೆಯ ಕ್ಯುಪಿಡ್ನ ಆಕೃತಿಯನ್ನು ಒಳಗೊಂಡಿವೆ. ೧೯ ನೇ ಶತಮಾನದಿಂದಲೂ, ಕೈಬರಹದ ವ್ಯಾಲೆಂಟೈನ್‌ಗಳು ಸಾಮೂಹಿಕ-ಉತ್ಪಾದಿತ ಶುಭಾಶಯ ಪತ್ರಗಳಿಗೆ ದಾರಿ ಮಾಡಿಕೊಟ್ಟಿವೆ.ಇಟಲಿಯಲ್ಲಿ,ಸೇಂಟ್ ವ್ಯಾಲೆಂಟೈನ್ಸ್ ಕೀಗಳನ್ನು ಪ್ರೇಮಿಗಳಿಗೆ “ಪ್ರಣಯ ಸಂಕೇತವಾಗಿ ಮತ್ತು ಕೊಡುವವರ ಹೃದಯವನ್ನು ಅನ್ಲಾಕ್ ಮಾಡುವ ಆಹ್ವಾನವಾಗಿ” ನೀಡಲಾಗುತ್ತದೆ, ಹಾಗೆಯೇ ಮಕ್ಕಳಿಗೆ ಅಪಸ್ಮಾರವನ್ನು ದೂರವಿಡಲು ನೀಡಲಾಗುತ್ತದೆ. ಮೂರನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದ ಅಡಿಯಲ್ಲಿ ಕಿರುಕುಳಕ್ಕೊಳಗಾದ ಕ್ರಿಶ್ಚಿಯನ್ನರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ರೋಮ್‌ನ ಸಂತ ವ್ಯಾಲೆಂಟೈನ್‌ನ ಸೆರೆವಾಸವನ್ನು ಒಳಗೊಂಡಂತೆ ಫೆಬ್ರವರಿ ೧೪ ಕ್ಕೆ ಸಂಬಂಧಿಸಿದ ವಿವಿಧ ವ್ಯಾಲೆಂಟೈನ್‌ಗಳಿಗೆ ಸಂಬಂಧಿಸಿದ ಹಲವಾರು ಹುತಾತ್ಮ ಕಥೆಗಳು ಇವೆ .ಆರಂಭಿಕ ಸಂಪ್ರದಾಯದ ಪ್ರಕಾರ, ಸೇಂಟ್ ವ್ಯಾಲೆಂಟೈನ್ ತನ್ನ ಜೈಲರ್‌ನ ಕುರುಡು ಮಗಳಿಗೆ ದೃಷ್ಟಿಯನ್ನು ಪುನಃಸ್ಥಾಪಿಸಿದನು.ಹತ್ತು ಹಲವಾರು ದಂತ ಕಥೆಗಳಿದ್ದರೂ,ಪ್ರೇಮವನ್ನು ನಿಶ್ಚಿತ ರೂಪದಲ್ಲಿ ಹಿಡಿದಿಡಲಾಗದೇ ಸೋತು ಸಮಾಧಿಯಾದವರ ನೆನಪುಗಳು,ಪ್ರೇಮದ ಅಮಲಿನಲಿ ಅಡ್ಡ ಹಾದಿ ತುಳಿದು, ಬದುಕಿ ನರಳುವಂತಹ ಪ್ರೇಮ ಬೇಕೆನ್ನುವ ದುಃಸ್ಸಾಹಸ ಮಾಡುವ ಪ್ರಕ್ರಿಯೆಗೆ ಯಾರು ತಾನೆ ಮನಸ್ಸು ಮಾಡ್ಯಾರು? ಬಡವರ ಮಕ್ಕಳು ಬೀದಿಪಾಲಾಗಿ ನರಳುವ ನರಕ ಯಾರಿಗೆ ತಾನೆ ಬೇಕು? ದುಡ್ಡಿನಲ್ಲಿ ಅಳೆಯವ ಪ್ರೇಮಕ್ಕೆ ಕರಗಿದವರೆಷ್ಟೋ.ಒಂದು ತ್ಯಾಗದ ಪ್ರತಿರೂಪವೇ ಪ್ರೇಮ.ನನಗೊಂದು ಬಯಕೆ ಪ್ರೇಮದ ಕಾಣಿಕೆ ಕೊಡುವೆಯಾ ಸಖಾ ಎಂದು ಕೇಳಿದ್ದೆ ತಡ ನನ್ನವನು ಬೊಗಸೆ ತುಂಬ ಮೊಗವ ಸೆರೆಹಿಡಿದು ಚಂದಿರ ರೂಪವೇ ನನ್ನೆದೆಯ ಬೆಳಕಾದಾಗ ಮತ್ತೆಲ್ಲಿ ತೇಲಲಿ ಜಗದೊಳಗೆ ಎಂದು ಆಲಾಪಿಸುವಾಗ “ಪ್ರೇಮ”ಎಂಬ ದೇವರು ಒಲಿಯಲು ತನು ಮನ ಎಲ್ಲ ಶುದ್ದವಾಗಿರಬೇಕು.ಜಗತ್ತಿನ ಚರಾಚರ ಜೀವಿಗಳಿಗೆ ಪ್ರೀತಿ ಗೊತ್ತು. ಅದನು ಬಲ್ಲವಗೆ ಗೊತ್ತಾಗಬೇಕು.ಅಂತಹ ನಿರಾಕಾರ ಪ್ರೇಮ ಎಲ್ಲರಿಗೂ ದೊರಕಲಿ….. ಶಿವಲೀಲಾ ಹುಣಸಗಿ ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ಲಹರಿ
ನಿತ್ಯ ಜಗನ್ನಾಥ್ ನಾಯ್ಕ್
ಮಗಳ ಮೀಯಿಸುವ ಸುಖ
ಮಗಳ ಮೀಯಿಸುವ ಸುಖ-ನಿತ್ಯ ಜಗನ್ನಾಥ್ ನಾಯ್ಕ್ Read Post »
ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ ಅವರ ಲೇಖನಿಯಿಂದ
ಬಸವರಾಜ ಅವರ ಗಜಲ್ ಗಳಲ್ಲಿ ಭಾವಯಾನ..
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಚೆಂಬೆಳಕು ಬಯಲಾಯ್ತು
ಹಮೀದಾ ಬೇಗಂ ದೇಸಾಯಿ-ಚೆಂಬೆಳಕು ಬಯಲಾಯ್ತು Read Post »
You cannot copy content of this page