ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಪದ್ಮಜಾ ಜೋಯ್ಸ್

ಪ್ರೇಮ ಗ್ರಂಥದ ಕಾರಣಿಕನೇ…..

ಪ್ರೇಮ ಗ್ರಂಥದ ಕಾರಣಿಕನೇ
ನಿನ್ನ ಮೇಲೆ ಕವಿತೆ ಕಟ್ಟಲು
ಪ್ರೇಮ ದಿನವೇ ಬೇಕೇ?
ಅಲ್ಲಲ್ಲ ಒಂದು ದಿನ ಸಾಕೆ?

ವರುಷಕ್ಕೆ ಮೂರುನೂರ
ಅರವತ್ತ ಐದು ದಿನಗಳಲ್ಲಿ
ಪ್ರತಿದಿನದ ಪ್ರತಿಕ್ಷಣದ
ಸಮಗ್ರ ಕಾವ್ಯ ಭಂಡಾರಕ್ಕೆ
ಒಡೆಯನಲ್ಲವೇ ನೀನು?
ಕಲ್ಪನಾ ಸಾಮ್ರಾಜ್ಯದ
ಸಿಂಹಾಸನಕ್ಕೆ ದೊರೆಯಲ್ಲವೇ?

ಹದಿಬದೆಯ ಮೊದಲ ಕನಸಲ್ಲಿ
ಬಂದು ಎದೆಯಲ್ಲಿ ನಿಂದು
ಮತ್ತೇ ನನಸಾಗಿ ಎದುರಾದ
ಕ್ಷಣದಿಂದ ಈವರೆಗೂ….
ನನ್ನೊಳಗಿನ ಒಲವು ಮಿಡಿದ
ಅನುರಾಗ ನುಡಿದ
ಬೆರಳುಗಳು ಗೀಚಿದ
ಕವಿತೆಗಳಿಗೆ ಲೆಕ್ಕವೆಲ್ಲಿ??

ಸ್ನೇಹ ಪ್ರೀತಿ ಪ್ರೇಮವೊಂದು
ಬದುಕ ಕವಲುಗಳಲ್ಲಿ
ಒಮ್ಮೆ ಮಿಲನವಾಗಿ
ಮತ್ತೊಮ್ಮೆ ವಿರಹವಾಗಿ
ಮೆರೆದು ಉರಿದು
ಬದುಕಿನುದ್ದಕ್ಕೂ ಹರಿದು
ಪ್ರತಿ ಹೆಜ್ಜೆಯಲ್ಲೂ ಹುಟ್ಟಿದ
ಕವನಗಳಿಗೆ ಲೆಕ್ಕವೆಲ್ಲಿ??

ನಾನಿರದೆಯೂ ನೀನಿರದೆಯೂ
ನಮ್ಮಿ ಪ್ರೀತಿ ಚಿರಂತನವಾಗಿ
ನಿರಂತರವಾಗಿ ಜಗವನ್ನೇ
ಸುತ್ತಿ ಸುಳಿದು ಬೆಳಗುತ್ತಿರುವುದು
ಅದೆಷ್ಟೋ ಪತ್ರಿಕೆ ಪುಸ್ತಕ,
ಮುಖ ಪುಸ್ತಕದಂತ ಸಾಮಾಜಿಕ
ಜಾಲತಾಣಗಳ ಪುಟ ಪುಟಗಳಲಿ ನಳನಳಿಸಿ ಹೊಳೆಯುವುದು,
ಅದಕ್ಕೀಗ ಲೆಕ್ಕವೆಲ್ಲಿ??

ಪ್ರೇಮ ಗ್ರಂಥದ ಕಾರಣಿಕನೇ
ನಿನ್ನ ಮೇಲೆ ಕವಿತೆ ಕಟ್ಟಲು
ಪ್ರೇಮ ದಿನವೇ ಬೇಕೇ?
ಅಲ್ಲಲ್ಲ ಒಂದು ದಿನ ಸಾಕೆ?


About The Author

1 thought on “ಪದ್ಮಜಾ ಜೋಯ್ಸ್”

Leave a Reply

You cannot copy content of this page

Scroll to Top