ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಹುಳಿಯಾರ್ ಷಬ್ಬೀರ್

ನಿನ್ನದೇ ದರ್ಬಾರ್ನಲ್ಲಿ ಖುರ್ಬಾನ್ ಆದರೂ ಮೌನವೇಕೆ ಸಖಿ/
ಆಲಾಪದ ರಾಗದಲ್ಲಿ ಸಲ್ಲಾಪವಾದರೂ ಮೌನವೇಕೆ ಸಖಿ //

ಅಂತರಂಗದ ಶಾನ್ದಾರ್ ಗುಲಾಮನಾಗುವೆ ಎಂದರೂ/
ಭರವಸೆಯ ಯಾವುದೇ ಇಶಾರ ನೀಡದೆ ಮೌನವೇಕೆ ಸಖಿ//

ಭೇಜವಿಲ್ಲದ ಕನಸುಗಳನ್ನು ಕಟ್ಟಿ ಏನು ಮಾಡಲಿ /
ಇಮಾರತ್ ಆಗುವ ಭಯದಲ್ಲಿ ಮೌನವೇಕೆ ಸಖಿ//

ನಸೀಬು ಗೊಂದಲದಲ್ಲಿರುವಾಗ ತಪ್ಪಿಲ್ಲ ಬಿಡು/
ಸಂಕಟ ಬಂದಿದೆ ಎಂಬ ಛಾಯೆಯಲ್ಲಿ ಮೌನವೇಕೆ ಸಖಿ//

” ಷಬ್ಬೂ”ವಿಗೆ ಪದೇ ಪದೇ ಸೋಲುವ ಹಪಾಹಪಿತನ/
ನಿನ್ನ ಜೀವನ ಸಂಭ್ರಮಿಸಲಿಲ್ಲವೆಂದು ಮೌನವೇಕೆ ಸಖಿ/


About The Author

Leave a Reply

You cannot copy content of this page

Scroll to Top