ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಪ್ರಣಯದ ಹಗ್ಗ

ಮಲಯಾಳಂ ಮೂಲ: ನೀರಜ ಟಿ.ಪಿ.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ
.

Vector illustration of heart shaped rope.

ಪ್ರಿಯೆ……,
ನಮ್ಮ ಮಧುರವಾದ
‘ಪ್ರಣಯ’ದ ಮೇಲೆ
‘ಭಗವಂತ’ನ ಕೃಪೆ
ಸದಾ ಇರುತ್ತದೆ
ಎಂಬ ‘ನಂಬಿಕೆ’
ನನಗೆ ಇತ್ತು…!

ನಿನ್ನ ಪ್ರಣಯದ
‘ ವಂಚನೆ’ಯೊಂದಿಗೆ
ನನ್ನ ನಂಬಿಕೆ – ವಿಶ್ವಾಸ
ಎಲ್ಲಾವು ‘ ಸತ್ತು’
ಹೋಗಿ ಬಿಟ್ಟಿದೆ…!

ಇನ್ನೂ ನೀನು
ನನಗೆ ಒಂದು
ತುಂಡು ‘ಹಗ್ಗ ‘ವನ್ನು
ನೀಡು…!

ಆ ಪ್ರಣಯದ ಹಗ್ಗ….,

ನೀನು ನನ್ನನ್ನು
ನಿನ್ನ ಹೃದಯದಿಂದ
ಓಡಿಸಿದ್ದಕ್ಕೆ….
ನಾನು ಮನನೊಂದು
ನೇಣು ಬಿಗಿದು
‘ಆತ್ಮಹತ್ಯೆ’ ಮಾಡಿಕೊಳ್ಳಲು
ಅಲ್ಲ….!

ನಿನ್ನ ನೆನಪಿನ
ಹಿಂದೆ ಕಣ್ಣು
ತಪ್ಪಿಸಿ ಓಡುತ್ತಿರುವ
ನನ್ನ ‘ಮನಸ್ಸು’ ನ್ನು
ಕಟ್ಟಿ ಹಾಕಲು
ಮಾತ್ರ….!!!


About The Author

Leave a Reply

You cannot copy content of this page

Scroll to Top