ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯ ಸಂಗಾತಿ ಗಜಲ್ ಹಮೀದಾ ಬೇಗಂ ದೇಸಾಯಿ ತಿಂಗಳಿರುಳ ಹಾಲಲಿ ಮಿಂದಿಹಳು ವಸುಧೆ ಆನಂದದಿತಾರೆಗಳ ಬೆಳಕಲಿ ಮಿಂಚಿಹಳು ವಸುಧೆ ಆನಂದದಿ ಕೃಷ್ಣ ದುಕೂಲ ನವುರಾಗಿ ಸುತ್ತಿದೆ ಅಲ್ಲವೇರಾತ್ರಿರಾಣಿಯ ಘಮಲು ಹೊದ್ದಿಹಳು ವಸುಧೆ ಆನಂದದಿ ತಂಬೆಲರು ಬೀಸುತಿದೆ ಸುಳಿದು ಮೆಲ್ಲಗೆ ನಗುತಹೊನ್ನಿಗಳ ಪೈಜಣ ಹಾಕಿಹಳು ವಸುಧೆ ಆನಂದದಿ ಚಂದ್ರಿಕೆಯ ಜೊನ್ನ ಸುರಿದಿದೆ ತರುಗಿರಿಗಳ ಮೇಲೆಬಿರಿದ ಹೂಗೊಂಚಲು ಮುಡಿದಿಹಳು ವಸುಧೆ ಆನಂದದಿ ಗಗನ ಗಂಭೀರ ವದನದಿ ನಿರುಕಿಸುತಿಹ ಬೇಗಂಮಧುರ ಮಿಲನಕೆ ಕಾದಿಹಳು ವಸುಧೆ ಆನಂ

ಹಮೀದಾ ಬೇಗಂ ದೇಸಾಯಿ-ಗಜಲ್ Read Post »

ಕಾವ್ಯಯಾನ, ಗಝಲ್

ತರಹಿ ಗಜಲ್

ಕಾವ್ಯ ಸಂಗಾತಿ ತರಹಿ ಗಜಲ್ ಗಜಲ್ ಸಲಿಲ ಮಿಳಿತ ತೈಲದಿ ಕಿಡಿಯೊಂದು ಪ್ರಜ್ವಲಿಸುತಿದೆ ಹೇಗೆ ಸಹಿಸಲಿಹುಸಿ ಭಾವನೆಯೊಳು ಹಸಿ ತತ್ವವು ಭವ್ಯವಾಗುತಿದೆ ಹೇಗೆ ಸಹಿಸಲಿ ಅಂತರಾತ್ಮದ ಮೌಲ್ಯಕೆ ಒರೆಹಚ್ಚಿ ಗ್ರಹಿಸದ ಜಗವೀಗ ಪ್ರಬಲವಾಗಿದೆಅರೆ ಬೆಂದ ನುಚ್ಚು ಸರ್ವರುದರವ ಪೋಷಿಸುತಿದೆ ಹೇಗೆ ಸಹಿಸಲಿ ಹಾವ ಭಾವಗಳ ಗುಟ್ಟಿಗೆ ದರ್ಪಣವನಿತ್ತು ತಿಳಿಯುವವರಿಲ್ಲ ಮರುಳೆಬಡಬಡಿಸುವ ಸೊಲ್ಲಿನಲಿ ದಿಟದ ಸಾರ ಕ್ಷೀಣಿಸುತಿದೆ ಹೇಗೆ ಸಹಿಸಲಿ ಕಾಲ ಪರ್ಯಟನೆಯ ಉತ್ಕರ್ಷದಿ ಸುಲಿಗೆಯಾಗಿವೆ ಚೆನ್ನುಡಿಗಳ ಸಾರಮುಲಾಜಿಲ್ಲದ ಅಭಿವ್ಯಕ್ತಿಗೆ ಸದ್ಭಾವ ಶಿಕಾರಿಯಾಗುತಿದೆ ಹೇಗೆ ಸಹಿಸಲಿ ಒಡಲ ಬೇನೆ ದಳ್ಳುರಿಯಾಗುತಿದೆ ದಿಗ್ಭ್ರಾಂತತೆಯ ವ್ಯೂಹದಲಿ ನಲುಗಿಮೌನದಾಕ್ರಂನದಿ ನಯನಗಳ ಕಾಂತಿ ಮಸುಕಾಗುತಿದೆ ಹೇಗೆ ಸಹಿಸ —–-ನಯನ. ಜಿ. ಎಸ್——— “ತರಹೀ ಗಜಲ್ : ನಯನ ಅವರ ಸಾನಿ ಮಿಸ್ರಾ” ಹುಸಿ ಭಾವನೆಯೊಳು ಹಸಿ ತತ್ವವು ಭವ್ಯವಾಗುತಿದೆ ಹೇಗೆ ಸಹಿಸಲಿಅಪಸ್ವರದ ಕಿಚ್ಚಿಗೆ ಆತ್ಮಗಳ ನಂಟು ಭಸ್ಮವಾಗುತಿದೆ ಹೇಗೆ ಸಹಿಸಲಿ ಒಡೆದ ಒಡನಾಡಿ ಭಾವವು ಉದ್ಧಟತನದಿಂದ ಗಹಗಹಿಸಿ ನಗುತಿದೆಮುಡಿಯನೇರಿದ ಒಲವ ಪುಷ್ಪ ಮಸಣ ಸೇರುತಿದೆ ಹೇಗೆ ಸಹಿಸಲಿ ನೆಚ್ಚಿ ಹಂಚಿದ ಹೃದಯದ ಮಾತದು ಬಿಕರಿಯಾಗುತಿದೆ ಬೀದಿಯಲಿನಂಬಿಕೆಯ ಮಹಲು ಸಿಡಿದು ನುಚ್ಚು ನೂರಾಗುತಿದೆ ಹೇಗೆ ಸಹಿಸಲಿ ಕಾಲದ ಪುಟದಲ್ಲಿ ಕರಗಿ ಹೋಗುತ್ತಿದೆ ಕರ ಹಿಡಿದು ಕಳೆದ ಕ್ಷಣಗಳುನಲಿವಿನ ಯುಗವೊಂದು ಪರ್ಯವಸಾನವಾಗುತಿದೆ ಹೇಗೆ ಸಹಿಸಲಿ ಮತಿಹೀನ ನಿಲುವಿಗೆ ಮಣಿದು ಕ್ಷೀಣಿಸುತ್ತಿದೆ “ವಿಜಯ”ದ ನಡಿಗೆನಸುಕಿನಲೇ ದುಗುಡದ ಕಾರ್ಮೋಡ ಕವಿಯುತಿದೆ ಹೇಗೆ ಸಹಿಸಲಿ. —————–ವಿಜಯಪ್ರಕಾಶ್. ಕೆ————

ತರಹಿ ಗಜಲ್ Read Post »

ನಿಮ್ಮೊಂದಿಗೆ

ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇವಸುಂಧರೆಯೆದೆಗೆ ಅರುಣರಾಗವು ನನ್ನ ಮನದಲಿನಿನ್ನ ಹೆಸರಿದೆನಿನ್ನ ಹೆಸರಲಿನನ್ನ ಉಸಿರಿದೆಉಸಿರು ಉಸಿರಿನ ಕಂಪಿನಲಿಸೃಷ್ಟಿಯ ಚೇತನವಿದೆ ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇ

Read Post »

ಇತರೆ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

ಪ್ರಶಸ್ತಿ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ

ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ Read Post »

You cannot copy content of this page

Scroll to Top