ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಿನಿ ಕವಿತೆಗಳು

ಮಾಜಾನ್ ಮಸ್ಕಿ

ಮನದಲ್ಲೇನೋ ಆಸೆ
ಕಣ್ಣಲ್ಲಿ ನಿರಾಶೆ
ಅರಳು ನಗುವಿನಲ್ಲಿ
ಬಾಡಿದ ಹೂವಿನ ಛಾಯೆ
ಅದೇಕೋ ಹರಡಿದ ಬೆಳಕಲ್ಲಿ
ಕತ್ತಲೆಯ ನೆರಳು
===

ಬಾನು ಸೀಳಿ ನೀರು
ಸುರಿಸುವ ಆಸೆ
ಅಲ್ಲೇ ಹೆಪ್ಪುಗಟ್ಟಿ ನಿಂತ
ಮೋಡದ ಮೇಲೆ ಹತಾಶೆ
===

ನೆರವೇರದ ಮನದ ಭಾವನೆಗಳು
ಕಣ್ಣೀರು ಸುರಿಯದ ಕಂಗಳು
ಮುಸುಕು ಹೊದ್ದ ಕನಸು
ಹೃದಯಗಳಿಗೆ ಮುನಿಸು
===

ಎಲ್ಲೋ ಮೂಡಿದ ಭಾವ
ಇನ್ನೆಲ್ಲೋ ಹುಡುಕಾಟ
ಬಂಧಿಯಾದ ಜೀವ
ಬಿಡುಗಡೆಗೆ ಹೋರಾಟ


About The Author

Leave a Reply

You cannot copy content of this page

Scroll to Top