ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಲಿತ ವಿದ್ಯಾರ್ಥಿ ಪರಿಷತ್

ವಿಶಾಲಾ ಆರಾಧ್ಯ

ಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಶಿಕ್ಷಕಿ ವಿಶಾಲಾ ಆರಾಧ್ಯ ಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಬೆಂಗಳೂರಿನ  ವಿಶಾಲಾ ಆರಾಧ್ಯ ಅವರು ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರಾಗಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ, ಸಂಗೀತ, ಪ್ರಕಾಶನ, ಅನುವಾದ, ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಾಲ್ಯದ ದಿನಗಳಿಂದಲೇ ಸಾಹಿತ್ಯದ ಒಡನಾಟವಿರುವ ಇವರು ಇದುವರೆವಿಗೆ ಕನ್ನಡ ಸಾರಸ್ವತ ಲೋಕಕ್ಕೆ  ಸೌಗಂಧಿಕಾ, ಸುರಹೊನ್ನೆ, ಬೊಂಬಾಯಿ ಮಿಠಾಯಿ, ಗೊಂಬೆಗೊಂದು ಚೀಲಾ,  ಕರ್ನಾಟಕ ರತ್ನಗಳು (ಮಕ್ಕಳ ನಾಟಕ)ನಡೆದಷ್ಟೂ ದಾರಿ (ಪ್ರಬಂಧಗಳು) ಸೀನೀರ್ ಬಾವಿ (ಕಾದಂಬರಿ) ಮುಂತಾದವು ನೀಡಿದ ಕೊಡುಗೆಗಳು. ಇವರ ಮಕ್ಕಳ ಸಾಹಿತ್ಯ ಕೃತಿಗಳಾದ ಬೊಂಬಾಯಿ ಮಿಠಾಯಿ ಮತ್ತು ಗೊಂಬೆಗೊಂದು ಚೀಲಾ ಕೃತಿಗಳಿಗೆ  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ  ಎರಡು ದತ್ತಿ ಪ್ರಶಸ್ತಿಗಳು ಪಡೆದಿರುತ್ತಾರೆ. ಶಾಲಾ ಮಕ್ಕಳಿಗೆ ಹೆಚ್ಚಿನ ಕನ್ನಡ ಕಲಿಕಾ ಪರೀಕ್ಷಾ ಪ್ರತಿನಿಧಿಯಾಗಿ ರಾಜ್ಯ ಮಟ್ಟದ ೧೪ ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ. ಮತ್ತು ೨ ಕನ್ನಡ ನಿಧಿ ಶಿಕ್ಷಕ ಪ್ರಶಸ್ತಿ ಸಂದಿವೆ. ತಮ್ಮ ಅಲ್ಲಮ ಪ್ರಕಾಶನ ಸಂಸ್ಥೆಯಿಂದ  ಯುವಕಾವ್ಯ ಪ್ರಶಸ್ತಿ ಮತ್ತು ಕಥಾ ಸ್ಪರ್ಧೆಗಳನ್ನು ಏರ್ಪಡಿಸಿ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ.  ಸಾಹಿತ್ಯದ ಜೊತೆಗೆ ಸಂಗೀತದ ಅಭ್ಯಾಸ ಮಾಡಿರುವ  ಇವರು ತಮ್ಮ  ಶಾಂತಲಾ ಸಂಗೀತ ಶಾಲೆಯಲ್ಲಿ  ಸಂಗೀತವನ್ನೂ ಬೋಧಿಸುತ್ತಿದ್ದಾರೆ. ಇವರ ಸದ್ಯ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಇವರ ಸಾಹಿತ್ಯ, ಶೈಕ್ಷಣಿಕ ಮತ್ತು ಸಂಘಟನೆಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ೨೦೨೨ ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾದ ಬಾಲಾಜಿ ಎಂ ಕಾಂಬಳೆಯವರು ತಿಳಿಸಿರುತ್ತಾರೆ.

—————————-

About The Author

2 thoughts on “ಶಿಕ್ಷಕಿ ವಿಶಾಲಾ ಆರಾಧ್ಯ ಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ”

Leave a Reply

You cannot copy content of this page

Scroll to Top