ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರತ್ನರಾಯಮಲ್ಲ-ಗಜಲ್

ಮಿರ್ಜಾ ಗಾಲಿಬ್ ಅವರ ೨೨೫ ನೆ ಜನ್ಮದಿನ ಪ್ರಯುಕ್ತ ಗಜಲ್

ಮಗಧೀರ ನೀನು ಉರ್ದು ಅದಬ್ ಅಂಗಳದಲ್ಲಿ
ಚಂದಿರ ನೀನು ಜಗದ ಪ್ರೇಮಿಗಳ ಮನಸ್ಸಿನಲ್ಲಿ

ಉರಿಯುವ ಮನಸುಗಳಲಿಯೂ ಅರಳಿರುವೆ
ಛಲಗಾರ ನೀನು ತಣ್ಣನೆ ಕಂಬನಿಯ ಕಡಲಲ್ಲಿ

ಮೂದಲಿಸಿ ಜಯಿಸುವ ಕಲೆಯು ನಿನಗೆ ಸ್ವಂತ
ಕಲೆಗಾರ ನೀನು ಮನಃಸಾಕ್ಷಿ ಕೆಣಕುವುದರಲ್ಲಿ

ಬತ್ತಿದ ಪ್ರೇಮ ಕಾರಂಜಿ ಚಿಮ್ಮಿಸುವ ವಾರಿಸ್
ಮೋಜುಗಾರ ನೀನು ಲೋಕದ ಬಾಹುಗಳಲ್ಲಿ

ಚಿರಂಜೀವಿ ಪದಕ್ಕೆ ಉಸ್ತಾದ್ ನೀನೆ ಗಾಲಿಬ್
ರಣಧೀರ ನೀನು ಹೃದಯವಂತರ ಎದೆಯಲ್ಲಿ

‘ಮಲ್ಲಿ’ಗೆ ಗಾಲಿಬ್ ನದೆ ಕನವರಿಕೆ ಅನುದಿನ
ಸುಖನವರ್ ನೀನು ಜಗತ್ತನು ಎಚ್ಚರಿಸುವಲ್ಲಿ


About The Author

Leave a Reply

You cannot copy content of this page

Scroll to Top