ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ದಾನಮ್ಮ ಝಳಕಿಯವರ ಎರಡು ಕವಿತೆಗಳು

ಕಾಮನ ಬಿಲ್ಲು

ಬಣ್ಣದ ಭರವಸೆಗಳಲಿ
ಕಾಮನ ಬಿಲ್ಲಿನ ರಂಗವಲ್ಲಿ
ಬಿಸಿಲು ಮಳೆಯ ನರ್ತನದಲಿ
ಬೆಳ್ಳಿ ಕಿರಣದ ಸಿಂಚನವದು

ತುಂತುರಿನ ಮಳೆ ಹನಿ
ಬಾನಲ್ಲಿ ಚಿತ್ತಾರದ ತೆನೆ
ಕಣ್ಣಿಗೆ ಹಬ್ಬದ ಕೆನೆ
ಸುಂದರ ಸೊಬಗಿನ ಮನೆ

ಚಿಗುರಿದೆ ಉತ್ಸಾಹದ ಚಿಲುಮೆ
ಕಾಮನ ಬಿಲ್ಲಿನ ಕುಲುಮೆ
ಅದ್ಬುತ ಸೃಷ್ಠಿಯ ಒಲುಮೆ
ಸೃಷ್ಠಿಸಿದೆ ಸ್ಪೂರ್ತಿಯ ಸೆಲೆ

***

ಬತ್ತದಿರಲಿ ಸ್ಪೂರ್ತಿ

ಬರಗಾಲ ಬಂದರೂ
ಅತೀವೃಷ್ಠಿ ಕೆಣಕಿದರೂ
ಎದೆಗುಂದದಿರು ಅನ್ನದಾತ
ಸೋಲದಿರು, ಹೆದರದಿರು
ಬತ್ತದಿರಲಿ ನಿನ್ನ ಸ್ಪೂರ್ತಿ

ಗಡಿ ಕಾಯುವ ಕಾಯಕದಲಿ
ದಿಟ್ಟ ನಡೆಯು ನಿನ್ನದಾಗಲಿ
ದೇಶ ನಿನ್ನ ಸ್ಮರಣೆಯಲಿ
ನಿತ್ಯ ನೂತನ ನೆನೆಯುತಲಿ
ಬತ್ತದಿರಲಿ ನಿನ್ನ ಸ್ಪೂರ್ತಿ

ಲಿಂಗಬೇಧ ಮೆಟ್ಟಿ ನಿಂತು
ಸಮಸಮಾಜದ ಕನಸು ಕಟ್ಟಿ
ಶರಣ ನುಡಿಗಳ ಕಂಕಣಕಟ್ಟಿ
ಮಹಿಳೆ ಸಮಾಜದ ರೆಕ್ಕೆಕಟ್ಟಿ
ಬತ್ತದಿರಲಿ ನಿನ್ನ ಸ್ಪೂರ್ತಿ


ಡಾ ದಾನಮ್ಮ ಝಳಕಿ

About The Author

Leave a Reply

You cannot copy content of this page

Scroll to Top