ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಹಸಿ ಮಣ್ಣಿನ ಅಂಗಳದಲ್ಲಿ ರಂಗೋಲಿ ಬಿಡಿಸಿ ಒಲವ ಬೇಡಿದೆ ನೀನು
ಹುಸಿ ಮುನಿಸಿನ ಬೇಸರದಲಿ ಆಟವ ಕೆಡಿಸಿ ಛಲದಿ ಕಾಡಿದೆ ನೀನು

ಪ್ರೇಮದ ಬಿಕ್ಷೆ ಕೇಳುವ ನೆಪದಲಿ ಹುಡುಕಿಕೊಂಡು ಬಂದು ನಿಂದೆಯಲ್ಲವೇ
ಕ್ಷೇಮದಿ ರಕ್ಷೆಯ ನೀಡಿ ಜಪವ ಮಾಡುತ ಬೇಗುದಿ ನೀಗಿ ತೀಡಿದೆ ನೀನು.

ಬದುಕಿನ ಬಂಡಿಯಲಿ ಬೆರೆತು ಸಾಗುವುದೇಅನಿರ್ವಚನೀಯ ಆನಂದ
ಕೆದುಕುದ  ಬಿಟ್ಟು ಮರೆತು ಬಾಳುವುದ ಕಲಿಸುತ ಮೋಡಿ ಮಾಡಿದೆ ನೀನು

ಅಂತರಂಗದ ಆಳ ಅರಿತು ಜೊತೆಗೆ ಹೆಜ್ಜೆ ಸೇರಿಸುತ ನಡೆದವರಲ್ಲವೆ
ರಂಗೀನ ಕನಸುಗಳಿಗೆ ತಾಳ ಹಾಕುತ ಎದೆಯ ಹಾಡಿಗೆ ಮಿಡಿದೆ ನೀನು

ಬರುವ ಕಷ್ಟಕಾರ್ಪಣ್ಯಗಳಿಗೆ ಹೆದರದೆ ಮುನ್ನಡೆವಳು ಈ ಜಯಾ.
ಇರುವೆ ನಷ್ಟಗಳೆಷ್ಟೆ ಸಂದರು ಎನುತ ಸನ್ನಡತೆಯ ಉಸಿರ ನೀಡಿದೆ ನೀ


About The Author

1 thought on “ಜಯಶ್ರೀ ಭ ಭಂಡಾರಿ…ಗಜಲ್”

Leave a Reply

You cannot copy content of this page

Scroll to Top