ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೇಗೆ ನಡೆದೆ ಅಷ್ಟು ದೂರ?

ಡಾ. ಸುರೇಖಾ ರಾಠೋಡ್

ಅಕ್ಕ ನೀ ಹೇಗೆ ತೊರೆದೆ
ಲೌಕಿಕ ಜಗತ್ತಿನ
ಮಾಯಾ ಜಾಲವ ?
ಆಕರ್ಷಕ ; ಅತಿ ಆಕರ್ಷಕ
ಆಯಸ್ಕಾಂತಕ್ಕಿಂತಲೂ
ಆಕರ್ಷಕ, ಆಕ್ರಮಣಕಾರಿ
ಜಗತ್ತಿನ ಮಾಯಾ ಜಾಲವ ?

ಬಂಧನವ ಬಿಡಿಸಿಕೊಂಡು
ಬರಿ ಗಾಲಲಿ
ಬರಿ
ಮೈಯಲಿ
ಹೇಗೆ
ನಡೆದು ಬಿಟ್ಟೆ ?
ಉಡತಡಿಯಿಂದ
ಕದಲಿವನದವರೆಗೆ..!!

ಕಾಡಲಿಲ್ಲವೇ
ದಾರಿಗುಂಟ..
ಕಾಡಮೃಗಗಳು..?
ಹೆಣ್ಣು ದೇಹವ
ಹಪಹಪಿಸುವ
ರಾಕ್ಷಸರು.. ?

ಅಕ್ಕ ನೀ ಹೇಗೆ
ಮೆಟ್ಟಿನಿಂತು,
ನಿನ್ನ ಮೆಟ್ಟುಗಳಾಗಿಸಿದ್ದು
ಎಂದು
ಹೇಳಬಾರದೇ ?
ನಿನ್ನ ಸಹೋದರಿಯರಿಗೆ…

ಬಾ ಅಕ್ಕ
ನಿನ್ನ ಸಹೋದರಿಯರು
ಕಾಯುತ್ತಿರುವರು

ನಿನ್ನ ದಾರಿಗುಂಟ
ನಡೆಯಲು ಬಾ

ತೋರಿಸು ದಾರಿಯ
ಹೇಗೆ ನಿಲ್ಲಬೇಕು
ಎದೆ ಗುಂಡಿಗೆಯ
ಗಟ್ಟಿಯಾಗಿಸಬೇಕೆಂದು.
ನೀ ನಡೆದ ಮಾರ್ಗ
ಖಾಲಿ ಖಾಲಿ
ಬರಿ ಖಯಾಲಿಯಾದ
ಬಾಲೆಯರ ಬಾಳ
ಬೆಳಕಾಗು ಬಾ ಅಕ್ಕ


About The Author

3 thoughts on “ಡಾ. ಸುರೇಖಾ ರಾಠೋಡ್ ಕವಿತೆ-ಹೇಗೆ ನಡೆದೆ ಅಷ್ಟು ದೂರ?”

  1. ಅದ್ಭುತವಾದ ರಚನೆ mam, ಅಕ್ಕಮಹಾದೇವಿ ಎಲ್ಲ ಮಹಿಳೆಯರಿಗೂ ನಿದರ್ಶನ

  2. ಆತಂಕವನ್ನು ದೂರ ಮಾಡಿಕೊಳ್ಳಲು ಅಕ್ಕನನ್ನು ದಾರಿ ಕೇಳಿರುವ ಕವಿತೆ…

Leave a Reply

You cannot copy content of this page

Scroll to Top