ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಶಸ್ತಿ

ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ

ಕಲ್ಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಡ ಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿಮತ್ತು ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ

ಪ್ರಶಸ್ತಿಗಳು ನಾಡು ಕಂಡ ಶ್ರೇಷ್ಠ ಲೇಖಕ ಸಂಶೊಧಕ ಮಾನವತಾವಾದಿ.

ಕನ್ನಡ ಮತ್ತು ಬಸವಣ್ಣ ಇವರ ಕಾರ್ಯಕ್ಷೇತ್ರ

ಇವರ ಹೆಸರಿನಲ್ಲಿ ಹೆಚ್ಚಿನ ಸಾಧನೆ ಮತ್ತು ಕಾರ್ಯ ಮಾಡುವ ಸಾಧಕರಿಗೆ ಕೊಡುವ ಈ ಪ್ರಶಸ್ತಿಗಳಿಗೆ

ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಶರಣೆ ಸುಜಾತ ಪಾಟೀಲ

ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ

ಡಾ ಶಶಿಕಾಂತ  ಪಟ್ಟಣ

ಇವರು ಆಯ್ಕೆ ಆಗಿದ್ದಾರೆ. ಕಲ್ಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಟ್ಟ ಪ್ರಶಸ್ತಿಗಳು ಬಯಸದೆ ಬಂದ ಲಿಂಗ ಭೊಗ ಎಂದು ಡಾ ಶಶಿಕಾಂತ್ ಪಟ್ಟಣ  ಅಭಿಪ್ರಾಯ ಪಟ್ಟು  ನಮಗೆ ಡಾ ಎಂ ಎಂ ಕಲ್ಬುರ್ಗಿ ಅವರ ಸಾಧನೆ ಪರಿಶ್ರಮ ಸ್ಫೂರ್ತಿ ಎಂದು ಹೇಳಿದ್ದಾರೆ.

ಆಯ್ಕೆ ಸಮಿತಿಯ ಡಾ  ಎಂ ಎಂ ಪಡಶೆಟ್ಟಿ  ಡಾ ಲಿಂಗಪ್ಪ ಕಲಬುರ್ಗಿ ಸರ್  ಲೀನಾ  ಕಲ್ಬುರ್ಗಿ ಶ್ರೀ ಶಿವಲಿಂಗಪ್ಪ  ಕಲ್ಬುರ್ಗಿ ಮತ್ತು ಡಾ ಶೆಟ್ಟರ್ ಮೃತ್ಯುಂಜಯ ಇವರು ವಿಜೇತ ಸುಜಾತ ಪಾಟೀಲ್ ಮತ್ತು ಡಾ ಶಶಿಕಾಂತ  ಪಟ್ಟಣವರನ್ನು ಅಭಿನಂದಿಸಿದ್ದಾರೆ.

 ಕನ್ನಡ ಮತ್ತು ಬಸವಣ್ಣನವರ ಸೇವೆ ಕಾರ್ಯ ಮಾಡುವ ಸಾಧಕರಿಗೆ ಇವೆರಡು ಪ್ರಶಸ್ತಿ ಕೊಡಲಾಗುವುದು .ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಗುಂಪಿನ ಸಕ್ರಿಯ ಸದಸ್ಯರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು.

ಪ್ರಶಸ್ತಿ ಮೊತ್ತ ತಲಾ ಹತ್ತು ಸಾವಿರ ರೂಪಾಯಿ ಮತ್ತು ಡಾ ಎಂ ಎಂ ಕಲ್ಬುರ್ಗಿ ಅವರ ಹೆಸರಿನಲ್ಲಿ ನೆನಪಿನ ಫಲಕ

ಕೊಡಲಾಗುವುದು.

ಪ್ರತಿ ವರ್ಷ ಇವೆರಡು ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕಲ್ಬುರ್ಗಿ  ಫೌಂಡೇಶನ್ ವಿಜಯಪುರ ಇವರು ಪ್ರಕಟಿಸಿದ್ದಾರೆ. ಇವೆರಡು ಪ್ರಶಸ್ತಿಗಳನ್ನು ಜನೆವರಿ 7 ರಂದು ಸಿಂದಗಿಯಲ್ಲಿ ನೀಡಲಾಗುವುದು ಎಂದು ಪ್ರಕಕಟಿಸಿದ್ದಾರೆ.


ವರದಿ

ಡಾ.ನಿರ್ಮಲಾ ಬಟ್ಟಲ

About The Author

1 thought on “ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ”

  1. ನಾಗರಾಜ್ ಹರಪನಹಳ್ಳಿ

    ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಸರ್ ಅವರ ಹೆಸರಿನ ಫೌಂಡೇಶನ್ ಕೊಡಮಾಡುವ ವಚನ ಸಿರಿ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿಗೆ ಪಾತ್ರರಾದ ಇಬ್ಬರಿಗೂ ಅಭಿನಂದನೆಗಳು

Leave a Reply

You cannot copy content of this page

Scroll to Top