ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಕೆ!

ಆಶಾ ಯಮಕನಮರಡಿ

ಬರೆದದ್ದು ಆಕೆಯಾ ಆತನಾ
ಎಂದಾಗಲೆ ನಿರ್ಧರಿತವಾಗುವುದು
ಅದರ ಬೆಲೆ

ಅದೆಂಥ ಸಾಹಿತ್ಯ ಬರೆದಾಳುಆಕೆ
ಪಾತ್ರ ಪಗಡೆಗಳ ಮಧ್ಯೆ ಅನ್ನ ಬೇಯಿಸುವಾಕೆ
ಹೊತ್ತೊತ್ತಿಗೆ ಕರೆದು ಊಟ ಬಡೆಸುವಾಕೆಗೆ
ಪ್ರತಿನಿತ್ಯದ ನಡೆವ ವಿದ್ಯಮಾನಗಳೇನು ಗೊತ್ತು
ಹೀಗಂತ ಅವಳ ಬರಹ ಅಲ್ಲಗಳೆದವರೆ ಹೆಚ್ಚು

ಮೈ ಮನವನ್ನು ಮನೆ ವಾರ್ತೆಯನ್ನು
ಮುಚ್ಚಿಟ್ಟುಕೊಂಡು
ಎಲ್ಲರೆದಿರು ಸಂತೃಪ್ತಿ ನಗೆಬೀರುವಾಕೆಗೆ
ಹೊರಜಗವನರಿಯದ ಮೊದ್ದು ಪೆದ್ದು
ಎಂದು ಹೆಸರಿಸಿ
ಅವಳೇನು ಬರೆದಾಳು ಎಂದು ನಗಾಡಿದವರೆ ಹೆಚ್ಚು

ಮನೆಗೆ ಬಂದವರನ್ನು ಆದರಿಸಿ ಸೌಜನ್ಯದಿ ಮಾತನಾಡಿಸುವಾಕೆ
ವೇದಿಕೆಯ ಹತ್ತಿ ಏನು ಭಾಷಣಮಾಡಿಯಾಳು
ಹೆಸರಿನಾ ಮುಂದೆ ಪದವಿಗಳ ಪಟ್ಟಿ ಇಲ್ಲದಿರುವಾಕೆಗೆ
ಯಾವ ಪಂಡಿತರು ತಾನೆ ಆಕೆಗೆ ಗೊತ್ತಿರುವರು
ಎಂದು ಹೇಳುತ ತಿರುಗುವರೆ ಹೆಚ್ಚು

ಕೊಂಕು ಕೊಸರು ಮಾತುಗಳನೆ
ಸಿಹಿ ಎಂದು ಮೆದ್ದು
ಬುದ್ಧಿವಂತರ ಸಮಕೆ ಎದ್ದು ನಿಂತಾಕೆ
ಆಕೆ
ಬರಹಕ್ಕೂ ಬದುಕಿಗೂ ಬೆಲೆಪಡೆದಳಿಂದು
ಅಲ್ಲಗಳೆದವರ ಸೊಲ್ಲು ಅಡಗಿಸಿದ
ಹೆಣ್ಣಾಕೆ….ಹೆಣ್ಣಾಕೆ


About The Author

7 thoughts on “ಆಶಾ ಯಮಕನಮರಡಿ ಕವಿತೆ-ಆಕೆ!”

  1. ವಾಹ್….ಆತ್ಮವಿಶ್ವಾಸದ ಹೊನಲು… ಮಸ್ತ್…..
    ಹಮೀದಾ ಬೇಗಂ.

  2. ಚೆನ್ನಾಗಿದೆ.
    ಸ್ತ್ರೀಸಶಕ್ತೀರಣ .
    ಬಂಡೇಳಿ…ಅಕ್ಕಮಹಾದೇವಿ ತರಹ

Leave a Reply

You cannot copy content of this page

Scroll to Top