ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮುಂಗಾರಿನ ಪುಳಕ

ಭಾರತಿ ಕೇದಾರಿ ಬಲವಡೆ

ನಿನ್ನ ಮೊದಲ
ಕುಡಿನೋಟ ನನ್ನಸೆಳೆದ ಕ್ಷಣವದು
ಹೃದಯದಲಿ ಪ್ರೇಮ ತರಂಗ ಮೀಟಿದ ದಿನವದು
ನನಗೇನಾಗಿದೆ ಎಂದು ನನ್ನನ್ನೇ ನಾ ಪ್ರಶ್ನಿಸಿದ ಮನವದು
ನಿನ್ನ ಸಾಂಗತ್ಯದಿಂದ ಒಲವ ಜೋಕಾಲಿಯಲಿ ಜೀಕಿದ ತನುವಿದು//

ಭಾವಯಾನದಲಿ ವಿಹರಿಸುವ ಮನಗಳಿಗೆ ಬೇಕು ಸೂತ್ರ
ತುಸು ಯೋಚಿಸುವ ಬಾಳ ದೋಣಿಯಲ್ಲಿ ನಮ್ಮ ಪಾತ್ರ
ನಿನ್ನ ಕಾಯಿಸಿದೆನೆಂದಾಕ್ಷಣ ಇರಲಿ ಹುಸಿಕೋಪ ಮಾತ್ರ
ಶಾಶ್ವತವಾಗಿ ದೂರಾಗದೆ ನಿನ್ನ ಮನವಿರಲಿ ನನ್ನ ಹತ್ರ //

ಎಷ್ಟೋ ದಿನಗಳಾದವು ನಿನ್ನ ಸವಿಮಾತಿಲ್ಲ ನಲ್ಲೆ
ನೀನಿರದ ಬದುಕದು ಮರುಭೂಮಿ ನಿ ಬಲ್ಲೆ
ನಿನ್ನ ಪಿಸುಮಾತು ಬಿಸಿಯುಸಿರು ನಿನ್ನ ಬಿಡಲು ಒಲ್ಲೆ
ಇಷ್ಟೆಲ್ಲ ಅಂಗಲಾಚಿದರೂ ಕರಗಲಿಲ್ಲ ನೀನು ಕಲ್ಲೆ?

ಮುಂಗಾರಿನ ರೋಮಾಂಚನದಿಪುಳಕವಿದು ಹಾಯೆನಿಸುತಿದೆ
ಸುರಿವ ಸೋನೆಗೆ ನೆನಪು ಕಾಡಿದೆ ನೀ ಬೇಕೆನಿಸುತಿದೆ
ಮನದಿ ನಿನ್ನ ಬಿಂಬ ಮರುಕಳಿಸಿ ಈ ವೇದನೆ ಸಾಕೆನಿಸುತಿದೆ
ಕ್ಷಮಿಸು ಇನ್ನೆಂದೂ ಕಾಯಿಸುವದಿಲ್ಲ ನನ್ನ ಆತ್ಮ ಆಹ್ವಾನಿಸುತಿದೆ//


ಭಾರತಿ ಕೇದಾರಿ ನಲವಡೆ ಹಳಿಯಾಳ.

About The Author

1 thought on “ಭಾರತಿ ಕೇದಾರಿ ನಲವಡೆ ಕವಿತೆ-ಮುಂಗಾರಿನ ಪುಳಕ”

Leave a Reply

You cannot copy content of this page

Scroll to Top