ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿರವರ ತನಗಗಳು

೧
ಸುತ್ತಲೂ ಬೆಳಕಿದೆ
ತೆರೆದು ನೋಡು ಕಣ್ಣು
ಭರವಸೆ ಸೋಲಲು
ಬದುಕುವಾಸೆ ಮಣ್ಣು
೨
ಕವಿತೆಯೋದಿ ಕವಿ
ಉಮೇದಿನಲಿ ಇದ್ದ
ಪ್ರೇಕ್ಷಕರ ಸಾಲಲಿ
ಇದ್ದವನೊಬ್ಬ ಎದ್ದ
೩
ಗುರುತಿಗಾಗಿ ಕೊಟ್ಟ
ಮುತ್ತು ನನ್ನಲೇ ಇವೆ
ಮತ್ತಾರಿಗೂ ಕೊಡದೇ
ಜೋಪಾನ ಇಟ್ಟಿರುವೆ

೪
ಹರಾಜಿನಲಿ ಕೊಂಡ
ಪ್ರಶಸ್ತಿ ಡಾಕ್ಟರೇಟ್!
ಅಮಾಯಕ ಕೇಳಿದ
ಒಂದಕೆ ಎಷ್ಟು ರೇಟು!!
೫
ಮಳೆಗಾಲ ವೇಳೆಗೆ
ಅಣಬೆಗಳ ಹುಟ್ಟು
ಹಸಿರುಟ್ಟ ಧರೆಗೆ
ಅವು ದೃಷ್ಟಿಯ ಬೊಟ್ಟು


About The Author

2 thoughts on “ಸಿದ್ದಲಿಂಗಪ್ಪ ಬೀಳಗಿರವರ ತನಗಗಳು”

Leave a Reply

You cannot copy content of this page

Scroll to Top