ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೌನ ಮೂಕವಾಯಿತು??

ವೀರಣ್ಣ. ಮ. ಹೂಲಿ

ಮಾತು ಮೌನವಾಯಿತು,
ಮೌನ ಮೂಕವಾಯಿತು.
ಮೌನವೇ ಮಾತಾಯಿತು||

ಶುಭಾಶಯಗಳನ್ನು,ಭೇಟಿಯಾಗಿ
ಪರಸ್ಪರ ಹಂಚಿಕೊಳ್ಳುತ್ತಿದ್ದೆವು!
ನಂತರ Hello ಎಂದು ಶುಭಾಶಯ
ಕೋರುತ್ತಿದ್ದವು||

ಆಮೇಲೆ ಮಾತು ಮೌನವಾಗಿ
ಹಬ್ಬ-ಹರಿದಿನಗಳ ಶುಭಾಶಯಗಳನ್ನು
Message ಮಾಡಿದಾಗ
ಮಾತು ಮೌನವಾಯಿತು||

ಮೌನ ಮೂಕವಾಗಿ WhatsAppನಲ್ಲಿ
ವಿಜಯದಶಮಿ, ಬನ್ನಿ- ಬಂಗಾರ
ಫೋಟೋ ಕಳುಹಿಸಿದಾಗ
ಮೂಕನು ಮೌನವಾದನು
ಸಂಕ್ರಮಣದ ಎಳ್ಳು ಬೆಲ್ಲದ ಫೋಟೋ
ಕಳುಹಿಸಿದಾಗ ಮಾತು ಮೌನವಾಯಿತು!
ಮೌನವು ಮೂಕವಾಯಿತು ||

Facebook ನಲ್ಲಿ ಎಲ್ಲವೂ ಮೌನದಲ್ಲಿಯೇ
ಸಂಭಾಷಣೆ ಶುರುವಾಯಿತು,
ಮಾತು ಮೌನವಾಗಿ ಮೂಕವಾಯಿತು,
ಮಾತು ಮೌನವಾಯಿತು,
ಮೌನವೇ ಮಾತಾಯಿತು||


About The Author

Leave a Reply

You cannot copy content of this page

Scroll to Top