ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನತದೃಷ್ಟೇ ಹೆಣ್ಣು…!?

ಐಗೂರು ಮೋಹನ್ ದಾಸ್

ಆ ಕತ್ತಲೆ ರಾತ್ರಿಯಲ್ಲಿ
ನತದೃಷ್ಟೇ ಹೆಣ್ಣು ತನ್ನ
ಉಡುಪು ಕಳಚಿ ಅಪರಿಚಿತ
ಪುರುಷನೊಂದಿಗೆ ಮಿಲನವಾಗುವ
ವೇಳೆ ಅವಳ ಸ್ತನಗಳು
ಮಾತ್ರ ರೋಧಿಸುತ್ತಿದ್ದವು

ಪ್ರತಿ ರಾತ್ರಿ ಹೊಸ ಹೊಸ
ಪರಪುರುಷರ ಕಪಿಮುಷ್ಠಿಯಲ್ಲಿ ಅವುಗಳು ನರಳುತ್ತಿದ್ದವು.
ಬಡತನ ಅವಳನ್ನು ಆ
ಪಾಪಕೂಪಕ್ಕೆ ತಳ್ಳಿಹಾಕಿತ್ತು…!!

ಈ ಕ್ರಿಯೆಯಲ್ಲಿ ಅವಳಿಗೆ
ತುಸು ‘ಸುಖ’ ದೊರೆಯುತ್ತಿರಲಿಲ್ಲ..!
‘ಕಾಮದಾಹ’ ಸತ್ತು ಹೋಗಿ
‘ತಿಥಿ’ ಮುಗಿದೇ ಹಲವು
ವರ್ಷವಾಗಿತ್ತು..!

ಆದರೂ ದೇಹ ‘ಮಾರಿ’
ಬದುಕುವಂತಹ ವ್ಯಾಪಾರಿಯಾಗಿ
ಬಿಟ್ಟಳು…!!!

ಇದು ವಿಧಿಯೋ….?
ಹಿಂದಿನ ಜನ್ಮದ ಪಾಪದ
ಫಲವೋ ಗೊತ್ತಿಲ್ಲ…!
ಆದರೆ ಒಂದು ‘ಪ್ರಣಯ’ದ
‘ ವಂಚನೆ’ಯ ಫಲಿತಾಂಶವು
ದುರಂತ ನಾಯಕಿಯ
ಶಿಲೆಯಾಗಿ ಕೆತ್ತಿತ್ತು..!
ಜೊತೆಗೆ ಬಡತನ
ನಕ್ಕಿತ್ತು…!!!


About The Author

Leave a Reply

You cannot copy content of this page

Scroll to Top