ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಮೊಗ್ಗಿನ ಮನಸು

ದಾಮಿನಿ ರಂಗಸ್ವಾಮಿ

ದಾಮಿನಿ ರಂಗಸ್ವಾಮಿ ‘ಮೊಗ್ಗಿನ ಮನಸು’ ಕವನ ಸಂಕಲನ

ಮೊದಲು ದಾಮಿನಿ ರಂಗಸ್ವಾಮಿ ಅವರ ಕವನ ಸಂಕಲನವಾದ ‘ಮೊಗ್ಗಿನ ಮನಸು’ ಬಗೆಗೆ ನೋಡುತ್ತಾ, ಆಮೇಲೆ ಅವರ‌‌ ಶೈಕ್ಷಣಿಕ ಮತ್ತು ವಯಕ್ತಿಕ ಬದುಕಿನ ಬಗೆಗೆ ಒಂದಷ್ಟು ನೋಡೋಣವೂ..!

ಮೊಗ್ಗಿನ ಮನಸು

ದಾಮಿನಿ ರಂಗಸ್ವಾಮಿ

Pages 108

90.00

Year of Publication: 2019

Published by: ಸಿವಿಜಿ ಪಬ್ಲಿಕೇಷನ್ಸ್‌

Address: ಗಾಂಧಿಭವನ, ಶೇಷದ್ರಿಪುರಂ, ಬೆಂಗಳೂರು

ದಾಮಿನಿ ರಂಗಸ್ವಾಮಿ ಅವರ ಮೊದಲ ಕವನ ಸಂಕಲನ ಮೊಗ್ಗಿನ ಮನಸು..!

ಇವರ ಕವಿತೆಗಳಲ್ಲಿ ಮೌನ ರೂಪಕವಾಗಿ ಮಾತನಾಡುತ್ತದೆ. ಕೇಳಿದೆ ನೀನು ಕವನ ಎಂದರೇನು? ಎಂಬ ಪದ್ಯದಲ್ಲಿ ಕವಯತ್ರಿಯೂ ತಾನು ಕಂಡಂತೆ ಕವಿತೆ ಎಂದರೇನು ಎಂಬುದನ್ನು ವಿವರಿಸುತ್ತಾ ಹೋಗಿದ್ದಾರೆ. ಹೆಣ್ಣು ಮತ್ತು ಹೆಣ್ಣಿನ ಆವಸ್ಥೆ ಕುರಿತು ಅನೇಕ ಪದ್ಯಗಳಿದ್ದು, ಸ್ತ್ರೀ ಪರವಾದ ಧ್ವನಿಯನ್ನು ಹೊರಡಿಸುತ್ತವೆ. ಮುನ್ನುಡಿಯಲ್ಲಿ ಅಂಜನಪ್ಪ ಅವರು ಯುವ ಬರಹಗಾರ್ತಿಯ ಕವಿತೆಗಳನ್ನು ವಿಶ್ಲೇಷಿಸುತ್ತಾ ‘ಹೆಣ್ಣೆಂಬ ಮೃದುತ್ವದ ಸಾಗರವನ್ನು ಪೋಣಿಸಿಕೊಂಡು ಹುಟ್ಟಿದವಳು’ ಎಂಬುದು ಏಕ ಕಾಲಕ್ಕೆ ಹಲವು ಧನಿಗಳನ್ನು ಧರಿಸುತ್ತದೆ. ಒಮ್ಮೊಮ್ಮೆ ತೀವ್ರ ಭಾವ ಬಂಧಿಯಾಗುವ ಕವಿತೆಗಳು, ಮತ್ತೊಮ್ಮೆ ಅದರಿಂದ ಬಿಡಿಸಿ ಪಾಲಾಗುವ ಹೆಣಗಾಟವನ್ನೂ ಹೇಳಿ ಬಿಡುತ್ತದೆ. ಕೆಲ ಪದ್ಯಗಳು ಏಕಾಂತದ ಕನವರಿಕೆ ಆಗದೇ ಲೋಕಾಂತದ ಮೊರತ ಆಗುವ ಮೂಲಕ ಸಾಮಾಜಿಕ ಸಂರಚನೆ, ಪಲ್ಲಟಗಳಿಗೆ ಧನಿ ಕೊಟ್ಟು ಬಿಡುತ್ತವೆ’ ಎನ್ನುವ ಅವರ ಮಾತುಗಳು ದಾಮಿನಿ ರಂಗಸ್ವಾಮಿ ಅವರ ಬರಹದ ಆಳ ಅಗಲವನ್ನು ವಿವರಿಸುತ್ತದೆ..!

ಹೀಗೆಯೇ ಕವನ ಸಂಕಲನವನ್ನು ಹೊರತಂದಿರುವ ದಾಮಿನಿ ರಂಗಸ್ವಾಮಿ ಅವರ ವೈಯಕ್ತಿಕ ಓದು ಮತ್ತು ಇತರೇ ವಿಚಾರಗಳ ಬಗೆಗೆ ಒಂದಷ್ಟು ಮಾತುಗಳು..!

 ದಾಮಿನಿ ರಂಗಸ್ವಾಮಿಯವರ ವೈಯಕ್ತಿಕ ಜೀವನ ಬಗೆಗೆ ಒಂದಷ್ಟೂ..! —

ನನಗೆ ದಾಮಿನಿ ರಂಗಸ್ವಾಮಿ ಎಂಬವರು ನನಗೆ ಪರಿಚಯವಾಗಿದ್ದು ಇದೇ ಫೇಸ್ ಬುಕ್ ಮತ್ತು ಮೆಸೆಂಜರ್ ನಲ್ಲಿ ಬಹಳ ದಿನಗಳ ಹಿಂದೆಯೇ. ಇವರು ಬಹಳ ಒಳ್ಳೆಯ ಮತ್ತು ಸದ್ಗುಣವುಳ್ಳ, ಮುಗ್ಧ ಮನಸ್ಸಿನ ಹುಡುಗಿ..!

ಇವರೂ ಒಬ್ಬ ಸಾಹಿತಿ, ಬರಹಗಾರ್ತಿ ಎಂದು ನನಗೆ ಗೊತ್ತಾಗಿದ್ದು ಬಹಳ ದಿನಗಳ ಹಿಂದೆಯೇ. ಮೊದಲು ಇವರು ಬಗೆಗೆ ಒಂದಷ್ಟು ಪರಿಚಯ ಮಾಡಿಕೊಳ್ಳೋಣ.

ಈ ದಾಮಿನಿ ರಂಗಸ್ವಾಮಿ ಮೂಲತಃ ಧಾರವಾಡದಲ್ಲಿ ‘ಧಾರವಾಡದ ಜನತಾ ಶಿಕ್ಷಣ ಸಂಸ್ಥೆ’ಯಲ್ಲಿ ಕಲಿತವರು. ಇರಲಿ. ಆಯಿತು ಇವರ ಸಾಹಿತ್ಯದ ಬಗೆಗೆ ನಾವು ಒಂದಷ್ಟು ನೋಡೋಣ.

ಮೊಗ್ಗಿನ ಮನಸು’ನಿನ ಮೂಲಕ ದಾಮಿನಿ ರಂಗಸ್ವಾಮಿಯ ಸಾಹಿತ್ಯದ ಪಯಣದ ಆರಂಭ-

ಈ ದಾಮಿನಿ ರಂಗಸ್ವಾಮಿಯು 1994 ಜನವರಿ 11 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಜನಿಸಿದವರು.ತಂದೆ ಪ್ರೊ.ಎಂ.ಜಿ.ರಂಗಸ್ವಾಮಿ ಅಂತ ಹಿರಿಯ ಸಾಹಿತಿಗಳು. ತಾಯಿ ಕವಿತಾ ಅಂತ. ಹಿರಿಯೂರಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣವನ್ನು ಮುಗಿಸಿದರು ದಾಮಿನಿ ರಂಗಸ್ವಾಮಿ. ನಂತರ ಧಾರವಾಡದ ‘ಜನತಾ ಶಿಕ್ಷಣ ಸಂಸ್ಥೆ’ (ಎಸ್‌ಡಿಎಂ) ನಲ್ಲಿ ಪದವಿ ಬಿ.ಎ. ಪದವಿಯನ್ನು ಪಡೆದವರು ಇವರು. ಅದೇ ಧಾರವಾಡ ವಿಶ್ವವಿದ್ಯಾಲಯದ ಆರ್.ಸಿ.ಹಿರೇಮಠ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದವರು ದಾಮಿನಿ ರಂಗಸ್ವಾಮಿ.

ಶಾಲಾ ದಿನಗಳಲ್ಲಿ ಕನ್ಯಾಕುಮಾರಿಯಿಂದ

ಭಾರತ — ಪಾಕಿಸ್ತಾನದ ವಾಘಾ ಗಡಿಯವರೆಗೆ ಪ್ರವಾಸವನ್ನು ಮಾಡಿದರು ದಾಮಿನಿ ರಂಗಸ್ವಾಮಿ. ವಾಘಾ ಗಡಿಯಲ್ಲಿ ಪ್ರತಿದಿನ ಸಂಜೆ ಜರುಗುವ ಮಿಲಿಟರಿ ಕವಾಯಿತುನಲ್ಲಿ ಭಾಗವಹಿಸಿ ರಾಷ್ಟ್ರಧ್ವಜ ಹಿಡಿದ ಗೌರವವು ದಾಮಿನಿ ರಂಗಸ್ವಾಮಿ ಅವರದು. 2007 ರಲ್ಲಿ ಬೆಂಗಳೂರಲ್ಲಿ ಬಿ.ಎಸ್.ಎನ್.ಎಲ್ ಏರ್ಪಡಿಸಿದ್ದ ಮ್ಯಾರಾಥಾನ್ ಓಟದಲ್ಲಿ ಭಾಗಿಯಾದವರು ಈ ನಮ್ಮ ದಾಮಿನಿ ರಂಗಸ್ವಾಮಿ..!’ಮೊಗ್ಗಿನ ಮನಸು’ ದಾಮಿನಿ ರಂಗಸ್ವಾಮಿ ಅವರ ಚೊಚ್ಚಲ ಕೃತಿಯಾಗಿದೆ. ಇಲ್ಲಿಂದಲೇ ಈ ದಾಮಿನಿ ರಂಗಸ್ವಾಮಿಯ ಸಾಹಿತ್ಯದ ಪಯಣವೂ ಶುರುವಾಗುವುದು..! ಇನ್ನೂ ಮುಂದೆ ಹೀಗೆಯೇ ಇವರ ಸಾಹಿತ್ಯಿಕ ಬದುಕು ಮುಂದುವರಿಲಿ ಎಂದು ಹಾರೈಸೋಣವೂ..!


ಕೆ.ಶಿವು.ಲಕ್ಕಣ್ಣವರ

About The Author

Leave a Reply

You cannot copy content of this page

Scroll to Top