ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಸ್ತುತ ಶಿಕ್ಷಣ!

ಕಾಡಜ್ಜಿ ಮಂಜುನಾಥ

ಶಿಕ್ಷಣವಿಂದು
ಉದ್ಯಮವಾಗಿ ಮೌಲ್ಯ
ಮೂಲೆ ಸೇರಿದೆ !

ನೈತಿಕತೆಯ
ಅಪಹಾಸ್ಯ ಮಾಡುವ
ಭಾವ ಮೂಡಿದೆ !

ಅಂಕಗಳಿಕೆ
ಮದವೇರಿ ಸಂಸ್ಕಾರ
ಕಾಣೆಯಾಗಿದೆ !

ಪರೀಕ್ಷೆಯೊಂದು
ನಕಲು ಬೆಂಬಲಿಸೋ
ಅಡ್ಡೆಯಾಗಿದೆ !

ಜ್ಞಾನ ಪಡೆವ
ಹಂಬಲ ಮಾಯವಾಗಿ
ಮಂಕು ಮೂಡಿದೆ !

ತಾಯಿ ತಂದೆಯ
ಪ್ರತಿಷ್ಠೆಯ ಅಮಲ
ಮದವೇರಿದೆ !

ಕ್ಯಾಶ್ ಗಿ ಶಾಲೆ
ರಕ್ತ ಹೀರುವ ಮೌನ
ಸೊಳ್ಳೆಯಾಗಿದೆ !

ಯೂನಿವರ್ಸಿಟಿ
ಜಾತೀಯತೆ ಬೆಳೆಸೋ
ತೋಟವಾಗಿದೆ !

ತಂತ್ರಜ್ಞಾನವು
ಗುರುಗಳ ಹಿರಿಮೆ
ಮಣ್ಣು ಮಾಡಿದೆ !


About The Author

3 thoughts on “ಕಾಡಜ್ಜಿ ಮಂಜುನಾಥ ಕವಿತೆ-ಪ್ರಸ್ತುತ ಶಿಕ್ಷಣ!”

  1. ಬ್ಯುಟಿಫುಲ್ ಲೈಫ್ ಲೈನ್… ಅರ್ಥವುಳ್ಳ ಸಾಲುಗಳು… .. ಅಭಿನಂದನೆಗಳು ಸರ್.

Leave a Reply

You cannot copy content of this page

Scroll to Top