ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕನ್ನಡ ನುಡಿ

ವಿತಾ ಮುದ್ಗಲ್

ಎಷ್ಟು ಚಂದ ಎಷ್ಟು ಅಂದ ನಮ್ಮ ಕನ್ನಡ
ಎಷ್ಟೋ ಮನಗಳ ಮನಸ ಕದ್ದ ಸವಿಕನ್ನಡ
ಅಆಇಈ ವರ್ಣಮಾಲೆಯ ಸೊಬಗು ಕನ್ನಡ
ಅಮ್ಮಅಪ್ಪ ಅನ್ನುತಿರಲು ಮಧುರ ಕನ್ನಡ||

ವಲಸಿಗರು ಸೊಗಸಾಗಿ ಕಲಿತು ನುಡಿವ ಕನ್ನಡ
ಅನ್ಯಭಾಷೆಗೆಂದು ಪೈಪೋಟಿ ಮಾಡದ ಕನ್ನಡ
ಅಂತಾರಾಜ್ಯ ಭಾಷೆಗಿಂತ ಬಲು ಸುಂದರ ಕನ್ನಡ
ಅತ್ತಇತ್ತ ಸುತ್ತಮುತ್ತ ಸರಳತೆ ಹೊಂದಿದ ಕನ್ನಡ||

ಇಂದಿಗು ಮುಂದಿಗೂ ನಾವು ನುಡಿವೆವು ಕನ್ನಡ
ಹಗಲುರಾತ್ರಿಯಲ್ಲಿ ಬಿಡದಸೇವೆ ಮಾಡುವೆವು ಕನ್ನಡ
ಸುಲಿದ ಬಾಳೆ ಸವಿಯಲಷ್ಟು ಸುಲಭಭಾಷೆ ಕನ್ನಡ
ಏಳುಕೋಟಿ ಮುಗ್ದಜನರ ಮನಸಕದ್ದ ನುಡಿಕನ್ನಡ||


About The Author

1 thought on “ಸವಿತಾ ಮುದ್ಗಲ್-ಕನ್ನಡ ನುಡಿ”

  1. ಹೃದಯ ಪೂರ್ವಕ ಧನ್ಯವಾದಗಳು ಸರ್, ನಿಮ್ಮ ಪ್ರೋತ್ಸಾಹ ಬರೆಯುವ ಕೈಗಳಿಗೆ ಸಿಗಲಿ

Leave a Reply

You cannot copy content of this page

Scroll to Top