ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾನೆತ್ತರದಿ ಆಸೆಗಳ ಸಾಲು

ದೀಪಿಕಾ ಚಾಟೆ

r

ನೀಲಬಾನಂಗಳದಿ ಬೆಳ್ಮುಗಿಲ
ಖಗಗಳ ಚಿತ್ತಾರ ಕಲಕಲ
ಜೋಡಿಸಿಟ್ಟ ಮುತ್ತಿನ ಹಾರದಂತೆ
ಕಣ್ಗಗಳಲಿ ಹಬ್ಬದ ಹೆಬ್ಬಾಗಿಲಂತೆ

ನಭದ ಚೆಂದಕೆ ಬಿಳಿ ನಾಗರ
ಬಿಚ್ಚಿಟ್ಟಂತೆ ಒನಪಿನ ನಗರ
ಬೆಳ್ಳಕ್ಕಿಗಳ ಸಾಲು ಸಾಲು
ಹೊತ್ತೊಯ್ಯುವಂತೆ ಮುಗಿಲು

ಪ್ರಕೃತಿಯ ವಿಸ್ಮಯ ಅರಳಿದಂತೆ
ಭೂಆಗಸದಿ ಹಬ್ಬಿನಿಂತಿದೆ ಬಳ್ಳಿಯಂತೆ
ಕಾನನದಿ ಹಕ್ಕಿಪಕ್ಕಿಗಳ ಉಲುಮೆ
ಮೈಮರೆತು ಹಾರುತಿವೆ ಜೋಡಿಯ ಒಲುಮೆ

ಹಾರುತಿರಲಿ ಎತ್ತರೆತ್ತರ ಗಗನದಿ
ಮಿನುಗುತಿರಲಿ ಆಕಾಂಕ್ಷೆಗಳು ಬಾನೆತ್ತರದಿ
ಸವಿಗನಸು ನನಸಾಗುವ ತೆರದಿ
ಅರಳಿ ನಿಲ್ಲುತ ಮನದಾಳದಿ


About The Author

Leave a Reply

You cannot copy content of this page

Scroll to Top