ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೀತಿಪುಳಕ

ನಿರ್ಮಲಾ ಹೆಗಡೆ

ನಿನ್ನ ನೇಹದ ಮನಕೆ ಸೋತಿಹ
ಎನ್ನೆದೆಯು ಮುದವಾಂತಿದೆ|
ಕಣ್ಣನೋಟದ ಮಂದಹಾಸದಿ
ಬಣ್ಣಬಣ್ಣದ ಕನಸಿದೆ||

ಸೆಳೆವ ಮಾತಿನಂದದಿಂದ
ಒಲವ ರಾಗ ಮೀಟಿದೆ|
ನಲಿಯುತುಲಿವ ಪದಲಾಸ್ಯಕೆ
ಅಳಿಯದಂತ ಕಸುವಿದೆ||

ಪ್ರೀತಿಯೆರಕ ತೋಕಲೆಂತ
ರೀತಿ ಕಾವ್ಯದೋಕುಳಿ|
ಆತುಕೊಂಡರದುವೆ ಒಲವು
ಭೀತಿ ಸೋಕದಾ ಸುಳಿ||

ವಿರಹದಲ್ಲು  ಬಿಸುಪನೆಚ್ಚ
ಸರಸ ನೆನಪಿನಪ್ಪುಗೆ|
ಹರೆಯ ಮರೆಸುತೊರೆದ ಭಾವ
ತೊರೆಯ ಹರಿವು ಮೆಚ್ಚುಗೆ||


About The Author

1 thought on “ನಿರ್ಮಲಾ ಹೆಗಡೆ -ಪ್ರೀತಿಪುಳಕ”

Leave a Reply

You cannot copy content of this page

Scroll to Top