ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದೀಪ

ನಿರ್ಮಲಾ ಹೆಗಡೆ ಗೋಳಿಕೊಪ್ಪ

ಬೆಳಗಲಿ ಭಾವದ ದೀಪ| ಇಂದು
ಅಳಿಯಲಿ ಭೀತಿಯ ತಾಪ||
ಕಳೆಯುತ ತಮಸನು ತೊಳೆಯುತ ಕೊಳೆಯನು|
ಗಳಿಸುವ ಬಳಸುತಲೆಳಸಿನ ಜ್ಯೋತಿಯ||

ಹಣತೆಯೊಳಿರೆ ಎಣ್ಣೆಯ ಮಣಿಬತ್ತಿ|
ಇಣುಕಿದೆ ಕಣ್ಣಂಚಲಿ ಸುಖಶಾಂತಿ||
ಚಣಚಣಕೂ ಎಣೆಯಿಲ್ಲದ ಪ್ರೀತಿ|
ಅನುರಣಿಸಲಿ ಉಣಿಸುತ ನಿಜಕಾಂತಿ||

ತೆರೆಯಲಿ ಮೌಢ್ಯದ ಕತ್ತಲ ಕೂಪ|
ಎರಕವಾಗಲಿ ಸಿರಿ ಲಕ್ಷ್ಮಿಯ ರೂಪ||
ಅರಿಯುವ ಗರಿಮೆಯ ಗೆಲುವಿನ ಭಾರ|
ಬೆರೆಯುವ ಹರುಷದ ಪಥದಲಿ ದೂರ||

ಹಿರಿಕಿರಿಯರ ಸಂತಸ ಮನೆತುಂಬ|
ಹರಿಯಲಿ ಜ್ಞಾನದ ಸ್ವರ ಪ್ರತಿಬಿಂಬ||
ಬಿರುಸಿನ ತೋರಣ ಧಾನ್ಯದ ಧಾರಣ|
ಕರುಣೆಯ ಕುಡಿಯೊಡೆದಿರೆ ಮರುಚರಣ||


ನಿರ್ಮಲಾ ಹೆಗಡೆ ಗೋಳಿಕೊಪ್ಪ

About The Author

1 thought on “ನಿರ್ಮಲಾ ಹೆಗಡೆ ಗೋಳಿಕೊಪ್ಪ-ದೀಪ”

Leave a Reply

You cannot copy content of this page

Scroll to Top