ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೀನಿಲ್ಲದ ದಸರಾ ದೀಪಾವಳಿ

ಡಾ ದಾನಮ್ಮ ಝಳಕಿ

ಹಬ್ಬವೆನಿಸುವುದು
ನಿನ್ನ ಮಡಿಲಲ್ಲಿ

ತೋರಣ ಬೆಳಗುವದು
ನಿನ್ನ ಕಂಗಳದಿಂದ

ವಸ್ರ್ತಾಲಂಕಾರ
ನಿನ್ನ ಚೈತನ್ಯದಲಿ

ಮೃಷ್ಟಾನ ಬೋಜನ
ನಿನ್ನ ಹಸ್ತದಲಿ

ನಿತ್ಯ ನಲಿವು
ನಿನ್ನ ಮಾತಿನಲಿ

–

ನವ ಚೈತನ್ಯ
ನಿನ್ನ ಪ್ರೋತ್ಸಾಹದಲಿ

ವಿಜಯಪತಾಕೆ
ನಿನ್ನ ವಿದ್ಯೆಯಲಿ

ಸೋತರೂ ಎದೆಗುಂದಲಿಲ್ಲ
ನಿನ್ನ ದೈರ್ಯದ ನುಡಿಯಲಿ

ಜಗದಲಿ ನೀನಿದ್ದರೆ
ದಸರಾ ದೀಪಾವಳಿ

ಅಮ್ಮಾ ನೀನಿಲ್ಲದ ಹಬ್ಬ
ಹಬ್ಬವಲ್ಲ, ಮರಳುಭೂಮಿ


About The Author

Leave a Reply

You cannot copy content of this page

Scroll to Top