ಎ. ಹೇಮಗಂಗಾ-ಗಜಲ್
ಕಾವ್ಯ ಸಂಗಾತಿ ಗಜಲ್ ಎ. ಹೇಮಗಂಗಾ ಮಾತೂ ಹೃದಯ ಇರಿವ ಈಟಿಯಾಗುವುದೆಂದು ಅರಿತಿರಲಿಲ್ಲ ನಾನುನೋವ ಕಣ್ಣೀರೂ ನೆತ್ತರಂತೆ ಧಾರೆಯಾಗುವುದೆಂದು ಅರಿತಿರಲಿಲ್ಲ ನಾನು ನನಗಾಗಿಯೇ ನಿನ್ನೊಲವು ಎಂದೂ ಮೀಸಲೆಂಬ ಖಾತ್ರಿಯಿತ್ತು ನನ್ನಲ್ಲಿಸುಳಿವೇ ಇಲ್ಲದೆ ಪ್ರೀತಿ ಪಲ್ಲಟವಾಗುವುದೆಂದು ಅರಿತಿರಲಿಲ್ಲ ನಾನು ಅದೆಷ್ಟು ಭರವಸೆಯಿತ್ತು ಕನಸಿಗೆ ರಂಗು ತುಂಬಿದ ನಲ್ಮೆ ನುಡಿಗಳಲ್ಲಿ!ಊಸರವಳ್ಳಿಯಂತೆ ಬಣ್ಣ ಬದಲಾಗುವುದೆಂದು ಅರಿತಿರಲಿಲ್ಲ ನಾನು ಮೃದುತಲ್ಪವೂ ಶರಶಯ್ಯೆಯಾದೀತೆಂಬ ಕಲ್ಪನೆ ಇರಲಿಲ್ಲ ನನಗೆಮಿಲನ ಸುಖದ ಅಮಲೂ ಬೇಡವಾಗುವುದೆಂದು ಅರಿತಿರಲಿಲ್ಲ ನಾನು ನಿನ್ನಪ್ಪುಗೆಯ ಸುಷುಪ್ತಿಯಲಿ ನಾ ಮರಣ ಅಪ್ಪಿದ್ದರೆ ಎಷ್ಟು ಚೆನ್ನಿತ್ತು!ಅನುಬಂಧವೇ ಮುಳ್ಳುಬೇಲಿಯಾಗುವುದೆಂದು ಅರಿತಿರಲಿಲ್ಲ ನಾನು ಕಹಿ ಕ್ಷಣಗಳ ಸೋಸಿ ದೂಡುವ ತೂತು ಜೋಳಿಗೆಯಾಗಿತ್ತು ಮನಸುಮೋಸದ ಕತ್ತಿಯೇಟಿಗದು ಬಲಿಯಾಗುವುದೆಂದು ಅರಿತಿರಲಿಲ್ಲ ನಾನು ಬೆಂಗಾಡಾದ ‘ಹೇಮ’ಳ ಬಾಳಲ್ಲಿ ಹಸಿರು ಮತ್ತೊಮ್ಮೆ ಚಿಗುರುವುದೆಂತು?ಮೋಹಪಾಶವೇ ಬದುಕಿಗೆ ಉರುಳಾಗುವುದೆಂದು ಅರಿತಿರಲಿಲ್ಲ ನಾನು









