ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಪ್ರಸ್ತುತ

ಅಂಕಣ ಸಂಗಾತಿ ಪ್ರಸ್ತುತ ಪರೋಪಕಾರದ ಜೊತೆಗೆ. ದಾನ ,ದಯೆ , ಕ್ಷಮೆಗಳಂತೆ ಪರೋಪಕಾರವೂ ಒಂದು ದೈವೀಗುಣ . ಮತ್ತು ಅಪರೂಪದ ಗುಣ . ಇದು ಅನುವಂಶೀಯವೂ ಹೌದು ,ಅನುಕರಣೀಯವೂ ಹೌದು . ಹಾಗಂತ ತನ್ನ ಮನೆ ಸಂಬಂಧಗಳ ಕಡೆಗಣಿಸಿ (ಬದಿಗೊತ್ತಿ )ಇತರರಿಗೆ ಉಪಕಾರ ಮಾಡುವುದು ಅತಿರೇಕವೆನಿಸೀತು . ಹಿರಿಯರು ಹೇಳಿಲ್ಲವೇ ?“ ಮನೆ ಗೆದ್ದು ಮಾರು ಗೆದೆ ಅಂತ”. ತನ್ನ ಮಗುವ ಎತ್ತಿ ಆಡಿಸಿ ಮುದ್ದು ಮಾಡಲು ಸಮಯವಿಲ್ಲ, ಮಕ್ಕಳ ಕಲ್ಯಾಣ , ಅಭಿವೃದ್ಧಿ ಮಾಡುತ್ತಾ ಮಕ್ಕಳು ಮಮತೆ , ಸ್ವಾತಂತ್ರ್ಯ ಬಾಂಧವ್ಯಗಳ ಬಗೆಗೆ ಭಾಷಣ ಮಾಡುವುದು ದೌರ್ಭಾಗ್ಯ. ವಿಪರ್ಯಾಸ ಕೂಡ ಹೌದು. ಒಂದು ಕಡೆ ವಿವೇಕಾನಂದರು ಹೇಳುತ್ತಾರೆ “ನಮ್ಮೊಡನೆ ನಾವು ದಿನಕ್ಕೊಮ್ಮೆಯಾದರೂ ಮಾತನಾಡಿಕೊಳ್ಳದಿದ್ದರೆ ಒಬ್ಬ ಅತ್ಯುತ್ತಮ ಸ್ನೇಹಿತನೊಂದಿಗೆ ಕಳೆಯುವ ಸಮಯವನ್ನು ಕಳೆದುಕೊಂಡಂತೆ “ ನಾವು ಇನ್ನೊಬ್ಬರ ಮಾತು ಕೇಳುತ್ತೇವೆ , ನೋವು ಕೇಳುತ್ತೇವೆ ಮರುಗುತ್ತೇವೆ ಮನೆಯೊಳಗಿನ ಮನಸಿನ ಮಾತುಗಳು ಹೊರಬರಲಾಗದೇ (ಅದೆಷ್ಟೋ) ಒಳಗೇ ಕರಗಿ  ಹೋಗುವುದುʼ ಪರೋಪಕಾರಿʼಗಳಿಗೆ ಗೊತ್ತೇ ಆಗುವುದಿಲ್ಲ . ಲೋಕದಾ ಡೊಂಕು ನೀವೇಕೆ ತಿದ್ದುವಿರಿ ನಿಮ್ಮನಿಮ್ಮತನುವಸಂತೈಸಿಕೊಳ್ಳಿ ನಿಮ್ಮನಿಮ್ಮಮನವಸಂತೈಸಿಕೊಳ್ಳಿ ನೆರೆಮನೆಯದುಃಖಕೆಅಳುವವರಮೆಚ್ಚ ನಮ್ಮಕೂಡಲಸಂಗಮದೇವ ಇಲ್ಲಿ ಸ್ವಾರ್ಥದ ಮಾತೇ ಬರುವುದಿಲ್ಲ ಎಲ್ಲರೂ ತಮ್ಮನೆ , ತಮ್ಮವರು ತಮ್ಮ ಪರಿಸರ ಎಂದು ಒಂದಿಷ್ಟು ಸಮಯ ಕೊಟ್ಟರೆ ಸಮಾಜ ( ಲೋಕ) ತಾನಾಗೇ ಉದ್ಧಾರವಾಗುವುದು ಎಂಬುದಾಗಿದೆ . ಚುನಾವಣೆಯಂತಹ ಸಂದರ್ಭದಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗಾಗಿ ಹಗಲು ರಾತ್ರಿ ಚಿಂತಿಸಿ , ಓಡಾಡಿ   ಗೆಲ್ಲಿಸಿ ಹಾರಾಡುವ ಕಾರ್ಯಕರ್ತರು ತಮ್ಮ ದಾಂಪತ್ಯ ಸಂಬಂಧವನ್ನು ಹಗುರಾಗಿ         ಕಡೆಗಣಿಸಿ ಸೋಲಿನತ್ತವಾಲುತ್ತಿರುವುದು ಗಮನಕ್ಕೆ ಬರುವುದಿಲ್ಲ. “ಅವರೊಂದಿಗೂ ಓಡು ನಿನ್ನವರೊಂದಿಗೇ ಇರು” ಸಾಧಕರಾರೂ ಸನ್ಯಾಸಿಗಳಾಗಿಯೇ ಸಾಧಿಸಿಲ್ಲ .ಸಂಸಾರದಲ್ಲಿದ್ದುಕೊಂಡೇ ಬಸವಣ್ಣವರುʼವಿಶ್ವಗುರುʼವಾಗಿದ್ದು , ʼನಿಜವಾದ ಸರಸ್ವತಿʼ ಮೊಟ್ಟಮೊದಲ ಶಿಕ್ಷಕಿ ʼಸಾವಿತ್ರಿಬಾಪುಲೆʼ ಪತಿಯಂದಿಗಿದ್ದುಕೊಂಡೇ ಮುನ್ನಡೆದುದಲಿ ಶಿಕ಼್ಷಕಿಯಾದರು .  ಹಿರಿಯರ ಹಾರೈಕೆ , ಸಂಗಾತಿಯ ಬೆಂಬಲ ಬಂಧುಗಳ ಧೈರ್ಯ ನಿಮ್ಮ ಸಾಧನೆಗೆ ಜೊತೆಯಾಗಿ ಸಮಾಜ ಸೇವೆ ಅರ್ಥಪೂರ್ಣವಾದೀತು . ಹಿಂದಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧಕ ಋಷಿಮುನಿಗಳೂ  ಸಂಸಾರಸ್ಥರೇ ಆಗಿದ್ದು ಗಮನಿಸಬೇಕಾದ ಅಂಶ. ಪ್ರಾಣಿ ಪ್ರಪಂಚದಲ್ಲು ಕೂಡ ಇದೇ ಸಿದ್ಧಾಂತವಿದೆ . ತನ್ನ ಮರಿಗಳಿಗೆ ರೆಕ್ಕೆಬಲಿತು ಹಾರಲು ಬರುವವರೆಗೂ ತಾನೇ ಗುಟುಕು ತಂದು ತಿನಿಸುತ್ತವೆ . ತಾನಿಟ್ಟ ಮೊಟ್ಟೆಗಳ ಪೋಷಣೆಗೆ ಅಷ್ಟು ದೂರದಿಂದ ಬಂದು ಕಾವು ಕೊಟ್ಟು ಮರಿಮಾಡಿ ಪೋಷಿಸುವ ಆಮೆ, ಈ ಕರ್ತವ್ಯಗಳ ಯಾರು ಹೇಳಿ ಕೊಟ್ಟರೀ ಪ್ರಾಣಿಕುಲಕೆ ? ತನ್ನ ಮರಿಗಳೊ0ದಿಗೆ ಚಿನ್ನಾಟವಾಡುತ್ತಾ ನೀರೆರೆಚಿಕೊಳ್ತಾ ಮೂಕ ಭಾಷೆಯಲ್ಲೇ ಎಲ್ಲವನ್ನೂ ಕಲಿಸುತ್ತ ಸಮಯ ಕಳೆಯುವ ಆನೆ , ಜಿಂಕೆ ಚಿರತೆಗಳು ತನ್ನಂದಿಗೇ ತಬ್ಬಿ ಹಿಡಿದು ಅಷ್ಟು ದೂರ ಜಿಗಿದು ಆಹಾರ ಹುಡುಕಿ  ಹಸಿವ ತಣಿಸುವ ಪಾಠ ಕಲಿಸುವ ಮಂಗಗಳು . ಓಹ್‌ !ಎಲ್ಲ ಜೀವಿಗಳು ತನ್ನ ಮರಿ ಮೊಟ್ಟೆ, ತನ್ನದೇ ಒಂದು ಗೂಡು ಮಾಡಿಕೊಂಡು ಜೀವಿಸುವ ಪರಿ ಮಾನವನಿಗೆ ಉಚಿತ ಪಾಠ . ಅಮ್ಮ ಮದರ್‌ ತೆರೆಸಾ ಹೇಳಿದರು “ಅನ್ನ ಸಿಗದೇ ಕೊರಗುವವರಿಗಿಂತ , ಪ್ರೀತಿ ಸಿಗದೇ ಕೊರಗಿ ಸತ್ತವರೇ ಹೆಚ್ಚು . “  ವರಕವಿ ದ ರಾ   ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರನ್ನು ಮಾತ್ರ ಆಹ್ವಾನಿಸಲಾಗಿತ್ತಂತೆ. ನನ್ನ ಪ್ರಶಸ್ತಿಯ ಕಂಡು ಹರುಷಪಡುವ ನನ್ನವರಿರದ  ಆ ಕಾರ್ಯಕ್ರಮಕ್ಕೆ ನಾನು ಬರಲಾರೆ “ಎಂದರಂತೆ . ಆಮೇಲೆ ಮನೆಯವರೆಲ್ಲರಿಗೂ ಬರಲು ಅವಕಾಶ ಮಾಡಿಕೊಡಲಾಯಿತು .      ನಮ್ಮವರಿಗೆ ನಾವು ಕೊಡಬಹುದಾದ ʼಉಡುಗೊರʼ ಎಂದರೆ ಒಂದಿಷ್ಟು ಸಮಯ . ಇದು ಸಾಧ್ಯವಾಗುವುದಾದರೆ ಯಾಕೆ ಕೊಡಲಾಗದು ? ಮನಸುಗಳಡೆಯುವ ಮುನ್ನ, ಕತ್ತಲಾವರಿಸುವ ಮುನ್ನ ಕಣ್‌  ತೆರೆದು ನೋಡು ನಿನ್ನೊಂದಿಗಿರುವವರನ್ನು ,  ನಿನಗಾಗಿ ಮಿಡಿಯುವ ಹೃದಯಗಳನ್ನು , ನೀನೆದ್ದರೆ ಚಪ್ಪಾಳಿಸಿ ಹರ್ಷಿಸಿ ಹಾರೈಸುವವರನ್ನು. ನಿಂಗಮ್ಮಭಾವಿಕಟ್ಟಿ ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.

Read Post »

ಕಾವ್ಯಯಾನ, ಗಝಲ್

ಗಜಲ್

ಕಾವ್ಯ ಸಂಗಾತಿ ಗಜಲ್ ಆಸೀಫಾ ಗಾಢ ನಿದ್ರೆಯಲಿ ಬಣ್ಣ ಬಣ್ಣದ ಕನಸಾಗಿ ಕಾಡುತ್ತಾನೆಹಗಲಲ್ಲಿ ಮಂಜಿನಂತೆ ಮೆಲ್ಲಮೆಲ್ಲನೆ ಮಾಯವಾಗುತ್ತಾನೆ ಮೌನವಾಗೆನ್ನ ಮನಸೊಂದಿಗೆ ನಾನೇ ಮಾತನಾಡುತ್ತೇನೆಏಕಾಂತದಲ್ಲಿ ದಟ್ಟನೆನಪುಗಳಾಗಿ ನನ್ನನ್ನು ಆವರಿಸುತ್ತಾನೆ ಅವನೋ ಅಲೆಮಾರಿ ಇರಬೇಕು ಎಲ್ಲೆಲ್ಲೂ ಇರುತ್ತಾನೆನನ್ನಲ್ಲೇ ಮನೆಮಾಡಿ ಕೊನೆಗೆ ನನ್ನನ್ನೇ ಕೊಲ್ಲುತ್ತಾನೆ ಕಣ್ಸನ್ನೆ ಮಾಡಲಿಲ್ಲ ಬಾಹುಗಳಲಿ ಬಂಧಿಸಿ ಬಿಗಿದಪ್ಪಲಿಲ್ಲಇರುಳಲ್ಲಿ ಇಂಚಿಂಚು ಮುದ್ದಿಸಿ ಪ್ರೀತಿಸಿ ಮತ್ತೇರಿಸುತ್ತಾನೆ ಮರುಳಾಗದಿರಲು ಮನಕೆ ಬಿಗಿಯಾಗಿ ಮುಷ್ಟಿ ಕಟ್ಟುತ್ತೇನೆಗೊತ್ತಿಲ್ಲದಂತೇ ಉಸಿರಾಗಿ ಹೃದಯದ ಬಡಿತವಾಗುತ್ತಾನೆ ಅನಾಯಧೇಯ ಅವ ಪರಿಚಿತನಂತೂ ಅಲ್ಲ ಆದರೂ ಪ್ರೇಮಿಕಣ್ಣಲ್ಲಿ ಸುಂದರ ಬಿಂಬದ ಸರದಾರನಾಗಿ ಹರಿದಾಡುತ್ತಾನೆ ಒಲವನ್ನು ಮುತ್ತುಗಳಲಿ ಪೋಣಿಸಿ ಓಲೆಬರೆದು ಓಲೈಸಿದಆಸೀ ನೀ ನನ್ನ ಸುಂದರೀ ಎಂದು ಮತ್ತೆ ಮತ್ತೆ ಅರಹುತ್ತಾನೆ

ಗಜಲ್ Read Post »

You cannot copy content of this page

Scroll to Top