ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ ಯವರ ಕವಿತೆಗಳು

ಹಸಿವು

ಹಸಿವಿನ ನರಳಾಟದಲ್ಲಿ
ತುಳಿತಕ್ಕೆ ಒಳಗಾಗುವೇವು ನಾವು
ಸಂಕಟದಲ್ಲಿ ಒದರಾಡಿದರೆ
ಆರಡಿಯಲ್ಲಿ ಹೂಳುವಾರು

ಹಸಿವಿನ ಚೀಲ ಬೆನ್ನು ತಟ್ಟಿದೆ
ಶಾಂತಿ ನೆಮ್ಮದಿಯ ವೇದಾಂತ
ಕಿವಿಯಲ್ಲಿ ಗುಣುಗುಟ್ಟಿದೆ
ಮೋಸ ವಂಚನೆ ಕೊರಳ ಉರುಳಾಗಿದೆ

ಮಾಯೆ ಎಂಬುವರು ಬಾಳು
ಆಸೆ ದುಃಖಕ್ಕೆ ಮೂಲ ಎನ್ನುವರು
ಕಡಿವಾಣ ಇಲ್ಲದೆ ಹಸಿವು
ಮೆರೆಯುತ್ತಿದೆ

ಎಲುಬಿಲ್ಲದ ನಾಲಿಗೆ
ಬಯಸುತ್ತಿದೆ ರುಚಿ
ಹಸಿವು ತಣಿಯುವ ಮಂತ್ರ
ವೇದಾಂತ ಇದೆಯೇ ಮನವೇ…

*********

ಜೀವೋನ್ಮಾದ

ಕಪ್ಪು ಕಲ್ಲಿನ
ಕಾಂತಿಯುತ ಶಿಲಾಬಾಲಕೇ
ಕಪ್ಪು ಮಣ್ಣಿನ ತಂಪು ನೀ
ಅದರಲ್ಲಿ ಅರಳಿ ನಿಂತ
ಹತ್ತಿ ಹೂವ ನಗೆ ನೀ
ನಿಸರ್ಗಲೇಪಿತ
ಸೌಂದರ್ಯ ವರ್ಧಕ ನೀ
ಮನ -ಮನಸ್ಸಿಗೆ
ಮುದ ನೀಡುವ
ಮಣ್ಣಿನ ಕಂಪು ni
ಆಗಸದ ನೀರೆಲ್ಲಾ
ಈ ಮಣ್ಣಿನಲ್ಲಿ
ಆ ಗಂಗೆಯ
ಲವಲವಿಕೆ ನೀ
ಕಷ್ಟ -ನೋವಿನಲಿ
ಸುಖದ ಪರಾಗತ ನೀ
ಆನಂದಮಯಿ ನೀ
ಏನೆಂದು ಬಣ್ಣಿಸಲಿ
ಸೌಂದರ್ಯವೇ —
ಉಸ್ತಾಹಿಯೇ —
ನಿನ್ನ ನೋಡುವರಿಗೆಲ್ಲ
ಜೀವೋನ್ಮಾದ ನೀ
ನಿಶೆ ತರುವ
ನಶೆಯ ಮದ್ದು ನೀ
ಪರಾಮೃತ ನೀ…

**********

ಸಂಚಲನ

ಜೊತೆಯಾದೆ ನೀನು
ನಿನ್ನ ಪ್ರತಿಬಿಂಬ ನಾನು
ಪ್ರೀತಿಯ ಮುತ್ತುಗಳು
ಚೆಲ್ಲಿವೆ ನೋಡಲ್ಲಿ

ಹೊಳೆಯುವ ತಾರೆಗಳ
ಮಿಂಚು ಸಂಚರಿಸಿದೆ
ಮನದಾಳದ ಕನಸುಗಳು
ಮುತ್ತಿನ ಜೋಕಾಲಿ ಜೀಕುತಿದೆ

ನವಿರಾದ ನನ್ನಯ ತನುವಿಗೆ
ನಿನ್ನಯ ಕೈ ಸೋಕಿ
ಸ್ಪರ್ಶತೆಯು ಜಾರಿದೆ
ಕೋಮಲತೆಯ ಹೂ ದಳದಿ

ಮಕರಂಧಕೆ ಮರುಳಾಗಿ
ಮುಕ್ಕುತ್ತಿವೆ ದುಂಬಿ
ಪ್ರಕೃತಿಯ ಮಡಿಲಿನ
ನಿಯಮದಲ್ಲಿ


ಮಾಜಾನ್ ಮಸ್ಕಿ

About The Author

Leave a Reply

You cannot copy content of this page

Scroll to Top