ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇವನಂತ ಸ್ನೇಹಿತ ಜಗದೊಳಿಲ್ಲ..!

ಶಿವಲೀಲಾ ಹುಣಸಗಿ

1,756 World Book Day Stock Photos, Pictures & Royalty-Free Images - iStock

ಮಸ್ತಕವೇ ಪುಸ್ತಕದ ಪುಟಗಳು
ಪ್ರಜ್ಞೆಯ ಪ್ರಾಂಜಲದ ಕನಸುಗಳು
ಪಾರಮಾರ್ಥಿಕ ಬದುಕಿಗೆ
ಮುನ್ನುಡಿ ಬರೆದ ಪ್ರಾಜ್ಞಪುಟಗಳು

ಅರಿವೇ ಗುರುವೆಂಬುದು ಸಂಸ್ಕೃತಿ
ಹರಿವ ನೀರಿನಂತೆ ಜ್ಞಾನದ ಗಂಗೆ
ಅಗಣಿತ ಭಾವತೇರುಗಳಲಿ
ಲೀನವಾಗಿ ಅರಿವಿನ ಶ್ರೀಗಂಧ

ಓದಿನ ಫಲಾಪಲ ಬಲ್ಲವನೇ ಬಲ್ಲ
ವಿದ್ಯೆ ವಿನಯದ ಭಾವತರಂಗ
ಸತ್ಯಾಸತ್ಯತೆಯ ಒಳಧ್ವನಿಯೆಲ್ಲ
ಇತಿಹಾಸದ ಪುಟಪುಟಗಳಲೆಲ್ಲ

ಜಗದಗಲ ವಿಸ್ತರಿಸಿದ ಜ್ಞಾನ ಜ್ಯೋತಿ
ಮಸ್ತಕದೊಳು ಹಣತೆಯ ಬೆಳಗಿಸಿ
ಸುಜ್ಞಾನಿಗಳಾಗುವ ಹಿತೈಸಿ ಪುಸ್ತಕ
ನಮ್ಮ ಒಳಹೊರಗನ್ನು ತಿದ್ದಿದ ಜ್ಞಾನಿ

ಇವನಂತ ಸ್ನೇಹಿತ ಜಗದೊಳಿಲ್ಲ ಕಾಣಿರೋ
ಹಿತ ಶತ್ರುಗಳಿಂದ ಮುಕ್ತಿ ದೊರಕಿತು
ತಲೆತಗ್ಗಿಸಿ ಓದಿ,ತಲೆಯೆತ್ತಿ ಬದುಕುವಿರೋ
ಮಾನ ಸಮ್ಮಾನದ ಪ್ರತಿರೂಪವಿದೋ


About The Author

10 thoughts on “ಇವನಂತ ಸ್ನೇಹಿತ ಜಗದೊಳಿಲ್ಲ..!”

  1. ಶುಭಲಕ್ಷ್ಮಿ ಆರ್ ನಾಯಕ

    ಬಹಳ ಸುಂದರವಾಗಿದೆ. ಅರ್ಥಪೂರ್ಣ

  2. ದೇವಿದಾಸ ಬಿ ನಾಯಕ ಅಗಸೂರು

    ಓದು ಬಲ್ಲವ ಎಲ್ಲವನು ಅರಿಯಬಲ್ಲ ಮಸ್ತಕಕ್ಕೆ ಪುಸ್ತಕ ಒಂದು ಇರಲು ಕೇಳಬೇಕೆ? ಸೊಗಸಾದ ಕವನ

  3. ಬದಕಿಗೊಂದು ತಿರುವು ಕೊಡುವ
    ನೆನಪಿಗೊಂದು ಸಾಲು ಬರೆವ
    ಹೊತ್ತಿಗೆ ಹೊತ್ತು, ತುತ್ತು ನೀಡುವ
    ಅರಿವಿಗೆ ಜಗದೊಳು ನಡೆಯುವಾ…

  4. ಸಹೋದರಿಯ ಕವಿತೆ ಚೆಂದ.ಪುಸ್ತಕವಿಡಿದರೆ,ಮುಂದಿನ ದಿನಗಳಲ್ಲಿ ತಲೆ ಎತ್ತಿ ಬಾಳಬಹುದು ಎಂಬ ಇರಾದೆ.
    ಅದಕ್ಕಾಗಿ ಓದಬೇಕು.
    ಓದುತ ಕಲಿಯಬೇಕು ಎಂಬ ಪದ ಸಮಂಜಸವಿದೆ.

  5. ಆ ಹಾ ಅತೀ ಸುಂದರ ಸತ್ಯದ ಸಾಲುಗಳು ಮೇಡಂ ರೀ .ಬಲ್ಲವರೆ ಬಿಂಬಿಸಲು ಸಾಧ್ಯ.ಮೇರು ಶಿಖರದ ಮೌಲ್ಯ ಇನ್ನೋಂದು ಮೇರು ಶಿಖರವೇ ಬಲ್ಲುದು.ಶರಣು ಶರಣು

  6. ವಿಜಯ ಅಮೃತರಾಜ್

    ಓದು ಅದರ ಸಾರ್ಥಕತೆ ಅವಶ್ಯಕತೆ, ಬೀರುವ ಪರಿಣಾಮ ಅದ್ಭುತವಾಗಿ ಕಟ್ಟಿಕೊಟ್ಟಿದ್ದಿರಿ ಧನ್ಯವಾದ

Leave a Reply

You cannot copy content of this page

Scroll to Top