ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಕನಸಿನಿಂದ ಹೊರಡದಿರಿ

ಮೂಲ ಸಾಬೀರ ದತ್ತ

ಕನ್ನಡಕ್ಕೆರುಕ್ಮಿಣಿ ನಾಗಣ್ಣವರ

ಕನಸಿಂದ ಹೊರಡದಿರು ರಾತ್ರಿ ಇನ್ನೂ ಬಹಳ ಇದೆ
ನೀ ಬಾ ನನ್ನ ಮಗ್ಗಲಿಗೆ ರಾತ್ರಿ ಇನ್ನೂ ಬಹಳ ಇದೆ

ತುಂಬಿಕೊಳುವೆ ನಿನ್ನ ಕಣ್ಣುಗಳಿಗೆ ಸ್ವಲ್ಪ ನಿರಾಳತೆ ಸಿಗಲಿ
ದೀಪವನ್ನು ಆರಿಸದಿರು ರಾತ್ರಿ ಇನ್ನೂ
ಬಹಳ ಇದೆ

ಈ ಬೆಳಕು-ಇರುಳಿನ ಆಟಗಳ ಯಾರು ಬಲ್ಲವರು
ಬಿಟ್ಟು ಹೊರಡಬೇಡ ರಾತ್ರಿ ಇನ್ನೂ
ಬಹಳ ಇದೆ

ಇರಲಿ ಬಿಡು ನನ್ನೆದುರಿಗೆ ಚಂದಿರನಂಥ ಚಹರೆ ಇನ್ನೂ
ಮತ್ತಷ್ಟು ಮದಿರೆ ಕುಡಿಸು ರಾತ್ರಿ ಇನ್ನೂ
ಬಹಳ ಇದೆ

ಕಳೆಯಲಿ ಪ್ರತಿ ಕ್ಷಣವೂ ಪ್ರೀತಿಯ ಮಾತುಗಳಲಿ
ಸ್ವಲ್ಪ ಎಚ್ಚರದಿಂದಿರು ರಾತ್ರಿ ಇನ್ನೂ ಬಹಳ ಇದೆ


About The Author

2 thoughts on “ಅನುವಾದಿತ ಕವಿತೆ”

Leave a Reply

You cannot copy content of this page

Scroll to Top