ಸಂಕ್ರಾಂತಿ ಬಂತೋ ರತ್ತೋ ರತ್ತೋ ವಿಶಾಲಾ ಆರಾಧ್ಯ ಭಾರತವು ಅನೇಕ ಧರ್ಮಗಳನ್ನೊಳಗೊಂಡ ದೇಶ. ಹಬ್ಬಗಳು ಎಲ್ಲಾ ಧರ್ಮಗಳಲ್ಲಿ ಹಾಸು ಹೊಕ್ಕಾಗಿವೆ. ಈ ಹಬ್ಬಗಳಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಮತ್ತು ಪ್ರತೀಕಗಳು ಇವೆ. ಭಾರತೀಯರೆಲ್ಲಾ ಕೂಡಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಮತ್ತೊಂದು. ಉತ್ತರಭಾರತದಲ್ಲಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ.. ಅದೇ ಹಬ್ಬಗಳನ್ನು ಬೇರೆ ಹೆಸರಿನಿಂದ ದಕ್ಷಿಣ ಭಾರತೀಯರು ಆಚರಿಸುತ್ತಾರೆ. ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯು ನಮ್ಮ ದಕ್ಷಿಣ ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಇದು ಮಹತ್ವದ ಹಬ್ಬವಾಗಿದೆ. ಇದು ರೈತಾಪಿ ಹಬ್ಬವಾಗಿದೆ. ಇದನ್ನು ಹೊಲಗದ್ದೆಗಳಲ್ಲಿ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ನಾಡಿನ ರೈತಾಪಿ ಜನಗಳ ಸಮೃದ್ಧಿಯ ಸಂಕೇತವಾಗಿದೆ. ಈ ಸಂಕ್ರಾಂತಿಯು ಧಾರ್ಮಿಕ ತತ್ವಗಳಿಂದ ಬೇರ್ಪಟ್ಟು ಆಚರಿಸಿದರೂ ಸಹ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದ ಅಡಿಪಾಯವೂ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂಗಳು ಆಚರಿಸುವುದು ವಾಡಿಕೆ. ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಇದನ್ನು ಪ್ರತಿವರ್ಷ ಜನವರಿ ೧೪ ರಂದು ಆಚರಿಸಲಾಗುತ್ತದೆ. ಇದಕ್ಕೆ ಉತ್ತರಾಯಣ ಎಂದೂ ಕರೆಯಲಾಗುತ್ತದೆ. ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸಿ ಮಕರ ರಾಶಿಗೆ ಪ್ರವೇಶಿವನು. ಅದಕ್ಕಾಗಿ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ವಿಶೇಷವಾಗಿ ಗಂಗಾ, ಯಮುನ ಮತ್ತು ಪ್ರಯಾಗ ಸೇರಿದಂತೆ ಯಾವುದೇ ನದಿಯಲ್ಲಿ ಸ್ನಾನಮಾಡಿದರೆ ಮೋಕ್ಷವೆಂದು ಪರಿಗಣಿಸಲಾಗಿದೆ. ಈ ಹಬ್ಬದಲ್ಲಿ ಸೂರ್ಯನ ಪೂಜೆ ವಿಶೇಷವಾಗಿರುತ್ತದೆ. ಹಳ್ಳಿಯ ಮೂಲದ ಈ ಹಬ್ಬದಲ್ಲಿ ಮುಂಜಾನೆಯೇ ಹೆಂಗೆಳೆಯರು ಮನೆಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯಿಂದ ಸಿಂಗರಿಸುತ್ತಾರೆ. ಮನೆಯಲ್ಲಿ ಮತ್ತು ಹಳ್ಳಿಯಲ್ಲಿ ಅಂದು ವಿಶೇಷ ಕಳೆತುಂಬಿರುತ್ತದೆ. ಸಂಕ್ರಾಂತಿಗೆ ರೈತರು ತಮ್ಮ ವ್ಯವಸಾಯಕ್ಕೆ ನೆರವಾದ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣಹಚ್ಚಿ, ವಿವಿಧ ಬಣ್ಣದ ರಿಬ್ಬನ್ ಗಳಿಂದ ಸಿಂಗರಿಸಿ ಗೋಮಾತೆಯೊಂದಿಗೆ ಪೂಜಿಸುವರು. ಬೆಳೆದ ಧಾನ್ಯಗಳಾದ ಕಡಲೆಪಪ್ಪು, ಬೆಲ್ಲ, ಎಳ್ಳು, ಕಡಲೆಬೀಜಗಳನ್ನು ಹುರಿದು ಅದರೊಂದಿಗೆ ಸಕ್ಕರೆ ಅಚ್ಚು ಮುಂತಾದವನ್ನು ಬೆರೆಸಿ ಕಬ್ಬಿನ ಜಲ್ಲೆಯೊಂದಿಗೆ ಅಕ್ಕ ಪಕ್ಕದ ಸ್ನೇಹಿತರಿಗೆ ಹಂಚಿ “ಎಳ್ಳು ಬೆಲ್ಲ ತಿನ್ನೋಣ, ಒಳ್ಳೆ ಮಾತನಾಡೋಣ” ಎಂದು ಪರಸ್ಪರ ಹೇಳುತ್ತಾ……. ಹಿಂದಿನ ದ್ವೇಷ, ಕೋಪ, ಮನಸ್ತಾಪಗಳನ್ನು ಮರೆತು ಸಂತೋಷದಿಂದ ಮುಂದಿನ ದಿನಗಳನ್ನು ಕಳೆಯಲು ಸ್ನೇಹದ ಹಸ್ತ ಚಾಚುವ ಹಬ್ಬವಾಗಿದೆ. ಕೆಲವರು ಈ ಹಬ್ಬದಲ್ಲಿ ಹೆಸರುಬೇಳೆ ಮತ್ತು ತರಕಾರಿಗಳನ್ನು ಸೇರಿಸಿ ಮಾಡಿದ ಕಿಚಡಿ ಅನ್ನವನ್ನು ರುಚಿಯಾಗಿ ತಯಾರಿಸಿ ಸವಿಯುವರು. ಇದನ್ನೇ ಅನೇಕರು ಪೊಂಗಲ್ ಎಂದೂ ಕರೆಯುವರು. ಈ ವರ್ಷದ ಸಂಕ್ರಾಂತಿ ಎಲ್ಲರಿಗೂ ಸಂತಸ ತರಲಿ, ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೋನ ಬೇಗ ನಾಶಹೊಂದಿ ಜನರು ನಿರ್ಭಯವಾಗಿ ಸರಳ ಜೀವನ ನಡೆಸುವಂತಾಗಲಿ ಎಂದು ತಿಳಿಸುತ್ತಾ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ತಮಗೆಲ್ಲಾ.
ಹಾಯ್ಕುಗಳು
ಕಾವ್ಯ ಸಂಗಾತಿ ಹಾಯ್ಕುಗಳು ಸಂತೋಷ ಅಂಗಡಿ ನಿನ್ನುಸುರಿನ ಉಗಿತಾಗಿದ ಗಾಳಿಅಂಡಲೆಯುತಿದೆ ತಣ್ಣಗಾಗಲು ನೋವುಂಡಎದೆಗೆ ಸದ್ದಿಲ್ಲದೆಕಲ್ಲಾದ ಸಂಭ್ರಮ ವಿಷಾದದ ಕಣ್ಣುಗಳಲಿಸಂತ್ವಾನದಹನಿಗಳು ಹಾಡೊಂದುಜಾರಿತುಕಣ್ಣೊಳಗೆ ಕರಗಿ ಕಡಲ ದಂಡೆನಿನ್ನ ಒಲವುಅಲೆಯಾಗಿ ಅಪ್ಪಳಿಸುತಿದೆ ವಿರಹ ಕಲ್ಲಿನ ಬಂಡೆದುಬ್ಬದ ಮೇಲೆ ನಿದಾನಹೊತ್ತು ನಡೆಯುತ್ತಿದೆ ಆಮೆ ತೂಗು ಸೇತುವೆಯ ಕನಸುಕೆಳಗೆ ಹರಿಯುತಿರುನೀನು ನದಿಯಂತೆ ದುಗುಡವೆಲ್ಲಾ ದುಂಡುಗೂಡಿಸಿಬೊಗಸೆಯಲಿ ನುಂಗುವೆವಸಂತ ಬರಲಿ ಬಾಗಿಲಿಗೆ ಗರಿಕೆಯ ಮೊನಚಿಗೆತುಂಡಾಗದೆಅಪ್ಪಿದೆ ಇಬ್ಬನಿ ದಂಡೆಯಲಿತೆರೆಗಳ ಬುರುಗುಶಾಂತವೀಗ ಕಡಲು ಮತ್ತು ಒಡಲು.………………
ಸವಿ ಸವಿ ಸಂಕ್ರಮಣ
ಕಾವ್ಯ ಸಂಗಾತಿ ಸವಿ ಸವಿ ಸಂಕ್ರಮಣ ಅರುಣಾ ರಾವ್ ಇರುವೆಗಳು ಸಾಲಾಗಿ ಬರುತಲಿವೆಯಿತ್ತಲೆಕಣದಲ್ಲಿ ಗೋಪುರದ ಬೆಳೆ ರಾಶಿಯತ್ತಲೇ ತಲೆ ಮೇಲೆ ಗಂಗಮ್ಮನ ಹೊತ್ತ ಭೂಮಿ ಒಕ್ಕಲುಕೋಲೆ ಬಸವಣ್ಣನನ್ನು ಹಿಡಿದಿರುವ ಹೈಕಳು ಕರಡಿಯನು ಬೀದಿಗಳಲಿ ಕುಣಿಸುತ್ತ ತಕತಕಬರುತಲಿದೆ ಸುಗ್ಗಿ ಕಾಲ ನಲಿವೀನ ಥೈತಕ ಕಣಿ ಹೇಳುವ ಕೊರವಂಜಿ ಬಾಗಿಲಲ್ಲಿ ನಿಂತಿರೆಬಳೆಗಾರ ಚೆನ್ನಯ್ಮ ಮಲ್ಹಾರವ ಇಳುಕಿರೆ ಕಣಗಳಲಿ ಕೋಲಾಟ ಬಯಲಾಟದ ಸಂಭ್ರಮಗೆಣಸು ಕಬ್ಬು ಸೊಗಡವರೆ ಕಂಪದು ಘಮಘಮ ಕಡಲೆ ಕಾಳು ಎಳ್ಳು ರಾಗಿ ಧಾನ್ಯಗಳ ರಾಶಿಪ್ರಸವದಲ್ಲೂ ನಗುವ ಇಳೆಯು ನಿತ್ಯ ಷೋಡಶಿ ಮನೆಗಳಿಗೆ ತೆರತೆರಳಿ ಎಳ್ಳುಬೆಲ್ಲ ಬೀರೊ ಕಾತರಕೋಪ ದ್ಚೇಷ ವೈಷಮ್ಯಗಳ ಓಡಿಸುವ ಸಡಗರ ಮೃಗಪಕ್ಷಿಗಳಿಗೂ ಕೂಢ ಬಂದಿತಿದೋ ಸಂಕ್ರಾಂತಿ ಸಮೃದ್ಧಿ ಸಂತೃಪ್ತಿ ಸಂಬಂಧ ಸಂಗಮದ ಉತ್ಕ್ರಾಂತಿ
ಬದುಕೊಂದು ಖಾಲಿ ಹಾಳೆ
ಕಾವ್ಯ ಸಂಗಾತಿ ಬದುಕೊಂದು ಖಾಲಿ ಹಾಳೆ ಒಲವು ಬದುಕೊಂದುಬರಿದೆ ಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ ಇಷ್ಟದ ಹೂ ಒಂದನುಚಿತ್ರಸಬಹುದುಮೆಚ್ಚುಗೆಯ ಬಣ್ಣವನ್ನೇಅದರಕ್ಕೆ ತುಂಬಬಹುದು ಒಲವಿನ ಅಕ್ಷರಗಳನ್ನೇಪೋಣಿಸಬಹುದುಹಿಡಿಸಿದ ಕವಿತೆಗಳಿಗಷ್ಟೇಜೀವ ನೀಡಬಹುದು ನಿಲುವಿನ ದಾರಿಗಳಲ್ಲೇನಡೆಯಬಹುದುಬೇಕೆಂದ ಗುರಿಗಳಿಗಷ್ಟೇಗರಿ ಮೂಡಿಸಬಹುದು ಆದರಿಲ್ಲಿ,ಮಾಯಾವಿ ಚಿತ್ರವೊಂದುಮೈದಳೆಯಬಹುದುಬೇಡದ ಕವಿತೆಯೊಂದುಕಾಡಬಹುದುಕಾಣದ ದಾರಿಯೊಂದುಕೈ ಹಿಡಿಯಬಹುದು ಬದುಕೊಂದು ಬರಿದೆಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ….
ಬದುಕೊಂದು ಖಾಲಿ ಹಾಳೆ Read Post »
ಗಾಂಧೀಜಿಯ ರಾಮರಾಜ್ಯದ ಕಲ್ಪನೆ, ಸರ್ವೋದಯ ತತ್ವ, ಪ್ರಗತಿಪರ ಚಿಂತನೆ, ಸಮನ್ವಯ ಸಿದ್ಧಾಂತಗಳು ಭೂಗತವಾಗಿ ಎಲ್ಲೆಡೆ ಸ್ವಾರ್ಥ, ಭ್ರಷ್ಟಾಚಾರ, ತಾಂಡವಾಡುತ್ತಿದೆ ಎಂಬುದನ್ನು ಸಾಬೀತುಪಡಿಸುವ ಕವಿಯ ಹೋರಾಟ ಆಶಾದಾಯಕವಾಗಿದೆ.









