ಭೂಸಿರಿಯು ಮುಗಿಲ ಮಾಳಿಗೆಯಲಿಮೋಡವೊಂದು ಗೂಡು ಕಟ್ಟಿದೆಭೂವನದಲಿ ಶೃಂಗಾರದಿಂದಲಿನವಿಲ ನಾಟ್ಯವು ಮುದವ ನೀಡಿದೆ ತುಂತುರು ಹನಿಯಲಿಘಮ್ಮನೆಂದಿದೆ ಭೂವಾಸನೆಗಂಡು ನವಿಲು ರೆಕ್ಕೆಯ ಬಿಚ್ಚಿತಾನು ಕುಣಿದಿದೆ ಕಾಮನೆ ಹಸಿರ ಮೈಸಿರಿಯು ಎಲ್ಲೆಡೆರಮ್ಯಕಾಲದ ವೈಭವಬಾನು ಭುವಿಯಲಿಎಂಥದಿದೋ ಆಕರ್ಷಣಾ ಚೈತ್ರ ಚಿಗುರಲಿ ಕೋಗಿಲೆಗಾನಮಾವು ತೆಂಗಿನ ರಸದೌತಣಪ್ರಕೃತಿ ಮಾತೆಯ ಮಡಿಲು ತುಂಬಿದೆವಿವಿಧ ಹೂಗಳು ಅರಳಿ ನಿಂತಿವೆ ಭೂಸಿರಿಯ ಒಡಲು ಮಾಗಿದೆಮೋಡದಂಚಿನ ಹನಿಗಳಿಂದಕಾವ್ಯರಸವು ಹರಿದಿದೆಹಸಿರ ವನದ ಸೆರಗಿನಿಂದ ದೀಪಿಕಾ ಚಾಟೆ
ಹೆಣ್ಣು ; ಮತ್ತವಳ ಕನಸು
ಕಾವ್ಯ ಸಂಗಾತಿ ಹೆಣ್ಣು ; ಮತ್ತವಳ ಕನಸು ಡಾ. ಸುರೇಖಾ ರಾಠೋಡ್ ಓದಬೇಕು ಹೆಣ್ಣುತನ್ನ ಅಸ್ತಿತ್ವ ಸ್ಥಾಪಿಸುವುದಕ್ಕಾಗಿ ಓದಬೇಕು ಹೆಣ್ಣುತನ್ನ ತಾನು ಗುರುತಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವಾವಲಂಬಿಯಾಗುವುದಕ್ಕಾಗಿ.. ಓದಬೇಕು ಹೆಣ್ಣುಜ್ಞಾನ ಪಡೆಯುವುದಕ್ಕಾಗಿ… ಓದಬೇಕು ಹೆಣ್ಣುಸಮಾಜದಲ್ಲಿರುವ ಅಸಮಾನತೆಯ ಅರಿಯುವುದಕ್ಕಾಗಿ… ಓದಬೇಕು ಹೆಣ್ಣುಉದ್ಯೋಗ ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಮಾಜದಲ್ಲಿರುವ ಅಜ್ಞಾನವ ಅಳಿಸಿಹಾಕುವುದಕ್ಕಾಗಿ… ಓದಬೇಕು ಹೆಣ್ಣುನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಹಕ್ಕುಗಳನ್ನು ಅರಿತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವತಂತ್ರವಾಗಿ ಬದುಕುವುದಕ್ಕಾಗಿ… ಓದಬೇಕು ಹೆಣ್ಣುಅನಿಸಿದ್ದನ್ನು ಅಭಿವ್ಯಕ್ತಿ ಪಡಿಸುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಜೀವನದ ಎಲ್ಲಾ ನಿರ್ಧಾರಗಳನ್ನು ತಗೆದುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಲಿಂಗ ಅಸಮಾನತೆಯ ಅಳಿಸಿಹಾಕುವುದಕ್ಕಾಗಿ…ಸಮಾನತೆ ಸಾಧಿಸುವುದಕ್ಕಾಗಿ……….. .
ಹೆಣ್ಣು ; ಮತ್ತವಳ ಕನಸು Read Post »
ಇಂತಹ ಅದ್ಭುತ ಕನ್ನಡಕ್ಕಾಗಿ ಮಿಡಿವ ಸಹೃದಯ ಕವಿ, ಹೋರಾಟಗಾರ, ನಾಟಕಕಾರ, ಪತ್ರಿಕಾ ಸಂಪಾದಕರಾಗಿದ್ದ ಚಂಪಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅಂದರೆ ೧೦-೦೧-೨೦೨೨ ರ ಸೋಮವಾರ ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಇಂತಹ ಕವಿ ಮಹಾಶಯರು ಮತ್ತೆ ಮತ್ತೆ ನಾಡಿನಲ್ಲಿ ಜನ್ಮತಾಳಿ ಬರಲಿ ಎಂದು ಪ್ರಾರ್ಥಿಸಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ
ಬಾಲ್ಯದ ನೆನಪುಗಳೆಂದರೆ ಹಾಗೇ……. ತುಂತುರು ಮಳೆಗೆ ಮುಖವೊಡ್ಡಿದ ಹಾಗಿನ ಅಪ್ಯಾಯತೆ .ಮಗು ಚಾಕಲೇಟನ್ನು ಕಾದಿಟ್ಟುಕೊಂಡು ತುಣುಕು ತುಣುಕಾಗಿ ಸವಿಯುವಂತೆ . ಈ ಚಿಕ್ಕಂದಿನ ನೆನಪುಗಳು ನೆನೆಸಿಕೊಳ್ಳಲು ಬರೆಯಲು ವಿಶೇಷ ಸಂದರ್ಭಗಳ ನೆವ ಅಷ್ಟೇ …







