ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ ಸುಂದರ ಸುಮಹಾತೊರೆಯುತಿದೆ, ಏಳು ಬೆಟ್ಟಗಳಮೇಲೇರಿ ನಿಂತ ಆ ದೇವರಕಾಲ ಬಳಿ ಸೇರಲು! ಗುಡಿಯ ಘಂಟೆ ಧ್ಯಾನಿಸುತಿದೆಸುಶ್ರಾವ್ಯವಾಗಿ ತನ್ನ ಸದ್ದುಜಗನ್ನಿಯಮಕನ ತಲುಪಲು! ಗರ್ಭಗುಡಿಯ ಪ್ರಣತಿಕಾಯುತಿದೆ ಕರುಣಮಯ ಪರಮಾತ್ಮನಮುಖಾರವಿಂದವ ಉಜ್ವಲಿಸಲು! ಜಗದ ಪ್ರತಿ ಚಲನೆಯೂ ನೀನಾಗಿರಲುಧ್ಯಾನಿಸದೆ ಇರಲಾರದುಈ ಮನವು, ಅನುಕ್ಷಣವೂನನ್ನೊಳಗೆ ನೀನಿರಲು!

Read Post »

ಇತರೆ

ಲೇಖನ ಓಡುತ್ತಿರುವ ಜೀವನಕ್ಕೆ ಜಯಶ್ರೀ.ಜೆ. ಅಬ್ಬಿಗೇರಿ ಇಂದು ನಾವು ನಡೆಸುತ್ತಿರುವ ಜೀವನದ ಕ್ರಮದ ಕುರಿತು ಕೊಂಚ ಯೋಚಿಸಿದರೆ ಭಯ ಹುಟ್ಟುತ್ತದೆ. ಹಾಗೆ ನೋಡಿದರೆ ಹಾವು ಏಣಿಯಾಟದ ಚರಿತ್ರೆ ನಮ್ಮ ಹಿಂದಿದೆ. ಹೀಗಿದ್ದಾಗ್ಯೂ ದೈವಸೃಷ್ಟಿಯಲ್ಲಿ ನಾವೇ ಶ್ರೇಷ್ಠವೆಂದು ಕೊಚ್ಚಿಕೊಳ್ಳುತ್ತೇವೆ. ನಮ್ಮ ಬುದ್ಧಿವಂತಿಕೆಗೆ ಶಹಬ್ಬಾಸಗಿರಿ ಕೊಟ್ಟುಕೊಳ್ಳುತ್ತೇವೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಕಂಡು ಹಿಡಿದು ಯಂತ್ರ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರ ಕೇಂದ್ರೀಕೃತ ಬದುಕಿಗೆ ಆಕರ್ಷಿತರಾಗಿದ್ದೇವೆ. ದೋಚುವ ಉಪಭೋಗಿಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಬಾಚಿ ತಬ್ಬಿಕೊಂಡಿದ್ದೇವೆ. ಭೂಮಿಯ ಹೊಟ್ಟೆ ಬಗೆದು ಗಣಿಗಾರಿಕೆಗೆ ಇಳಿದಿದ್ದೇವೆ. ಲಾಭಕೋರತನ ಪೀಡಿತರಾಗಿದ್ದೇವೆ. ಆರೋಗ್ಯ ರಕ್ಷಣೆಯನ್ನು ಲಾಭದಾಯಕ ಉದ್ಯಮವಾಗಿಸಿದ್ದೇವೆ. ಕೇಡುಗಳ ಕಸವು ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ  ಬದುಕು ಲಾಭದಾಸೆಗೆ ಬಿದ್ದ ಧನದಾಹಿಗಳ ಕೈಗೊಂಬೆಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯು ಸುಖ ತಂದು ಕೊಡುವುದೆಂದು ಭ್ರಮಿಸಿದ್ದೇವೆ. ಆದರೆ ಅದು ವಾಸ್ತವದಲ್ಲಿ ಸಾವನ್ನು ಎದುರಿಗೆ ತಂದು ನಿಲ್ಲಿಸಿದೆ. ಇತಿಹಾಸದ ಪುಟದಲ್ಲಿ ಅಚ್ಚಾದ ದುರಂತಗಳ ಹಿಂದೆ ಸತ್ಯದ ಸ್ವರೂಪವನ್ನು ಅರಿಯಲಾಗದೇ ಹೋದ ಪ್ರಸಂಗಗಳು ಕಣ್ಣಿಗೆ ರಾಚುತ್ತವೆ. ಮಾನವ ಮತ್ತು ಪ್ರಕೃತಿಯ ನಡುವೆ ಒಂದು ಅವಿನಾಭಾವ ಸಂಬAಧವಿದೆ. ಆ ಸಂಬAಧದ ಕೊಂಡಿಯನ್ನು ಕಾಪಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಪ್ರಳಯದಂಥ ಅನಾಹುತ ಖಚಿತ. ಪ್ರಳಯವೆಂಬುದು ಒಂದೇ ಸಲ ಸಂಭವಿಸುವ ವಿದ್ಯಮಾನವಲ್ಲ. ಅದು ನಮ್ಮ ದಾಷ್ಟö್ರ್ಯತನದಿಂದ ಪ್ರತಿದಿನ ಪ್ರತಿಕ್ಷಣ ಆವರಿಸಿಕೊಳ್ಳುತ್ತಿದೆ ಎಂಬುದನ್ನು ಅರಿತು ನಡೆಯಬೇಕಿದೆ.ಬೆಳೆ ಭೂಮಿಯೊಳಗೊಂದು ಪ್ರಳಯದ ಕಸ ಹುಟ್ಟಿತಿಳಿಯಲೀಯದು ಎಚ್ಚರಲೀಯದುಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ಲಿಂಗತAದೆಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.                  ಜ್ಞಾನವನ್ನು ಗಳಿಸಿದ್ದೇನೆಂಬ ಅಹಮಿಕೆಯನ್ನು ತಲೆಗೇರಿಸಿಕೊಂಡಿದ್ದು ಮನಸ್ಸಿನಲ್ಲಿ ಕಸವನ್ನು ಹುಟ್ಟಿಸಿದೆ. ಈ ಕಸ ಬುದ್ಧಿಯನ್ನು ಆವರಿಸಿದೆ. ತಿಳುವಳಿಕೆಯನ್ನು ಎಚ್ಚರತಪ್ಪಿಸುತ್ತಿದೆ. ಅರಿವಿನ ಎಚ್ಚರಕ್ಕೆ ಅಡ್ಡಿಯಾಗುತ್ತಿರುವ ಕಸವನ್ನು ಕಿತ್ತೆಸೆಯದಿದ್ದರೆ ಸುಳಿದೆಗೆದು ಬೆಳೆಯುವ ಚೈತನ್ಯ ಬಾರದು. ಮನದೊಳಗಿನ ಕಸವನ್ನು ಶುದ್ಧಗೊಳಿಸದಿದ್ದರೆ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂಬ ಎಚ್ಚರಿಕೆಯ ಸಂದೇಶ ಬಸವಣ್ಣನವರ ಈ ವಚನದಲ್ಲಿದೆ.‘ಅನ್ನವನು ಉಣ್ಣುವಾಗ ಕೇಳ್ ಅದು ಬೇಯಿಸಿದ ನೀರ್ನಿಮ್ಮ ದುಡಿಮೆಯೇ ಪರರ ಕಣ್ಣೀರ್’  ಎಂದಿದ್ದಾರೆ ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿಯವರು. ಅವರ ಮಾತು ನಿಜಕ್ಕೂ ವಿಚಾರಣೀಯವಾದುದು. ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ದುಡಿಯಬೇಕು. ಅನ್ಯಾಯದಿಂದ ಗಳಿಸಿದ್ದು ಎಂದಿಗೂ ಮನಸ್ಸಿಗೆ ಸಂತೋಷ ನೀಡದು. ಧರ್ಮದಿಂದ ದುಡಿದಿದ್ದನ್ನು ನಿಷ್ಕಲ್ಮಷ ಮನಸ್ಸಿನಿಂದ ಒಂದು ಹುಲ್ಲು ಕಡ್ಡಿ ಅರ್ಪಿಸಿದರೂ ಶ್ರೇಷ್ಠ. ಮತ್ತೊಬ್ಬರಿಗೆ ಮೋಸವೆಸಗದೇ ದುಡಿದ ಹಣ, ತಾತ್ವಿಕತೆಯಿಂದ ಸದ್ವಿಚಾರದಿಂದ ಗಳಿಸಿದ ಹಣ ಪವಿತ್ರವಾದುದು. ಅದು ದೈವಕ್ಕೆ ಸಲ್ಲುವಂಥದ್ದು. ಅಂಥ ಹಣವನ್ನು ದಾನ ಧರ್ಮ ಮಾಡುವುದರಿಂದ ಸತ್ಪಾತ್ರರಿಗೆ ಸಲ್ಲುತ್ತದೆ. ಇಲ್ಲವಾದರೆ ಅಪಪಾತ್ರ ದಾನವಾಗುತ್ತದೆ. ಅಹಮಿಕೆಯಿಂದ ಮಾಡಿದ ಕಾರ್ಯ ಪುಣ್ಯವಾಗುವುದಿಲ್ಲ. ಓಡುತ್ತಿರುವ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟುತ್ತೇವೆ. ಆದರೆ ಪಾಪ ಪುಣ್ಯದ ಅರಿವಿಲ್ಲದಂತೆ ಓಡುತ್ತಿರುವ ಜೀವನಕ್ಕೆ ಯಾವ ನೆಲೆಯಲ್ಲಿ ನಿಲ್ಲಿಸಿ ಅರಿವು ಮೂಡಿಸುವುದು? ಎಂಬ ಪ್ರಶ್ನೆ ಮೂಡುತ್ತದೆ. ಮನದೊಳಗಿನ ಕೇಡುಗಳೇ ಇದಕ್ಕೆಲ್ಲ ಕಾರಣವೆಂಬ ಉತ್ತರವೂ ಸಿಗುತ್ತದೆ. ಕೊನೆಯಿಲ್ಲದ ದಾಹಕ್ಕೆ ಕೊನೆ ಹಾಡದಿದ್ದರೆ ಕೇಡು ಖಚಿತ. ಅರಿವು ಜ್ಞಾನ ಕೌಶಲ್ಯಗಳ ಮೂಲಕ ಸತ್ಯ ಧರ್ಮ ಅಹಿಂಸೆಯ ನೀತಿಗೆ ಮರಳುವುದೊಂದೇ ಇದಕ್ಕೆ ದಾರಿ.=======

Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ ಕಾವೇರಿತೀರದಪಯಣ ಪುಸ್ತಕವೊಂದು ಓದಲು ಮಡಿಲಿಗೆ ಬಿದ್ದಾಗ ಅದು ಕಾವೇರಿಯದೆಂದು ತಿಳಿದು ಕಣ್ಣರಳಿತು. ಇದೊಂದು ಅನುವಾದ ಕೃತಿಯೆಂಬುದು ಮತ್ತಷ್ಟು ಖುಷಿಕೊಟ್ಟಿತು. ಮೂಲ ಮಲಯಾಳಂ ಆಗಿದ್ದು , ಮಲಯಾಳಂ ಸಾಹಿತಿಯೊಬ್ಬರೂ ಕಾವೇರಿಯ ಜತೆ ಹೆಜ್ಜೆಯಿಡುತ್ತಲೇ ಕಾವೇರಿ ತೀರದ ಇತಿಹಾಸದ ಅನಾವರಣ ಮಾಡಿದ್ದಾರೆ. ಕನ್ನಡ ಮಣ್ಣಲ್ಲೇ ಹುಟ್ಟಿ, ಕಾವೇರಿಯ ಬಗಲಲ್ಲೇ ಉಸಿರಾಡಿ  ಈ ಕೃತಿಯನ್ನು ಓದುವ ಮೂಲಕವಾದರೂ  ನಾನೂ ಕಾವೇರಿಯೊಡನೆ  ಪ್ರಯಾಣ ಬೆಳೆಸಿದೆ. ಕೊಡಗಿನ ತಲಕಾವೇರಿಯಿಂದ ಹೊರಟ ಜೀವನದಿ ಪೂಂಪುಹಾರ್ ತಲುಪುವವರೆಗೂ ಅದೆಷ್ಟು ರೋಚಕ ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟಿಲ್ಲ! ನದಿಗಳೆಂದೂ ಸಂಸ್ಕೃತಿಯ ತೊಟ್ಟಿಲೇ ತಾನೇ? ರಾಜ ಮನೆತನಗಳು,  ಆಗಿನ ಜೀವನರೀತಿ , ಸಂಭ್ರಮ, ಸಂಕಟ ಎಲ್ಲವನ್ನೂ ಹೃದ್ಯವಾಗಿ ಮತ್ತು ಶಕ್ತವಾಗಿ  ಕಾವೇರಿ ತೀರದ ಪಯಣ ಉಣಬಡಿಸಿದೆ. ಅದೆಷ್ಟೋ ಇತಿಹಾಸದ ಪುಟಗಳನ್ನು  ಸಾವಾಧಾನವಾಗಿ  ತಿರುವಿ ಕಲೆಹಾಕುತ್ತಲೇ  ಮೌಲ್ಯಾಧಾರಗಳ  ಕಂತೆಯನ್ನು ನಮ್ಮ ಮುಂದೆ ಸುರಿದಿದ್ದಾರೆ. ಕಾವೇರಿ  ನದಿಯ ಉದ್ಭವ ತಾಣದಿಂದ ಹಿಡಿದು ಸಮುದ್ರ ಸೇರುವವರೆಗಿನ ಕಾವೇರಿಯ  ವರ್ಣನೆ ನಿಜಕ್ಕೂ ತಲೆದೂಗುವಂತೆ ಮಾಡುತ್ತದಾದರೂ ಇಲ್ಲಿ ನದಿ ಹರಿದ  ಆಸುಪಾಸಿನ ತಾಣಗಳ  ಇತಿಹಾಸ ಮತ್ತು ವರ್ತಮಾನದ ವಿಶಿಷ್ಟ ಸಂಗತಿಗಳ ಜಗತ್ತನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಕಾವೇರಮ್ಮನ ಸನ್ನಿದಿಯನ್ನೇ ಉಸಿರಾಗಿಸಿಕೊಂಡಿರುವ  ನಮಗೆ ಕೊಡಗಿನ ಇತಿಹಾಸವನ್ನು ತಿಳಿದುಕೊಳ್ಳುವಂತೆ ಹೇಳುತ್ತಾ ಕಿವಿಹಿಂಡಿದಂತಿದೆ. ಕನ್ನಡದಲ್ಲಿ ಕೊಡವ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿರುವುದು, ಕೊಡಗು ಪ್ರತ್ಯೇಕ ರಾಜ್ಯದ ಕೂಗು ,ಸ್ವಾತಂತ್ರ್ಯ ಬಯಸಿದ ಮಹಿಳೆಯೊಂದಿಗೆ  ಕಾವೇರಿಯನ್ನು ಹೋಲಿಸುತ್ತಾ ಸೊಗಸಾದ ಕಥೆ ಹೆಣೆಯಲಾಗಿದೆ. ಬಲಮುರಿ ಸ್ಥಳಕ್ಕೆ ಯಾಕೆ ಆ ಹೆಸರು ಬಂತು? ಸೀರೆಯ ನೆರಿಗೆ ಹಿಂದಕ್ಕೆ ಆದುದರ ಹಿನ್ನೆಲೆ ಏನು? ಹೀಗೆ ಸಾಕಷ್ಟು ಕೊಡಗಿನ ಮಾಹಿತಿಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಕೊಡಗು, ಕಾವೇರಿ ಮತ್ತು ಇದರ ಸಂಬಂಧ ಇತರ ಕಥೆಗಳ ಜತೆ   ಭಾರತದಲ್ಲೇ ಟಿಬೆಟನ್ನರ ಅತಿದೊಡ್ಡ ಬೌದ್ಧ ಕೇಂದ್ರ  ಬೈಲುಕುಪ್ಪೆಯಲ್ಲಿ ಬೆಳೆದ ಮಾಹಿತಿ ಎಲ್ಲರ ಗಮನ ಸೆಳೆಯುವಂತಿದೆ. ವಿಕ್ಟೋರಿಯಾ ಗೌರಮ್ಮ ಎಂಬ ದುರಂತ ನಾಯಕಿಯ ಕುತೂಹಲಕಾರಿ ಬದುಕಿನ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಬೇಕೆಂಬ ಒಳತುಡಿತ ಹುಟ್ಟುಹಾಕಿದೆ.  ಬೌದ್ಧ -ಜೈನ ತತ್ವಗಳ ಪ್ರಭಾವ, ದೇವಾಲಯಗಳು, ಆಚಾರ ವಿಚಾರಗಳು, ಸ್ಥಳವಿಶೇಷಗಳು , ರಾಜ ಮನೆತನಗಳಿಂದ ಹಿಡಿದು ಕಾವೇರಿ ಹರಿಯುವ ಊರುಗಳ ಇತಿಹಾಸವನ್ನೇ ಹೇಳುತ್ತಾಕಾವೇರಿ ತೀರದ ಪಯಣ ಬೆರಗಿನ ಲೋಕಕ್ಕೆ ಕೊಂಡೊಯ್ಯುತ್ತದೆ. ‘ಹರಿಯುವ ನದಿಯಲ್ಲಿ ಕಾಲೂರಿದಾಗಲೆಲ್ಲ ಆದು ಹೊಸ ನದಿಯೆಂದೇ ಭಾಸವಾಗುತ್ತದೆ’ ಎಂದು ಚಿಂತಕ ಹೆರಕ್ಲೀಟಸ್ ಹೇಳಿದಂತೆ ತನ್ನ ಪಯಣವನ್ನು ಮೆಲುಕಿಸುತ್ತಾ ಕಾವೇರಿಯ ಜತೆ ಅನೇಕ ಜನ್ಮಗಳಿಂದಲೂ ನಾನು ಹೆಜ್ಜೆ ಹಾಕಿದ್ದೇನೆ ಎಂದು ಹೇಳುವ ಮೂಲ ಕೃತಿಕಾರ ಓ.ಕೆ.ಜೋಣಿ  ಕೇರಳದವರು. ಇವರು ಜೀವನದಿಯ ಜಾಡು ಹುಡುಕುತ್ತಾ  ಹೊರಟು ಸಾಕಷ್ಟು ಅಧ್ಯಯನ ಮಾಡಿರುವುದು ಹೆಮ್ಮೆ ಅನಿಸುತ್ತದೆ. ಮೂಲ ಕೃತಿಕಾರರಾದ ಓ.ಕೆ. ಜೋಣಿ ಕೇರಳದ ವಯನಾಡ್ ಜಿಲ್ಲೆಯವರಾಗಿದ್ದು ರಾಷ್ಟ್ರ್ ಪ್ರಶಸ್ತಿ ಪುರಸ್ಕೃತರು. ಕಾವೇರಿಯ ವರ್ಣನೆ ಮತ್ತು ವಸ್ತುನಿಷ್ಠ, ಗಂಭೀರ ನಿರೂಪಣೆಯೊಂದಿಗೆ ವಿವರಿಸುವ ಇವರು ಸಂಶೋಧಕನಾಗಿ ಕಾವೇರಿ ದಡದಲ್ಲಿ ಪಯಣಿಸುತ್ತಾ ಬೇರೆ ಬೇರೆ ಆಕರಗಳಿಂದ  ಮಾಹಿತಿ ಸಂಗ್ರಹಿಸಿದ್ದಾರೆ.. ಇದರಿಂದಲೇ  ಕಾವೇರಿಯ ಹರಹನ್ನೂ, ಆಳವನ್ನೂ, ಹರಿವಿನ ಸಾನ್ನಿಧ್ಯವನ್ನೂ ಸಮೀಪಿಸಿ ಕ್ರೋಢೀಕರಿಸಲು ಹಾಗೂ ಇಷ್ಟು ಪರಿಣಾಮಕಾರಿಯಾದ ಅದ್ಭುತ ಕೃತಿಯ ಯಶಸ್ಸಿಗೆ ಸಾಧ್ಯವಾಯಿತು. ಕೃತಿಯನ್ನು ಓದುತ್ತಾ ಕನ್ನಡದೇ ಮೂಲ ಕೃತಿ ಎನ್ನುವಷ್ಟು ಆಪ್ತ ಭಾಷೆಯಲ್ಲಿ ಅನುವಾದಿಸಿ ಮಲಯಾಳಂ ಕೃತಿಯೊಂದನ್ನು ಓದಲು ಅವಕಾಶ ಮಾಡಿಕೊಟ್ಟಿದ್ದಾರೆ ಪತ್ರಕರ್ತ ವಿಕ್ರಂ ಕಾಂತಿಕೆರೆಯವರು. ಅನುವಾದವೆಂದರೆ ಹೀಗಿರಬೇಕು ಎಂಬುದಕ್ಕೆ ಮಾದರಿಯಾಗಿ ತಮ್ಮ ಪಕ್ವ ಭಾಷೆಯಲ್ಲಿ ಮೂಡಿರುವ  ಅನುವಾದ ನಿಜಕ್ಕೂ ಕನ್ನಡದ್ದೇ ಎನ್ನುವಷ್ಟು  ಅದ್ಭುತವಾಗಿದೆ. ಕಾವೇರಿ ತೀರದ ಪಯಣವನ್ನು ಹಲವು ಆಕರ ಗ್ರಂಥಗಳಿಂದ ಶೋಧಿಸಿರುವುದರಿಂದಲೂ, ಅಷ್ಟೇ ಪ್ರೌಢ ಅನುವಾದದಿಂದಲೂ ಇದೊಂದು ಅಧ್ಯಯನಯೋಗ್ಯ ಮತ್ತು ಸಂಗ್ರಹ ಯೋಗ್ಯ ಹೊತ್ತಗೆ ಎಂಬುದರಲ್ಲಿ ಎರಡು ಮಾತಿಲ್ಲ. ಇತಿಹಾಸ ಅದರಲ್ಲೂ ಜೀವನದಿಯ ಹೆಸರಲ್ಲಿ!. ನಾವೆಲ್ಲ ಈ ಕೃತಿಯನ್ನು ಓದಿಯೇ ಸವಿಯಬೇಕು. ಸುನೀತ ಕುಶಾಲನಗರ .

Read Post »

ಇತರೆ

ಲೇಖನ ಗೃಹಿಣಿ ಮತ್ತು ಸಾಹಿತ್ಯ ಜ್ಯೋತಿ  ಡಿ.ಬೊಮ್ಮಾ ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ  ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು.  ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು . ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. ಸ್ವಾತಂತ್ರ್ಯ ದ ಸಂದರ್ಭದಲ್ಲಿ ದೇಶಭಕ್ತಿ ಯ ಪರ ಪದ್ಯ ರಚಿಸಿ ರಾಷ್ಟ್ರ ಪ್ರೇಮ ಸಾರಿದರು. ಹಾಗೆ ನೋಡಿದರೆ ೨೦ ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷ ವೇನು ಕಂಡು ಬಂದಿಲ್ಲ. ೨೦ ನೇ ಶತಮಾನದ ವರೆಗೆ ಮಹಿಳೆ ತನ್ನ ಮನದ ತುಮಲವನ್ನು ಸಾಹಿತ್ಯದ ಮೂಲಕ ಹಂಚಿಕೊಂಡಿರುವ ಉದಾಹರಣೆಗಳಿಲ್ಲ. ಹದಿಬದೆಯ ಧರ್ಮ ದ ಸಂಚಿಯ ಹೊನ್ನಮ್ಮನ್ನೆ ಇರಲಿ ,ಹೆಳವನ ಕಟ್ಟೆಯ ಗಿರಿಯಮ್ಮನೆ ಇರಲಿ ,ಜಾನಪದ ಲೋಕದ ಗರತಿಯರೆ ಇರಲಿ ಇವರೆಲ್ಲರೂ ಬರೆದಿರುವದು ತ್ಯಾಗದ ಉಪದೇಶಗಳೆ. ಹನ್ನೆರಡನೆ ಶತಮಾನದ ವಚನಗಾರ್ತಿಯರಲ್ಲಿ ಅಕ್ಕಮಹದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ  ದ್ವನಿಯಾಗಿ ನಿಲ್ಲುತ್ತಾಳೆ. ಮೊಟ್ಟಮೊದಲ ಬಾರಿಗೆ ಲಿಂಗ ತಾರತಮ್ಯ ದ ಬಗ್ಗೆ ದ್ವನಿ ಎತ್ತುತ್ತಾಳೆ . ಆಕೆ  ಹೆಣ್ತನಕ್ಕೆ  ಲೋಕ ಹೋರಿಸಿರುವ  ಮಿತಿಯನ್ನು ಮೀರುವ , ಮೀರಿದ್ದನ್ನು ಹೇಳುವ ಪ್ರಯತ್ನ ಮಾಡುತ್ತಾಳೆ. ನಂತರ ಸಂಚಿಯ ಹೊನ್ನಮ್ಮ ಪುರುಷ ಪ್ರಧಾನ್ಯತೆಯನ್ನು ಸಂಪೂರ್ಣ ಒಪ್ಪಿಕೊಂಡರು ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯಕ್ಕೆ ವಿರುದ್ದವಾಗಿ  ಒಂದು ಸಣ್ಣ ಪ್ರತಿಭಟನೆ ಸೂಚಿಸುತ್ತಾಳೆ. ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ,ಎಂದು ದ್ವನಿ ಎತ್ತುತ್ತಾಳೆ. ಜನಪದ ಗೀತೆಯ ಗರತಿಯರು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಯಾವದೇ ಪ್ರತಿರೋಧ ಒಡ್ಡದೆ ,ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣ ರೂಢಿಸಿಕೊಂಡು  ಬಾಳಿದರೆ ಬಾಳು ಹಸನು ಎಂಬ ಮಾತಿಗೆ ಹೆಚ್ಚು ಒತ್ತು ಕೊಟ್ಟಿರುವರು. ೧೯ ನೆ ಮತ್ತು ೨೦ ಶತಮಾನದಲ್ಲಿ ಮತ್ತೆ ಸ್ತ್ರೀ ಪರ ಆಲೋಚನೆಗಳು ಕಾಣತೊಡಗಿದವು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಮಹಿಳೆಯರು ಬರೆಯತೊಡಗಿದರು. ಇಲ್ಲಿವರೆಗೆ ಮಹಿಳೆಯರ ಪರವಾಗಿ ಪುರುಷರೆ ಬರೆಯಬೇಕಾದ  ಸಂದರ್ಬವಿತ್ತು. ಅವನು ಬರೆಯುವದು ಸ್ತ್ರೀ ಲೋಕದ ಅರಿವಿಲ್ಲದ ಸಾಹಿತ್ಯ. ಮುಂದೆ ೨೦ ನೆ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಬಾಗಿಲು ತೆರೆಯಿತು.ತಮ್ಮ ಮನದ ಅಭಿವ್ಯಕ್ತಿ ಯನ್ನು ಮುಕ್ತವಾಗಿ ಹರಿಬಿಡುವ ಧೈರ್ಯ ಲೇಖಕಿಯರು ಮೈಗೂಡಿಸಿಕೊಂಡರು. ಸ್ತ್ರೀ ಯರು ಬರವಣಿಗೆಗೆ ತೊಡಗಿದಾಗ ಅಡುಗೆ ಮನೆ ಸಾಹಿತ್ಯವೆಂದರು.ಪ್ರಗತಿಪರವಾಗಿ ಬರೆದಾಗ ಸ್ತ್ರೀ ವಾದಿ ಎಂಬ ಹಣೆಪಟ್ಟಿ ಅಂಟಿಸಿದರು.ವೈಚಾರಿಕ ನೆಲೆಗಟ್ಟಿನಲ್ಲಿ ಬರೆದಾಗ ಬಂಡಾಯಗಾರ್ತಿ ಎಂದು ಸಾರಿದರು. ಇಂತಹ ಹಣೆಪಟ್ಟಿಗಳಿಲ್ಲದೆ ಮಹಿಳೆಯರ ಬರಹವನ್ನು ಸಾಹಿತ್ಯದೊಳಗೆ  ಮುಕ್ತ ವಾಗಿ ಸ್ವಾಗತಿಸುವ ದಿನಗಳು ಬರಬಹುದೇ.ಎಂಬುವದೆ ಒಂದು ಪ್ರಶ್ನೆ. ವಚನಗಾರ್ತಿರು ಮತ್ತು ಜನಪದ ಸಾಹಿತ್ಯ ರಚಿಸಿರುವ ಮಹಿಳೆಯರೆಲ್ಲ ಗೃಹಿಣಿಯರೆ. ಅವರು ತಮ್ಮ ದೈನಂದಿನ ಕಾರ್ಯದೊಂದಿಗೆ , ವಚನಗಳು ,ಗಾದೆಗಳು ,ಒಗಟುಗಳು ರಚಿಸಿದರು. ಜನಪದ ಸಾಹಿತ್ಯವನ್ನು ಬಿ.ಎಂ ಶ್ರೀಕಂಠಯ್ಯ ಅವರು  ಜನವಾಣಿ ಬೇರು , ಕವಿವಾಣಿ ಹೂ ಎಂದು ಕರೆದಿದ್ದಾರೆ. ಕುಟ್ಟುವ ಬೀಸುವ ಪದಗಳು. ಕಂದನನ್ನು ಮಲಗಿಸುವ ಜೋಗುಳ ಪದಗಳು , ದೇವರ ನಾಮಗಳು , ಆರತಿ ಪದಗಳು ಇವೆಲ್ಲವೂ ಗೃಹಿಣಿಯರಿಂದ ಹೊಮ್ಮಿದ ಸಾಹಿತ್ಯವೆ. ಮುಂದೆ ನವ್ಯಸಾಹಿತ್ಯ ಯುಗ ಆರಂಭವಾಯಿತು.ನಂತರ ಅಧುನಿಕ ಸಾಹಿತ್ಯ ಯುಗ.ಇಷ್ಟರಲ್ಲಿ ಎಲ್ಲರೂ ಅಕ್ಷರಸ್ಥರಾಗುತಿದ್ದರು. ಅನೇಕ ಮಹಿಳಾ ಕಾದಂಬರಿಗಾರರು ಮುನ್ನಲೆಗೆ ಬಂದರು.ತಮ್ಮ ಕಲ್ಪನೆ ಗೆ ಅಕ್ಷರ ರೂಪ ಕೊಟ್ಟು ಕಥೆ ಕಾದಂಬರಿ ಕವನ ರಚಿಸತೊಡಗಿದರು.  ಸ್ತ್ರೀ ಯ ತವಕ ತಲ್ಲಣಗಳು , ಸಾಮಾಜಿ ಮತ್ತು ರಾಜಕೀಯ ಸ್ಥಿತಿ ಗತಿಗಳು ,ಪ್ರೀತಿ ಪ್ರೇಮ ಗಳ ನವಿರುತನ ಮುಂತಾದ ವಿಷಯಗಳ ಬರವಣಿಗೆಯಲ್ಲಿ ಮಹಿಳಾ ಸಾಹಿತಿಗಳು ಮೇಲುಗೈ ಸಾಧಿಸಿದರು. ಇಷ್ಟಾಗಿಯೂ ಮಹಿಳಾ ಸಾಹಿತಿಗಳು ಪುರುಷ ಸಾಹಿತಿಗಳೊಡನೆ ಸಮಾನವಾಗಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರಲು ಕಾರಣವೇನು..!  ಯಾವುದೇ ಒಂದು ವಿಷಯ ಸಾಮಾಜೀಕ , ಧಾರ್ಮಿಕ , ರಾಜಕೀಯ , ಶಿಕ್ಷಣ  ,  ಇತಿಹಾಸ ಲೈಂಗಿಕತೆ , ಕಾಮ ಮತ್ತು ಪ್ರೇಮ ದ ವಿಷಯಗಳ ಬಗ್ಗೆ ಪುರುಷರು ಬರೆದ ಸಾಹಿತ್ಯ ವನ್ನು ಸಾಮಾನ್ಯವಾಗಿ ಸ್ವೀಕರಿಸುವ ಈ ಸಮಾಜ  ಅದೇ ಬರಹ ಮಹಿಳೆ ಬರೆದರೆ ತರ್ಕಿಸುತ್ತದೆ.  ಲೈಂಗಿಕತೆ ಕಾಮ ಪ್ರೇಮದ ವಿಷಯಗಳು ಮುಕ್ತವಾಗಿ ಬರೆಯುವದಕ್ಕೆ ಮಹಿಳಾ ಸಾಹಿತಿಗಳು ಸಂಕೋಚಪಡುತ್ತಾರೆ. ಬರೆದವರ ವ್ಯಕ್ತಿತ್ವ ದೊಂದಿಗೆ ತಳಕು ಹಾಕಿ ಓದುವ ಓದುಗರು ಇದು ನಿಮ್ಮ ಸ್ವಂತ ಅನುಭವವೇ ಎಂದು ಕೇಳಿದಾಗ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ ಪುರುಷರು ಏನು ಬರೆದರು ನಡೆಯುತ್ತದೆ.  ಮಹಿಳಾ ಬರಹಗಾರರು ನಿರಂತರ ಈ ತರತಮ ಅನುಭವಿಸುತ್ತಿದ್ದಾರೆ. ಪುರುಷರ ದಬ್ಬಾಳಿಕೆ ಖಂಡಿಸಿ ಬರೆದರೆ  ‘ ಫೇಮಿನಿಷ್ಟ ‘ ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಎಷ್ಟೋ ಬರಹಗಾರ್ತಿಯರು ಈ ಹಣೆಪಟ್ಟಿಗೆ ಹೆದರೆ ತಮ್ಮ ಆಲೋಚನೆಗಳನ್ನು ಮುಕ್ತ ವಾಗಿ ಹೇಳಲಾಗದೆ ಬರೆಯಲಾಗದೆ ಇಬ್ಬಂದಿತನದಲ್ಲಿ ತೊಳಲಾಡುತ್ತಾರೆ. ವೈಚಾರಿಕ ನಿಲುವನ್ನು ತಳೆದ ಸ್ತ್ರೀ ಯು ಸಮಾಜದಲ್ಲಿ ಒಂಟಿತನ ಅನುಭವಿಸಬೇಕಾಗುತ್ತದೆ.ಮೂಢ ನಂಬಿಕೆಗಳನ್ನು ವೀರೋಧಿಸಿದರೆ , ದೇವರ ಅಸ್ಥಿತ್ವ ಅಲ್ಲಗಳೆದರೆ ,ಪ್ರಖರ ವೈಚಾರಿಕ ಚಿಂತನೆಗಳನ್ನು ಮಂಡಿಸಿದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೆ ಬೇರೆಯಾಗುತ್ತದೆ. ಆದರೆ ಯಾವಾಗಲೂ ಒಂದೇ ಸಿದ್ದಾಂತಕ್ಕೆ  ಜೋತುಬಿದ್ದು ಒಂದು ಸಮುದಾಯವನ್ನು ಓಲೈಸುವ ಬರಹಗಾರ ಅಥವಾ ಸಾಹಿತಿ ತಮ್ಮ ಆತ್ಮವಂಚನೆ ಮಾಡಿಕೊಂಡಂತೆ. ಸಾಹಿತಿ ಯಾದವರು ಯಾರನ್ನು ಓಲೈಸದೆ ತಮ್ಮ ಅಭಿವ್ಯಕ್ತಿಯನ್ನು ಮುಕ್ತವಾಗಿ ಹರಿಯಬಿಡಬೇಕು. ನಮ್ಮ ಸಮಾಜ ಗೃಹಿಣಿಯರನ್ನು ನೋಡುವ ದೃಷ್ಟಿಕೋನವೆಂದರೆ , ಅವಳು ಕೇವಲ ಗಂಡ , ಮನೆ ,ಮಕ್ಕಳು ಎಂಬ ಪರಿಧಿಯಲ್ಲಿಯೆ ಇರಬೇಕು.ಇದಕ್ಕೂ ಮೀರಿದ ಪ್ರಪಂಚ ಅನ್ಯರದು. ಈಗ ಬರಹಗಾರರಲ್ಲಿ ಸ್ತ್ರೀ ಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತಿದ್ದಾರೆ.ಗೃಹಿಣಿಯರು ತಮ್ಮ ಗೃಹ ಕರ್ತವ್ಯ ದ ನಡುವೆಯೆ ಸಾಹಿತ್ಯದೆಡೆ ಹೆಚ ಒಲವು ತೋರುತಿದ್ದಾರೆ. ಓದುವ ಹವ್ಯಾಸ ಬೆಳೆಸಿಕೊಳ್ಳುತಿದ್ದಾರೆ. ಸುಧಾ ತರಂಗ ಮಯೂರ ಕರಮವೀರ ಪತ್ರಿಕೆಗಳೆಲ್ಲ ಗೃಹಿಣಿಯರ ಅಚ್ಚುಮೆಚ್ಚಿನ ಪತ್ರಿಕೆಗಳಾಗಿವೆ.ಮಕ್ಕಳ ಪಠ್ಯ ಪುಸ್ತಕ ಓದಿ ಅವರಿಗೆ ತಿಳಿಸುವ ಮತ್ತು ತಾವು ತಿಳಿದುಕೊಳ್ಳುವ ಆಸಕ್ತಿ ಗೃಹಿಣಿಯರಿಗೆ ಇದೆ. ನಾನು ಒಬ್ಬ ಗೃಹಿಣಿ , ನನ್ನ ಬರಹ ಓದಿದವರು ತಾವು ಶಿಕ್ಷಕಿಯೆ ಎಂದು ಕೇಳುತ್ತಾರೆ. ನನ್ನನ್ನು ಸಾಹಿತ್ಯ ಸಂಬಂಧಿ ಕಾರ್ಯಕ್ರಮಕ್ಕೆ ಅಹ್ವಾನಿಸುವರು ನನ್ನ ಹೆಸರಿನ ಕೆಳಗೆ ಸಾಹಿತಿ ಎಂದೋ ಲೇಖಕಿ ಎಂದೋ ಬರೆಯುತ್ತಾರೆ. ಗೃಹಿಣಿ ಎಂದೆ ಬರೆಯಬಹುದಲ್ಲ. ಗೃಹಿಣಿ ಎಂದರೆ ಕೇವಲ ಗೃಹ ಕರ್ತವ್ಯ ಕ್ಕೆ ಮಾತ್ರ ಸೀಮಿತಳು ಎಂಬ ಧೋರಣೆ ಬದಲಾಗಬೇಕಿದೆ. ಈಗ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದು ಕೋಟಿ ದಾಟಿದೆಯಂತೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸ್ವೀಕರಿಸುವ ಗುರಿ ಇದೆ.ಆದರೆ ಎಷ್ಟು ಜನರು ಸಾಹಿತ್ಯಿಕವಾಗಿ ಸಕ್ರಿಯರಾಗಿದ್ದಾರೆ ಅವಲೋಕನ ಮಾಡಿಕೊಳ್ಳಬೇಕಿದೆ.ಒಟ್ಟು ಪ್ರಮಾಣದ ಸದಸ್ಯರಲ್ಲಿ ಸ್ತ್ರೀ ಯರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.ಅದರಲ್ಲೂ ಗೃಹಿಣಿಯರು ಬೆರಳೆಣಿಯಷ್ಟು ಮಾತ್ರ ಇರುವರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಗೃಹಿಣಿಯರು ಸಾಹಿತ್ಯ ಕ್ಷೇತ್ರದಿಂದ ದೂರ ಇರುವದೇಕೆ..? ಒಬ್ಬ ಗೃಹಿಣಿ ಬರೆಯುತ್ತಾಳೆ ಎಂದರೆ ಅವಳೆನು ಬರೆಯಬಲ್ಲಳು ಎಂಬ ಧೋರಣೆ. ಬರಹಗಾರರು ಶಿಕ್ಷಣ ಕ್ಷೇತ್ರದವರೆ ಆಗಿರುತ್ತಾರೆಂಬ ಭಾವನೆ ಇದೆ. ಪೂರ್ಣಚಂದ್ರ ತೇಜಸ್ವಿ ಯವರು ಒಂದು ಕಡೆ ಉಲ್ಲೆಖಿಸಿದ್ದರೆ. ಇಡಿಯ ಒಂದು ಭಾಷಾ ಸಮೂದಾಯದ ಅಭಿವ್ಯಕ್ತಿ ಯಾಗಬೇಕಾದ ಸಾಹಿತ್ಯ  ಕೇವಲ ಪಾಠ ಹೇಳುವರ ಕುಲಕಸುಬಿನಂತಾದರೆ ಅದು ಎಷ್ಟೆ ಸಹಜವಾಗಿ ಸಂಭವಿಸಿದರು ಆ ನಾಗರೀಕತೆ ರೋಗಗ್ರಸ್ತ ವಾದುದು ಎಂದು. ಸಾಹಿತ್ಯ ಪರಿಷತ್ತು ಬೇರೆ ಕ್ಷೇತ್ರದವರನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಒದಗಿಸಬೇಕು.ಸಾಹಿತ್ಯ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಮಹಿಳೆಯರಿಗೆ ಬೆಂಬಲಿಸಲಿ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಲು ಆಸಕ್ತಿ ಹೊಂದಿದ್ದ ಪರಿಷತ್ತು ಅನ್ಯ ಕ್ಷೇತ್ರದ ಸಾಹಿತ್ತಾಸಕ್ತರನ್ನು , ಮಹಿಳೆಯರನ್ನು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರನ್ನು ಪರಿಷತ್ತಿನ ಸದಸ್ಯರನ್ನಾಗಿ ಸ್ವಿಕರಿಸಲಿ.

Read Post »

You cannot copy content of this page

Scroll to Top