ಗಜಲ್
ಗಜಲ್ ಪ್ರೊ.ರಾಜನಂದಾ ಘಾರ್ಗಿ ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ ಕುರುಡಾಗುವ ಮುನ್ನ ಸುರಿದ ಪ್ರೀತಿಯನ್ನು ಮರಳಿಸಿಬಿಡು ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ ಕುರುಡಾಗುವ ಮುನ್ನ ಸುರಿದ ಪ್ರೀತಿಯನ್ನು ಮರಳಿಸಿಬಿಡು


