ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನಿದ್ದೆ ಬಾರದಿದ್ದಾಗ

ಈ ಗೊರಕೆ ಅನ್ನೋದು ಖಾಯಿಲೆ ಏನೂ ಅಲ್ಲ.ಒಂದು ವಿಧದ ಡಿಸ್ ಆರ್ಡರ್ ಅಷ್ಟೇ. ಅಲ್ಲದೇ ಇದು ವಂಶ ಪಾರಂಪರ್ಯವಾಗಿ ಬಂದಿರುವ,ಅದರಲ್ಲೂ ನಮ್ಮಪ್ಪ,ಅಣ್ಣನಿಂದ ಬಂದಂತಹ ಕೊಡುಗೆ.ಅಷ್ಟು ಸುಲಭವಾಗಿ ಹೊರಟು ಹೋಗು ಅಂದ್ರೆ ಹೋಗದು

ನಿದ್ದೆ ಬಾರದಿದ್ದಾಗ Read Post »

ಇತರೆ

ಕನ್ನಡ ಬಾಷಾ ಬಳಕೆಯ ಅಭಿಯಾನದ ಹಬ್ಬವಾಗಲಿ ಕರ್ನಾಟಕ ರಾಜ್ಯೋತ್ಸವ

ಕನ್ನಡಬಾಷಾಬಳಕೆಯಅಭಿಯಾನದಹಬ್ಬವಾಗಲಿಕರ್ನಾಟಕರಾಜ್ಯೋತ್ಸವ ಕರ್ನಾಟಕ ರಾಜ್ಯೋತ್ಸವ ಈ ದಿನವನ್ನು ಕನ್ನಡದ ಉತ್ಸವ ಹಬ್ಬವನ್ನಾಗಿ ಆಚರಿಸುತ್ತೇವೆ. 1956ರಲ್ಲಿ ದಕ್ಷಿಣ ಭಾರತದ ಎಲ್ಲಾಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು.ಉತ್ತರ ಕರ್ನಾಟಕದ ಜನತೆಯ ಮಾನ್ಯತೆಗಾಗಿ ಮೈಸೂರು ಎಂಬ ಹೆಸರಿನ ಬದಲು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕೆಂದು 1972ರ ಜುಲೈನಲ್ಲಿ ಚರ್ಚೆ ಭುಗಿಲೆದ್ದಿತು. ಸಾಕಷ್ಟು ದೀರ್ಘಾವಧಿ ಚರ್ಚೆಗಳ ನಂತರ ರಾಜ್ಯವಿಧಾನ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯಿತು. ಹಿಂದಿನ ಸಂಸ್ಥಾನ ಮತ್ತು ಹೊಸದಾದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕಕ್ಕೆ ಅನುಗುಣವಾಗಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಬದಲಾಯಿಸಲಾಯಿತು.. ಪ್ರತಿ ವರ್ಷ ಇದರ ಸವಿನೆನಪಿಗಾಗಿ ನಾವು ಈ ಕನ್ನಡ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ. ಕನ್ನಡ ನಾಡು ನುಡಿಗಾಗಿ ನಾವು ಇನ್ನೂ ಶ್ರಮಿಸಬೇಕಾಗಿದೆ. ಕನ್ನಡಾಂಬೆಯಾದ ಭುವನೇಶ್ವರಿ ದೇವಿಯ ಪೂಜೆ ಸಲ್ಲಿಸಿ ಭಾಷಣ ಮಾಡಿ ಘೋಷಣೆ ಕೂಗುವ ಕನ್ನಡ ಭಾಷೆ ಕ್ರಾಂತಿ ಕೇವಲ ಇವತ್ತೊಂದೇ ದಿನಕ್ಕೆ ಸೀಮಿತವಲ್ಲಕನ್ನಡನಾಡಿನ ಕೋಟಿ ಕೋಟಿ ಜನರ ಕೊರಳದನಿ ಈ ನಮ್ಮ ಕಸ್ತೂರಿ ಕನ್ನಡ. ಚಲನಶೀಲತೆಯನ್ನು ಪಡೆದಿರುವ ಕರ್ನಾಟಕ ಸಂಸ್ಕೃತಿಯ ಮೂಲಸೆಲೆ. ಭಾಷೆ ಒಂದು ಸಂಪರ್ಕ ಸಾಧನ. ನಮ್ಮೆಲ್ಲರ ನೋವು-ನಲಿವು, ದುಃಖ-ದುಮ್ಮಾನ ಕನಸು-ಕಲ್ಪನೆಗಳನ್ನು ಅಭಿವ್ಯಕ್ತಗೊಳಿಸಲು ಬಳಸುವ ಒಂದು ಸಶಕ್ತ ಮಾಧ್ಯಮವನ್ನು ತಪ್ಪಾಗಲಿಕ್ಕಿಲ್ಲ. ಅದು ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಭಾವನಾತ್ಮಕವಾಗಿ ಹೃದಯಗಳು ತಟ್ಟಿ ಮನಮುಟ್ಟಿ ಅಭಿಮಾನದಿಂದ ಮೆಟ್ಟಿ ನಿಲ್ಲುವ ಸವಿಗನ್ನಡವಾಗಿದೆ. ಹಾಗಾದರೆ ಅನವರತ ಕನ್ನಡ ನಾಡು ನುಡಿಯ ಸೇವೆಗೆ ಕಟಿಬದ್ಧರಾಗಬೇಕಾದರೆ ಕನ್ನಡವನ್ನು ನಾವು ಹೆಚ್ಚು ಹೆಚ್ಚು ಬಳಸಬೇಕಾಗಿದೆ. ಪ್ರತಿಯೊಂದು ಭಾಷೆಯೂ ಬಳಕೆಯಿಂದ ಮಾತ್ರವೇ ಬೆಳೆಯುತ್ತದೆ ಉಳಿಯುತ್ತದೆ. ಕನ್ನಡದ ಬಗೆಗಿನ ನಮ್ಮ ಪ್ರೀತಿಗೆ ಮಾನದಂಡ ವ್ಯವಹಾರಲ್ಲಿ ಅದರ ಕಡ್ಡಾಯವಾದ ಬಳಕೆ. ನಾವು ಬರೆಯುವ ಪತ್ರಗಳು, ಮುದ್ರಿಸುವ ಆಹ್ವಾನ ಪತ್ರಗಳು, ತುಂಬುವ ಅರ್ಜಿಗಳು, ಅಲ್ಪಸಂಖ್ಯಾತರು ಮೊದಲ್ಗೊಂಡು ಕನ್ನಡದಲ್ಲಿ ಇರಲೇಬೇಕೆಂಬ ಖಡಕ್ಕಾದ ಕರಾರನ್ನು ಜಾರಿಗೆ ತರಬೇಕು. ಇದರ ಕುರಿತು ಶಾಲೆ, ಕಾಲೇಜುಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನಡೆಸುವದು ಹಾಗೂ ಆಗಮಿಸಿದ ಅತಿಥಿವರೇಣ್ಯರು ಕನ್ನಡದಲ್ಲಿ ಮಾತನಾಡಿದಾಗ ಕನ್ನಡದ ಕಂಪನ್ನು ಹರಡಬಹುದಾಗಿದೆ. ಕನ್ನಡದ ಕವಿಗಳ ಪರಿಚಯ ಅವರ ಕವನಗಳ ಗಾಯನ, ವಾಚನ ವಿಶ್ಲೇಷಣೆ, ಜನಪದಗೀತೆ ಮತ್ತು ನೃತ್ಯ, ಭಾಷಣ, ಪ್ರಬಂಧ, ಆಶುಭಾಷಣ, ಅಂತ್ಯಾಕ್ಷರಿ -ಈ ಎಲ್ಲ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಪರಿಪಾಠವಿರಿಸಿಕೊಂಡು, ಎಲ್ಲಾ ಮಕ್ಕಳೂ ಭಾಗವಹಿಸಿ ಕನ್ನಡ ವಿಷಯದ ಕುರಿತು ಆಸಕ್ತಿ ಬೆಳೆಸಿಕೊಳ್ಳುವಲ್ಲಿ ವಿಶೇಷ ಆಸ್ಥೆ ವಹಿಸಬೇಕಾಗಿದೆ.ಸುಮಾರು೨೦೦೦ಕ್ಕೂ ಹೆಚ್ಚಿನ ವರ್ಷಗಳಷ್ಟು ಸುದೀರ್ಘ ಇತಿಹಾಸವಿರುವ ಕನ್ನಡ ಒಂದು ಸಮೀಕ್ಷೆಯ ಪ್ರಕಾರ ಕೆಲವೇ ದಿನಗಳ ಕಾಲಘಟ್ಟದಲ್ಲಿ ಕಣ್ಭರೆಯಾಗಲಿರುವ ಜಗತ್ತಿನ ೨೫ ಭಾಷೆಗಳಲ್ಲಿ ಕನ್ನಡವೂ ಸೇರಿರುವದು ವಿಷಾದನೀಯವಾದ ಸಂಗತಿಯಾಗಿದೆ. ಇನ್ನಾದರೂ ಕನ್ನಡಿಗರಾದ ನಾವು ಎಚ್ಚತ್ತುಕೊಳ್ಳೋಣ ಯಾವ ರೀತಿಯಾಗಿ ಲಕ್ಷಕಂಠಗಳ ಗೀತ ಗಾಯನ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆಯೋ ಹಾಗೆಯೇ ಯಾವುದೇ ಆದೇಶಕ್ಕಾಗಿ ಕಾಯದೇ ನಮ್ಮ ಮನೆ, ಮನದಲ್ಲಿ ಕನ್ನಡಾಭಿಮಾನದ ಕೆಚ್ಚು “ಕನ್ನಡ ನಮ್ಮ ಉಸಿರುಬಳಸಿ ಉಳಿಸೋಣ ಹೆಸರು”ಎಂದು ಸ್ವಯಂ ಪ್ರೇರಣೆಯಿಂದ ನಮ್ಮತನವನ್ನು ಉಳಿಸಿಕೊಳ್ಳೋಣ. ಅಂದರೆ ಯಾವುದೇ ಬೇರೆ ಭಾಷೆಯನ್ನು ಕಡೆಗಣಿಸಬೇಕಾಗಿಲ್ಲ. ಅವುಗಳನ್ನು ಗೌರವಿಸುತ್ತ ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ ಕನ್ನಡ ಸೇವೆಗೆ ಕಂಕಣ ಬದ್ಧರಾಗೋಣ. ಭಾರತಿ ಕೇದಾರಿ ನಲವಡೆ

ಕನ್ನಡ ಬಾಷಾ ಬಳಕೆಯ ಅಭಿಯಾನದ ಹಬ್ಬವಾಗಲಿ ಕರ್ನಾಟಕ ರಾಜ್ಯೋತ್ಸವ Read Post »

ಇತರೆ

ಏಕೀಕರಣಕ್ಕೆ ಅರವತ್ತಾರು; ಇನ್ನೂ ಎಳೆಯುತ್ತಿಲ್ಲ ಕನ್ನಡದ ತೇರು..!

ಏಕೀಕರಣಕ್ಕೆಅರವತ್ತಾರು;  ಇನ್ನೂಎಳೆಯುತ್ತಿಲ್ಲಕನ್ನಡದತೇರು..! ಬರಿಯ ಚದರ ಮೈಲಿಗಳಲ್ತು ಕರ್ನಾಟಕದ ದೇಶ ವಿಸ್ತೀರ್ಣಮಂ/ ನೆನೆ ನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ/ ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ/ ಪ್ರಾಣಮಯ, ಭಾವಮಯ ವಿಸ್ತೀರ್ಣಮಂ/ ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ//                                       –ಕುವೆಂಪು   “ಬರಿಯ ವಿಸ್ತೀರ್ಣದ  ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಅಳೆಯಬೇಡ. ಅದರ ಆಂತರಂಗಿಕವಾಗಿ ಅಡಗಿರುವ ಸಂಸ್ಕೃತಿಯ ಕೋಶವನ್ನು ನೋಡು. ಅದರ ಪ್ರಾಚೀನತೆ ಅಥವಾ ಹಿನ್ನೆಲೆಯನ್ನು ಗಮನಿಸು. ಅದರ ಪ್ರಾಣಮಯವಾದ, ಭಾವಮಯವಾದ ವಿಸ್ತೀರ್ಣತೆಯನ್ನು, ವೈಜ್ಞಾನಿಕ ಕೊಡುಗೆಗಳನ್ನು ಸ್ಮರಿಸು” ಹೀಗೆ ರಸಋಷಿ ಕುವೆಂಪುರವರು ಹೇಳಿ ಅನೇಕ ವರ್ಷಗಳು ಗತಿಸಿ ಹೋದವು. ಈ ಪ್ರಕಾರವಾಗಿ ಜಗತ್ತಿಗೆ ಬೆಳಕಾಗಬಹುದಾದ ಅತ್ಯುನ್ನತವಾದ ಸಂಸ್ಕೃತಿಯ ಹಿನ್ನೆಲೆಯೊಂದನ್ನು, ಭಾಷೆಯೊಂದರ ಘನತೆಯನ್ನು, ಶ್ರೇಷ್ಠತೆಯನ್ನು  ಕೇಳಿ ತಿಳಿದು ನಾವದನ್ನು ಆರ್ಜಿಸಿಕೊಂಡಿದ್ದೇವೆ.ಹಾಗಾದರೆ ಇವನ್ನೆಲ್ಲ ಅರಿತು, ತಿಳಿದು ನಾವು ಇಷ್ಟು ವರ್ಷ ಸಾಧಿಸಿದುದೇನು? ಕನ್ನಡ ಕನ್ನಡಿಗರ ಜೀವನದ ಭಾಷೆಯಾಗಿದೆಯೆ? ಕನ್ನಡ ಸಂಸ್ಕೃತಿಯ ಹಿರಿಮೆ ಉತ್ಥಾನಗೊಂಡಿದೆಯೆ? ನಮ್ಮನ್ನೇ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.     ‘ಕಾವೇರಿಯಿಂದ ಗೋದೆ’ವರೆಗೆ ಹಬ್ಬಿದ್ದಂತಹ ನಾಡು ನಮ್ಮದು. ಇಂದು ಅದರ ವಿಸ್ತಾರವನ್ನು ಕಳೆದುಕೊಂಡು ಅದು ಸಂಕೀರ್ಣತೆಗೆ ಒಳಗಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ, ಕೇರಳದ ಕಾಸರಗೋಡಿನಂಥ ಅದೆಷ್ಟೋ ಅಪ್ಪಟ ಕನ್ನಡಿಗರಿರುವ ಭೂಭಾಗಗಳು ಇಂದು ಕರ್ನಾಟಕದಿಂದ ಏಕೀಕರಣದ ಕಾಲಕ್ಕೆ ದೂರವಾಗಿವೆ.  ಭಾಷಾವಾರು ಪ್ರಾಂತಗಳ ಏಕೀಕರಣದ ಕಾಲಕ್ಕೆ ಇಂತಹ ಸಂದಿಗ್ಧ ಸನ್ನಿವೇಶಗಳು ಎಲ್ಲಾ ರಾಜ್ಯಗಳನ್ನು ಕಾಡಿವೆ‌ . ಕೆಲವೊಂದು ಕೊಡು ಕೊಳ್ಳುವಿಕೆ ಅನಿವಾರ್ಯ ಎಂಬ ಕಾರಣದಿಂದ ಅದನ್ನು ನಾವು ಮರೆತು ಬಿಡಬಹುದು. ಆದರೆ ಏಕೀಕರಣದ ನಂತರ ಅರವತ್ತಾರು ವರ್ಷಗಳಲ್ಲಿ ಈಗಿರುವ ಪುಟ್ಟ ಕನ್ನಡನಾಡಿನಲ್ಲೇ   ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಾಗಿಲ್ಲ ಎಂಬುದು ಬಹಳ ಖೇದಕರ ಸಂಗತಿ.   ಜಗತ್ತಿನುದ್ದಗಲಕ್ಕೂ ವಸಾಹತುಗಳನ್ನು ಸ್ಥಾಪಿಸಿ, ಇಂಗ್ಲೆಂಡ್ ಎಂಬ  ಪುಟ್ಟ ದೇಶಕ್ಕೆ ‘ಸೂರ್ಯ ಮುಳುಗದ ನಾಡು’ ಎಂಬ ಅಭಿದಾನ ಕೊಡಿಸಿದ  ಆಂಗ್ಲರು ಬರೇ ವಸಾಹತುಗಳ ಆಳ್ವಿಕೆಯನ್ನಷ್ಟೇ ನಡೆಸಲಿಲ್ಲ. ತಮ್ಮ ಶಿಕ್ಷಣ ಪದ್ಧತಿಯನ್ನು ಆ ದೇಶಗಳಿಗೆ ನೀಡಿ,  ತಮ್ಮ ಭಾಷೆ ಮತ್ತು ಸಂಸ್ಕೃತಿ ವಿಶ್ವ ವಿಶಾಲತೆಗಳಿಸುವಂತೆ ಮಾಡಿದರು. ಅರಬ್ ನಾಡಿನಲ್ಲಿ ಉದಯಿಸಿದ ಇಸ್ಲಾಂ ಧರ್ಮೀಯರು ಉರ್ದು ಭಾಷೆಯನ್ನು ಜಗದಾದ್ಯಂತ ವಿಸ್ತರಿಸಿದರು. ಆದರೆ ನಾವೇನು ಮಾಡುತ್ತಿದ್ದೇವೆ. ಜಗದುದ್ದಗಲದ ವಿಚಾರ ಬಿಡೋಣ. ನಮ್ಮದೇ ಆದ ಸೀಮಿತ ವ್ಯಾಪ್ತಿಯಲ್ಲಿ ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಿದ್ದೇವೆಯೇ? ಚಿಂತಿಸಬೇಕಾಗಿದೆ.     ನಾವೇ ಪೋಷಿಸಿ ಬೆಳೆಸಬೇಕಾದ ಜಗತ್ತಿನ ಅತ್ಯುತ್ತಮ ವೈಜ್ಞಾನಿಕ ಭಾಷೆಗಳಲ್ಲೊಂದಾದ ಕನ್ನಡವನ್ನು ಇಂದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ  ಬಳಸುತ್ತಿರುವವರ ಸಂಖ್ಯೆ  ಶೇ. 36. ಪರಭಾಷೆಯ ಆಕ್ರಮಣ ಎನ್ನುವುದಕ್ಕಿಂತ ನಮ್ಮ ಭಾಷಾಭಿಮಾನ ಶೂನ್ಯತೆ ಕನ್ನಡಕ್ಕೆ ಶಾಪವಾಗಿ ಪರಿಣಮಿಸಿದೆ. ನಮ್ಮ ಪಕ್ಕದಲ್ಲೇ  ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರದಂತಹ ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಾಪಿಟ್ಟು ರಕ್ಷಿಸುವಂತಹ ರಾಜ್ಯಗಳಿದ್ದೂ  ನಾವು ಅವರಿಂದ  ಈ ವಿಚಾರ ಕಲಿಯದಿರುವುದು ದುರದೃಷ್ಟಕರ ಸಂಗತಿ.           ಕನ್ನಡನಾಡಿನ ಪೂರ್ವ ಸಂಸ್ಕೃತಿಯು ಸುಮಾರು 2500 ವರ್ಷಗಳಷ್ಟು ಹಿಂದಕ್ಕೆ ಸಾಗುತ್ತದೆ. ಅದು ಜಗದಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿದೆ. ಕಾಲ ಗರ್ಭದಲ್ಲಿ ಸಾಗುತ್ತಾ ಬಂದಿರುವ ಭಾಷೆಯ, ಸಂಸ್ಕೃತಿಯ ಹಿನ್ನೆಲೆಯನ್ನು ಗಮನಿಸಿದಾಗ ಅದು ನಿರಂತರವಾಗಿ ಏಳುಬೀಳಿನ ಹಾದಿಯಲ್ಲೇ ಸಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ರಾಜಾಡಳಿತದ ಕಾಲಕ್ಕೆ ಒಮ್ಮೆ ರಾಜ್ಯದ ಆಡಳಿತ ಭಾಷೆಯಾಗಿ, ಇನ್ನೊಮ್ಮೆ  ಅದರಿಂದ ಹೊರತಾಗಿ, ಮತ್ತೊಮ್ಮೆ ಕನ್ನಡ ಭಾಷಿಕ ಪ್ರದೇಶಗಳೇ ಹರಿದು ಹಂಚಿಹೋಗಿ ಹೀಗೆ ನಿರಂತರವಾಗಿ ಏಳುಬೀಳುಗಳನ್ನು ಕಂಡಿದೆ. ಆದರೆ ಅಂತಹ ಕಠಿಣ ಸನ್ನಿವೇಶದಲ್ಲಿಯೂ ಭಾಷೆ ಮತ್ತು ಸಂಸ್ಕೃತಿ  ತನ್ನತನವನ್ನು ಕಾಯ್ದುಕೊಂಡು ಬರಲು ಕಾರಣವಾದ ಸಂಗತಿಯೆಂದರೆ, ಜನತೆಯಲ್ಲಿನ ಸ್ವಸಂಸ್ಕೃತಿ ಮತ್ತು ಭಾಷೆಯ ಕುರಿತಾಗಿ ಇದ್ದ ಪ್ರಜ್ಞೆ ಮತ್ತು ಅಭಿಮಾನ. ಇಂದಿನ ದುಸ್ತರ ಸನ್ನಿವೇಶದಲ್ಲಿ ಈ ಪ್ರಜ್ಞೆ ಮತ್ತೆ ಮೂಡಬೇಕಿದೆ. ” ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು” ಎಂದ ಅಡಿಗರ ಕಾವ್ಯ ಸಾಲುಗಳು ಕನ್ನಡಿಗರ ಧಮನಿ ಧಮನಿಯಲ್ಲಿ ಹರಿದು ಮೈದೋರಬೇಕಿದೆ.    ಚಿತ್ತಾಣ ,ಬೆದಂಡೆಗಳಂತಹ ಕಾವ್ಯ ಜಾತಿಗಳಿಂದ , ಚಂಪೂವಾಗಿ, ವಚನವಾಗಿ, ಷಟ್ಪದಿಯಾಗಿ, ರಗಳೆಯಾಗಿ, ಆಧುನಿಕ ಗದ್ಯಕ್ಕೆ ತನ್ನನ್ನು  ತೆರೆದುಕೊಂಡು ನವೋದಯ, ಪ್ರಗತಿಶೀಲ, ಬಂಡಾಯ, ದಲಿತ ಬಂಡಾಯ ಸಾಹಿತ್ಯಕ್ಕೆ ಮೇಲ್ಪಂಕ್ತಿ ದೊರಕಿಸಿಕೊಟ್ಟ ಭಾಷೆ ಕನ್ನಡ. ಪಂಪನಿಂದ  ಮಹಾಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯದ ಮಾರ್ಗ ಅದೊಂದು ರಾಜ ಮಾರ್ಗ. ಇಂತಹ ವಿಶಾಲವಾದ ಸಾಹಿತ್ಯದ ಅರಿವು, ಈ ದಾರಿಯಲ್ಲಿ ಕನ್ನಡ ಭಾಷೆ ತನ್ನನ್ನು ಮಾರ್ಪಡಿಸಿಕೊಂಡ ರೀತಿ, ಒಗ್ಗಿಕೊಂಡ ರೀತಿ ಅನನ್ಯ. ನಮ್ಮ ಮನದ ವಿಕಾಸಕ್ಕೆ, ನಮ್ಮತನದ ಕುರಿತಾಗಿ ಹೆಮ್ಮೆಪಡಲು ಈ ವಿಶಾಲತೆಯ ಅರಿವು ನಮಗಿಂದು ಬೇಕಾಗಿದೆ.      ಹಾಗಾದರೆ ಕನ್ನಡ ನಾಡಿನಲ್ಲಿ ಕನ್ನಡವನ್ನುಳಿದು ಬೇರೆ ಭಾಷೆಗಳು ಇರಬಾರದೆ? ಕನ್ನಡಿಗರು ಪರಭಾಷೆಗಳನ್ನು ಕಲಿಯಬಾರದೆ? ಖಂಡಿತವಾಗಿಯುೂ ಇರಬೇಕು; ಕಲಿಯಬೇಕು. ಸಂಸ್ಕೃತಿಯ ಪ್ರವಾಹ ಒಂದರಿಂದ ಇನ್ನೊಂದಕ್ಕೆ ಹರಿಯಬೇಕು. ಭಾಷೆಗಳ ಕೊಡು- ಕೊಳ್ಳುವಿಕೆಯಾಗಬೇಕು. ತ್ರಿ ಭಾಷಾ ಸೂತ್ರ ಬೇಕು.  ಹೆಚ್ಚಿನ ಜ್ಞಾನವನ್ನು ಎಲ್ಲರೂ ಸಂಪಾದಿಸಬೇಕು. ಆಗ ಮಾತ್ರವೇ ಒಂದು ಭಾಷೆ, ಸಂಸ್ಕೃತಿ  ಶ್ರೀಮಂತವಾಗಬಲ್ಲದು. ಆದರೆ ಈ ಕಲಿಕೆ ಅಥವಾ ಸಂಸ್ಕೃತಿಯ ವಿಕಾಸ‌ ಎನ್ನುವುದು ಮರದ ಮೇಲೆ ಬೆಳೆದು ಕೊನೆಗೆ ಮರದ ಜೀವವನ್ನೇ ಹೀರುವ ‘ಬಂದಳಿಕೆ’ಗಳಂತಾಗಬಾರದು. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದು ಯೋಗ್ಯವೇ..! ಹಾಗಂತ ಮನೆಯ ಯಜಮಾನನ ಸ್ಥಾನವನ್ನೇ ಆತನಿಗೆ ಬಿಟ್ಟು ಕೊಡಲಾದೀತೆ? ಈ ನಿಲುವಿನಲ್ಲಿ ಪರಭಾಷೆಯ ಜೊತೆಗಿನ ನಮ್ಮ ಸ್ನೇಹ , ಸಂಬಂಧಗಳು ಸಾಗಬೇಕಿದೆ.      ಭಾಷೆ ಉಳಿಯಬೇಕಂದರೆ ಮೊದಲು ಕನ್ನಡನಾಡಿನ ಆಡಳಿತ ಭಾಷೆ, ವ್ಯವಹಾರದ ಭಾಷೆ ಕನ್ನಡವಾಗಬೇಕು. ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು. ಕಾರ್ಖಾನೆಗಳು ಮತ್ತು ಕನ್ನಡನಾಡಿನಲ್ಲಿ ನೆಲೆಸಿರುವ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕು. ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಅತಿಯಾದ ಹೇರಿಕೆ ನಿಲ್ಲಬೇಕು. ಕನ್ನಡ ಮಾದ್ಯಮ ಶಾಲೆಗಳ ಅಭಿವೃದ್ಧಿಗೆ  ಕಂಕಣಬದ್ಧರಾಗಬೇಕು. ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲಾ ನಾಮಫಲಕಗಳು ಕನ್ನಡರೂಪ ಪಡೆಯಬೇಕು. ಮುಖ್ಯವಾಗಿ ಕನ್ನಡಿಗರೆಲ್ಲರ ಮನೆ ಮನಗಳ  ಭಾಷೆ ಕನ್ನಡವಾಗಬೇಕು. ಆಗ ಮಾತ್ರವೇ ಕನ್ನಡದ ತೇರು ಮುಂದಕ್ಕೆ ಸಾಗಬಲ್ಲದು.  “ಮನೆಯ ಹಿತ್ತಲದೊಳಗೆ ಅರಳಿದರೆ ಭಾಷೆ ಹಣ್ಣು ಹಂಪಲದಾಗಿ ಪಲಿಸುವುದು ಆಸೆ ನೀರು ಗೊಬ್ಬರ ಹಾಕಿ ಬೆಳೆಸಿದರೆ ತೋಟ ಈ ನೆಲಕೆ ತಪ್ಪುವುದು ಪರಭಾಷೆ ಕಾಟ”  ಎಂಬ ದಿನಕರರ ಸಾಲುಗಳು ಎಷ್ಟು ಸತ್ಯ ಅಲ್ಲವೇ?  –ವಿಷ್ಣು ಆರ್. ನಾಯ್ಕ Top of Form Bottom of Form

ಏಕೀಕರಣಕ್ಕೆ ಅರವತ್ತಾರು; ಇನ್ನೂ ಎಳೆಯುತ್ತಿಲ್ಲ ಕನ್ನಡದ ತೇರು..! Read Post »

ನಿಮ್ಮೊಂದಿಗೆ

ಪ್ರೀತಿಯ ಸಂಗಾತಿ ಬಳಗವೇ ….

ಈ ಸಂದರ್ಭದಲ್ಲಿ ಸಂಗಾತಿ ಬಳಗ,  ನಮ್ಮ  ಲೇಖಕರಿಗೆ, ಓದುಗರಿಗೆ ಪುಟ್ಟದಾಗಿ ನಮ್ಮ ಸೌಹಾರ್ದ ಪರಂಪರೆಯನ್ನು‌ ನೆನಪಿಸಿದೆ. ನಮ್ಮ ಎಲ್ಲಾ ಬಳಗಕ್ಕೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು..

ಪ್ರೀತಿಯ ಸಂಗಾತಿ ಬಳಗವೇ …. Read Post »

You cannot copy content of this page

Scroll to Top