ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ

ಲೇಖನ ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ ಆರ್.ಜಿ.ಹಳ್ಳಿ ನಾಗರಾಜ ಕನ್ನಡದ ಸಾಕ್ಷೀಪ್ರಜ್ಞೆಯಂತಿದ್ದು ನಮ್ಮನ್ನಗಲಿದ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಅವರ ಜನಪರ ಕಾಳಜಿ ಬಗ್ಗೆ ಹತ್ತಾರು ನಿದರ್ಶನ ಕೊಡಬಹುದು. ತಕ್ಷಣ ನಾನಿದ್ದ ಕಚೇರಿಯ ಒಂದು ಘಟನೆಯಿಂದ ಅವರನ್ನಿಲ್ಲಿ ನೆನೆಯುತ್ತೇನೆ: ಅವರಿಗೆ‌ 102 ವರ್ಷವಾಗಿತ್ತು. ಒಂದುದಿನ ಬೆಂಗಳೂರು  ಕೆರೆಗಳ  ಮಾಲಿನ್ಯದ ಬಗ್ಗೆ ಲಿಖಿತ ದೂರು ಕೊಡಲು 3ನೇ‌ ಮಹಡಿಗೆ  ಬಂದರು! ಕಚೇರಿಯಲ್ಲಿ ಇದ್ದವರಿಗೆಲ್ಲ ಆಶ್ಚರ್ಯ ಹಾಗೂ ದಿಗಿಲು. ಅಧ್ಯಕ್ಷರನ್ನು ಕಾಣಬೇಕು,  ಇದ್ದಾರಾ? ಎಂದರು. ಹೊರಗೆ ಸಾಕಷ್ಟು ಜನ ಕಾಯುತ್ತಿದ್ದರು ಈ‌ ಶತಾಯುಷಿಯನ್ನು ಕಂಡ ಸಿಬ್ಬಂದಿ ನೇರವಾಗಿ ಅಧ್ಯಕ್ಷರ ಛೇಂಬರಿಗೆ ಕಳುಹಿಸಿದರು. ಏನೋ ಚರ್ಚೆಯಲ್ಲಿದ್ದ ಅಧ್ಯಕ್ಷರು ಈ ಹಿರಿಯ ಜೀವ‌ ಬಂದದ್ದು ಕಂಡು ಆಶ್ಚರ್ಯವಾಯಿತು. ಕೂಡಲೆ  ಕುರ್ಚಿಯಿಂದ ಎದ್ದುಬಂದು, ಅವರನ್ನು ಬರಮಾಡಿಕೊಂಡು ಕೈ ಹಿಡಿದು ಕುರ್ಚಿಯಲ್ಲಿ ಕೂರಿಸಿದರು. ಈ ಇಳಿ ವಯಸ್ಸಿನಲ್ಲಿ ದೊರೆಸ್ವಾಮಿ ಅವರೇ ಕಚೇರಿಗೆ ಬಂದಿದ್ದಾರೆಂದರೆ ಏನೋ ದೊಡ್ಡ ಸಮಸ್ಯೆಯೇ ಇರಬೇಕೆಂದುಕೊಂಡ ಅಧ್ಯಕ್ಷರು, “ಸಾರ್ ಇಷ್ಟುದೂರ ನೀವೇಕೆ ಬಂದಿರಿ? ಒಂದು ಫೋನ್ ಮಾಡಿದ್ದರೆ ನಾನೇ ಸಮಸ್ಯೆ ಬಗೆಹರಿಸುತ್ತಿದ್ದೆನಲ್ಲ” ಅಂದರು. ಆಗ ತಾವು ತಂದಿದ್ದ ದೂರನ್ನು ಅಧ್ಯಕ್ಷರಿಗೆ ನೀಡಿದರು. ಅದನ್ನು ಓದಿದ ಅಧ್ಯಕ್ಷರಿಗೆ ಎಲ್ಲಾ ಅರಿವಾಗಿ, ಬೇಗ ನಾನೇ ನಿಂತು ಈ ಸಮಸ್ಯೆ ಬಗೆಹರಿಸಿ ನಿಮ್ಮನ್ನು ಕಾಣುತ್ತೇನೆ” ಅಂದರು. . ಈ ಮೇಲಿನ ಘಟನೆ ನಡೆದು ಎರಡೂವರೆ ವರ್ಷವಾಗಿದೆ.  ಸ್ಥಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,  ಚರ್ಚ್ ಸ್ಟ್ರೀಟ್, ಬೆಂಗಳೂರು. ಬರಮಾಡಿಕೊಂಡ ಅಧ್ಯಕ್ಷರು: ಲಕ್ಷ್ಮಣ್. ಕೆಲವು ನಿಮಿಷ ಅವರು ಬೆಂಗಳೂರು ಕೆರೆಗಳ ಹೂಳು, ಕೊಳಚೆ ನೀರು ಹರಿದು ಕೆರೆ ಒಡಲು ಸೇರುವ‌ ವಿಚಾರ, ಜಲಚರಗಳ ನಾಶ… ಎಲ್ಲಾ ಪ್ರಸ್ತಾಪ ಮಾಡಿದರು. ನಾನು ಆಗ ಆ ಕಚೇರಿಯಲ್ಲಿ ಮಾಧ್ಯಮ ಸಲಹೆಗಾರ / ಪರಿಸರ ಪತ್ರಿಕೆ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ನನ್ನ ಅಲ್ಲಿ ಕಂಡ ದೊರೆಸ್ವಾಮಿಯವರು ಅನೇಕ‌ ನೆನಪು‌ ಕೆದಕಿ ಮಾತಾಡಿದರು. ಅಧ್ಯಕ್ಷರಿಗೆ ನನ್ನ ಬಗ್ಗೆ ಹೇಳಿದರು. ಆ ವಯಸ್ಸಲ್ಲೂ ಅವರ ನೆನಪಿನ‌ ಶಕ್ತಿಗೆ ಶರಣೆಂದೆ. ಅಧ್ಯಕ್ಷ ಲಕ್ಷ್ಮಣ್ ಅವರು ದೊರೆಸ್ವಾಮಿ ಅವರ ಕೈ ಹಿಡಿದು, ಮಾತಾಡುತ್ತ  3ನೇ ಮಹಡಿಯಿಂದ ಲಿಪ್ಟಲ್ಲಿ ಕೆಳಗೆ ಕರೆತಂದರು. ನಾನು ಅವರ ಜೊತೆ ಇದ್ದೆ. ಮತ್ತೆ ಬಾಗಿಲಲ್ಲಿ ಮಾತಾಡುತ್ತ ಬೀಳ್ಕೊಟ್ಟೆವು. ** ದೊರೆಸ್ವಾಮಿ ಅವರಿಗೆ 98 ವಯಸ್ಸಾದಾಗ ವಾರಪತ್ರಿಕೆಯೊಂದಕ್ಕೆ ಸಂದರ್ಶನ ಮಾಡಿ, ಲೇಖನ‌ ಮಾಡಿದ್ದೆ. (ಅದು ನನ್ನ ಹೆದ್ದಾರಿ‌ ಕವಲು ಸಂಕಲನದಲ್ಲಿದೆ.) ಅವರ ಜೊತೆ ಉತ್ತಮ ಸಂಪರ್ಕ ಇತ್ತು. ಅನೇಕ ಧರಣಿಗಳಲ್ಲಿ… ಸ್ವಾತಂತ್ರ್ಯ ಉದ್ಯಾನವನ, ಟೌನ್ ಹಾಲ್, ಗಾಂಧಿ ಪ್ರತಿಮೆ ಎದುರು… ಹೀಗೆ ಹಲವೆಡೆ ಜೊತೆ ಭಾಗವಹಿಸಿದ್ದೇವೆ. ದೊರೆಸ್ವಾಮಿ ಅವರು‌ ಲೇಖಕರು ಹಾಗೂ ಪ್ರಕಾಶಕರೂ ಆಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ರಚನೆಯಾಗಿ ಒಂದು ದಶಕವೂ ಆಗಿರಲಿಲ್ಲ.‌ ಅದರ ಕಚೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಪುಸ್ತಕ ಮಾರಾಟ ಮಳಿಗೆಯ ಭಾಗದಲ್ಲಿತ್ತು. ಆಗ ಕೆಲವು ನೂನ್ಯತೆಗಳು ತಲೆದೋರಿ, ಲೇಖಕ/ಪ್ರಕಾಶಕರ ಪುಸ್ತಕ ಖರೀದಿಗೆ ಕೊಕ್ಕೆ ಹಾಕಲಾಗಿತ್ತು. ಆ ಸಂದರ್ಭ  ಪ್ರಾಧಿಕಾರದ ವಿರುದ್ಧ ಪ್ರತಿಭಟನೆಯನ್ನು ಕಚೇರಿ ಎದುರೇ ಹಮ್ಮಿಕೊಳ್ಳಲಾಯಿತು. ಪ್ಲೇ ಕಾರ್ಡು ಹಿಡಿದು ದೊರೆಸ್ವಾಮಿ ಮೊದಲು ಕೂತರು. ಅವರ ಜೊತೆ ಎ.ಎಸ್. ಮೂರ್ತಿ, ಡಾ. ವಿಜಯಾ, ಡಾ. ಲಕ್ಷ್ಮಿನಾರಾಯಣಭಟ್ಟ, ಪ್ರೊ. ಎಂ.ಎಚ್. ಕೃಷ್ಣಯ್ಯ, ನಾನು ಮೊದಲ್ಗೊಂಡು ಹತ್ತಾರು ಲೇಖಕರು ಪ್ರತಿಭಟನೆ ಮಾಡಿದೆವು. ಎಚ್ಚೆತ್ತ ಪ್ರಾಧಿಕಾರ ಸರ್ಕಾರದ ಮೊರೆಹೋಗಿ, ತಿಂಗಳಲ್ಲೇ ಪುಸ್ತಕ ಖರೀದಿಗೆ ವ್ಯವಸ್ಥೆ ಮಾಡಿತು. ಗೆಲುವಿನ ಇಂಥ ಎಷ್ಟೋ ನಿದರ್ಶನಗಳಿವೆ. ಅವರದ್ದು ಸದಾ ಜನಪರ ಕಾಳಜಿ. ಭ್ರಷ್ಟಾಚಾರದ ವಿರುದ್ಧ ಮೊದಲ ದನಿ. ಸುಳ್ಳು, ಕಪಟ, ವಂಚನೆ ಅವರಿಗಾಗದು. ಅವರೊಬ್ಬ ನಿಷ್ಠುರವಾದಿ. ಮಾತು ಖಡಕ್. ರಾಜಿಯಾಗದ ಮನಸ್ಸು. ಪ್ರಾಮಾಣಿಕವಾಗಿದ್ದವರ ಜೊತೆ ಅವರ ಸ್ನೇಹ. ಅದರಲ್ಲೂ ಯುವಕರ ಬಗ್ಗೆ ಅಪಾರ ಪ್ರೀತಿ, ಕಾಳಜಿ. ವೇದಿಕೆಯಲ್ಲಿ ನಿಂತು, (ಈಚೆಗೆ ಕುಳಿತು) ಮೈಕ್ ಹಿಡಿದರೆ ನಿರರ್ಗಳವಾಗಿ ಮಾತಾಡುತ್ತ ಭ್ರಷ್ಟರೆಲ್ಲರ ಜಾತಕ ಬಿಚ್ಚಿಡುತ್ತಿದ್ದರು. ಅವರು ಪ್ರತಿದಿನ ಹತ್ತಾರು ಪತ್ರಿಕೆ ಓದುತ್ತಿದ್ದರು. ಪುಸ್ತಕಗಳ ಅಧ್ಯಯನ ಮಾಡುತ್ತಿದ್ದರು. ಅವರೊಬ್ಬ ನಿಜವಾದ ಪ್ರಜಾಪ್ರಭುತ್ವವಾದಿ ಹೋರಾಟಗಾರರು. ಸ್ವಾತಂತ್ರ್ಯ ಹೋರಾಟದಲ್ಲಿ‌ ಭಾಗವಹಿಸಿದವರು. ಭೂಗತರಾಗಿ (ಈಗಿನ ಆಂಧ್ರದ) ಆಧೋನಿಯಿಂದ “ಪ್ರಜಾಧ್ವನಿ” ಎಂಬ ಪತ್ರಿಕೆ ಅಚ್ಚುಹಾಕಿ, ಬ್ರಿಟಿಷರ ವಿರುದ್ಧ ಕಹಳೆ ಊದಿದವರು. ಅನ್ಯಾಯ ಎಲ್ಲಿ ನಡೆಯುತ್ತೋ ಅಲ್ಲಿ ಅವರ ದನಿ. ಪ್ರತಿಭಟನೆ, ಧರಣಿ ಬಂಧನ, ಜೇಲು ಅವರ ಬದುಕಿನ ಭಾಗವಾಗಿತ್ತು. ಕಿರಿಯ ಹೋರಾಟಗಾರರನ್ನು ಸದಾ ಹುರಿದುಂಬಿಸುತ್ತಿದ್ದ ಹಿರಿಯ ಅಜ್ಜ ಅವರು. ಅವರಿಗೆ ಕರ್ನಾಟಕ ರತ್ನ ನೀಡಿ ಸರ್ಕಾರ ಗೌರವಿಸಬೇಕು ಎಂದು ಸಂದರ್ಶನ‌ ಮಾಡಿದ್ದ ಸಂದರ್ಭದ ಲೇಖನದಲ್ಲಿ ಬರೆದಿದ್ದೆ. ಆದರೆ, ಸರ್ಕಾರಕ್ಕೆ ಅಂಥ ಕಾಳಜಿ ಇರಬೇಕಲ್ಲ? ಅವರು, ಆಳುವ‌ ಸರ್ಕಾರಗಳ ವೈಫಲ್ಯಗಳನ್ನು ಎತ್ತಿ ತೋರಿಸಿ, ಅದರ ವಿರುದ್ಧವೇ ಪ್ರತಿಭಟನೆಯ ದನಿ ಎತ್ತುತ್ತಿದ್ದರಿಂದ  ಸರ್ಕಾರ ಮುಜುಗರಕ್ಕೆ ಒಳಗಾಗುತ್ತಿತ್ತು.   ಸರ್ಕಾರದ ವಿರುದ್ಧವಾಗೆ ಚಳವಳಿ ನಡೆಸುತ್ತಿದ್ದರಿಂದ ಸಹಜವಾಗೇ ಆಯಾ ಸರ್ಕಾರಗಳಿಗೆ ಅವರು ಅಪಥ್ಯವಾಗಿದ್ದರು. ಸರಳ‌ ಸಜ್ಜನ ಗಾಂಧಿವಾದಿ ಎಚ್ ಎಸ್ ದೊರೆಸ್ವಾಮಿ ಅವರು ಸರ್ಕಾರದ ಯಾವುದೇ ಪ್ರಶಸ್ತಿ, ಗೌರವ, ಸ್ಥಾನಮಾನ ಅಪೇಕ್ಷೆ ಪಡಲಿಲ್ಲ. ಹೀಗಾಗಿ ಅವರು ಸದಾ ನಮ್ಮ ಮನದಲ್ಲಿ ಇರುತ್ತಾರೆ ಹಾಗೂ ಜನಪರ ಚಳವಳಿಗಳಲ್ಲಿ ಜೀವಂತವಾಗಿರುತ್ತಾರೆ ಎಂದು ಭಾವಿಸುವೆ. ಅವರ ನಿಧನಕ್ಕೆ ನನ್ನ ಅಶ್ರುತರ್ಪಣ. **************

ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ Read Post »

ಇತರೆ

ಭಾವ ಪುಷ್ಪಗಳು

ಭಾವದ ಅನುಭಾವದ ಎತ್ತರ ಬಿತ್ತರಗಳನ್ನು ವರ್ಣಿಸಲು ಅಸಾಧ್ಯ. ಆಲದ ಮರದಂತೆ ನೂರಾರು ಸಾವಿರಾರು ವರುಷಗಳಿಂದ ಬಾಳಿ ಬಂದ ಭಾವ ಸಂಸ್ಕøತಿಯನ್ನು ಹೆಮ್ಮೆಯಿಂದ ಬೆಳೆಸೋಣ ಬೆಳೆಯೋಣ ಭಾವ ಪುಷ್ಪಗಳು ನಮ್ಮ ಎದೆಯ ಅಂಗಳದಲ್ಲಿ ನಿತ್ಯ ಅರಳಲಿ ಬದುಕು ಇನ್ನಷ್ಟು ಮತ್ತಷ್ಟು ಸುಂದರವಾಗಲಿ.

ಭಾವ ಪುಷ್ಪಗಳು Read Post »

ಪುಸ್ತಕ ಸಂಗಾತಿ

ಪ್ಯಾರಿ ಪದ್ಯ

ಪುಸ್ತಕ ಸಂಗಾತಿ ಪ್ಯಾರಿ ಪದ್ಯ ನಾನಿವತ್ತು ಓದಿದ ಪುಸ್ತಕ       ” ಪ್ಯಾರಿ ಪದ್ಯ “ ******** ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ ಸಾಹಿತಿಗಳಿಗೂ ಅಳಿಸಲಾಗದ ಸಂಬಂಧವಿದೆ.ಅನೇಕ ಉತ್ತಮ ಬರಹಗಾರರ ಕೃತಿಗಳನ್ನು ಕನ್ನಡ ಪುಸ್ತಕ ಲೋಕಕ್ಕೆ ಮೌಲಿಕ ಕೊಡುಗೆ ಕೊಟ್ಟ ಕೀರ್ತಿಯು ಎ.ಎಸ್.ಮಕಾನದಾರರ ಮುಡಿಗೇರಿದೆ.      2020-21 ರ  ವರುಷಗಳ ಕರೋನಾ ಭೀತಿಯ ಸವಾಲು ಎದುರಿಸಿಕೊಂಡು,ಕಷ್ಟ ಕಾಲದಲ್ಲಿಯೂ ಓದು ಬರಹವನ್ನು ತಪಸ್ಸಿನಂತೆ ಮಾಡಿಕೊಂಡಿದ್ದರ ಸಿದ್ಧಿಗೆ ಪ್ಯಾರಿ ಪದ್ಯ ಕಾವ್ಯ ಸಂಕಲನವು ಮಾನವೀಯ ಮೌಲ್ಯಗಳ ನೈಜ ಚಿತ್ರಣವನ್ನೊಳಗೊಂಡು ರೂಪ ತಾಳಿದೆ. ಆಶಯ,ವಸ್ತು,ರೂಪ-ಸ್ವರೂಪಗಳ ಪ್ಯಾರಿ ಪದ್ಯ ವು ಪರಿಮಳ ಚೆಲ್ಲಿದ ಕಾವ್ಯ ಗಂಧವಾಗಿದೆ.ಕೃತಿಯು ಒಂದು ಅನುಪಮ ಮನೋಪಕಾರಗಳ ಕಾಣಿಕೆಯಾಗಿದೆ.ಪುಸ್ತಕದೊಳಗೆ ಬಿಡಿಸಿದ ಚಿತ್ರಗಳಿಗೂ ನುಡಿಗಳಿಗೂ ವಿಚಾರಗಳ ನಂಟಿದೆ.ಈ ಬಗೆಯ ಪದ್ಯಗಳು ಕನ್ನಡದಲ್ಲಿ ಹೊಸತನ ಮತ್ತು ಹಿರಿದರ್ಥ ನೀಡುವ ಸಾರ್ಥಕ ಪ್ರಯತ್ನವೆನ್ನಬಹುದು.ಓದುಗರ ಕುತುಹಲವನ್ನು ಜಾಗೃತಗೊಳಿಸಿ ಅಭಿಮಾನ  ಹೆಚ್ಚಿಸುತ್ತದೆ. ರಚನೆಯಾದ ಸಾಲುಗಳಲ್ಲಿ ಕಣ್ಣಾಯಿಸೋಣ. ನೀನು ಸೂಜಿ ನಾನು ದಾರ ಹೊಲಿಯೋಣ ಗಡಿಗಳನು ಗಂಟೆಗಟ್ಟಲೇ ಕತೆ ಹೇಳಬೇಕಿಲ್ಲ.ಗಡಿ ಸಮಸ್ಯೆಯ ಅಪವಾದ ವಿವಾದಗಳನು ಊಹಾಪೋಹಗಳಿಂದ ಲೇಖಿಸುವುದು ಬೇಕಿಲ್ಲ. ಜಟಿಲವಾದ ಸಂಗತಿಯನ್ನು ಮೃದು ಮಾತಿನಲಿ ಬಿಡಿಸಿದ್ದಾರೆ.ಗಡಿಯ ವಿವಾದಗಳೆಂದರೆ ನಾವೆಲ್ಲರೂ ಹಲುಬುತ್ತೇವೆ.ಮನುಷ್ಯ-ಮನುಷ್ಯರಿಗಿಂತ ಹಿರಿದಾದ್ದೇನಿಲ್ಲ.ಈ ಮಣ್ಣಿನ  ಋಣ,ಭ್ರಾತ್ರುತ್ವದ ನೋವು ನಲಿವುಗಳನು,ಬೆರಳಿಗೆ ಸೂಜಿಯ ಮೊನಚು ತಾಕದಂತೆ ಹೊಲಿಯುವ ನಿಲುವನ್ನು ಕಲಾತ್ಮಕವಾಗಿ ಪ್ರಕಟಪಡಿಸಿದ್ದಾರೆ. ಎ.ಎಸ್.ಮಕಾನದಾರರ ಅನುಭವ ಅಸೀಮವಾದದ್ದು.ಇವರ ಸ್ವಪ್ರತಿಭೆಯು ಓದುಗರ ಅನುರಾಗ ಸೆಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿ ಬುದ್ಧನಾಗಲು ಭೋದಿವೃಕ್ಷವೇ ಬೇಕಿಲ್ಲ ಅರ್ಧಾಂಗಿ ಕರುಳ ಕುಡಿಯೂ ತ್ಯಜಿಸಬೇಕಿಲ್ಲ ಮೌನದ ಹಾದಿಯಲಿ ಹಾಡಿದರೆ ಸಾಕು ಕೈಗೆಟುಕದ ಕನಸನ್ನರಸುತ್ತಾ,ಜೀವನವನ್ನು ಕಳೆದುಕೊಳ್ಳುವುದು ಮೂರ್ಖತನವೆ.ಅವರಿವರು ಹುರಿದುಂಬಿಸಿ ಆಕಾಶಕ್ಕೆ ಏಣಿ ಹಾಕುವ ಪೊಳ್ಳು ಮಾತುಗಾರರು ಅಧಿಕವಾಗಿದ್ದಾರೆ.ಬುದ್ಧ,ಬಸವ,ಗಾಂಧಿ,ಮತ್ತು ಅಂಬೇಡ್ಕರ್ ಅವರಂತಾಗಲು ಸಾಧ್ಯವಾಗದಿದ್ದರೂ,ಅವರ ನಡೆ,ನುಡಿಯನು ಜೀವನದಲ್ಲಿ ಪಾಲಿಸಿದರೆ ಸಾಕು. ಸಧ್ಯದಲಿ ನಮಗೆ ಲಭಿಸಿದ ಅವಕಾಶ,ನಮಗಿರುವ ಇತಿಮಿತಿಯನ್ನು ಹಿರಿದುಗೊಳಿಸಿ ಬದುಕಿದರೆ ಸಾಕೆನ್ನುವ  ಕವಿಯ ಚಿಂತನಾ ಕ್ರಮವಾಗಿದೆ. ” ಶಬ್ದಗಳನು ಜಾಲಾಡಿದೆ ಕೋಶವೆಲ್ಲ ತಿರುವಿದೆ ಕಿರು ನಗೆ- ಭೋಧಿ ವೃಕ್ಷವಾಯಿತು *ದೀಪವು ಮತ್ತೊಂದು ದೀಪವನು ಬೆಳಗಿಸುವಂತೆ., ಕಾಡುಗಲ್ಲಿಗೆ ಆಕಾರ ನೀಡುವ ಶಿಲ್ಪಿಯಂತೆ.,ಹೂವುಗಳ ಪೋಣಿಸಿ ಮಾಲೆ ಮಾಡಿದಂತೆ, ಶಬ್ದಗಳ ಕಟ್ಟುವಿಕೆಯೂ ಕವಿಯ ಚಾಣಾಕ್ಷತನ.ಪ್ರಗತಿಪರ ಬರಹಗಾರರ ಆಳವಾದ ಅರಿವು ಕಾಣುತ್ತದೆ. ಇರಿಯಲು ಬಂದ ಚೂರಿಗೆ ಮುತ್ತಿಕ್ಕಿದೆ ಮುತ್ತಿನ ಮತ್ತಿನಲಿ ಚೂರಿ ಮೆತ್ತಗಾಯಿತು ಹಣ,ಹೆಸರು,ಸ್ಥಾನಮಾನ ಹೊಂದಿದವರು ನಾಗರೀಕತೆಯ ಹಮ್ಮಿನಲ್ಲಿರುವವರೀಗ ವಿರಳವೇನಿಲ್ಲ.ಪ್ರಬಲ ಶಕ್ತಿಯ ವಿರುದ್ಧ ತುಟಿ ಬಿಚ್ಚಿದರೆ,ಕೊರಳಿಗೆ ಕುತ್ತು ಬರುವುದು.ಇರಿಯಲು ಬಂದ ಚೂರಿಯೆಂದರೆ ಸಮಾಜದಲ್ಲಿರುವ  ಕೆಲವು ಕೆಟ್ಟ ಹುಳುಗಳೆ  ಹೊರತು ಇನ್ನಾವುದಾಗಿರಲು ಸಾಧ್ಯವಿಲ್ಲ.ಒಳ್ಳೆಯತನದಿಂದ ಒಂದು ಆದರ್ಶ ಮಾರ್ಗದರ್ಶಕರಾಗಿ ಮೃದು ಮಾತಿನಲ್ಲಿ ಸರಿ ದಾರಿಗೆ ತಂದಾಗ ಮಾತ್ರ ಗರ್ದಿತನವು ಮೆತ್ತಗಾಗುತ್ತದೆ. ಶಾಂತಿ ಮಂತ್ರದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯು ಜಗದ ಪ್ರಖ್ಯಾತರು. ಸುಟ್ಟುಕೊಂಡ ಬದುಕಿಗೆ ಇದ್ದಿಲು ಆಗುವ ಭಾಗ್ಯವೂ ಇಲ್ಲ ಮೇಲ್ನೋಟಕ್ಕೆ ಬಹು ಸರಳವೆನಿಸದರೂ,ಆಂತರ್ಯದಲ್ಲಿ ಬದುಕಿನ ತತ್ವ ಅಡಗಿದೆ. ದರ್ದಿನ ಮರುಹುಡುಕಾಟವಿದೆ. ಆರಿದ ದೀಪ ಉರಿಸು,ಉರಿವ ದೀಪ ಆರಿಸದಿರು ಜಗದ ಕತ್ತಲೆ ಕಳೆಯಲು ಸಮೆಯ ಬೇಕಾಗಿವುದು ಕನಸುಗಳಿಗೆ ಸಾಕಾಷ್ಟು ಚಿಗರು ಕವಲುಗಳಿವೆ.ಕಡಿಯುತ್ತಾ ಸಾಗಿದರೆ,ದಣಿದವರಿಗೆ ನೆರಳಿಲ್ಲ.ಜ್ಞಾನವು ಬೆಳಕಿನ ಸಂಕೇತವಾಗಿದೆ.ಜ್ಞಾನ ನೀಡುವ ಪರಿಣಿತರನ್ನು ಗೌರವಿಸಬೇಕು.ಸಮೆಯ ಎನ್ನುವುದೂ ಪ್ರಜ್ಞೆಯ ಸೂಚಕ ಪದವೆ.  ಎ.ಎಸ್.ಮಕಾನದಾರರ ಭಾವದ ಹರವು ವಿಶಾಲವಾಗಿದೆ.ಎದೆಯೊಳಗೆ ಉಳಿದು ಬಿಡುವ ವಾಸ್ತವದ ಸಂವೇದನೆಗಳನ್ನು ದಾಖಲಿಸಿದ್ದಾರೆ. ಉಸಿರಾಡುವವರು ಜೀವಂತ ಅದಾರಂತ ಏನು ಗ್ಯಾರಂಟಿ ಸತ್ತವರಲ್ಲಿ ಕೆಲವರು ಜೀವಂತ ಅದಾರಲ್ಲ ಇದಕ ನೀ ಏನಂತಿ? ಒಬ್ಬರು,ಇನ್ನೊಬ್ಬರನ್ನು ತುಳಿದು ಬದುಕುವ ವೃತ್ತಿಯನು ಕರಗತ ಮಾಡಿಕೊಂಡ ವಂಚಕರು ನಿರ್ಭಯದಿಂದ ಇದ್ದಾರೆ. ನೀತಿ ನಿಯಮ,ನಿಯತ್ತುಗಳ ಗಾಳಿಗೆ ತೂರಿ,ದುರ್ಬಲರ ಕನಸು ಕನವರಿಕೆ ಕಸಿದುಕೊಂಡು,ಮನುಷ್ಯತ್ವವನ್ನು ಮರೆತವರು ನಮ್ಮ ನಡುವೆ ಬದುಕುತ್ತಿದ್ದಾರೆ.ಹೀಗೆ ಅಂತವರು ತುಳಿತಕ್ಕೊಳಗಾದವರು,ಸತ್ತೂ ಜೀವಂತ ಉಸಿರಾಡುತ್ತಿದ್ದಾರೆ. ಈ ಪ್ಯಾರಿ ಪದ್ಯ ಸಂಕಲನದೊಳಗೆ ಹಲವಾರು ಸಾಲುಗಳು ಹೃದಯ ಸಂಬಂಧದ ಅನೇಕ ಭಾವುಕ ಎಳೆಗಳು ಪ್ರತಿಬಿಂಬಿತವಾಗಿವೆ. ಶತಮಾನದ ನಂಜಿಗೆ ಯಾವ ಹೊಳೆಯಲ್ಲಿ ತೊಳೆಯಬೇಕಿದೆ ಸಂತ ಶರಣರು ತಿಕ್ಕಿ ತೊಳೆದರೂ ಇನ್ನೂ ಉಳಿದಿದೆ. ಜಾತಿ, ಮತ ,ಪಂಥ, ಧರ್ಮ,ಮತ್ತು ಮೇಲು ಕೀಳು ಗಳ ಕಲಹವು ನಿನ್ನೆ ಮೊನ್ನೆಯದಲ್ಲ.,ಶತ ಶತಮಾನಗಳಿಂದ ಬಂದಿದೆ.ಒಂದೆಡೆಗೆ ಶರಣರು,ಪ್ರವಾದಿಗಳು,ದಾರ್ಶನಿಕರು,ಹಿರಿಯ ಕವಿಗಳು ಹರಗುತ್ತಾ ಬಂದರೂ,ಹಿಂದೆ ಹಿಂದೆಯೇ ರಕ್ತ ಬೀಜಾಸುರನಂತೆ ಜನ್ಮ ತಾಳಿದೆ ನಂಜು.ಇವತ್ತೇ ಈಗಿಂದೀಗಲೇ  ಕಡಲೊಳಗೆ ಅವಿತಿಟ್ಟು ಬಂದರೂ,ನಾಳೆಯ ದಿನ ತುರಿಕೆ ತೊಪ್ಪಲಿನಂತೆ ತೆರೆಯ ಮೇಲೆ ಉರಿದುರಿದು ಬೆವರಿಳಿಸುತ್ತದೆ ವ್ಯವಸ್ಥೆ. ಇಂತಹ ಗ್ರಹಿಕೆಯ ಅನುಭವ ನೀಡಿರುವ ಮಕಾನದಾರರ ಬರಹವು ಬೆರಗು ಮೂಡಿಸುತ್ತವೆ. ಸೋತ ಶಬ್ದಕೆ ಗಂಜಿ ಕುಡಿಸಿದೆ ಒಣಗಿದ ಎದೆಗೂಡಲಿ ಚಿತ್ತಾರ ಬಿಡಿಸಿದೆ **** ಸತ್ಯದ ಕತ್ತು ಹಿಸುಕಿದ ದಿಕ್ಕೇಡಿ ಸುಳ್ಳಿಗೆ ದತ್ತು ಪಡೆದ. ***** ಪುಟ ಪುಟವೂ ತಿರುವಿದೆ ಬಿಳಿಯ ಕಾಗದದಲಿ ಕಣ್ಣೀರು ಶಾಹಿ ಅಸ್ಪಷ್ಟ ಪದಗಳು ಹನಿಸುವ ಹನಿ ಹನಿಗೆ ತೇವಗೊಂಡ ಕಾಗದ ಕಾಗದದ ಕನಿಕರ ಹೃದಯಕ್ಕಿಲ್ಲ. ಪ್ಯಾರಿ ಪದ್ಯ ಸಂಕಲನದ ತುಂಬ, ಭಾವಗಳ ಹೊದಿಕೆ ಮಾತ್ರವಲ್ಲ.,ಪ್ರಭಾವ ಬೀರುವ ಅನುಭವ ತುಂಬಿದೆ.ನಾಡಿನ ನೆಲ,ಜಲ,ಗಡಿ,ಭಾನು,ಸ್ನೇಹದ ಕುರುಹು,ಪ್ರೇಮದ ನಿವೇದನೆಗಳು,ಹಪಾ ಹಪಿಯ ಚಾಪುಗಳು,ಜೀವಪರ ತುಡಿತಗಳು,ಓದಿಗೆ ದಕ್ಕುವ ಹೊಳಹುಗಳಿವೆ.ಎ.ಎಸ್.ಮಕಾನದಾರರು ಚಿಕ್ಕಂದಿನಿಂದಲೂ ಹಸಿವು,ಬಡತನ ಸೋಸಿ ಬಂದವರಾಗಿದ್ದರಿಂದ ಬದುಕು ಬರಹದ ಅನುಭವವು ಓದುಗರ ಚಿತ್ರಣ ಬದಲಿಸುತ್ತವೆ.ಇವರ ಕಾವ್ಯದ ಒಳಗಣ್ಣು ಸಾತ್ವಿಕ ವಿಚಾರಗಳ ದಿಟ್ಟಿಸುವ ಅಬಾಬಿಗಳಾಗಿವೆ.ನಿತ್ಯ ಮಗ್ಗಲು ಬದಲಿಸುವ ಮನಸುಗಳಿಗೆ  ಮತಿಯ ಯನ್ನೆಚ್ಚರಿಸುವ ವಾಣಿಯಾಗಿವೆ ಸಾಲುಗಳು.ಶುದ್ಧ ಭಾಷೆ,ತೂಕವುಳ್ಳ ಚಿಕ್ಕ ಚಿಕ್ಕ ಚೆಲ್ನುಡಿಗಳು ಸಹೃದಯರ ಸ್ಪೂರ್ತಿಗೆ ಈ ಪುಸ್ತಕವು ಕಾರಣವಾಗಿದೆ.ಎ.ಎಸ್.ಮಕಾನದಾರರ ಅವಿರತ ಸಾಹಿತ್ಯ ಸೇವೆ ಮುಂದುವರೆಯಲಿ,ಓದುಗರು ಪ್ರೋತ್ಸಾಯಿಸಲಿ ಎಂದು ಅಭಿನಂದಿಸುವೆ. ***       **** ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಪ್ಯಾರಿ ಪದ್ಯ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”ಬೌದ್ಧ ಪೌರ್ಣಮಿ ಕಿರಣಕೆ ಸಾಗರ ಉಕ್ಕಲು ಹಿಂಜರಿಯುತಿದೆ **********************

ಗಜಲ್ Read Post »

ಕಥಾಗುಚ್ಛ

ಮುಸ್ಸಂಜೆ

ಇಬ್ಬರ ನೋಟದಲ್ಲಿ ಅಂದಿನ ಆಕರ್ಷಣೆ ಇರಲಿಲ್ಲ.ಬದಲಿಗೆ ಅಂದಿನಿಂದ ಇಂದಿನವರೆಗೆ ಅಚ್ಚಳಿಯದೆ ಉಳಿದ ಗೆಳೆತನವಿತ್ತು. ಮಾಧವ ಚಾಚಿದ ಕೈಯಲ್ಲಿ ನನ್ನ ಕೈಗಳನ್ನಿಟ್ಟು ಮುಗುಳ್ನಕ್ಕೆ.

ಮುಸ್ಸಂಜೆ Read Post »

You cannot copy content of this page

Scroll to Top