ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಕೊರೆವ ನಡುಕವಂತೆ!

ಕವಿತೆ ಕೊರೆವ ನಡುಕವಂತೆ! ಸುವಿಧಾ ಹಡಿನಬಾಳ ಅವನ್ಯಾವನೊ ತಲೆಕಟ್ಟ ಸ್ವಾಮಿಯಂತೆಸ್ವಯಂ ಘೋಷಿತ ದೇವ ಮಾನವನಂತೆಬಿತ್ತಿದ ಇವರ ತಲೆಯಲಿ ಮೌಢ್ಯದ ಕಂತೆಕಲಿಯುಗದ ಅಂತ್ಯವಂತೆ ಸತ್ಯ ಯುಗದ ಆರಂಭವಂತೆಅದಕೆ ಮಾಡಬೇಕು ಮಕ್ಕಳ ಬಲಿದಾನವಂತೆ ಮುಠ್ಠಾಳ ತಾಯಿಯಿಂದಲೇ ಕುಡಿಗಳ ಕಗ್ಗೊಲೆಯಂತೆಇದಕೆ ತಂದೆಯ ಮೌನ ಸಾಥ್ ಅಂತೆಹೆಣಗಳ ಬಾಯಲಿ ಕಲಶ ಹೂಡಿದ್ದರಂತೆ!!ಮರುದಿನ ಮಕ್ಕಳ ಮರುಹುಟ್ಟಿಗೆ ಕಾದರಂತೆಮರಣೋತ್ತರ ಪರೀಕ್ಷೆಗೆ ಪ್ರತಿರೋಧವಂತೆ ಆ ತಾಯಿ ಬೇರೆ ಗೋಲ್ಡ್ ಮೆಡಲಿಸ್ಟಂತೆ!!!ಮಕ್ಕಳೂ ಡಿಗ್ರಿ ಮೆಟ್ಡಿಲೇರಿದ್ದವಂತೆಪಕ್ಕಾ ಇವರೆಲ್ಲರ ತಲೆಯೆಂಬುದು ಅಜ್ಞಾನದ ಬೊಂತೆಎತ್ತ ಸಾಗುತ್ತಿದೆ ವಿದ್ಯೆ ವಿಜ್ಞಾನ ಎಂಬ ಚಿಂತೆಕೇಳಿದವರ ಎದೆಯಲಿ ಕೊರೆವ ನಡುಕವಂತೆ!! ***************

ಕೊರೆವ ನಡುಕವಂತೆ! Read Post »

ಕಾವ್ಯಯಾನ, ನಿಮ್ಮೊಂದಿಗೆ

ಮೌನ ಹನಿಗಳು

ಕವಿತೆ ಮೌನ ಹನಿಗಳು ಸುಧಾ ಎನ್.ತೇಲ್ಕರ್ ೧ಹೊಂದಿಕೆಯಿರದ ಭಾವಗಳಲಿಮಾತು ಮದ್ದಳೆ ಬಾರಿಸಿತ್ತುಉಸಿರು ಬಿಗಿ ಹಿಡಿದ ಮೌನಸದ್ದಿಲ್ಲದೆ ಪಟ್ಟು ಬಿಗಿದಿತ್ತು ೨ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತುಮಾತಿನ ಸ್ವಾತಿ ಮುತ್ತುಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತುಮಡುಗಟ್ಟಿದ ಹನಿ ಮುತ್ತು ೩ಮಾತಿನ ಚೂರಿ ಮೊನಚಿಗೆಹೃದಯ ರಕ್ತ ಒಸರಿತ್ತುನಿಟ್ಟುಸಿರಿನ ಮೌನವೇಗಾಯಕ್ಕೆ ಮುಲಾಮು ಸವರಿತ್ತು ೪ಮಾತು ಕಲಹದ ಹೊನಲಾಗಿಹರಿದಿತ್ತುಮೌನವೇ ಅದರ ರಭಸಕೆಆಣೆಕಟ್ಟು ಹಾಕಿತ್ತು ೫ಬೆಳ್ಳಿ ನುಡಿಗಳುತುಂಬಿದ್ದ ಖಜಾನೆಗೆಹಾಕಿತ್ತು ಚಿನ್ನದಮೌನದ ಬೀಗ ********************

ಮೌನ ಹನಿಗಳು Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ ಡಾ ಪ್ರೇಮಲತ .ಬಿ. ಪರಿಚಯ ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಕಳೆದ 18 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ.ದಿನಪತ್ರಿಕೆ, ವಾರಪತ್ರಿಕೆ,ಮಾಸಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಲೇಖನಗಳು,ಅಂಕಣ ಬರಹ, ಕಥೆ, ಕವನಗಳು ಮತ್ತು ಪ್ರಭಂದಗಳನ್ನು ಬರೆದಿದ್ದಾರೆ.ತುಷಾರ ಚಿತ್ರಕವನ ಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯ ಬಹುಮಾನ, ಸಿಂಗಾಪೂರ್ ನಡೆಸುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಕವನ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ೨೦೨೦ ರ ಕಹಳೆ ಕಥಾ ಸ್ಪರ್ಧೆಯಲ್ಲಿ ಅವರದೊಂದು ಕಥೆ ಅತ್ಯುತ್ತಮ ಕಥೆಯೆನ್ನುವ ಗೌರವಕ್ಕೆ ಪಾತ್ರವಾಗಿದೆ. ಅವರ ಪ್ರಥಮ ಕಥಾ ಗುಚ್ಛ ’ಛಂದ ಪ್ರಕಾಶನದ’ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಸುಧಾ, ತರಂಗ, ಮಯೂರ, ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ.’ಬಾಯೆಂಬ ಬ್ರಂಹಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ. ಕನ್ನಡಪ್ರೆಸ್.ಕಾಂ ನಲ್ಲಿ ಆರು ತಿಂಗಳ ಕಾಲ ಅಂಕಣ ಬರಹವಾಗಿ ಪ್ರಕಟಗೊಂಡ ಅವರ ಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ’ಕೋವಿಡ್ ಡೈರಿ’ ಎನ್ನುವ ಈ ಬರಹಗಳ ಗುಚ್ಛದ ಈ ಪುಸ್ತಕ ಈ ತಿಂಗಳ ನವಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಟಾಪ್-ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಸೇರಿದೆ.…………………………… ಕವಿತೆ, ಕಥೆಗಳನ್ನು ಯಾಕೆ ಬರೆಯುತ್ತೀರಿ? ಸೃಜನಾತ್ಮಕವಾಗಿ ಯಾವುದೋ ಒಂದು ನಿಮಿಷವನ್ನು ಕಟ್ಟಿಕೊಡುವ ತುಡಿತದಿಂದ. ಅದು ಮನಸ್ಸಿಗೆ ಸಂತೋಷವನ್ನು ನೀಡುವುದರಿಂದ. ಸಾಹಿತ್ಯ, ಕಥೆ, ಕವಿತೆಗಳನ್ನು ಓದುವುದರಿಂದ. ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಯಾವಾಗ ಬೇಕಾದರೂ ಆಗಬಹುದು. ಆದರೆ ಮನಸ್ಸಿನ ಮೇಲೆ ಯಾವುದೋ ಒಂದು ವಿಚಾರ ಮೋಡಕಟ್ಟಿದ ರೀತಿ ಆವರಿಸಿಕೊಂಡ ನಂತರ ಮಳೆಯಾಗಲೇ ಬೇಕು ಎನ್ನುವ ಧಾವಂತದ ರೀತಿಯಲ್ಲಿ ಬರಹಗಳೂ ಹುಟ್ಟಿ ಬಿಡುತ್ತವೆ. ಅಗಲೇ ತೃಪ್ತಿ ಮತ್ತು ಸಮಾಧಾನ. ಆದರೆ ಇದು ನನಗೆ ಬೇಕೆಂದಾಗ ಆಗುವುದಿಲ್ಲ. ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು ? ಕವಿತೆಗಳು ಪ್ರೀತಿ, ಭಾವನೆ ಮತ್ತು ಪರಿಸರದ ಮೇಲೆ ಹೆಚ್ಚಿವೆ. ಪ್ರಚಲಿತ ಸಮಸ್ಯೆಗಳ ಬಗ್ಗೆ ಭಾವನಾತ್ಮಕವಾಗಿ ಬರೆದಿರುವುದು ಕಡಿಮೆ. ಕಾರಣ ಎಂದರೆ ಅಂಥಹ ವಿಚಾರಗಳು ಕವಿತೆಯ ಅಲಂಕಾರ, ರೂಪಕಗಳನ್ನು ನಿರ್ಲ್ಯಕ್ಷಿಸಿ ವಸ್ತುನಿಷ್ಠ ಮತ್ತು ವಾಸ್ತವಕ್ಕೆ ಸಂಭಂದಿಸಿದ ಲೇಖನಗಳೋ ಮತ್ತೊಂದೋ ಆಗಿರುವುದೇ ಹೆಚ್ಚು. ಕಥೆಗಳಲ್ಲಿ ಮನುಷ್ಯನ ಮನೋವ್ಯಾಪಾರದ ಬಗ್ಗೆ ಹೆಚ್ಚು ಬರೆದಿದ್ದೇನೆ. ನನ್ನ ಕಥೆಗಳ ವ್ಯಾಪ್ತಿಯಲ್ಲಿ ಸಮಾಜದ ಶೀತಲ ಕ್ರೌರ್ಯಗಳು ಎದ್ದು ಕಾಣುವಷ್ಟು ಇರುತ್ತವೆ.ಆದರೆ ತೀರ್ಮಾನಗಳಿರುವುದಿಲ್ಲ.ಅತಿಯಾದ ಭಾವುಕತೆ, ಉತ್ಪ್ರೇಕ್ಷೆ ಇರುವುದಿಲ್ಲ. ಆ ಮಟ್ಟಕ್ಕೆ ಮಿತವೂ ಹೌದು.ಪದೇ ಪದೇ ಕಾಡವ ವಿಷಯವೆಂದರೆ ಅದು ಮನುಷ್ಯ ಸಂಬಂಧಗಳ ನಡುವಿನ ಭಾವನಾತ್ಮಕ ಮತ್ತು ವಿನೋದತ್ಮಕ ಮನೋವ್ಯಾಪಾರ. ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಖಂಡಿತ. ಹರೆಯವನ್ನಾದರೂ ಹತ್ತಿಕ್ಕಬಹುದು ಆದರೆ ಬಾಲ್ಯದ ನೆನಪುಗಳದ್ದು ಗಾಢ ಬಣ್ಣಗಳು. ಅವು ಬೇರೆ,ಬೇರೆ ಆಯಾಮಗಳಲ್ಲಿ ಮತ್ತೆ ಡಣಾ ಡಾಳಾಗಿ ಇಣುಕುತ್ತವೆ. ಸಮಕಾಲೀನ ಬದುಕಿನ ಸ್ಪಂದನೆಗಳೊಂದಿಗೆ ಉತ್ತಮ ಸಾಥ್ ನೀಡುತ್ತವೆ. ನೀವು ವೃತ್ತಿಯಿಂದ ದಂತ ವೈದ್ಯರು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದಿಯ ಸದಾ ಜನರೊಂದಿಗೆ ಆತ್ಮೀಯವಾಗಿ ಒಡನಾಡಲು ಅವಕಾಶವಿರುವ ನನ್ನ ಕೆಲಸ ಜನರ ಬದುಕಿನ ಬಗ್ಗೆ ಬರೆಯುವ ಅವಕಾಶವನ್ನು ಕೂಡ ಹಿಗ್ಗಿಸುತ್ತದೆ. ದಿನಕ್ಕೆ ಇಪ್ಪತ್ತೈದು ಹೊಸ ಮುಖಗಳನ್ನು ನೋಡುತ್ತ, ಹೊಸ ಕಥೆಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಅತಿವೃಷ್ಟಿ ಒಮ್ಮೊಮ್ಮೆ ಬರೆಯುವ ಗೀಳನ್ನು ತಗ್ಗಿಸುತ್ತದೇನೋ.ಕೆಲಸಮಾಡುವಾಗ ಇರುವ ಕರ್ತವ್ಯದ ದೃಷ್ಟಿಗೂ, ಬರಹಕ್ಕೆ ಕುಳಿತಾಗ ಬರುವ ಉಮೇದಿಗೂ ಯಾವ ನೇರ ತಾಳೆಯೂ ಇಲ್ಲದಿರಬಹುದು.ಆದರೆ ರೋಗಿಗಳನ್ನು ನಿಭಾಯಿಸಿದಂತೆಯೇ ಕಥೆಯ ಪಾತ್ರಗಳನ್ನು ಕೂಡ ನಿಭಾಯಿಸಲು ಪರೋಕ್ಷವಾದ ಪ್ರಭಾವ ಇದ್ದಿರಬಹುದು. ಬರೇ ಮೇಜು, ಕುರ್ಚಿ, ಕಂಪ್ಯೂಟರಿನ ನಡುವೆ ಕುಳಿತವರು ಕೂಡ ಅದ್ಭತವಾದ ಕಥೆಗಳನ್ನು ಹೆಣೆಯುವುದನ್ನು ಗಮನಿಸಿದ್ದೇನೆ.ಹಾಗಾಗಿ ಯಾರು ಬೇಕಾದರೂ ಬರೆಯಬಲ್ಲರು ಅನ್ನೋದರಲ್ಲಿ ಸಂಶಯವಿಲ್ಲ.ವೃತ್ತ ಪರಿಜ್ಞಾನ ಮತ್ತು ಬರಹದ ಭಾವುಕಥೆಯ ಜೊತೆಗೆ ವೃತ್ತಿಯ ಪ್ರಭಾವದಿಂದ ಬರುವ ಸ್ಥಿತಪ್ರಜ್ಞತೆಯನ್ನಂತೂ ನನ್ನ ಬರಹದಲ್ಲಿ ಖಂಡಿತ ನೋಡಬಹುದು. ಕೆಲವೊಮ್ಮೆ ಅದನ್ನು ಕಳೆದು ಬರೆಯುವುದು ಕೂಡ ತೊಡಕಾಗಿದೆಯೆನ್ನಬಹುದು. ವೃತ್ತಿ ಹಾಗೂ ಸೃಜನಶೀಲತೆ ಮತ್ತು ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು? ದಿನದಲ್ಲಿ ಎಲ್ಲರಿಗೂ ಇರುವ ಅವೇ ೨೪ ಗಂಟೆಗಳನ್ನು ಪ್ರೀತಿಪಾತ್ರವಾದ ಮೂರಕ್ಕೂ ಹಂಚಲು ಇರುವ ಒಂದೇ ವಿಧಾನ ಎಂದರೆ, ಬರೇ ಎರಡರಲ್ಲಿ ಅಥವಾ ಒಂದರಲ್ಲೇ ತೊಡಗಿದವರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸಮಾಡುವುದು. ಜಾಣತನದಿಂದ ಸಮಯ ಪೋಲಾಗದಂತೆ ನೋಡಿಕೊಳ್ಳುವುದು. ಅಲಂಕಾರ, ಕಾಡು ಹರಟೆ, ಗಾಸಿಪ್, ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದು ಏಕಾಂತದ ಸಮಯವನ್ನು ಉಳಿಸಿಕೊಳ್ಳುವುದು. ಕೆಲಸಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಅತಿಯಾದ ನಿಯಮಗಳನ್ನು ಹಾಕಿಕೊಳ್ಳದೆ, ಅತಿಯಾಗಿ ಯಾವುದನ್ನೂ ಹಚ್ಚಿಕೊಳ್ಳದೆ ನಮ್ಮತನವನ್ನು ಕಾಪಾಡಿಕೊಳ್ಳುವ ಉಪಾಯಗಳನ್ನು ಪಾಲಿಸುವುದು.ಮಲ್ಟಿ ಟಾಸ್ಕಿಂಗ್ ಮೊದಲಿಂದಲೂ ಇತ್ತು.ಕಾಲ ಕ್ರಮೇಣ ಬದುಕು ಅವುಗಳನ್ನು ನಿಭಾಯಿಸುವ ಕಲೆಯನ್ನು ಕಲಿಸಿತು ಎನ್ನಬಹುದು. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಅದೊಂದು ಅವಿರತ ಚಕ್ರ. ಹಿಂದೊಮ್ಮೆ ಏಕತ್ವದ ಸಂಕುಚಿತ ಲೋಕವಿತ್ತು. ಅದು ಜಾಗತೀಕರಣದೊಂದಿಗೆ ಬಹುತ್ವಕ್ಕೆ ತೆರೆದುಕೊಂಡಿತು. ಅದಕ್ಕೆ ಬಹಳ ಸಮಯ ಹಿಡಿಯಿತು. ಅದು ಪೂರ್ಣವಾಗುವ ಮೊದಲೇ ನ್ಯಾಷನಲಿಸ್ಟಿಕ್ ಮೂವ್ ಮೆಂಟ್ ಗಳು ಶುರುವಾಗಿವೆ. ಅದು ಪೂರ್ಣವಾಗುವ ಮಾತಂತು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಈ ಪ್ರಪಂಚ ವೈವಿಧ್ಯಮಯ. ಅದರಲ್ಲು ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ಪ್ರಪಂಚ ಈಗ ಮುಷ್ಠಿಗಾತ್ರಕ್ಕೆ ತಿರುಗಿದೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ಒಡನಾಟಗಳು, ವಾಣಿಜ್ಯ ವಿಚಾರಗಳು,ಜಾಗತಿಕ ಮಾರುಕಟ್ಟೆ , ಪ್ರವಾಸ, ಮಾಹಿತಿ ತಂತ್ರಜ್ಞಾನ ಇವೆಲ್ಲವೂ ಅಗಾಧವಾಗಿ ಜಾಗತಿಕ ಮಟ್ಟದಲ್ಲಿ ಬೆಳೆದಿರವ ಈ ಕಾಲದಲ್ಲಿ ಒಂದು ದೇಶದ ಜನರು ಹಲವು ದೇಶಗಳಲ್ಲಿ ಹಂಚಿಹೋಗಿದ್ದಾರೆ. ಇವೆಲ್ಲ ಸಾವಿರಾರು ವರ್ಷಗಳ ಕಾಲ ನಡೆದ ಸಂಘರ್ಷಗಳ, ಪರಿವರ್ತನೆಗಳ ಪರಿಣಾಮವೂ ಹೌದು. ಹಾಗಿರುವಾಗ ಅದನ್ನೆಲ್ಲ ಇಲ್ಲವಾಗಿಸಿ ಏಕತ್ವ ಅಥವಾ ಸ್ವ-ಹಿರಿಮೆಯ ಸಂಕುಚಿತ ಲೋಕಕ್ಕೆ ಹಿಂತಿರುಗಿ ಹೋಗುವ ಪ್ರಯತ್ನ ಅಪಹಾಸ್ಯದ್ದು. ಸ್ವಾರ್ಥಕ್ಕಾಗಿ ದೇಶವನ್ನು ಆಳವಾಗಿ ಒಡೆದು ಒಂದು ಬಣದ ಶ್ರೇಷ್ಠತೆಯನ್ನು ಮಾತ್ರ ಮೆರೆಸಲು ಮಾಡುವ ಪ್ರಯತ್ನ ಅಮೆರಿಕಾದಲ್ಲಾದಂತಹ ಅರಾಜಕತೆಯನ್ನು, ಅಧೀರತೆಯನ್ನು ಸೃಷ್ಠಿಸಬಲ್ಲದು.ಅದನ್ನು ಹೊರಗಿಟ್ಟು ಇಡೀ ದೇಶ ಒಂದು ಎನ್ನುವ ಒಗ್ಗಟ್ಟಿನ ಭಾವಕ್ಕೆ ಪುಷ್ಟಿ ಕೊಟ್ಟು ದೇಶದ ಏಳ್ಗೆಯ ಬಗ್ಗೆ ಯೋಚಿಸುವ ರಾಜಕಾರಣದ ಅಗತ್ಯವಿದೆ.ಪ್ರಪಂಚವೆಂಬ ಮನೆಯಲ್ಲಿ ಮನಸ್ಸನ್ನು ತೆರೆದಿಟ್ಟು ಬದುಕುವಲ್ಲಿನ ವೈವಿಧ್ಯತೆ, ವೈರುದ್ಧ್ಯತೆ, ಸಾಮ್ಯತೆ ಸೃಜನಶೀಲ ಮನಸ್ಸುಗಳ ವಿಕಸನಕ್ಕೆ ಅತ್ಯಗತ್ಯ. ಸ್ವಾರ್ಥದ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಇದ್ದೆ ಇರುತ್ತದೆ. ದೊಡ್ಡ ಪ್ರಜಾ ಪ್ರಭುತ್ವದ ದೇಶಗಳಲ್ಲು ಸಹ. ಅದನ್ನು ಹಿತ ಮಿತವಾಗಿಡುವಲ್ಲಿ ಎಲ್ಲೆಡೆಯ ರಾಜಕೀಯ ಹೋರಾಟಗಳು ಸಮತೋಲನ ಸಾಧಿಸಬೇಕಷ್ಟೆ. ಎಡ-ಬಲಗಳ ತಿಕ್ಕಾಟ ಅಗತ್ಯವಿಲ್ಲದ ಸ್ವಾರ್ಥದ ರಾಜಕೀಯ ಮಾತ್ರ. ದೇಶ ಭಕ್ತಿಯೆನ್ನುವುದು ಎಡ-ಬಲಗಳ ರಾಜಕೀಯ ದಿಂದ ಹೊರತಾದ ವಿಚಾರ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ದೇವರನ್ನು ನಂಬುತ್ತೇನೆ. ನಾಸ್ತಿಕಳೇನಲ್ಲ. ಆದರೆ ಧರ್ಮದ ವಿಚಾರ ಬಂದಾಗ ಸಂಪ್ರದಾಯಸ್ಥಳಲ್ಲ. ಬೇರೆಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಆ ಬಗ್ಗೆ ನಾನು ಸಹಿಷ್ಣು. ದ್ವೇಷವನ್ನು ಬಿತ್ತುವ ನಂಜಿನ ಮಾತುಗಳು ನನಗೆ ಸಹ್ಯವಲ್ಲ.ನನಗೆ ಬೇಕಾದ ರೀತಿಯಲ್ಲಿ ಬದುಕುವ ಹಿಂದೂ ಆಗಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರ ಭಾವ ವೈಶಾಲ್ಯತೆಯ ಬಗ್ಗೆ ಪ್ರೀತಿಯಿದೆ. ಶಾಂತಿಯುತವಾಗಿ ಬದುಕಬೇಕಿದ್ದಲ್ಲಿ ನಾವು ಇತರರ ಬಗ್ಗೆ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ.ಹಾಗೆ ಹಿಂದೂ ಧರ್ಮಕ್ಕೆ ’ಅಸಹಿಷ್ಣು’ ಎನ್ನುವ ಹಣೆ ಪಟ್ಟಿಯನ್ನು ಅಂಟಿಸುವ ಕೆಲಸ ನಡೆಯದಿರಲಿ.ಅವರವರ ಧರ್ಮ ಅವರವರಿಗೆ ದೊಡ್ಡದು. ಇನ್ನೊಂದು ಧರ್ಮವನ್ನು ಗೌರವಿಸದ ಎಲ್ಲರೂ ತಪ್ಪಿತಸ್ಥರೇ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಇದು ಜಾಗತಿಕ ಯುಗ. ತೊರೆ-ಹಳ್ಳಗಳು ಹರಿದು ನದಿಯಾಗಿರುವ ಕಾಲ. ಅದರಲ್ಲಿ ರಾಜಕೀಯದ , ಸ್ವಾರ್ಥದ ಕಶ್ಮಲಗಳನ್ನು ಸೇರಿಸದಿದ್ದಲ್ಲಿ ಅದು ಹಲವು ಜೀವಗಳನ್ನು, ಸೃಜನಶೀಲತೆಯನ್ನು ಸಮೃದ್ಧವಾಗಿ ಬೆಳೆಸಬಲ್ಲದು. ಸಾಂಸ್ಕೃತಿಕ ಅರಿವು-ಆಳಗಳು ಹಿಗ್ಗಿಸಬಲ್ಲವು.ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ. ಅದು ತಿಳಿಗೊಳ್ಳಬೇಕು. ಹೃದಯ ವೈಶಾಲ್ಯತೆ ಹೆಚ್ಚಾಗಬೇಕು.ಇವೆಲ್ಲ ಮೊದಲಿಂದಲೂ ಇದ್ದವಾದರೂ ಈಗೀಗ ’ಅತಿ ’ ಎನ್ನುವ ಮಟ್ಟಕ್ಕೆ ಬೆಳೆಯುತ್ತಿದೆ. ಒಳ್ಳೆಯ ವಿಚಾರ ಎಂದರೆ ಇವೆಲ್ಲದರಿಂದ ದೂರವಿರುವ, ಮುಕ್ತರಾಗಿರುವ ಜನರೂ ಇರುವುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಮೇಲಿನ ಮಾತೇ ಅನ್ವಯವಾಗುತ್ತದೆ. ಅದರಲ್ಲೂ ಹೊಸತಿನ ನಿರೀಕ್ಷೆಯಲ್ಲಿ ಸದಾ ತುಡಿಯುವ ಕನ್ನಡ ಸಾಹಿತ್ಯಕ್ಕೆ ದಡ ಕಟ್ಟಬಾರದು. ತಮಗೆ ತಿಳಿದ, ತಮ್ಮೂರಿನ, ತಮ್ಮ ಪ್ರಪಂಚದ ಬಗ್ಗೆ ಬರೆದದ್ದಷ್ಟೆ ಸಾಹಿತ್ಯ ಆಗಬಾರದು. ರಾಜಕೀಯ ಘೋಷಣೆಗಳು ಸಾಹಿತ್ಯಕ್ಕೆ ಅಗತ್ಯವಿಲ್ಲ. ಅರಿವೇ ಇಲ್ಲದೆ ಎಡ-ಬಲ ಎಂದು ಹಣೆಪಟ್ಟಿ ಹೊರುವ ಭಯದಲ್ಲಿ ಹಲವರು ವೈಚಾರಿಕ ಸಾಹಿತ್ಯರಚನೆಯನ್ನು ಮಾಡಲು ಹಿಂಜರಿಯಬೇಕಾದ ಕಾಲ ಘಟ್ಟವಿದು. ಇದು ನಿಜಕ್ಕೂ ವಿಶಾದನೀಯ.ವಿಮರ್ಶಕನೊಬ್ಬ ’ನಮ್ಮೂರಿನ ಬರಹಗಾರ” ಎಂಬ ಮೊಳ ಹಿಡಿದು ಸಾಹಿತ್ಯವನ್ನು ಅಳೆವಾಗ ಅತ್ಯಂತ ಬೇಸರವಾಗುತ್ತದೆ. ಪ್ರಾಂತೀಯತೆಯ ಸೊಗಡು ಸುಂದರವಾದರೂ ಮುಖ್ಯವಾಹಿನಿಯಲ್ಲಿ ಸೇರಿದಾಗ ಬರಹಗಳನ್ನು ಅವುಗಳ ತಂತ್ರ, ಸರಾಗತೆ, ವೈಚಾರಿಕತೆ, ಭಿನ್ನತೆ, ಪ್ರಾಮಾಣಿಕತೆ, ಕುಶಲತೆ, ನವಿರು, ಸೂಕ್ಷ್ಮತೆ ಮತ್ತು ಹೊಸತನ ಇನ್ನೂ ಮುಂತಾದ ಅಳತೆಗೋಲಿನಿಂದ ಅಳೆಯುವುದು ಸಾಹಿತ್ಯದ ಬೆಳವಣಿಗೆಗೆ ಅಗತ್ಯವೆನಿಸುತ್ತದೆ.ನಿಜವಾದ ವಿಮರ್ಶಾ ಸಾಹಿತ್ಯವೂ ವಿರಮಿಸಿ ಕುಳಿತಿರುವ ಕಾಲವಿದು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಾನು ಅನಿವಾಸಿ ಭಾರತೀಯಳಾದ ಕಾರಣ, ಭಾರತದ ಚಲನೆಯನ್ನು ಅದರದ್ದೇ ಆದ ಚೌಕಟ್ಟಿನಿಂದ ಹೊರಗೆ ನಿಂತು ನೋಡಬಲ್ಲೆ.ಭಾತರ ಎಂತಹ ಅಗಾಧ ಮತ್ತು ಹೇಗೆ ಇತರೆ ದೇಶಗಳಿಗಿಂತ ಭಿನ್ನ ಎಂಬುದನ್ನು ಕಾಣಬಲ್ಲೆ.ತನ್ನದೇ ಸುಳಿಗಳ ಸೆಳೆತಕ್ಕೆ ಸಿಲುಕಿ ಚಲಿಸುವ ದೇಶ ನಮ್ಮದು. ಅದರ ಶಕ್ತಿ ಅಗಾಧವಾದ್ದು. ಹಿಂದೂಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಏಕೈಕ ದೇಶವಾಗಿ ಭಾರತ ನೂರಾರು ಭಾಷೆ, ಸಂಸ್ಕೃತಿಗಳನ್ನು ಒಡಲಲ್ಲಿಟ್ಟುಕೊಂಡು ಸದಾ ಚೈತನ್ಯಮಯಿಯಾಗಿ ಮಿಡಿಯುವಂತದ್ದು. ಅಪಾರವಾದ ಜನಶಕ್ತಿಯನ್ನು ಪಡೆದ ಶಕ್ತಿಶಾಲಿ ದೇಶವಿದು. ಪ್ರತಿಭೆಗಂತೂ ಇಲ್ಲಿ ಕೊರತೆಯೇ ಇಲ್ಲ.ಆದರೆ ವ್ಯವಸ್ಥೆಗಳು ಒಟ್ಟಾಗಿ ದುಡಿಯಲು ಹೆಣಗುತ್ತವೆ. ಅತಿಯಾದ ಧಾರ್ಮಿಕತೆ ನಮ್ಮ ದೇಶದ ಅತ್ಯಂತ ದೊಡ್ಡ ತೊಡಕಾಗಿದೆ. ಅದರಿಂದ ಹೊರತಾಗಿ ಜಗತ್ತನ್ನು ನೋಡಲು ಬಹಳ ಜನರು ಅಶಕ್ತರಾಗುತ್ತಾರೆ. ಕಾನೂನು, ಪೋಲೀಸರು ಮತ್ತು ಭದ್ರತೆ ಇವು ಜನಸಾಮಾನ್ಯರ ಪರವಾಗಿ ಕೆಲಸಮಾಡಬೇಕಾಗಿರುವ ಅತ್ಯಂತ ಮುಖ್ಯ ವಿಚಾರಗಳು. ಅವುಗಳನ್ನು ಭದ್ರಪಡಿಸುವ,ಎಲ್ಲರಿಗೂ ಸಮಾನ ಸವಲತ್ತನ್ನು ನೀಡಬಲ್ಲ ರಾಜಕಾರಣ ಅತ್ಯಂತ ಮುಖ್ಯ.ಇಂತಹ ದೊಡ್ಡ ದೇಶ ಸಾಧ್ಯವಾದಷ್ಟು ಒಟ್ಟಾಗಿ ತುಡಿಯಬೇಕೆಂದರೆ ಒಗ್ಗಟ್ಟಿನ ಮಂತ್ರ ಪಠಣೆ ಅತ್ಯಂತ ಮುಖ್ಯ. ಒಡಕಿನ ಮಾತುಗಳು ಈ ದೇಶದ ಚಲನೆಗೆ ಮಾರಕ. ಕಾಲಚಕ್ರದ ಹೊಡೆತಕ್ಕೆ ಸಿಕ್ಕ ಭಾರತ ನಗರ ಪ್ರದೇಶಗಳಲ್ಲಿ ಬಹಳ ಬದಲಾಗುತ್ತ ನಡೆಯುತ್ತಿದೆ ಎನ್ನುವುದು ಕೂಡ ಸುಳ್ಳಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯ ನನ್ನ ಅಂದಂದಿನ ತೃಪ್ತಿ.ಇನ್ನೂ ಬರೆಯಬೇಕನ್ನುವ ಹಂಬಲವಿದೆ. ಅದಕ್ಕಿಂತ ಹೆಚ್ಚೇನು ಕನಸೇನಿಲ್ಲ.ಸವಾಲುಗಳಿಗೆ ತೆರೆದುಕೊಂಡು ಸೃಜನಶೀಲವಾದದ್ದೇನನ್ನೋ ರಚಿಸಬೇಕೆನ್ನುವ ತುಡಿತ ಇರುವವರೆಗೆ ಸಾಹಿತ್ಯ ರಚನೆ ನಡೆಯುತ್ತಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ನಾನು ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡವಳಲ್ಲ.ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ವಶೀಲಿಯಂತೂ

Read Post »

ಕಾವ್ಯಯಾನ

ಇತಿಹಾಸ ಬರೆಯುತ್ತೇವೆ ನಾವು

ಕವಿತೆ ಇತಿಹಾಸ ಬರೆಯುತ್ತೇವೆ ನಾವು ಅಲ್ಲಾಗಿರಿರಾಜ್ ಕನಕಗಿರಿ ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ ಹೊಲ ಗದ್ದೆಗಳ ಸಾಲು ಸಾಲಿನಲ್ಲಿ.ಒಂದೊಂದು ಬೀಜದ ಹೆಸರಿನಲ್ಲಿ. ನೀವು ಸುಮ್ಮನೆ ಮುಳ್ಳಿನ ಕಥೆ ಹೇಳಬೇಡಿ.ಅಲ್ಲೊಂದು ನಗುವ ಹೂವಿನ ಬದುಕಿದೆ ಮರೆಯಬೇಡಿ.ಒಂದೇ ಒಂದು ಸಾರೆ ನಿಮ್ಮ ಮೈ ಮನಸ್ಸಿಗೊಮ್ಮೆ ಕೇಳಿನೋಡಿ.ನೀವು ಉಂಡ ಅನ್ನ ಯಾರದೆಂದು?ಅಸ್ಥಿಪಂಜರಗಳ ಕೈಯಿಂದ ಬರೆಸಿದ ಕಾಯ್ದೆ ಏನೆಂದು. ರಾಜಿಯಾಗದೆ ರಾಜಧಾನಿಯ ಗಡಿ ಮುಚ್ಚಿಕೊಂಡಿದ್ದೀರಿ.ಹೇಸಿಗೆ ಆಗುತ್ತಿದೆ ನಮಗೆ, ನಮ್ಮದೇ ಮತದಾನಕ್ಕೆ. ಸರ್ಕಾರ ಎಂದರೆ ನೋಟು ತಿಂದು ಮಲಗುವುದಿಲ್ಲ ನೆನಪಿರಲಿ.ರೈತರು ನಾವು ಇನ್ನೂ ನೇಗಿಲು ಹೊತ್ತಿದ್ದೇವೆ ಶಿಲುಬೆಯನ್ನಲ್ಲ. ನಾವು ಇಂದಲ್ಲ ನಾಳೆ ಇತಿಹಾಸ ಬರೆಯುತ್ತೇವೆ.ಹೊಲ ಗದ್ದೆಗಳನ್ನು ನೆತ್ತರಿನಿಂದ ಹಸಿಮಾಡಿ.ಸಾಲು ಸಾಲಿನಲ್ಲಿ ಒಂದೊಂದು ಬೀಜದ ಹೆಸರಿನಲ್ಲಿ.ನಮ್ಮ ಅನ್ನ ಉಂಡ ನಿಮ್ಮ ನಾಲಿಗೆ ಓದಿ ಪಾವನವಾಗಲಿ. ಇತಿಹಾಸ ಬರೆಯುತ್ತೇವೆ ನಾವುಇಂದಲ್ಲ ನಾಳೆ… ಇಂದಲ್ಲ ನಾಳೆ.ಆಗ ನಿಮಗೆ ಅರಿವಾಗಬಹುದು.ಅನ್ನದಾತನ ಸಂಕಟ ಸಾವು ಯಾಕೆಂದು! ****************************

ಇತಿಹಾಸ ಬರೆಯುತ್ತೇವೆ ನಾವು Read Post »

ಕಾವ್ಯಯಾನ

ಮೌನದೋಣಿಯಲಿ ಮನ್ಮಥನ ಹುಟ್ಟು

ಕವಿತೆ ಮೌನದೋಣಿಯಲಿ ಮನ್ಮಥನ ಹುಟ್ಟು ಬೆಂಶ್ರೀ ರವೀಂದ್ರ ಅವಳುನಸು ನಗುತ್ತಲೆ ಒಳಗೆ ಕರೆದುಕೊಂಡಳುನಸುಬೆಳಕಿನಲಿ ಮಂದಹಾಸದ ಚಿಮ್ಮುನವಿರಾಗಿ ಹರಡಿಕೊಂಡ ಸುಗಂಧಚೆಲ್ಲಿದ್ದ ಮಲ್ಲಿಗೆಯ ಮುಗುಳುತೆಳುಪರದೆಯ ಸುಂಯಾಟದ ನುಲಿವುಕಿರುಗೆಜ್ಜೆಯ ಕಿಣಕಿಣದಲಿ ಬೆರೆತಿತ್ತು ಅವಳುಕಣಕಣವ ಮುಚ್ಚಿಡದೆ ಎಲ್ಲವನೂ ತೆರೆದಳುಹಾಲು ಜೇನು ಚೆಲ್ಲಾಡಿ ಹೋಯಿತುಸಂಕೋಚ ಬಿಗುವಿಲ್ಲದ ಸಮ್ಮಾನ ಸುಮ್ಮಾನಮೌನದೋಣಿಯಲಿ ಮನ್ಮಥನ ಹುಟ್ಟುಸುಖಸಾಗರದಿ ಅನಂತ ಪಯಣ ಹಣೆಯಲಿ ಮಡುಗಟ್ಟಿದ ಬೆವರಬನಿಜಾರಿ ಕಣ್ಣೊಳಗೆ ಒಗರ ರುಚಿಪಟಪಟನೆ ಆಡಿದ ರೆಪ್ಪೆಯೊಳಗೆಬೆಳಕು ಮುದುಡಿದ ಮಂಜು ನಕ್ಷತ್ರಗಳು ಕಣ್ಣು ಹೊಡೆದವಲ್ಲಾ!ಬುವಿಗೇನು!!ಆದರೆ ಇಂದು ಹುಣ್ಣಿಮೆನಕ್ಷತ್ರಗಳು ಕಾಣುವುದಿಲ್ಲಅವುಗಳದು ಕಣ್ಣುಮುಚ್ಚಾಲೆಯಾಟ. ಸಮುದ್ರದ ಭರತವು ಏರುತ್ತಿದೆಇಂದು ಚಂದ್ರನಿಗೆ ಸೋಬಾನ ಗೀತದೇವತೆಗಳಿಗೆ ಸೋಮಪಾನ ; ಸವಿಯೂಟ ಹಿಂದೆಂದೂ ಅನುಭವಿಸದ ಅನುಭವಉದ್ರೇಕದೇರಿಳಿತ ತಣಿವಂತ ತಂಪುಉಚ್ವಾಸ ನಿಶ್ವಾಸ ಪ್ರಕೃತಿಯ ಜಾಲಬೆಸೆದಬಂಧ ಅವನಿಗೀಗ ಮಂಪರು ಮಂಪರುಸೆರಗಿನಲಿ ಬೀಸಿ ಗಾಳಿ ; ಮುಖವರಸಿಹೂ ಮುತ್ತನಿತ್ತವಳಿಗೆಕಣ್ಣಾಲಿಗಳು ತುಂಬಿದ್ದವು; ಕನಸು ಒಡೆದಿತ್ತುಬಿಕ್ಕು ಬಿಕ್ಕುಗಳು ಮರಮರಳಿದಾಗಅದೆ ಸೆರಗಿನಲಿ ಬಾಯಿ ಮುಚ್ಚಿಕೊಂಡಳುನಿದ್ದೆ ಕೆಡಬಾರದಲ್ಲ. ಅವಳಿಗೀಗ ಮಂಪರು ; ಯಾರೋ ಎದೆ ಬಗೆಯುತ್ತಿದ್ದಾರೆಹುದುಗಿದ ಚಿತ್ರಗಳ ಮರುಕಳಿಕೆಮುಸುಕು ಮಸುಕಾದ ಮೆರವಣಿಗೆಮತ್ತೆಲ್ಲೋಕನಸುಗಳು ಪಟಪಟನೆ ಒಡೆಯುತ್ತಿರುವ ಕ್ಷೀಣದನಿ…ಹತ್ತಿರ ಹತ್ತಿರ ಬಂದು ಆಸ್ಪೋಟಕಿವಿ ತಮಟೆ ಹರಿದುಇವಳುಬೆವರಿನ ಸಾಗರದಲಿ ತೇಲತೊಡಗಿದಳು. *************..

ಮೌನದೋಣಿಯಲಿ ಮನ್ಮಥನ ಹುಟ್ಟು Read Post »

ಕಾವ್ಯಯಾನ

ಪ್ರಿಯಂವದಾ

ಕವಿತೆ ಪ್ರಿಯಂವದಾ ರಘೋತ್ತಮ ಹೊ.ಬ ಗೆಳೆತಿಹೇಗಿದ್ದೀಯಇಂದು ನೀನು ಜಾರಿಗೊಂಡದಿನವಂತೆನಮ್ಮಿಬ್ಬರ ಭೇಟಿಯಮಧುರ ಕ್ಷಣವಂತೆಕ್ರಿ.ಪೂ.185ರಲ್ಲಿ ನಿನ್ನಹತ್ತಿಕ್ಕಿ ಸ್ಮೃತಿಜಾರಿಗೊಂಡಿತ್ತಂತೆಕ್ರಿ.ಶ 400ರ ಸಮಯದಲ್ಲಿನನ್ನ ವಿರುದ್ಧಅಸ್ಪೃಶ್ಯತೆಯೂಜಾರಿಗೊಂಡಿತಂತೆಅದೆಲ್ಲಿ ಅಡಗಿದ್ದೆನೀನುನಿನ್ನ ಮಧುರ ನೋಟವಚೆಲ್ಲಿಕರುಣೆಯ ಹೃದಯತುಂಬಿ ಸಮಾನತೆ, ಸ್ವಾತಂತ್ರ್ಯಸಹೋದರತೆ, ನ್ಯಾಯನಿನ್ನ ಹೃದಯದನಾಲ್ಕು ಕವಾಟಗಳಂತೆಅಲ್ಲೆಲ್ಲನನ್ನದೆ ಹೆಸರಿನಪ್ರೀತಿ ಕೆಂಬಣ್ಣವಂತೆ!ಮೂಲಭೂತ ಹಕ್ಕುಗಳಗುಲಾಬಿ ಹೂ ಹಿಡಿದುಅದೆಲ್ಲಿ ಅಡಗಿದ್ದೆಮೂಲಭೂತ ಕರ್ತವ್ಯಗಳಸವಿಜೇನ ನುಡಿಯತಅದೆಲ್ಲಿ ಕುಳಿತಿದ್ದೆಸಂಸತ್ತು, ಕಾರ್ಯಾಂಗನ್ಯಾಯಾಂಗ, ಶಾಸಕಾಂಗಏನೆಲ್ಲ ಅಂದ ನಿನ್ನಲಿ? ಮಹಿಳೆಯರು, ಮಕ್ಕಳುಪರಿಶಿಷ್ಟರು, ಬುಡಕಟ್ಟು ಮಂದಿಎಲ್ಲರಿಗೂ ಕಾನೂನಿನರಕ್ಷಣೆಯ ಬಿಂದಿದೌರ್ಜನ್ಯನಿನ್ನ ಮುಂದೆ ಚಿಂದಿಏನ ಹೇಳಿದರೂ ಕಡಿಮೆಯೇನಿನ್ನ ತಂದಜೈಭೀಮ ತಂದೆ-ಯ ಬಗ್ಗೆ ಆತಭಾರತಾಂಬೆಯ ವರಪುತ್ರಬರೆದು ಕುಳಿತನು ನಿನ್ನ ಆಶಯತಿಳಿಸುತ್ತ ನೂರಾರು ಜನರಿಗೆಪತ್ರ ಪತ್ರಕ್ಷಮಿಸು, ನಾನು ನಿನಗೆ ಬರೆದಇದುಪ್ರೇಮ ಪತ್ರ ನಿನ್ನ ಉತ್ತರಏನೇ ಬರಲಿ ಗೆಳತಿನಾಳೆ ನೀನುಜಾರಿಗೊಂಡ ದಿನ ಒಡತಿಗೆಳತಿಮರೆಯದಿರು ನಿನ್ನನೆನಪಲ್ಲಿ ಆಶ್ರಯದಲ್ಲಿನಾನು ಸದಾಕಾಪಾಡುತಿರು ನನ್ನಎಂದೆಂದಿಗೂ ಮುದ್ದುಪ್ರಿಯಂವದಾ… *************************

ಪ್ರಿಯಂವದಾ Read Post »

ಇತರೆ, ಜೀವನ

ಆತ್ಮ ವಿಶ್ವಾಸವಿರಲಿ…

ಲೇಖನ ಆತ್ಮ ವಿಶ್ವಾಸವಿರಲಿ… ರಶ್ಮಿ ಹೆಗಡೆ ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ  ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ. ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ ಕೆಲವೇ ಕೆಲವು ಸೈನಿಕರೂ ಜೀವದ ಆಸೆಗಾಗಿ ರಣರಂಗದಿಂದ ದೂರ ಸರಿದರು.ಸೋಲನ್ನೇ ಅರಿಯದ ಬ್ರೂಸ್ ಆತ್ಮಸ್ಥೈರ್ಯ ಕಳೆದುಕೊಂಡು ಕಂಗಾಲಾದ. ಜೀವ ಉಳಿಸಿಕೊಳ್ಳಲು ತಲೆಮರೆಸಿಕೊಂಡ. ಗುಡ್ಡ ಬೆಟ್ಟ, ಕಣಿವೆಗಳಲ್ಲಿ ಏಕಾಂಗಿಯಾಗಿ ಅಲೆಯತೊಡಗಿದ.ಹೀಗಿದ್ದಾಗ ಒಮ್ಮೆ ಜೋರಾಗಿ ಮಳೆ ಸುರಿಯಲಾರಂಭಿಸಲು ಬ್ರೂಸ್ ಒಂದು ಗುಹೆಯಲ್ಲಿ ಬಂದು ಆಶ್ರಯ ಪಡೆದ. ನಡೆದಿದ್ದನ್ನು ಮೆಲುಕುಹಾಕುತ್ತ ಕುಳಿತಿದ್ದ ಬ್ರೂಸ್ ನನ್ನು ನಾಜೂಕಾಗಿ ಬಲೆ ನೇಯುತ್ತಿರುವ ಪುಟ್ಟ ಜೇಡವೊಂದು ಆಕರ್ಷಿಸಿತು.ನೇಯುವಾಗ ಪ್ರತಿಬಾರಿಯೂ ವಿಫಲಗೊಂಡು ಬೀಳುತ್ತಿದ್ದ ಜೇಡ ಮತ್ತೆ ಮೇಲೇರುತ್ತಿತ್ತು.  ಪ್ರತಿಬಾರಿ ಬಿದ್ದಾಗಲೂ ಮೊದಲಿಗಿಂತ ಹೆಚ್ಚಿನ ಎಚ್ಚರಿಕೆವಹಿಸುತ್ತಿದ್ದ ಜೇಡ ಕೊನೆಗೂ ಬಲೆ ನೇಯುವುದರಲ್ಲಿ  ಯಶಸ್ವಿಯಾಯಿತು. ಸೋಲಿಗೆ ಹೆದರದೆ,ಆತ್ಮವಿಶ್ವಾಸ ತೊರೆಯದೆ,ಸತತವಾಗಿ ಪ್ರಯತ್ನಿಸಿ,ಸೋಲನ್ನೇ ಸೋಲಿಸಿದ ಜೇಡದ ಆತ್ಮಬಲ ಹಾಗೂ ಕಾರ್ಯವೈಖರಿ ಬ್ರೂಸ್  ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಬ್ರೂಸ್ ತನ್ನ ವೈಫಲ್ಯಕ್ಕೆ ತಾನೇ ಸವಾಲೊಡ್ಡಿದ. ಅಷ್ಟು ಚಿಕ್ಕ ಕೀಟವೇ ಸೋಲನೊಪ್ಪಿಕೊಳ್ಳದಿರುವಾಗ ತಾನೇಕೆ ತನ್ನ ಪತನವನ್ನು ಒಪ್ಪಿಕೊಳ್ಳಲಿ ಎಂದು ಯೋಚಿಸುತ್ತ,ಹೊಸ ಹುರುಪಿನೊಂದಿಗೆ ಹೊಸ ವ್ಯಕ್ತಿಯಾಗಿ ಗುಹೆಯನ್ನು ತೊರೆದ. ಮತ್ತೆ ಸೈನ್ಯವನ್ನು ಕಟ್ಟಲು ನಿರ್ಧರಿಸಿ ಜನರನ್ನು ಸೇರಿಸಿದ. ಮೊದಲಿಗಿಂತ ಹೆಚ್ಚು ಬಲಿಷ್ಠವಾದ ಸೈನ್ಯ ಕಟ್ಟಿದ. ಮತ್ತದೇ ಬ್ರಿಟಿಷ್ ದೊರೆಯೊಂದಿಗೆ ಹೋರಾಡಿ ತನ್ನ ರಾಜ್ಯವನ್ನು ಮರಳಿ ಪಡೆದ. ಬ್ರಿಟಿಷರಿಂದ ಸ್ಕಾಟ್ಲೆಂಡ್ ನ್ನು ಮುಕ್ತಗೊಳಿಸಿ ಹೊಸ ಇತಿಹಾಸವನ್ನೇ ರಚಿಸಿದ. ” ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ,ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ”ಎಂಬ ಸಾಲುಗಳು ಇಂದಿಗೂ ಸತ್ಯ.ಯಶಸ್ಸಿನ ಮೂಲ ಮಂತ್ರವೆಂದರೆ ಅದು ‘ಆತ್ಮವಿಶ್ವಾಸ’. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ತೊಡಕುಗಳು ಅನೇಕ.  ಕಲ್ಲು ಮುಳ್ಳು,ಬಿಸಿಲು ಬವಣೆಗಳಿರದ ದಾರಿ ಯಾವುದಿದ್ದೀತು? ಅದೆಷ್ಟೋ ಬಾರಿ ಸಾಧನೆಯತ್ತ ಸಾಗುವ ಮೊದಲ ಹೆಜ್ಜೆಗಳು ತಡವರಿಸಿದಾಗ,ಭಯಪಟ್ಟು,ಮುನ್ನಡೆವ ಭರವಸೆ ಕಳೆದುಕೊಂಡು ಮುಂದೆ ಹೆಜ್ಜೆ ಇಡುವುದನ್ನೇ ನಿಲ್ಲಿಸಿ ಬಿಡುತ್ತೇವೆ. ಹಾಗಂತ ಮುನ್ನಡೆವ ಶಕ್ತಿ ಇಲ್ಲವೆಂದಲ್ಲ,ಆ ಶಕ್ತಿಯ ಪರಿಚಯ ನಮಗೇ ಇರುವುದಿಲ್ಲವಷ್ಟೇ! ಜೀವನದಲ್ಲಿ  ಗುರಿಯೊಂದಿದ್ದರೆ ಸಾಲದು, ಗುರಿಯತ್ತ ಪಯಣಿಸಲು ಬೇಕಾದ ಸಮಚಿತ್ತ,ತಾಳ್ಮೆ ಹಾಗೂ ಏಕಾಗ್ರತೆಯ ಜೊತೆಗೆ ಮುಖ್ಯವಾಗಿ ಇರಬೇಕಾದ್ದು ‘ಆತ್ಮವಿಶ್ವಾಸ’.   “ಧೈರ್ಯಮ್ ಸರ್ವತ್ರ ಸಾಧನಂ” ಎಂದು ಆತ್ಮವಿಶ್ವಾಸದಿಂದ ಎದ್ದು ನಿಂತು ಧೈರ್ಯದಿಂದ ಪ್ರಯಾಣ ಮುಂದುವರೆಸುವ ಗುಣ ನಮ್ಮೆಲ್ಲರಲ್ಲಿದ್ದರೆ ಯಾವ ಸಾಧನೆಯೂ ಎಟುಕದ ನಕ್ಷತ್ರವಾಗಲಾರದು. ಯಶಸ್ಸಿನ ಹೆಬ್ಬಯಕೆಯ ಜೊತೆ ಆತ್ಮವಿಶ್ವಾಸವೂ ಜೊತೆಗಿದ್ದಾಗ, ಸ್ವಸಾಮರ್ಥ್ಯದ ಮೇಲಿನ ನಂಬಿಕೆಯು ವಿಫಲತೆಯ ತೀವ್ರ ಭಯವನ್ನು ಮೆಟ್ಟಿನಿಂತಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ **************************************

ಆತ್ಮ ವಿಶ್ವಾಸವಿರಲಿ… Read Post »

ಕಾವ್ಯಯಾನ

ಹೋದಾರೆ.. ಹೋದ್ಯಾರು..!

ಕವಿತೆ ಹೋದಾರೆ.. ಹೋದ್ಯಾರು..! ಆಶಾ ಆರ್ ಸುರಿಗೇನಹಳ್ಳಿ ಹೋದಾರೆ ಹೋದ್ಯಾರುತೊರೆದು ಹೋದವರು..ಕಣ್ಮರೆಯಾಗಿ ನಲಿವವರುಮರೆಮಾಚಿ ನಿಂತವರುಕಲ್ಲಾಗಿ ಮರೆತವರು ಹೋದಾರೆ ಹೋಗಲಿ..ಅವರವರ ಅನುಕೂಲ..ನೆನಪುಗಳ ಮೂಟೆಯೊರಿಸಿಮೌನತಳೆದು ಹೋದ್ಯಾರತ್ರಾಣವಿಲ್ಲದ ಮನವುಅಂಜುತಿದೆ ದಿನವೂ.. ಹೋದಾರೆ ಹೋದ್ಯಾರುಹೆಸರಿಲ್ಲದೆ, ಉಸಿರಿನ ಹಂಗಿಲ್ಲದೆಕಿರುನಗೆಯಲಿ ಬಿದ್ಯಾರ..ಎನಗೊಂದು ವಿಷಾದದನಗೆಯ ಉಳಿಸ್ಯಾರ..ಬೆಲೆಬಾಳುವಮುಗ್ಧನಗೆಯನೇ ಕದ್ದೊಯ್ದಾರ.. ಹೋದಾರು ಹೋದ್ಯಾರುನೆನಪುಗಳ ಹೊತ್ತೊಯ್ದುಉಪಕರಿಸಬೇಕಿತ್ತು..ಕನಸುಗಳ ಚಿವುಟಿಕ್ರೂರಿಗಳಾಗಬೇಕಿತ್ತು..ಮನಸನು ಕೊಂಚಕಲ್ಲಾಗಿಸಬೇಕಿತ್ತು..ತೊರೆದು ಮತ್ತೆ ಮತ್ತೆತೆರೆದುಕೊಳ್ಳುವುದ ಕಲಿಸಬೇಕಿತ್ತು.. ಹೋದಾರ ಹೋದ್ಯಾರುಮರೆತು ಬಾಳೋದನ್ನೇಕಲಿಸದೆ ಹೋದ್ಯಾರೆ?ಕಣ್ಣಹನಿಗಳನ್ನುಉಡುಗೊರೆಯಾಗಿ ಕೊಟ್ಯಾರಾ..!ನಗೆಯ ಪೊಳ್ಳು ಭರವಸೆಯನ್ನಮೊಗೆ ಮೊಗೆದು ಕೊಟ್ಯಾರಾ.. ಹೋದಾರೆ ಹೋಗಲಿಸುಮಧುರ ಭಾವಗಳುಗೆಜ್ಜೆಕಟ್ಟಿ ಕುಣಿದಾವಪದೇ ಪದೆಹಳೆಯ ರಾಗವ ನೆನಸುತಾಹಾಡ್ತಾವಾಮೂಕ ರಾಗದಿನೊಂದ ಮನವೂ ಕುಣಿದುಅಂತರವನ್ನ ಮರೆತಾವ..ಇರುವಿಕೆಯನ್ನೇ ಅಳೆದು ತೂಗ್ಯಾವಸ್ವಾರ್ಥವಿಲ್ಲದ ಮನವು,ಹರುಷದಿಂದ ನಲಿದು,ನೆನಪುಗಳ ಬರಸೆಳೆದ್ಯಪ್ಪಾವ..ಭಾರ ಹಗುರಾಗ್ಯಾವ..ಬದುಕಿಗೆ ಸ್ಪೂರ್ತಿ ಸಿಕ್ಯಾವ..ದುಗುಡಗಳೆಲ್ಲಾ ಮರೆಯಾಗಿನಿಂತ್ಯಾವ.. ಹೋದಾರೆ ಹೋದ್ಯಾರುಹೋದನೆಂಬ ಭ್ರಮೆಯಲ್ಲಿ ಬದುಕ್ಯಾರಇದ್ದೆನೆಂಬ ನಿಜವ ಮರೆತ್ಯಾರ?ಹೊಸತೊಂದು ಬದುಕಕಲಿಸಿಕೊಟ್ಯಾರಾ..!ಉಸಿರ ಕೊನೆಯವರೆಗೂಜೊತೆಯಾಗಿ ನಿಂತ್ಯಾರ..ನೆನಪುಗಳ ಮೆರವಣಿಗೆಯಲಿಸವಿಕನಸಿನ ತೇರನ್ನ ಎಳೆದ್ಯಾರ..ಹೆಸರಿಲ್ಲದ ಬದುಕಿಗೆಹೊಸ ಮುನ್ನುಡಿ ಬರೆದ್ಯಾರ.. ನೆನಪಿನ ನಕ್ಷತ್ರಗಳ ನಡುವಲಿನನ ನೋಡಿ ನಗತ್ಯಾರ..ನಗುವ ತಂಬೆಳಕೆನ್ನಕಂಗಳಲಿ ಪ್ರತಿಫಲಿಸ್ಯಾವ..ಬೆಳಕ ಪಲುಕಿಗೆಬಾಳು ಬೆಳಗ್ಯಾವ..! *********************************

ಹೋದಾರೆ.. ಹೋದ್ಯಾರು..! Read Post »

ಕಾವ್ಯಯಾನ

“ದೇವರ ಪಾದ”

ಕವಿತೆ “ದೇವರ ಪಾದ” ಲೋಕೇಶ ಬೆಕ್ಕಳಲೆ ಅಂದು ನೀನು ಇಟ್ಟ ಪಾದಧರ್ಮ ರಕ್ಷಣೆಗೋ?ಸ್ವಜನ ಹಿತಕೋ?ಅಂತೂ ಬಲಿಯ ದೂಡಿತು ಪಾತಳಕೆ ಇಂದು ನಿನ್ನ ಸುಪರ್ದಿ ಪಡೆದವರುಊರುತ್ತಿರುವ ಪಾದಗಳುದೂಡುತ್ತಿವೆ ಸಾಮಾನ್ಯರಅಂಧಕಾರಕೆ ಎತ್ತ ನೋಡಿದರೂನಿನ್ನದೇ ಪಾದ!ಗೆಜ್ಜೆ ಕಟ್ಟಿದ ಶ್ರೀ ಪಾದಎದುರು ಯಾರೇ ಸಿಕ್ಕರೂ ಅವರತಲೆಯ ಮೇಲೇರಿ ಕೂರುವವಿಕ್ರಮ ಪಾದ ಇಲ್ಲಿ ನಿನ್ನ ಕಾಯುವಮುಖವಾಡ ತೊಟ್ಟಬಲಿಗಳಿಂದ ನಿತ್ಯಹಿಂಸೆ ಅನುಭವಿಸುವಶ್ರೀಸಾಮಾನ್ಯರ ಕಾಪಿಡಲುಮತ್ತೇ ಬರುವೆಯಾ?ವಾಮನನಾಗಿ? ಅದೇಕೊಎಷ್ಟೇ ತೊಳೆದರೂನಿನ್ನ ಪಾದಕ್ಕಂಟಿದಕಳಂಕ ಹೋಗುತ್ತಿಲ್ಲ!ಕ್ಷಮಿಸು ದೇವಾ ************************

“ದೇವರ ಪಾದ” Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ. ನಲ್ಲ ಮನದಂಗಳ :ನಲ್ಲನ ಹೆಸರಿನ,ಹಸೆ ಮೂಡಿದೆ. ಲಜ್ಜೆ ಹಸೆಗೂ ಲಜ್ಜೆಅವನ ನೆನಪಲ್ಲಿ,ನಲ್ಲೆ ನಗಲು. ದುಂಬಿ ಹೂವಿನಮಲು.ದುಂಬಿಗೆ ಹೊಸಗಾನ,ಶೃಂಗಾರ ಕಥೆ. ತಾರೆ ಮಿಂಚಿನ ನೋಟ :ತಾರೆಗೂ ಕಚಗುಳಿ,ಮುನಿದ ಚಂದ್ರ. ನಗು ನಲ್ಲೆ ನಗುವು :ತಪ್ಪಿದ ಎದೆ ತಾಳ,ಮಧುರ ಗಾನ. ಲಾಂದ್ರ ಬಾನಂಚ ಲಾಂದ್ರ :ಹತ್ತಿದಾಗೆಲ್ಲ, ನಲ್ಲೆಮೊಗ ಕೆಂಪಗೆ. ರವಿತೇಜ ಮಧುರ ಹಾಡು :ಹಕ್ಕಿಯ ಸ್ವಾಗತವು,ರವಿತೇಜಗೆ. *****************************

ಹಾಯ್ಕುಗಳು Read Post »

You cannot copy content of this page

Scroll to Top