ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಡೆಗಳು

ಕವಿತೆ ಕವಡೆಗಳು ವಿಭಾ ಪುರೋಹಿತ್ ಪಬ್ ಜಿ ವಿಡಿಯೋ ಗೇಮ್ ಬೇಜಾರಾಗಿಚೌಕಾಬಾರಾ ಪಗಡೆ ಅಳೆಗುಳಿಮನೆಝಾಡಿಸಿಕೊಂಡು ಮೇಲೆದ್ದಿವೆಚರಿತ್ರೆಯ ಮು‌ಷ್ಟಿಯೊಳಗಿಂದತಂದಾಣಿಪಿಲ್ಲೆ ಹಾವುಏಣಿಯಾಟ ಹುಣಸೆಬೀಜಗಳು ಕಾಶಿಯಿಂದ ತಂದ ಕವಡೆಗಳು ಕಣ್ಬಿಟ್ಟಿವೆ ಲಾಕ್ಡೌನಿನಲ್ಲಿ ! ಬೊಗಸೆಯಲ್ಲಿಟ್ಟು ಕುಲುಕಿಸಿ ಎಸೆದಾಗಬೇಕಾಗುವ ಅಂಕೆ ದೊರೆತರೆ ಅದೃಷ್ಟಅಂಗಾತ ಬಿದ್ದಕವಡೆ ಕುದುರಿಯೇಳುವ ಭಾಗ್ಯಡಬ್ಬು ಮಲಗಿದ ಕವಡೆ ನಿತಾಂತಬಾಳಭವಿತವ್ಯಕ್ಕೆ ಕವಡೆ ಸಂಖ್ಯೆ ಗಳಪಾರಾಯಣವಂತೆ ಜೋತಿಷ್ಯಾಲಯದಲ್ಲಿಸಾಲುಗಟ್ಟಿ ನಿಂತಿದ್ದಾರೆ ಕವಡೆವಾಣಿಗಾಗಿಅರ್ಧಸತ್ಯವಿದ್ದರೂ ನಂಬುವ ಅನಿವಾರ್ಯಮನದೊಳಗೆಹೂತಿಟ್ಟ ಪ್ರಶ್ನೆ ಗಳಿಗೆರಾಮಬಾಣವಂತೆ ಕವಡೆಗಳು ಅದೇನೋ ನೂರೆಂಟು ಕಗ್ಗಂಟುಲೆಕ್ಕಾಚಾರದ ಸೂತ್ರಗಳುನೌಕೆ ಓಡುವುದಕ್ಕೂ ನಿಲ್ಲುವದಕ್ಕೂಕಾರಣಿಸುವ ಲಂಗರು ಕವಡೆಉತ್ತರ ಹೇಳಬೇಕಂತೆ……ಅಂತೆ ಕಂತೆಗಳ ಉಡ್ಡಯನಪ್ಯಾಶ್ಚರೀಕರಿಸಿದ ಧೂತರಿಂದ

ಕವಡೆಗಳು Read Post »

ಕಾವ್ಯಯಾನ

ಈಗ ಅವಳು

ಕವಿತೆ ಈಗ ಅವಳು ವಾಯ್.ವ್ಹಿ.ಕಂಬಾರ ಬಣ್ಣದ ಬಟ್ಟೆಗೆ ಕಣ್ಣಾಗುವ ಅವಳುಬಿಳಿಯ ಹೊಳಪಿಗೆ – ಬಾಯಾಗುವಳುಹೊಲ , ಮನೆ ಕದನ – ಕಲಾಪಗಳಲ್ಲಿಕಥೆಯಾದವರು – ಬಿಲ್ಲಿಗೆ ಕಲ್ಲಾಗುವರು !! ದಪ್ಪ ಮೀಸೆಗಳಲ್ಲಿಬರವಸೆಯ ಕಣ್ಣಿರಿಸಿದವಳಿಗೆಸಂಕಟ ತಿಳಿಯದ ಬೆಳಕ ಕಂಡು – ಕುಬ್ಜಳಾಗುವಳು !! ಹೆಜ್ಜೆ ಹೆಜ್ಜೆಗೂ ಅನ್ನ ಅರಸುವ ಅವಳುಅವಮಾನದ ವಿಷ ತುಳಿದುಹಸಿವೆಯ ಹರಾಜಿಗೆ – ತ ಲೆಬಾಗುವಳು !! ರಕ್ತ ಸಂಭಂದಗಳು , ಸ್ನೇಹಗಳುಬಾಲ್ಯದ ಆಟಗಳು , ತೊಟ್ಟಿಲದಜೋಗುಳಗಳು – ಸುಟ್ಟುಹೋದಸುಡುಗಾಡದಲ್ಲಿ ಈಗ ಅವಳು !! ಎಲ್ಲ ಬಿಟ್ಟು ಬಂದ ಗಾಳಿಕಾಲಕ್ಕೆ ತಲೆ ಬಾಗುವ ನೆಲಛಳಿಯೊಂದಿಗೆ ಛಳಿಯಾಗಿಬಿಸಿಲಿಗೆ ಮೈಯಾದ ಗೋಡೆಗಳೊಂದಿಗೆ ಈಗ ಅವಳು !! **************************

ಈಗ ಅವಳು Read Post »

ಕಾವ್ಯಯಾನ

ಕ್ಷೌರಿಕ

ಕವಿತೆ ಕ್ಷೌರಿಕ ಮಾಲತಿ ಶಶಿಧರ್ ಪಾಪ ಕ್ಷೌರಿಕ ಕವಿಯಂತಲ್ಲಕವಿ ಬರೆದ ಸಾಲುಗಳ ತಿದ್ದಬಹುದುಬೇಡವೆನಿಸಿದರೆ ಅಳಿಸಿಬಿಡಬಹುದು ಪಾಪ ಕ್ಷೌರಿಕ ಗೋಡೆ ತುಂಬಾವಿಧ ವಿಧ ಹೇರ್ ಕಟ್ಗಳ ಚಿತ್ರಅಂಟಿಸಿ ಕೇಳಿದ ಹಾಗೆ ಕೆರೆಯಬೇಕುಒಮ್ಮೆ ಕತ್ತರಿ ಕಚಕ್ ಎಂದರೆಅಲ್ಲಿಗೇ ಮುಗಿಯಿತು ಕವಿತೆ ಬರೆವ ನನ್ನ ಬೆರಳಿಗಿಂತಲೂನನ್ನ ಕೂದಲು ಬಹಳಾ ವಿಧೇಯಿಪದಗಳು ಸಿಗದೆ ಬೆರಳು ಪರದಾಟನಡೆಸ ಬಹುದೇನೋ ಆದರೆಕೂದಲು ಎಳೆದತ್ತ ಸುಮ್ಮನೆಹೋರಡುತ್ತದೆಬಾಚಣಿಗೆಯಾಗಲಿ ಬ್ಲೆಡ್ ಆಗಲಿ ಅದಕ್ಕೆ ಪೆನ್ನಿಗೆ ಬೆರಳು ಕೊಡುವಷ್ಟುಸುಲಭವಾಗಿ ಅವನ ಕೈಗೆತಲೆ ಕೊಡುವುದಿಲ್ಲಕೊಡಲೇ ಬೇಕಾದಾಗನಡುಗುತ್ತಲೇ ಕೊಡುತ್ತೇನೆಅದೂ ಎರಡೂ ಕಂಗಳಬಿಗಿಯಾಗಿ ಮುಚ್ಚುತ್ತಾ… ******************************

ಕ್ಷೌರಿಕ Read Post »

ಪುಸ್ತಕ ಸಂಗಾತಿ

“ನಮ್ಮ ಪಯಣ”

ಪುಸ್ತಕ ಸಂಗಾತಿ “ನಮ್ಮ ಪಯಣ” ಮಕ್ಕಳ ಮೂಲಕ ಇತಿಹಾಸ ಸೃಷ್ಠಿ.           ಒಬ್ಬ ಸಮರ್ಥ ಶಿಕ್ಷಕ ಅಕ್ಷರಗಳನ್ನು ಮಾತ್ರ ಕಲಿಸಲಾರ. ತಾನಿರುವ ಊರಿನ ಶಾಲೆಯ ಮತ್ತು ಸಮುದಾಯದ ಇತಿಹಾಸವನ್ನೂ ಸೃಷ್ಠಿಸಬಲ್ಲ ಎಂಬುದಕ್ಕೆ ಶಿಕ್ಷಕ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ಸಂಪಾದಿಸಿದ “ನಮ್ಮ ಪಯಣ” ಎಂಬ ಕೃತಿಯೇ ಸಾಕ್ಷಿಯಾಗಿದೆ.        ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ ಮತ್ತು ಜೋಯಡಾ ತಾಲೂಕುಗಳ ಹಚ್ಚಹಸಿರಿನ ದಟ್ಟ ಕಾನನದ ಮಧ್ಯದಲ್ಲಿ ತಮ್ಮ ದನ-ಕರುಗಳನ್ನು ಸಾಕುತ್ತಾ ಬದುಕು ಸಾಗಿಸುತ್ತಿರುವ ಗೌಳಿಗರು ಆಧುನಿಕ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಅವರು ಎಂಬತ್ತು ತೊಂಬತ್ತು ವರ್ಷಗಳಿಂದ ಮಹಾರಾಷ್ಟçದ ಪಶ್ಚಿಮ ಘಟ್ಟಗಳ ದುರ್ಗಮ ಕಾಡುಗಳ ಮೂಲಕ ವಲಸೆ ಬಂದಿದ್ದಾರೆ. ಈ ನಿರ್ಲಕ್ಷಿತ ಸಮುದಾಯದವರು ಪಟ್ಟ ಪರಿಶ್ರಮ, ವ್ಯಥೆ, ಸಂಕೋಲೆಗಳನ್ನು ಆ ಗೌಳಿಗರ ಮಕ್ಕಳಿಂದಲೇ ಅವರ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿ ಮತ್ತು ಮರುಸೃಷ್ಠಿಸಿ ಅವರ ವಲಸೆಯ ಸಂದರ್ಭದಲ್ಲಾದ ಅನುಭವಗಳನ್ನು ಸಂಗ್ರಹಿಸಿದ್ದು ನಿಜವಾಗಲೂ ಅಭೂತಪೂರ್ವ ಕಾರ್ಯವಾಗಿದೆ.    ಉತ್ತರ ಕನ್ನಡ ಜಿಲ್ಲೆಯ (ಶಿರಸಿ ಶೈ.ಜಿ)   ಯಲ್ಲಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದ ಶಿಕ್ಷಕ ಶ್ರೀ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ‘ಇಂಡಿಯಾ ಫೌಂಡೇಷನ್ ಫಾರ್ ದಿ ರ‍್ಟ್÷್ಸ ಬೆಂಗಳೂರು’ ಇವರ ಕಲಾಂತರ್ಗತ ಕಲಿಕೆ ಯೋಜನೆಯೊಂದಿಗೆ ಗೌಳಿಗರ ವಲಸೆಯ ಅನುಭವ ಕಥೆಗಳನ್ನು ದಾಖಲೀಕರಣ ಮಾಡಿದ್ದಾರೆ. ಎನ್.ಸಿ.ಎಫ್ ನ ಆಶಯವನ್ನೂ ಈಡೇರಿಸುವ ಮೂಲಕ ಆ ಸಮುದಾಯಕ್ಕೇ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.       ‘ನಮ್ಮ ಪಯಣ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಸಂದರ್ಶನ ರೂಪದ ಕಥೆಗಳಿವೆ. ಇವೆಲ್ಲವುಗಳನ್ನು ಅವರ ಶಾಲಾ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರು, ಸಾಹಿತಿಗಳ ಮಾರ್ಗದರ್ಶನದಲ್ಲಿ  ತಮ್ಮ ಹಿರಿಯರನ್ನು ಸಂದರ್ಶಿಸಿ ಕೆಲ ಪ್ರಶ್ನೆಗಳನ್ನು ಕೇಳುತ್ತ ಗೌಳಿಗರ ಇತಿಹಾಸದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಅವರೇ ಅನ್ವೇಷಿಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಮಾಹಿತಿಯನ್ನು ಕಲೆ ಹಾಕುವುದಕ್ಕಿಂತ ಅನ್ವೇಷಣೆಗೆ ಮತ್ತು ಸೃಜನಾತ್ಮಕತೆಗೆ ಮಹತ್ವ ಕಲ್ಪಿಸಲಾಗಿದೆ.       ಶತಾಯುಷಿ ಆರ್ಯವೇದ ವೈದ್ಯ ವಿಠ್ಠು ಯಮ್ಕರ್ ಅವರ ಚಾಕಚಕ್ಯತೆ, ‘ಕಣ್ಣೀರಧಾರೆಯ ಕಥೆ-ವ್ಯಥೆ’ ಯಲ್ಲಿ ಅಜ್ಜಿ ನಕಲಿ ನಿನ್ನು ಮಲಗೊಂಡೆ ಬಡತನದಲ್ಲಿ ಬಿದರಕ್ಕಿ ಉಂಡು, ಅತ್ತೆಯ ಕ್ರೂರತನದಿಂದ ವಿಚ್ಛೇದನ ಪಡೆದು ಮರು ಮದುವೆಯಾಗಿ ಈಗ ಗಂಡನಿಲ್ಲದೆ ಒಂಟಿ ಜೀವನವನ್ನು ಇಳಿವಯಸ್ಸಿನಲ್ಲಿ ಸಾಗಿಸುತ್ತಿದ್ದಾರೆ. ಇವರು ಹೇಳುವ ಕಥೆ ಓದುಗರ ಕಣ್ಣಲ್ಲಿ ನೀರು ತರಿಸದಿರಲಾರದು. ‘ಸಂಸಾರ ಭಾರ ಹೊತ್ತ ಗಟ್ಟಿಗಿತ್ತಿ’ ಯಲ್ಲಿ ಸಾವುಬಾಯಿ ಪಟಕಾರೆ ಹೆಣ್ಣುಮಕ್ಕಳ ಆಗಿನ ಸ್ಥಿತಿಗತಿಗಳನ್ನು ತೆರೆದಿಟ್ಟಿದ್ದಾರೆ. ನೆಲೆಯಿಲ್ಲದೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಟ ಸಾಮಾನ್ಯವಾಗಿ ಕಂಡುಬರುತ್ತದೆ. ಅವರ ವಿಶಿಷ್ಟ ಆಚರಣೆಗಳಾದ ದಸರಾ, ಸಿಲಂಗಾನ್, ರಾಖನ್ ಹಬ್ಬಗಳ ಆಚರಣೆ ಕಾಡು-ಮೇಡುಗಳಲ್ಲಿ ಕಾಡು ಪ್ರಾಣಿಗಳೊಂದಿಗೆ ಕಾದಾಡಿದ ವಿಭಿನ್ನ ಅನುಭವಗಳು ಅವರ ಧೈರ್ಯ, ಸಾಹಸ ಪ್ರವೃತ್ತಿಯನ್ನು ಈ ಕೃತಿ ತೆರೆದಿಡುತ್ತದೆ.   ಒಂದು ಜನಾಂಗದ ಆರ್ಥಿಕ ಸಾಮಾಜಿಕ, ಸ್ಥಿತಿಗತಿಗಳ ಬಗೆಗೂ ಈ  ಕೃತಿ ತೆರೆದಿಡುತ್ತದೆ. ಮುಗ್ಧ ಗೌಳಿಗರ ಪ್ರಾಮಾಣಿಕತೆ, ನಂಬಿಕೆ, ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಮರಗಳನ್ನು ದೇವರಂತೆ ಪೂಜಿಸುವ ಅವರ ವಿಶಿಷ್ಠ ಗುಣಗಳನ್ನು  ಈ ಕೃತಿ ಇತರ ಸಮಾಜಕ್ಕೆ ತರ‍್ಪಡಿಸುತ್ತದೆ. ಕೃತಿಯಲ್ಲಿ ಅಲ್ಲಲ್ಲಿ ಗೌಳಿಗರ ಭಾಷೆಯ ಕೆಲವು ಪದಗಳನ್ನು ಬಳಸಿಕೊಳ್ಳಲಾಗಿದೆ.      ಆಯ್.ಎಫ್.ಎ ಕಲಾ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿಯವರು ಕೃತಿ ಕುರಿತು. “ಜನಾಂಗದ ಕಥೆಗಳು , ವಯಕ್ತಿಕ ನೋವುಗಳು, ಲಿಂಗ ತಾರತಮ್ಯಗಳು ಮತ್ತು ಕೀಳರಿಮೆಗಳನ್ನು ವಿವಿಧ ಸ್ತರಗಳಲ್ಲಿ ಚಿಕ್ಕವರು ದೊಡ್ಡವರಿಗಾಗಿ ಇಲ್ಲಿ ಬರೆದಿದ್ದಾರೆ. ಸಾಂಸ್ಕೃತಿಕ ಪಲ್ಲಟಗಳಿಗೆ ಇಲ್ಲಿನ ಬರಹಗಳು ಮುಖಾಮುಖಿಯಾಗಿ ನಿಲ್ಲುತ್ತವೆ. ಕನ್ನಡದ ಸೊಗಡು ಇದೆ ಅಲ್ಲಾ? ಮಕ್ಕಳ ಕಲಿಕೆ ಸರ್ವತೋಮುಖವಾಗಲಿಲ್ಲವೇ? ಪಠ್ಯಪುಸ್ತಕಗಳು ನೀಡದ ಅನುಭವಗಳನ್ನು ಈ ಬರಹಗಳು ಕಟ್ಟಿಕೊಟ್ಟಿಲ್ಲವೇ? ಗಂಗಾಧರ ಅವರಂಥ ಶಿಕ್ಷಕರನ್ನು ಸರಕಾರಿ ಶಾಲೆಯಲ್ಲಿ ಭೇಟಿಯಾಗುವುದೇ ಒಂದು ಸಂತಸದ ಸಂಗತಿ.” ಎಂದು ಬರೆದಿದ್ದಾರೆ.    ಈ ಕೃತಿಯ ಬಿಡುಗಡೆಗೂ ಗೌಳಿ ಸಮುದಾಯದ ಮತ್ತು ಇತರರು ಸಾವಿರಾರು ಜನಸಂಖ್ಯೆಯಲ್ಲಿ ನೆರೆದಿದ್ದು ದಾಖಲೆಯೂ ಆಗಿದೆ. ಇಂತಹ ಎಲೆಮರೆಯಲ್ಲಿ ನಡೆಯುವ ಕಾರ್ಯವನ್ನು ಗುರುತಿಸುವ ಕಾರ್ಯವಾಗಬೇಕಿದೆ.            ಇನ್ನು ಕಥನಗಳಿಗೆ ತಕ್ಕಂತೆ ಸುಂದರವಾದ ರೇಖಾಚಿತ್ರಗಳನ್ನು ಯುವ ಕಲಾವಿದ ಜ್ಞಾನೇಶ್ವರ ರಚಿಸಿಕೊಟ್ಟಿದ್ದಾರೆ.  ಮುಖಪುಟವಂತೂ ಬಹು ಆಕರ್ಷಣೀಯವಾಗಿದೆ. ನೀವೊಮ್ಮೆ ಓದಲೇಬೇಕು.          ಜಾಗತಿಕ ಮಟ್ಟದಲ್ಲಿ ನಡೆಯುವ ವಲಸಿಗರ ಕಥೆಗಳಂತೆ ಗೌಳಿಗರ ವಲಸೆಯ ಅನುಭವವನ್ನು ಕಟ್ಟಿಕೊಡುತ್ತವೆ. ಹಾಗಾಗಿ ಇದೊಂದು ದಾಖಲಾರ್ಹವಾದ ಕೃತಿಯಾಗಿದೆ. ಆಯ್.ಎಫ್.ಎ ಬೆಂಗಳೂರು ಅವರ ಕಲಾಂತರ್ಗತ ಕಲಿಕೆ ನಮ್ಮ ಬೋಧನೆಯನ್ನು ಲವಲವಿಕೆಯಿಂದಿರುವAತೆ ಮಾಡುತ್ತದೆ. ವಿದ್ಯಾರ್ಥಿಗಳ, ಶಿಕ್ಷಕರ ಈ ಕಾರ್ಯಕ್ಕೆ ಅವರಿಗೊಂದು ಸಲಾಂ ಹೇಳೋಣ. ಗಂಗಾಧರ ಸರ್ – ಮೊ.ಸಂಖ್ಯೆ- ೯೯೦೨೮೯೩೫೩೨.                 “ನಮ್ಮ ಪಯಣ” ಗೌಳಿಗರ ವಲಸೆಯ ಅನುಭವ ಕಥೆಗಳು.                  ಸಂಪಾದಕರು : ಗಂಗಪ್ಪ ಎಸ್.ಎಲ್ (ಗಂಗಾಧರ)                 ಪುಟಗಳು : ೧೦೦.                  ಬೆಲೆ: ೮೦ ರೂಪಾಯಿ.   ****************************************************** ನಾಗರಾಜ ಎಂ ಹುಡೇದ

“ನಮ್ಮ ಪಯಣ” Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಾಯ್.ಜೆ.ಮಹಿಬೂಬ ಹೃದಯದಲಿ ಪ್ರೀತಿ ಅಂಕುರಿಸಿದೆ ಸಸಿಯಾಗಿಸಲು ಬಾ ಸಖಿಹದವಾಗಿ ಮನಬೆರೆಸಿ ಉದಯರಾಗದಿ ನೀರೆರೆಯಲು ಬಾಸಖಿ ಅನುಮಾನ ಸಂಶಯದ ಶೆಕೆ ಬಡಿಯದಿರಲಿ ಎಲ್ಲಿಯೂ ಇದಕೆನಂಬುಗೆ ವಿಶ್ವಾಸಗಳ ರೆಕ್ಕೆ-ಪುಕ್ಕಗಳಾಗಿ ವಿಹರಿಸಲು ಬಾ ಸಖಿ ಅನುವು-ತನುವುಗಳೆ ದಿನಮಂತ್ರಗಳಾಗಲಿ ನಮ್ಮಿಬ್ಬರ‌ ಬಾಳ್ಗೆನೀನಿರುವಾಗ ಹಂಗ್ಯಾತರದು ಸತ್ಕಾಲಕೆ ಹಿತವಾಗಲು ಬಾ ಸಖಿ ಹರಾಮಿನ ಅರಮನೆ ತೊರೆದುಬಿಡು,ಕಂಬಳಿ-ದಿನದಂಬಲಿ ಸಾಕುತಮಕೆ ಬೆಳಕು-ಅಹಂಗೆ ವಿರಾಮ,ನಾನು ಸಂಭ್ರಮಿಸಲು ಬಾಸಖಿ ‘ಅಜಾದ್’ಬಯಸುವುದೇನಿದೆ,ಬಯಕೆಯೂ ಅರಾಮಿನಲ್ಲಿದೆಸತ್ಕರಿಸಿದವನೇ ಜಗದೊಡೆಯನಿಗೆ ಕರಮುಗಿಯಲು ಬಾಸಖಿ ***********************************************************

ಗಜಲ್ Read Post »

ಅನುವಾದ

ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತತ ಕಥೆ ಮಾಜಿ ಪ್ರದಾನಿಯವರ ಅನುವಾದಿತ ಕಥೆ ಗೊಲ್ಲರ ರಾಮವ್ವ(ಕೊನೆಯ ಭಾಗ) ತೆಲುಗು ಮೂಲ:ಪಿ.ವಿ.ನರಸಿಂಹರಾವ್ ಕನ್ನಡಕ್ಕೆ:ಚಂದಕಚರ್ಲ ರಮೇಶ್ ಬಾಬು ಭಾಗ – ೨ ರಿಂದ                ಭಾಗ- ೩ ಹಾಲು ಕರೆಯೋ ಸಮಯ ಕಳೀತಾ ಇದೆ. ಮನೆ ಹೊರಗಡೆ ಕಟ್ಟಿ ಹಾಕಿದ ಎಮ್ಮೆಗಳು ಕರುಗಳಿಗಾಗಿ ಕೂಗ್ತಾ ಇವೆ. ಹಾಗೇ ಒಳಗಡೆ ಕರುಗಳು ಕೂಡ ವಿಲಪಿಸುತ್ತಿವ ಹಾಲು ಕರೆಯಬೇಕೆನ್ನುವ ಆತ್ರ ಒಂದುಕಡೆ. ಹಸಿವಿನ ಸಂಕಟ ಮತ್ತೊಂದು ಕಡೆ. ಆದರೇ ಹಾಲು ಕರೀತಾ ಇಲ್ಲ ಯಾರೂ. ದಿನಾಲೂ ಆದರೇ ಈ ವೇಳೆಗೆ ಜುಂಯಿಜುಂಯಿ ಅನ್ನುತ್ತ ಕೇಳಿಬರುವ ಪಯಸ್ಸಂಗೀತ ಪೂರ್ತಿ ನಿಂತು ಹೋಗಿದೆ. ಹೆದರಿಕೆಯಿಂದ ಗ್ರಾಮದಲ್ಲಿನ ಎಲ್ಲ ಜೀವ ಲಕ್ಷಣಗಳೂ ಕಾಣದಾಗಿವೆ. ಸಾವಿನ ಸಮಯದ ಕೊನೆಯ ಚಲನೆಯು ಸಹ ಇಲ್ಲ. ಸುಡುಗಾಡಿನಲ್ಲಿಯ ಬೆಂಕಿಯ ಚಟಪಟ ಸಹ ಇಲ್ಲ. ಆ ಗ್ರಾಮದಲ್ಲಿ ಅನಾದಿಕಾಲದಿಂದ ಬರೀ ನಿಶಬ್ದವೇ ಇದ್ದ ಹಾಗೆ ಅನಿಸ್ತಾ ಇದೆ. ರಾಮವ್ವ, ಮಲ್ಲಮ್ಮ ಇಬ್ಬರೂ ಕಾವಲಾಗಿದ್ದಾರೆ. ಯುವಕ ಸುಖವಾಗಿ ನಿದ್ರೆ ಮಾಡ್ತಾ ಇದಾನೆ. ಇರುವೆಯ ಸಪ್ಪಳವಾದರೂ ಎದ್ದು ಬಿಡುವಷ್ಟು ನಿದಾನವಾಗಿದಾರೆ ಆ ಗ್ರಾಮದ ಪ್ರಜೆಗಳು. ಆದರೇ ಆ ಇರುವೆ ಸಹ ಸದ್ದು ಮಾಡ್ತಾ ಇಲ್ಲ. ರಾತ್ರಿ ನಡೆದ ಆ ಭಯಂಕರ ಘಟನೆಗೆ ಕಾರಣನಾದ ಆ ಯುವಕ ಮಾತ್ರ ನಿದ್ರಿಸ್ತಾ ಇದಾನೆ. ಉಳಿದ ಗ್ರಾಮವೆಲ್ಲಾ ಉಸಿರು ಬಿಗಿ ಹಿಡಿದು ಕಾಯ್ತಾ ಇದೆ. ಯಾತಕ್ಕೋ ? ಯಾರಕೋಸ್ಕರವೋ ? ಯಾಕೋ? ಅದೆಲ್ಲಾ.. ಎಲ್ಲರಿಗೂ ಗೊತ್ತು…. ಹಳೇಕಥೆ…. ರಾಮವ್ವ ಯೋಚಿಸುತ್ತಿದ್ದಳು. ಯಾರೋ ಕಾಂಗ್ರೆಸಿನವರು ಊರಿಗೆ ಬಂದಿದಾರಂತ ಹೇಳಿ ಈಗಾಗಲೇ ನಾಲ್ಕು ನಿರ್ದೋಷಿಗಳನ್ನು ಸುಟ್ಟು ಕೊಂದಿದ್ದಾರೆ. ಮತ್ತೆ ಈಗ ! ಇಬ್ಬರು ಪೋಲೀಸರು ಸತ್ತಿದ್ದಾರೆ. ಠಾಣೆ ಭಗ್ನಾವಾಗಿದೆ. ಊರನ್ನೆಲ್ಲಾ ಸುಟ್ಟು ದಗ್ಧ ಮಾಡಿ, ಊರಿನವರನ್ನೆಲ್ಲಾ ಕೊಂದುಹಾಕಿದರೂ ಆಶ್ಚರ್ಯವೇನಿಲ್ಲ. ಅದೊಂದು ಹಬ್ಬಾನೇ ಅವರಿಗೆ ! ಯಾವುದಾದರೊಂದು ಮನೆಗೆ ಪೋಲೀಸರು ಬಂದು ಕೊಲೆ, ಮಾನಭಂಗ ಮಾಡುವುದು, ಪಕ್ಕದ ಮನೆಯವರು ಏನೂ ಮಾತಾಡದ ಹಾಗೆ ಆಗುವುದು, ಹೀಗೆ ಒಂದೊಂದು ಮನೆ ತರ ಎಲ್ಲ ಮನೆಗಳಿಗೂ ಅದೇ ಗತಿಯಾಗುವುದು… ಇದರಿಗಿಂತ ಊರಿನವರನ್ನೆಲ್ಲಾ ಒಂದೇ ಸಲ ಕೊಂದು ಹಾಕೋದು ಒಳ್ಳೇದಲ್ಲಾ ?  ಈ ನಾಯಿ ಸಾವಿಗಿಂತ  ಹತ್ತೂ ಜನದ ಜೊತೆ ಸತ್ತರೂ ಒಳ್ಳೇದೇ ! ಬದುಕಿದ್ರೂ ಒಳ್ಳೇದೇ !  ನಿದ್ದೆಯಲ್ಲಿದ್ದ ಯುವಕನ ತಲೆ ನೇವರಿಸುತ್ತಿದ್ದ ರಾಮವ್ವ ಗೊಣಗಿದಳು. ” ಅಬ್ಬ! ಏನ್ ಹುಡುಗ ! ಇನ್ನಾ ಎಷ್ಟು ಜನ ಇಂಥಾ ಹುಡುಗರು ಸಾಯಬೇಕೋ !” ಹಠಾತ್ತಾಗಿ ಬಜಾರಿನಲ್ಲಿ ಮೋಟಾರ್ ಟ್ರಕ್ಕಿನ ಸದ್ದು ಕೇಳಿಬಂತು. ಎಲ್ಲೆಲ್ಲೂ ಬೂಟುಗಾಲುಗಳ ತಟತಟ ಸದ್ದು ಕೇಳಿಬಂತು. ಏನೋ ಒದರಾಟ, ತುರಕ ಭಾಷೆಯಲ್ಲಿ ಬೈಗುಳ, ದುರ್ಭಾಷೆಗಳು, ಪ್ರಗಲ್ಭಗಳು… ನಡು ನಡುವೆ ಛಟಿಲ್ ಛಟಿಲ್ ಎನ್ನುವ ಚಾವಟಿ ಏಟು…. ” ಅಯ್ಯೋ ! ಸತ್ತೆ !ಸತ್ತೆ! ನಿಮ್ಮ ಗುಲಾಮನು. ನನಗ್ಗೊತ್ತಿಲ್ಲ. ಅಯ್ಯೋ! ಅಮ್ಮಾ! ವಾಮ್ಮಾ!” ಅನ್ನುವ ಕೂಗುಗಳು. ಮುಗಿಲು ಮುಟ್ಟುವ ಆಕ್ರೋಶಗಳು, ಅವುಗಳನ್ನ ಮೀರಿಸುವ ಕ್ರೂರ ಘೋಷಣೆಗಳು, ಒಂದರಮೇಲೊಂದು ಸ್ಬರ್ಥೆಗಿಳಿದಿದ್ದವು. ಕಂಡವರನ್ನು ಕಂಡ ಹಾಗೇ ಬಜಾರಿಗೆ ಎಳೆಯಲಾಗುತ್ತಿತ್ತು. ಎರಡು ಗಳಿಗೆ ಕೆಳಗೆ ಶ್ಮಶಾನವನ್ನ ಹೋಲುತ್ತಿದ್ದ ಗ್ರಾಮ ಈಗ ಯಮಪುರಿಯನ್ನ ಹೋಲುತ್ತಿತ್ತು. ಮಲ್ಲಮ್ಮ ನಡುಗಲಾರಂಭಿಸಿದಳು. ಯುವಕ ದಿಗ್ಗಂತ ಎದ್ದು ಕೂತ. ಅವನ ಗಾಢ ನಿದ್ರೆ ಹಾರಿಹೋಗಿತ್ತು. ಮುದುಕಮ್ಮನ ಕೈಯಿಂದ ರಿವಾಲ್ವಾರ್ ತೊಗೊಂಡು ಅದಕ್ಕೆ ಗುಂಡು ಹತ್ತಿಸಿದ. ಹೊರಗೆ ಕೇಳಬರುತ್ತಿದ್ದ ಗಲಾಟೆ ಒಂದೆರಡು ನಿಮಿಷ ಕೇಳಿದನೋ ಇಲ್ಲವೋ … ಅವನಲ್ಲಿ ಎಲ್ಲಿಲ್ಲದ ಆವೇಶ ಆವರಿಸಿತು. . ಮುದುಕಮ್ಮನ ಸ್ಥಿತಿ ಹೇಳುವ ಹಾಗಿರಲಿಲ್ಲ. ಅದು ಹೆದರಿಕೆಯಾಗಿರಲಿಲ್ಲ. ನೋವಾಗಿರಲಿಲ್ಲ. ದುಃಖವಂತೂ ಆಗಿರಲಿಲ್ಲ. ಅಪೂರ್ವವಾದ ನಿಶ್ಚಲತೆ, ಗಾಂಭೀರ್ಯ ಅವಳಲ್ಲಿ ಪ್ರವೇಶಿಸಿದವು. ಹೊರಗಿನ ಹಾಹಾಕಾರ ಕಿವಿಗಳಿಗೆ ಬೀಳುತ್ತಿದ್ದ ಹಾಗೇ ಅವಳಲ್ಲಿ ಕೂಡ ಒಂದು ರೀತಿಯ ಉದ್ವೇಗ ಕಾಣಿಸಿಕೊಳ್ಳ ತೊಡಗಿತು.  ರಿವಲ್ವಾರಿನಲ್ಲಿ ಗುಂಡು ತುಂಬಿ ಯುವಕ ಎದ್ದು ನಿಂತ. ಬಾಗಿಲ ಬಳಿಗೆ ನಡೆದ. ಚಿಲಕದ ಮೇಲೆ ಕೈಹಾಕಿದ. ತೆಗೆಯಬೇಕೆನ್ನುವಲ್ಲಿ ಅವನ ಕೈಯ ಮೇಲೆ ಮತ್ತೊಂದು ಕೈ ಬಿತ್ತು. ಅದು ಉಕ್ಕಿನ ಕೈ ಎನಿಸುವಷ್ಟು ಗಟ್ಟಿಯಾಗಿ ಅವನ ಕೈಗೆ ತಗುಲಿತು. ಅವನು ಆಶ್ಚರ್ಯದಿಂದ ಹಿಂತುರಿಗಿ ನೋಡಿ “ಆ” ಎಂದ. ಮುದುಕಮ್ಮನದೇ ಆ ಉಕ್ಕಿನ ಕೈ. “ಎಲ್ಲಿಗೆ” ಅಂತ ಪ್ರಶ್ನಿಸಿದಳು ಮುದುಕಮ್ಮ. .. ಯುವಕನ ಮಾತು ಹೊರಡಲಿಲ್ಲ. ತುಪಾಕಿ ಗುಂಡುಗಳ ನಡುವೆ ಹೋರಾಡುವ ಆ ವೀರ ಯುವಕ… ರಾಕ್ಷಸನನ್ನಾದರೂ ಎದುರಿಸುವ ಆ ಶೂರ ಶಿರೋಮಣಿ…. ದೇಶದ ಒಳಿತಿಗಾಗಿ ಪ್ರಳಯವನ್ನಾದರೂ ಧಿಕ್ಕರಿಸುವ ಆ ತರುಣ ಸಿಂಹ… ಎಪ್ಪತ್ತು ವರ್ಷ ವಯಸಿನ ಒಂದು ಮುದುಕಿಯ ಪ್ರಶ್ನೆಗೆ ಅಂಜಿದ. “ಎಲ್ಲಿಗೇನವ್ವಾ? ಆಕಡೆಯೋ ಈಕಡೆಯೋ ಆಗಿಬಿಡಬೇಕು. ಅಲ್ಲಿ ಅಷ್ಟು ಹಿಂಸೆ ನಡೀತಿದ್ರೇ ಅದಕ್ಕೆ ಕಾರಣನಾದ ನಾನು ಅಡಗಿರಬೇಕಾ? ಅಡಗಿದರೂ ಅದೆಷ್ಟು ಹೊತ್ತು ? ನಿನ್ ಮನೆ ಏನು ಹುಡುಕಲ್ಲಾ ?  ನನ್ನಿಂದ ನಿಮಗೂ ಅಪಾಯ. ನನ್ನ ಹೋಗಲು ಬಿಡು ಅವ್ವಾ!” ಮುದುಕಮ್ಮ ಏನೂ ಮಾತಾಡಲಿಲ್ಲ. ಯುವಕನ ಕೈ ಹಿಡಿಕು ಹಿಂದಕ್ಕೆಳೆದಳು. ಮಂತ್ರ ಮುಗ್ಧನ ತರ ಅವನು ಅವಳನ್ನ ಹಿಂಬಾಲಿಸಿದ. ಹೊರಗೆ ಗದ್ದಲ ಜಾಸ್ತಿ ಯಾಯಿತು. ಬೂಟುಗಾಲಿನ ಶಬ್ದ ಗುಡಿಸಿಲ ಹತ್ತಿರವಾಯಿತು. ಮೂರು ನಾಲ್ಕು ಜನ ಗುಡಿಸಿಲನ್ನು ಹಾಸಿ ಪಕ್ಕದ ಮನೆಗೆ ಹೋದರು. ಅದರ ಹಿಂದೇ “ರಾಮೀ ಕೀ ಗುಡ್ಸಿ ಯಹೀಹೈ ” ಎನ್ನುವ ಮಾತು ಕೇಳಿಬಂದಿತು. ಮತ್ತೆ ಯುವಕ ಹೊರಗಿನ ಬಾಗಿಲ ಕಡೆಗೆ ಹೊರಟ. ಆದರೇ ಮುದುಕಮ್ಮ ಅವನನ್ನ ದೂಡಿದಳು. ರಿವಲ್ವಾರ್ ಅವನ ಕೈಯಿಂದ ಕಸಿದುಕೊಂಡಳು. ಮಿಣುಕುತ್ತಿದ್ದ ದೀಪವನ್ನ ಆರಿಸಿದಳು. ಮಲ್ಲಮ್ಮನ್ನ ಕರೆದು ಹೇಳಿದಳು. “ಹುಡುಗೀ ! ನಿನ್ನೆ ಆಲದ ಮರ ಕಟ್ಲಿಕ್ಕೆ ಕೊಟ್ಟಿದ್ದೆನಲ್ಲಾ ? ಆ ಹೊದಿಕೆ ಶಾಲು ತೊಗೊಂಬಾ ! ಎಲ್ಲಿಟ್ಟಿದ್ದೀಯೋ ನೋಡಿ ತೊಗೊಂಬಾ! ಏ ಹುಡುಗಾ ! ಈ ಹೊದಿಕೆ ಉಟ್ಟುಕೋ ! ಶಾಲು ತಲೆಗೆ ಸುತ್ತಿಕೋ ! ಊ ! ಅದೇನದು ಅಷ್ಟು ಹೊತ್ತು ! ಮಲ್ಲೀ ನಿನ್ನ ಕೈಯ ಎರಡೂ ಕಂಕಣ ಅವನಿಗೆ ಕೊಡು. ತೆಳ್ಳಗಿದ್ದಾನೆ. ಹಿಡಿತಾವೇಳು ! ಸರಿ ! ಒಂದು ದಿಷ್ಟಿ ದಾರವಿದ್ದರೇ ಒಳ್ಳೇದಾಗಿತ್ತು ! ಈಗೆಲ್ಲಿ ಸಿಗುತ್ತೆ ಬಿಡು ? ಇಲ್ದಿದ್ರೂ ಸರಿ. ಆ ಹುಡುಗನ ಚಡ್ಡಿ ಗಂಜಿ ಮಡಿಕೆ ಕೆಳಗೆ ಬಚ್ಚಿಡು ಹುಡುಗೀ ! ಆ ! ಗೊಲ್ಲರ ವೇಷ ಹಾಕಿದೀಯಾ ಹುಡುಗಾ ! ಹಾಗೇ ಕಾಣ್ತಾ ಇದೀಯಾ ! ಯಾರಾದ್ರು ಮಾತಾಡ್ಸಿದ್ರೆ ಗೊಲ್ಲರ ತರ ಮಾತಾಡಬೇಕು !” “ಸರಿ ” ಎಂದ ಯುವಕ. ಅವನ ಹಾಗೆ ಅಡಗಿ ಕೆಲಸ ಮಾಡುವವರಿಗೆ ಈ ತರದ ಗೊಲ್ಲರ ವೇಷಗಳು ಮಾಮೂಲೇ. ಯುವಕ ಸಂಸಿದ್ಧನಾದ. ವೇಷ ತಯಾರಾಯಿತು. ಇನ್ನು ಹೇಗಾದರೂ ಹೊರಬೀಳುವುದು ಮಾತ್ರ ಉಳಿದಿತ್ತು. ಮುದುಕಮ್ಮನ ಆಜ್ಞೆಗೆ ಕಾಯುತ್ತಿದ್ದ. ಹಠಾತ್ತಾಗಿ ಬಾಗಿಲ ಮೇಲೆ ದಬಾ ದಬಾ ಅಂತ ನಾಲ್ಕೈದು ಪೆಟ್ಟು ಬಿದ್ದವು. ” ಏ ರಾಮೀ! ಬಾಗಿಲು ಕಿ ಖೋಲ್ ” ಎನ್ನುವ ಕರ್ಕಶ ಸ್ವರ ಕೇಳಿಸಿತು. ಕೆಲವರು ಬೂಟುಗಾಲಿನವರು ಆ ಮನೆ ಸುತ್ತುವರೆದು ನಿಲ್ಲುವ ಸದ್ದು ಕೇಳಿತು. ಇನ್ನೇನಿದೆ ? ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಗೊಲ್ಲರ ವೇಷ ಹಾಕಿದ್ದೆಲ್ಲಾ ವ್ಯರ್ಥಾನೇ. ಯುವಕನ ಕೈ ರಿವಾಲ್ವಾರ್ ಗಾಗಿ ಹುಡುಕಿತು. ಆದ್ರೆ ಮುದುಕಮ್ಮನ್ನ ಕೇಳುವ ಧೈರ್ಯ ಬರಲಿಲ್ಲ. ಮುದುಕಮ್ಮ ಗುಸುಗುಸು ಶುರುಮಾಡಿದಳು. ” ಮಲ್ಲೀ! ಆ ಮೂಲೆಗೆ ಮಂಚ ಹಾಕಿ ಕಂಬಳಿ ಹಾಕು. ಹುಡುಗಾ ! ಅದರಲ್ಲಿ ಮಲಗು. ಊ ! ಮಲಗು “ ಯುವಕನಿಗೇನು ಮಾಡಬೇಕೋ ತೋಚಲಿಲ್ಲ. ಕೊನೆಗೆ ಸಿಕ್ಕಿ ಬೀಳುವುದೇ ಹಣೆಯಲ್ಲಿ ಬರೆದ ಹಾಗಿದೆ. ಮಂಚದ ಮೇಲೆ ಮಲಗುವುದರಿಂದ ಏನು ಪ್ರಯೋಜನವೋ ಅವನಿಗೆ ಅರ್ಥವಾಗಲಿಲ್ಲ. ತಪ್ಪಿದ್ದಲ್ಲದ ಹಾಗೆ ಮಲಗಿದ. ಮತ್ತೆ ಬಾಗಿಲ ಮೇಲೆ ದಬದಬ! “ಏ ರಾಮೀ ! ಬಾಕ್ಲು ತೆಗಿತಿಯಾ ಇಲ್ಲಾ… ಬೇಗ್ನೆ.. ಹರಾಂಜಾದೀ ! ಮಾತಾಡೇ ! ನಿನ್ ಚರ್ಮ ತೆಗಿತೀವಿ ! ಫೌರನ್ ಬಾಕ್ಲು ತೆಗಿದಿದ್ರೆ ತೋಡ್ ದಾಲ್ತೇ ದೇಖ್ “ ಮುದುಕಮ್ಮ ಆಗಲೇ ನಿದ್ರೆಯಿಂದ ಎದ್ದಹಾಗೆ ಆಕಳಿಸುತ್ತಾ ಮೈಮುರಿದ ಹಾಗೆ ಸದ್ದು ಮಾಡುತ್ತಾ ಅಸ್ಪಷ್ಟವಾಗಿ ಆರಂಭಿಸಿದಳು. “ಯಾರಲೇ ಅದು ಅರ್ಧರಾತ್ರಿ ಕಳ್ಳನ ತರ ಬಂದು ಬಾಗಿಲು ಬಡಿಯೋದು ? ಕಳ್ಳ ನನ್ಮಕ್ಳು ಅಂತ ಕಾಣತ್ತೆ. ನಿಮ್ ಮನೆ ಹಾಳಾಗ ! ಪೋಲೀಸಿನೋರು ಗಸ್ತುಗ್ಬಂದ್ರೆ ನಿಮ್ ಬೆನ್ನು ಮುರಿಯತ್ತೆ “ ಹೊರಗಿನವರು ” ನಾವೇ ಪೋಲೀಸಿನವರು” ಅಂತ ಏನೋ ಹೇಳ ಹೋದರು. ಮುದುಕಮ್ಮ ಕೇಳಿಸಿಕೊಳ್ಳಲಿಲ್ಲ. ಗಟ್ಟಿ ಗಟ್ಟಿ ಮಾತು, ನಡುನಡುವೆ ಗುಸುಗುಸು. “ಕಾಲಾ ಹಾಳಾಗಿ ಹೋಯ್ತು! ಯಾರ ಮನೆಯಲ್ಲಿ ಅವ್ರನ್ನ ಮಲಗಾಕೆ ಬಿಡೋದಿಲ್ಲ. ರಾತ್ರಿ ಇಲ್ಲ ಹಗಲಿಲ್ಲ. ಸಾಯಿಸ್ತಾರೆ. ಏ ಹುಡುಗಿ ! ಹುಡುಗನ ಮಂಚಕ್ಕೆ ಆ ದಪ್ಪ ಕಟ್ಟಿಗೆ ಅಡ್ಡ ಇಡು. ನನ್ನೇನ್ ದೋಚಿಕೊಳ್ತೀರೋ ಮುದುಕೀನ್ನ ? ನನ್ಹತ್ರ ಏನಿದೆ ಅಂತ ? ಕಳ್ರಾದರೇ ನನ್ಹತ್ರ ಇರೋ ಒಡವೆ ತಲೆಗಿಷ್ಟು ಅಂತ ತೊಗೊಳ್ಳಿ. ಏಳ್ಳಿಕ್ಕಾಗಲ್ಲ. ಬಾಗಿಲು ಮುರೀತೀರೋ ಹೇಗೆ ? ನಿಲ್ರಿ. ನಿಲ್ರಿ. ನಿಮ್ ಕುದುರೀನ್ನ ಸ್ವಲ್ಪ ಕಟ್ಟಿಹಾಕಿದ್ರೆ ತಪ್ಪಾ? ಏಳ್ಳಿಕ್ಕಾಗದ ಮುಂಡೆ ನಾನು. ಚೆಂಗುಚೆಂಗು ಅಂತ ಕುಣಕೋತಾ ಬರ್ಲಿಕ್ಕೆ? “ಮಲ್ಲೀ! ಇನ್ನೇನೂ ಮಾತಾಡ್ಬೇಡ ! ಹೋಗಿ ಆ ಹುಡುಗನ ಮಗ್ಗುಲಲ್ಲಿ ಮಲಗು! ಊ ! ನಡೀ! ಇನ್ನ ವಡೀರಿ ! ಎದ್ದು ತೆಗೆಯೋವರ್ಗೂ ನಿಮಗೆ ಪುರುಸೊತ್ತಿ ಇಲ್ಲಂದ್ರೇ ವಡದೇ ಬಿಡ್ರಿ. ಮನೆ ಒಳಗ್ಬಂದು ನನ್ಹತ್ರ ಇರೋವೆಲ್ಲಾ ತಲೆಗೊಂದು ಅಂತ ದೋಚಿಕೊಳ್ರಿ…! ದೀಪ ಹಚ್ಚೋಣ ಅಂದ್ರೆ ಒಲೆ ಯಲ್ಲಿ ಬೆಂಕಿ ಇಲ್ಲ. ಈ ಮಲ್ಲಿ ಮುಂಡೆಗೆ ಅದೆಷ್ಟು ಸಲ ಹೇಳಿದೀನಿ ಸಂಜೆ ಹೊತ್ನಾಗೆ ವಲಿ ಆರಿಸಬೇಡ ಅಂತ. ದೇಬೇ ಮುಂಡೆ! ಇನ್ನ ನಿನ್ನೆ ಗಂಡ ಬಂದಿದಾನೆ. ಹಿಡಿಲಿಕ್ಕೇ ಆಗಲ್ಲ. ಏನ್ಕೆಲ್ಸ ಹೇಳಿದ್ರೂ ಕೇಳಿಸಿಕೊಳ್ಳಲ್ಲ. ನಡುವಿನಲ್ಲೇ ಬಿಟ್ಬಿಡ್ತಾಳೆ. ಗಂಡನ್ನ ನೋಡಿ ಮುರಿಸಿಹೋಗ್ತಿದಾಳೆ. ಸೋಗುಲಾಡಿ! ಅವಳ ಮೇಲೆ ಕೈ ಹಾಕಿ ಮಲಗು ಹುಡುಗಾ ! ನೋಡೊವ್ರಿಗೆ ಅನುಮಾನ ಬರಬಾರದು. ಇನ್ನ ನನ್ಕೈಲಾಗಲ್ಲ ತಂದೇ! ಈ ಮಲ್ಲಿಮುಂಡೆ ಏಳಲ್ಲ. ಓ ಮಲ್ಲೀ ! ಓ ಮಲ್ಲಿಗಾ ! ಊಹೂ ! ಇವರು ಏಳಲ್ಲ. ನನಗಾ ದೀಪ ಸಿಗಲ್ಲ ಈ ಕತ್ಲಾಗೆ. ಇವರ ವಯಸಿಗಿಷ್ಟು ! ಬಜಾರಿನಲ್ಲಿ ಇಷ್ಟು ಗದ್ದಲ ಆಗ್ತಿದ್ರೆ ಗೊರಕೆ ಹೊಡೆದು ನಿದ್ರೆ ಮಾಡ್ತಿದಾರೆ. ಈ ತುಂಟ ಹುಡುಗ್ರನ್ನ ಏನ್ಮಾಡ್ಲಿ ? ಕಣ್ಮುಂದೆ ಮಗ, ಸೊಸೆ ಕಣ್ಮುಚ್ಚಿಕೊಂಡು ಹೋದ್ರು. ಈ ಹುಡುಗೀನ್ನ ನನ್ನ ಮಡಿಲಿಗೆ ಹಾಕಿದ್ರು. ಏಟು ಹಾಕಿದ್ರೆ ರಗಳೆ. ಹಾಕದಿದ್ರೆ ಬುದ್ದಿ ಬರಲ್ಲ. ಇದೇನು ಪೀಡೆ ತಂದಿಟ್ಟೆ ತಂದೇ ನನ್ನ ಪ್ರಾಣಕ್ಕೆ ! ಎಲ್ಲಿದೀಯೋಮಗನೇ ! ನನ್ಮಗನೇ! ಮುದುಕಿನ್ನ ಬಿಟ್ಟು ಹೋದೆಯಲ್ಲಾ ಮಗನೇ ! ನಾ ಏನ್ಮಾಡ್ಲಿ ಮಗನೇ! ನನ್ಮಗನೇ!” ಮುದುಕಮ್ಮ ಆರ್ಭಾಟದಲ್ಲಿ ಅಳಲಾರಂಭಿಸಿದಳು. ಹೊರಗಿನವರು ನಾನಾ ತರ ಮಾತಾಡ್ತಾಇದ್ದರು. “ಪಾಪ ಹೋಗ್ಲಿ ! ” ಅಂತ ಒಬ್ಬರೆಂದರೇ ” ಹಾಗೇನಿಲ್ಲ ! ಆ ಮುದುಕಿ ಮಹಾ ಬದ್ಮಾಷ್…” ಅಂತ ಮತ್ತೊಬ್ಬರು, ಹೀಗೆ

ಮಾಜಿ ಪ್ರದಾನಿಯವರ ಅನುವಾದಿತ ಕಥೆ Read Post »

ಕಾವ್ಯಯಾನ

ರಾಜು ಹೆಗಡೆಯವರ ಕವಿತೆಗಳು

ಕವಿತೆ ರಾಜು ಹೆಗಡೆಯವರ ಕವಿತೆಗಳು ಸಂಜೆಯ ವಾಕಿಂಗ್        ಇನ್ನೂ ಚುಕ್ಕಿಗಳು ಚಿಗುರದ ಆಕಾಶ ತೆಳುವಾಗಿ ಬೆಳಕು ಕತ್ತಲೆ ಬೆರೆತು ಉರಿಯುವ ಸಮಯ. ಆಗಲೇ ಲೈಟನ್ನು ಹೊತ್ತು ಓಡುವ ಕಾರು, ಮೋಟಾರು. ನಡೆಯಲಾರದೆ ನಿಂತ ಬೀದಿ ದೀಪಗಳು ಕೂಗಿದರೆ ಮಾತ್ರ ಕೇಳುವ ದೂರದ ಸಾಲು ಮರಗಳಲ್ಲಿ ಮೊರೆವ ಹಕ್ಕಿಗಳ ಮೌನ ಈಗಷ್ಟೇ ಬಿಟ್ಟು ಹೋದ ಪ್ರೇಮಿಗಳ ಪಿಸು ಮಾತಿನ ಬಿಸಿಯ ಹೀರುತ್ತ, ಸಾವಕಾಶವಾಗಿ ಒಂದೊಂದೆ ಹೆಜ್ಜೆಯಲ್ಲಿ ದಾಟುತ್ತಿದ್ದೇನೆ ಮರಗಳನ್ನು ದೀಪಗಳನ್ನು….. ———— ೨ ತಿರುಮಲೇಶರ….. ಅವರೀಗ ಹೈದರಾಬಾದನಲ್ಲಿದ್ದಾರೆ ಕಾರಡ್ಕದಿಂದ ಬಂದವರು ಕಾಸರಗೋಡು, ಕೇರಳ, ತಿರುವ— ನಂvಪುರಗಳಲ್ಲಿ ಇದ್ದು ಹೋಗಿದ್ದಾರೆ ಹೆಗ್ಗೋಡಿನ ‘ಶಿಬಿರ’ದಲ್ಲಿ ಕುಳಿತಿದ್ದನ್ನು ಸ್ವತ: ನೋಡಿದ್ದೇನೆ ಎಷ್ಟೋ ಕೈಗಳಲ್ಲಿ, ಕಪಾಟಿನಲ್ಲಿ, ಮನಸ್ಸಿನಲ್ಲಿ…..ಯೆಮೆನ್! ಒಮ್ಮೆ ಸಾಲಾರ್‌ಜಂಗ್ ಮ್ಯೂಸಿಯಂಗೆ ಹೋದಾಗ ನನಗೆ ಫಸ್ಟಿಗೆ ಹಂಬಲಾದದ್ದು ಅವರ ಪದ್ಯವೇ. ಸದ್ಯದಲ್ಲಿ ಕುಣಿದವರು ಸದ್ದಿಲ್ಲದೇ ಹೋಗಿದ್ದಾರೆ ಹುಗಿದ ನಿಧಿಯನ್ನು ಹಾವಾದರೇನು, ಸುತ್ತಿರುಗಿ ಸುಳಿದು ತೋರಿಸಿದ ಕತೆ ನಿಮಗೆ ಗೊತ್ತಿದೆ ನಾವುಂಡ ಗಾಳಿಯನ್ನೂ ಕನಸನ್ನೂ ಮೊದಲೇ ಕಂಡವರು ‘ಅವ್ಯಯ’ ವಾಗಿ ‘ಅಕ್ಷಯ’ವಾಗಿರುವವರು ಕುಂಡೆ ತೊರಿಸುತ್ತಾ ಕಲಾಯಿ ಹಾಕುವವರು ಎಲ್ಲೋ ಹೋದ ಖತೀಜಾ ಹೀಗೇ…. ’ಆಮೆ’ಯಿಂದ ‘ಆನೆ’ಯವರೆಗೆ, ಸಿಟ್ಟಿಲ್ಲದೆ ಕೂತವರು ಅದೆಷ್ಟು ಮಂದಿ ಬೆಳಗಿದ್ದಾರೆ ಎಷ್ಟೊಂದು ದೊಂದಿ! ‘ಇರುವುದು ಇಲ್ಲವಾಗುವುದಿಲ್ಲ ಇಲ್ಲದಿರುವುದು ಇರುವುದಿಲ್ಲ’ ಅಲ್ಲವೆ ಸರ್ ಅಥವ ಇಲ್ಲವೇ. ************************************

ರಾಜು ಹೆಗಡೆಯವರ ಕವಿತೆಗಳು Read Post »

ಪುಸ್ತಕ ಸಂಗಾತಿ

“ಧ್ಯಾನಸ್ಥ ಕವಿತೆಗಳು”

ಪುಸ್ತಕ ಸಂಗಾತಿ “ಧ್ಯಾನಸ್ಥ ಕವಿತೆಗಳು”  “ಥಟ್ ಎಂದು ಬರೆದು ರಸೀದಿಯಲ್ಲ ಕವಿತೆ” ಶೀರ್ಷಿಕೆಯ ಕಾರಣಕ್ಕಾಗಿಯೇ ಸೆಳೆವ ಕವನ ಸಂಕಲನವಿದು. ರಸೀದಿ ಎನ್ನುವುದು ಯಾವುದೇ ವಸ್ತು ವಿಲೇವಾರಿಯಾಗಿದ್ದಕ್ಕೆ ನೀಡುವ ಸಾಕ್ಷö್ಯ. ಮತ್ತದು ವ್ಯವಹಾರದ ನಂಬಿಕೆ ಮತ್ತು ಅಪನಂಬಿಕೆಯನ್ನು ಬಿಂಬಿಸುತ್ತದೆ. ನಂಬಿಕಸ್ಥ ನಡವಳಿಕೆ ಎನ್ನುವ ಹೊತ್ತಿನಲ್ಲಿಯೇ ಅಪನಂಬಿಕೆಯ ಜಾಡು ಕೂಡ ಇದೆ ಎನ್ನುವುದನ್ನು ಸೂಚ್ಯವಾಗಿ ಸೂಚಿಸುತ್ತಿರುತ್ತದೆ. ಆದರೆ ಕವಿತೆಗಳು ಹಾಗಲ್ಲ ಎನ್ನುವ ನಂಬಿಕೆ ಸುಮಿತ್ ಮೇತ್ರಿಯದು. ಮತ್ತು ಇಲ್ಲಿನ ಕವಿತೆಗಳದ್ದು ಕೂಡ ಹೀಗಾಗಿಯೇ ಇವು ಎದೆಗಿಳಿಯುತ್ತವೆ. ಕಂಡದ್ದನ್ನು ಪ್ರಾಮಾಣಿಕವಾಗಿ ಇಷ್ಟೇ ನನಗೆ ಹೊಳೆದದ್ದು ಎನ್ನುತ್ತ ಮುಗ್ಧವಾಗಿ ನೋಡುತ್ತವೆ. ಕೆಲವೊಮ್ಮೆ ಸಿಡಿಮಿಡಿಗೊಳ್ಳುತ್ತವೆ. ನೋವುಗಳ ಹಿಡಿ ಹಿಡಿದು ಅನಾವರಣಗೊಳಿಸುತ್ತವೆ. ಮತ್ತೆ ಮತ್ತೆ ನಾನು ಹೇಳಲಿಕ್ಕೆ ಹೊರಟದ್ದು ಇದ್ದಲ್ಲ ಎನ್ನುತ್ತ ಗೋಜಲಿಗೆ ಬೀಳಿಸುತ್ತವೆ. ಹೀಗಾಗಿಯೆ ಇವರ ಕವಿತೆ ನಿರುದ್ಯೋಗಿ ದೇವರಂತೆ, ಉಲ್ಟಾ ಹೊಡೆಯುವ ವ್ಯಾಕರಣದ ಹಾಗೆ ಕಾಣಿಸುತ್ತದೆ. ಅಂತೆಯೇ, “ಕವಿತೆಗಳಿಗೆ ಮಾರುಕಟ್ಟೆ ಇಲ್ಲ” ಸ್ವಾಮಿ  ಹೆಣ್ಣು ಕೊಡುವ ಮಾತಂತು ಬಿಡಿ  ಹೊಟ್ಟೆ ತುಂಬುವುದಿಲ್ಲ”    ( ನಿರುದ್ಯೋಗಿ ದೇವರು) “ಸತ್ತವರಿಗೆ ಮಾತ್ರ ಬದುಕುವ ಅರ್ಹತೆ ಇಲ್ಲಿ ಜಾತಿಗಳಿಗಾಗಿ ಕೊಲೆಯಾಗುತ್ತದೆ ಕ್ಷಮಿಸಿ, ಜಾತಿಗಳು ಕೊಲೆಯಾಗುವುದಿಲ್ಲ ಮತಗಳಾಗುತ್ತವೆ” ಎನ್ನುವ ಕಟು ವಾಸ್ತವªನ್ನು ನಿರಾತಂಕವಾಗಿ ದಾಖಲಿಸುತ್ತವೆ. ಇಲ್ಲಿನ ಕವಿತೆಗಳಿಗೆ ಸ್ಪಷ್ಟವಾದ ಧ್ವನಿಯಿದೆ. ಅವು ನೋವುಗಳನ್ನು ಗುನುಗುತ್ತ ಸುಮ್ಮನೆ ಕೂರುವುದಿಲ್ಲ. ಕಾರಣಗಳನ್ನು ನೇರವಾಗಿ ಪ್ರಶ್ನಿಸುತ್ತವೆ. ಉತ್ತರ ಹುಡುಕುವ ಸಲುವಾಗಿ ನಿರಂತರ ಶ್ರಮಿಸುತ್ತವೆ. ನಿಮಗಾದರೂ ನಾಚಿಕೆಯಾಗಬೇಕಿತ್ತು ಎನ್ನುತ್ತವೆ. ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಹೆಕ್ಕಿ ತರುತ್ತವೆ. ಯಾರಲ್ಲಿ? ಬಾಯಾರಿದ ಪಾರಿವಾಳದ ಕತ್ತು ಹಿಸುಕಿ ಕೊಲ್ಲುವವರು. (ಬಿಸಿಲು ತೊಟ್ಟವರು) ಹಸಿವು ಯಾರಪ್ಪನ ಮನಿದು ತುಂಡು ರೊಟ್ಟಿ ಕೊಡು, ಹಸಿವು ಇಲ್ಲದೆ ಹೋಗಿದ್ದರೆ ಹುಟ್ಟುತ್ತಿತ್ತೆ ಕವಿತೆ? (ತುಂಡು ರೊಟ್ಟಿಯ ಕವಿತೆ) ಇನ್ನು ಇಲ್ಲಿ ಹಲವಾರು ಪ್ರೇಮದ ಸಾಲುಗಳಿವೆ. ಅವು ಯಾವುದು ದೈಹಿಕ ವಾಂಛೆಯ ಬಡಬಡಿಕೆಗಳಲ್ಲ. ಪ್ರೇಮವನ್ನು ದೈವತ್ವಕ್ಕೇರಿಸುವ ಅದು ಶರೀರದ ಆಚೆಗಿನದ್ದು ಎನ್ನುವ ಸಾಲುಗಳು ಮತ್ತೆ ಮತ್ತೆ ಹಿಡಿದು ನಿಲ್ಲಿಸುತ್ತವೆ “ಕ್ಷಮಿಸು ಭಗವಂತ ಅವಳಷ್ಟು ನಿನ್ನನ್ನು ಪ್ರೀತಿಸಲಾರೆ” (ಕ್ಷಮಿಸು ಭಗವಂತ) ಎನ್ನುವ ನಿಷ್ಕಾರಣ ಒಲವಿನ ಪ್ರೇಮದ ಜೊತೆಯಲ್ಲಿಯೆ “ರಾಧೆ ನನ್ನ ನೆನಪಿಗಾಗಿ ನವಿಲು ಗರಿಯೊಂದನಿಟ್ಟುಕೋ ನಿನಗೆ ಬೇಸರವಾದಾಗ ಮನದ ಮಿದುವಾಗಿ ನಿನಗೆ ಚೈತನ್ಯ ತಂದೇನು” ಎನ್ನುವ ಕೃಷ್ಣನ ನಿವ್ಯಾಜ್ಯ ಪ್ರೀತಿಯ ಘಮಲು ಇದೆ (ಆತ್ಮಸಖ) “ಕಾದ ಚಲುವೆಗೊಂದು ಕವಿತೆ” “ಪ್ರಿಯಕರನ ಉನ್ಮತ್ತತೆ” “ಬೆರಗು” ಮತ್ತು ಇತರೆ ಕವಿತೆಗಳು ಪ್ರೇಮದ ರೂಹನ್ನು ಕಟ್ಟಿಕೊಡುತ್ತವೆ. ಇಲ್ಲಿ ಗಾಲಿಬ್ ಇದ್ದಾನೆ, ಸಾಕಿ ಇದ್ದಾಳೆ, ಧುತ್ತೆಂದು ಎದುರಾಗುವ ರೂಪಕಗಳು ಘಕ್ಕನೆ ನಿಲ್ಲಿಸುವ ತಿರುಗುಗಳು ಈ ಕವಿತೆಗಳನ್ನು ಓದಲು ಪ್ರೇರೇಪಿಸುತ್ತವೆ.  ಬಹಳಷ್ಟು ಒಳ್ಳೆಯ ಕವಿತೆಗಳು ಓದಿಗೆ ದಕ್ಕುತ್ತವೆ. ಕವಿತೆಯ ಜಾಡನ್ನು ತಮ್ಮದಾಗಿಸಿಕೊಂಡ ಸುಮಿತ್ ಮೊದಲ ಸಂಕಲನದಲ್ಲಿಯೆ ತಮ್ಮ ಗಟ್ಟಿಯಾದ ಹೆಜ್ಜೆಯೊಂದನ್ನು ಊರಿದ್ದಾರೆ. “ಸೋಲಿನ ಬಗ್ಗೆ ಭಯಪಡಬೇಡ ಅಂತ ಹೇಳಾಗಿದೆ ಗಾಲಿಬ್ ಗಣಿತದ ಆರಂಭ ಸೊನ್ನೆಯಿಂದಲೇ ಅಲ್ವಾ” ಎನ್ನುವ ಭರವಸೆಯೊಂದಿಗೆ ಆರಂಭವಾಗಿರುವ ಇವರ ಈ ಕಾವ್ಯಯಾನ ಕಾಜಾಣ ಪ್ರಕಾಶನದಿಂದ ಬೆಳಕು ಕಂಡಿದೆ. ಕೇಶವ ಮಳಗಿ ಅರ್ಥವತ್ತಾದ ಮುನ್ನುಡಿ, ಕೆ.ವಿ ತಿರುಮಲೇಶರ ಬೆನ್ನುಡಿ ಈ ಹೊತ್ತಿಗೆಯ ಮೌಲ್ಯ ಹೆಚ್ಚಿಸಿದೆ. ****************************** ದೀಪ್ತಿ ಭದ್ರಾವತಿ

“ಧ್ಯಾನಸ್ಥ ಕವಿತೆಗಳು” Read Post »

ಕಾವ್ಯಯಾನ

ಹಕ್ಕು

ಕವಿತೆ ಹಕ್ಕು ರಜನಿ ತೋಳಾರ್ ನಿನ್ನನೆನಪುಗಳ ಶಿಖರದಮೇಲೆಮನೆಯಕಟ್ಟಿರುವೆನೀಚೂರುಚೂರುಮಾಡಿದಕನಸುಗಳಚೂರುಗಳ ಮೆಟ್ಟಿಲುನೋಡಿದಾಗಲೆಲ್ಲಾಪಾದಗಳಲ್ಲಿನೆತ್ತರು! ಮಂದಹಾಸದಮರೆಯಲ್ಲಿಬಚ್ಚಿಡುವಹನಿಗಳಕತ್ತಲಲ್ಲಿಬಿಚ್ಚಿದಾಗಹೊತ್ತಿಕೊಳ್ಳುವಹಣತೆಯಪ್ರತಿಉಸಿರಿನಲ್ಲೂನಿನ್ನದೇನಗುವಿನನೆರಳು! ನಿನ್ನಬರುವಿನಹಂಬಲವೇನಿಲ್ಲ…ಈನೆನಪುಗಳಮೇಲೆಹಕ್ಕುಕೇವಲನನ್ನದಾಗಿರಲಿಎಂಬುದೊಂದೇಛಲವು! ಹಕ್ಕುಕಾಯಿದೆಗಳಜಾತ್ರೆಗೆಜೊತೆಗೊಯ್ದುಕೊಡಿಸಿಹಾಳೆತುಂಬಾಪದಗಳಕ್ಷಣದಲ್ಲೇಕಣ್ಮರೆಯಾದೆಅಂದುಉಡುಗೊರೆಯಕೊಟ್ಟು! ಪದಗಳಬೇಡಿಯಿಂದಅಕ್ಷರಗಳಬಿಡಿಸಿಬಿತ್ತಿರುವೆಬೇಲಿಸುತ್ತಲೂನಿನ್ನನೆನಪಿನಲ್ಲಿಚಿಗುರಿಕವನವಾಗಲು!

ಹಕ್ಕು Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಜ್ಯೋತಿ ಡಿ.ಬೊಮ್ಮಾ ಎಳ್ಳು ಬೆಲ್ಲ ಜೊತೆಗೆ ಬೆಸೆದುಸಮರಸದಲ್ಲಿ ಬಾಳು ಹೊಸೆದುನೀಗಲಿ ಮನದ ಮತ್ಸರಬರುವ ಹತ್ತಿರ ಹತ್ತಿರ. ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣಕಟ್ಟಿ ಮನೆ ಮನೆಗೂ ತಳಿರು ತೋರಣಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ. ನವಯುಗದ ಪಥವ ಹಿಡಿದುಉತ್ತರಾಯಣ ಪಣ್ಯಕಾಲವ ಸೇರಲುಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥಲಭಿಸಲಿ ಸಕಲರಿಗೂ ನೆಮ್ಮದಿ ಅನವರತ. ಎಳ್ಳು ಬೆಲ್ಲ ತಿಂದು ದೂರಾಗಲಿಮನಮನದಲ್ಲೂ ಬತ್ತಿದೊಡಕುಶಾಂತಿಯಲ್ಲಿ ನೆಟ್ಟ ಹಗೆಯ ಕನಸೂಓ ಸಂಕ್ರಾಂತಿಯೆ..ನೀ ಎಂದೆಂದಿಗೂ ಶುಭವ ಒಲಿಸು. ***************************************

Read Post »

You cannot copy content of this page

Scroll to Top