ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಕತ್ತಲೆಯನ್ನು ಹಿಂಜಿ ಪಡೆದ ಬೆಳಕು

ಹೇಮಾ ಸದಾನಂದ್ ಅಮೀನ್

Pensive man in dark room in sunlight

ಕಣ್ಣೆದುರು ಹಾದುಹೋಗುವ ಚಿತ್ರಗಳನ್ನು
ದಂಗಾಗಿ ನೋಡುತ್ತಿದ್ದಂತೆ ಎಲ್ಲವೂ
ಹೊಸದಾಗಿ ಕಾಣಿಸಿಕೊಳ್ಳುವವು
ಅಪರಿಚಿತ ನಗರದ ಸಂತೆಯಲ್ಲಿ
ಮಾರಾಟದ ಸರಕುಗಳಾಗಿ ಹರಾಜಿಗೆ
ಕಾದು ಕುಳಿತ ವಸ್ತುಗಳಲ್ಲಿ
ಒಂದಿಷ್ಟು ಭಾವನೆಗಳೂ ತಿಳಿಯದಂತೆ
ಮಾರಿ ಹೋಗುವುದು

ಸಾಂತ್ವನದ ಕ್ಷಣದಲ್ಲಿ ಹೊಸ ಪರಿಚಯ
ಜೀವವೀಣೆ ತಳಿದು ಮಿಡಿದ ತಂತಿಯ
ಲೆಕ್ಕ ತಪ್ಪಿಹೋದರೂ ಸೋಜಿಗವಲ್ಲ
‘ ಸಬ್ ಚಲ್ತಾ ಹೈ’ ಎಂಬ ದನಿಯಲಿ
ಕರಗಿದ ಮೌನ ಆಗಾಗ ಮಿಸುಕಾಡಿದರೂ
ಮಾತಿನ ಚೌಕಟ್ಟಿನಾಚೆ ಸ್ತಬ್ದವಾಗುವ
ಲಾಲಿ ಹಾಡುಗಳನ್ನು ನೀವೂ ಕೇಳಿರಬಹುದು

ಇದು ನಶೆ, ಇದ್ದುದ್ದನ್ನು ಮರೆತು
ಇಲ್ಲದರ ಹಿಂದೆ ಧಾವಿಸುವ ಮತ್ತು
ತೊದಲು ಹೆಜ್ಜೆಗಳನ್ನಿಡುತ್ತಾ ಕಂಪನದ ಕೈಗಳಿಂದ
ಕತ್ತಲೆಯನು ಬಿಡಿ ಬಿಡಿಯಾಗಿ ಹಿಂಜಿ
ಬೆಳಕಿನ ರೂಪ ಕೊಡುವ ಹುಚ್ಚು ಹಠದಲಿ
ಗೆದ್ದವರು ಸೋತವರು ಒಂದೇ ಗ್ರಹದ
ಒಂದೇ ಮನೆಯ ಜೀವಿಗಳೆಂದರೆ ,
ನಿಮಗೂ ಆಶ್ಚರ್ಯವಾದಿತು!


About The Author

1 thought on “”

Leave a Reply

You cannot copy content of this page

Scroll to Top