ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ ಆಸೆಗೆ ಮೃದಂಗದ ನಾದ ತಾಳಕ್ಕೆ ತುಂಡಾಯಿತು ನೂಪುರ ಮಾಲೆಅವನ ಧ್ಯಾನ “ಪ್ರಭೆ”ಯಲಿ ತಲೀನಳಾಗಿ ಸೋಲುವ ಆಸೆ ************************************

ಗಜಲ್‌ Read Post »

ಕಾವ್ಯಯಾನ

ಹೊಸ‌ ದಿಗಂತ

ಕವಿತೆ ಹೊಸ‌ ದಿಗಂತ ಅಕ್ಷತಾ ಜಗದೀಶ ಚುಮ್ಮು ಚುಮ್ಮು‌ ನಸುಕಿನಲಿಮುಂಜಾನೆಯ ನಡಿಗೆ..ತಾ ಬರುವ ಸೂಚನೆ ನೀಡುತದಿನಕರ ಮೂಡುವ ಘಳಿಗೆ..ಹಕ್ಕಿಗಳ ಮಧುರ ಇಂಚರ ನಾದತಲೆ ತೂಗುತ ನಿಂತಿವೆನಡೆವ ದಾರಿಯ ಇಕ್ಕೆಲಗಳಲ್ಲಿಹೂ ಗಿಡ ಬಳ್ಳಿಗಳು….. ಅದೇಕೋ ಏನೋ..ಕಾಣದಾಗಿದೆ ಇಂದುಆ ಸುಂದರ ಕ್ಷಣಗಳು..ಮುಂಜಾನೆ ನಡಿಗೆ ಇದೆ…ಮೈ ಕೊರೆಯುವ ಚಳಿಯು ಇದೆದಿನಕರನ ಆಗಮನವು ಆಗುತಿದೆ..ಆದರೇನು…?ಹಕ್ಕಿಗಳ ನಾದವಿಲ್ಲದಾರಿಯ ಇಕ್ಕೆಲಗಳಲ್ಲಿಸ್ವಾಗತ ಕೋರುತ ನಿಂತಮರಗಿಡಗಳು ಕಾಣದಾಗಿದೆ… ಹಾ! ಈಗ ಅರಿವಾಯಿತೆನಗೆನಾ ನಡೆದ ದಾರಿ ಈಗಮರ ಗಿಡಗಳ‌ ನುಂಗಿ ನಗರವಾಗಿದೆಕೆರೆಗಳಿಲ್ಲ ಮರ ಗಿಡಗಳಿಲ್ಲಚಿಲಿಪಿಲಿ ಹಾಡುವ ಹಕ್ಕಿಗಳಿಲ್ಲ ವಿಪರ್ಯಾಸವೆಂದರೆ …..ಅದರ ಆಲೋಚನೆ ನಮಗಿಲ್ಲ‌‌..ಹೊಸ ದಿಗಂತದ ಹಾದಿಯಲಿಬಾಡಿಹೋಗಿವೆ ಹೂ ಗಿಡ ಬಳ್ಳಿ.. ಮತ್ತೆ ಮೂಡಣದಲಿ ರವಿ ಮೂಡುತಲಿರುವ…ಮುಂಜಾನೆಯ ನಡಿಗೆ ಮತ್ತೆನಿರಂತರವಾಗಿ ಸಾಗಿದೆಹೊಸ ದಿಗಂತದೆಡೆಗೆ….. *********************************

ಹೊಸ‌ ದಿಗಂತ Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು ***************************

ಗಜಲ್‌ Read Post »

ನಿಮ್ಮೊಂದಿಗೆ

ರಿಂಗಣ

ಕವಿತೆ ರಿಂಗಣ ನೀ. ಶ್ರೀಶೈಲ ಹುಲ್ಲೂರು ವಿರಮಿಸದ ಮನವೆ ನೀನುರಮಿಸಬೇಡ ಹೀಗೆ ನನ್ನಕೆನ್ನೆ ತಟ್ಟಿ ತುಟಿಯ ಮುಟ್ಟಿಹೇಳಬೇಡ ‘ನೀನೆ ಚೆನ್ನ’ ಏಕೆ ಹೀಗೆ ಲಲ್ಲೆಗರೆವೆ ?ಮೆಲು ದನಿಯಲಿ ನನ್ನ ಕರೆವೆನಿನ್ನ ಬಳಿಗೆ ಬರುವೆ ನಾನುಒಲವ ತೋರಿ ನನ್ನೆ ಮರೆವೆ ಬಾನ ದಾರಿಗುಂಟ ನಡೆವೆನಿನ್ನ ತೋಳ ಮೇಳದಲ್ಲಿಚಂದ್ರ ತಾರೆ ಹಿಡಿದು ತರುವೆಕಣ್ಣ ಬಿಂಬದಾಳದಲ್ಲಿ ನಭಕು ನೆಲಕು ಸೆರಗ ಹಾಸಿಚುಕ್ಕಿ ಚಿತ್ರ ಬರೆವೆ ನಾನುನನ್ನ ಅಂದ ಕಂಡು ಹಿಗ್ಗಿಹೊತ್ತು ಒಯ್ವೆ ನನ್ನ ನೀನು ಹೀಗೆ ಇರಲಿ ನಮ್ಮ ಒಲವುಸುರಿಸುತಿರಲಿ ಜೇನು ಮಾವುಸವಿದು ಕುಣಿದು ತಣಿದು ಚಣದಿಬೀಗಿ ನೀಗಲೆಮ್ಮ ನೋವು ***********************************

ರಿಂಗಣ Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಎಡವಿದವನಿಗೂ ಸಣ್ಣ ಸಹಾನುಭೂತಿ ಸಿಗಲಿ ಬಹುಶಃ ನಾನವಾಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಂದು ಭಾನುವಾರ. ಅವತ್ತು ನಾವೆಲ್ಲ ಹೀಗೇ ಆಟ ಆಡುತ್ತಿದ್ದೆವು. ಶಾಲೆಯ ಸುತ್ತಮುತ್ತ ನಾನು, ಶ್ರುತಿ, ಸ್ವಪ್ನ ಮತ್ತೆ ಇನ್ನೂ ಒಂದಿಷ್ಟು ಗೆಳತಿಯರು, ಆಡಿ ಆಡಿ ಸುಸ್ತಾದೆವು. ಕೊನೆಗೆ ನೀರು ಕುಡಿಯಬೇಕೆನಿಸಿತು ಎಲ್ಲರಿಗೂ. ಅಲ್ಲಿಯೇ ಇದ್ದ ಬೋರನ್ನು ಹೊಡೆಯತೊಡಗಿದೆವು. ನೀರು ಬಂತು. ಒಬ್ಬೊಬ್ಬರೇ ನೀರು ಹೊಡೆಯುವುದು, ಉಳಿದೆಲ್ಲರು ಸರತಿಯಲ್ಲಿ ಮುಖತೊಳೆದು ನೀರುಕುಡಿಯುವುದು ಮಾಡುತ್ತಿರುವಾಗ, ನಾನೊಂದಿಷ್ಟು ಬೋರು ಹೊಡೆಯುವ ಉಳಿದವರು ಕುಡಿಯಲಿ ಎಂದು ಹಿಂದೆ ಬಂದೆ. ಆದರೆ ಅಚಾನಕ್ ಬೋರಿನ ಸಂದಿಯಲ್ಲಿ ಶ್ರುತಿ ಕಿರುಬೆರಳು ಇಟ್ಟಿದ್ದು ಗೊತ್ತೇ ಆಗಿರಲಿಲ್ಲ. ನಾನು ಹೊಡೆದ ಮೊದಲ ಹೊಡೆತಕ್ಕೇ ಅವಳು ಪ್ರಾಣ ಹೋಗುವಂತೆ ಚೀರಿಬಿಟ್ಟಿದ್ದಳು. ನನಗಾದ ಗಾಬರಿಯೂ ವರ್ಣಿಸಲಸದಳ. ಅವಳ ಕೈಯಿಂದ ಧಾರಾಕಾರ ರಕ್ತ ಸುರಿಯತೊಡಗಿತ್ತು. ಅಲ್ಲೇ ಇದ್ದ ಅಕ್ಕಪಕ್ಕದ ಮನೆಯವರು ಅರಶಿನ ತಂದು ಗಾಯಕ್ಕೆ ಒತ್ತಿ ಬಟ್ಟೆ ಕಟ್ಟಿದರು. ಅವಳನ್ನು ಸಮಾಧಾನಿಸುತ್ತಿದ್ದರು. ಉಳಿದ ಗೆಳತಿಯರೆಲ್ಲರೂ ಅವಳ ಆಜೂ ಬಾಜೂ ನಿಂತು ಅವಳನ್ನು ಸಮಾಧಾನಿಸತೊಡಗಿದರು. ಅವಳ ಅಳು ತಹಬದಿಗೆ ಬರತೊಡಗಿತ್ತು. ಯಾರೊಬ್ಬರೂ ನನ್ನನ್ನು ಅತಿಯಾಗಿ ಬೈದದ್ದು ನೆನಪಿಲ್ಲ. ಆದರೆ ಅವರೆಲ್ಲರ ದೃಷ್ಟಿ ಮಾತ್ರ ನನ್ನನ್ನು ತಪ್ಪಿತಸ್ಥಳೆಂದು ನೋಡುತ್ತಿದ್ದವು. ಅದು ಮಾತ್ರ ಚಂದ ನೆನಪಿದೆ. ಶ್ರುತಿ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಅವಳಿಗೆ ಬಹಳ ನೋವಾಗಿತ್ತು.  ಆ ಕ್ಷಣ ಭೂಮಿ ಬಾಯಿಬಿಡಬಾರದಾ ಅಂತನಿಸಿದ್ದು ಸುಳ್ಳಲ್ಲ ನನಗೆ. ಅವಳ ಅಪ್ಪ ಅಮ್ಮ ನನಗೆ ಬಯ್ಯುತ್ತಾರಾ? ನನ್ನ ಅಪ್ಪ ಅಮ್ಮನಿಗೆ ನಾ ಹೀಗೆ ಮಾಡಿದೆ ಅಂತ ಗೊತ್ತಾದರೆ ಖಂಡಿತಾ ಹೊಡೆಯುತ್ತಾರೆ, ಈಗ ಏನು ಮಾಡಲಿ? ಮತ್ತೆ ನನ್ನೊಂದಿಗೆ ಅವಳು ಆಟಕ್ಕೆ ಬರುವುದಿಲ್ಲವಾ? ಇಲ್ಲಿಗೆ ಎಲ್ಲ ಮುಗಿಯಿತಾ? ಅದೆಂಥ ಆತಂಕ, ಭಯ, ಹಿಂಸೆ ಆಗತೊಡಗಿತೆಂದರೆ, ನನ್ನೊಂದಿಗೆ ಧೈರ್ಯಹೇಳಲಿಕ್ಕೆ ಯಾರೂ ಇರಲಿಲ್ಲ. ಏನು ಮಾಡಲಿ, ಎತ್ತ ಹೋಗಲಿ, ಮನೆಗೆ ಹೋಗಲಾ, ಬೇಡವಾ… ಹೋಗದೆ ಆದರೂ ಎಲ್ಲಿ ಹೋಗಲಿ… ಕಾಡತೊಡಗಿತು. ಅವತ್ತು ಅದೆಷ್ಟು ಸಂಕಟವಾಗಿತ್ತು ನನಗೆ. ಬಹಳ ಅತ್ತಿದ್ದೆ. ಅಷ್ಟೊಂದು ರಕ್ತವನ್ನ ಅದೇ ಮೊದಲು ನಾನು ನೋಡಿದ್ದದ್ದು. ವಿಪರೀತ ಭಯವಾಗಿಬಿಟ್ಟಿತ್ತು. ಶ್ರುತಿ ಅಳುತ್ತಿದ್ದರೆ, ಅವಳನ್ನು ತಬ್ಬಿ ಸಂತೈಸಬೇಕು ಅನಿಸುತ್ತಿತ್ತು. ಆದರೆ ಸುತ್ತಲಿದ್ದ ಯಾರೂ ಅದಕ್ಕೆ ಅವಕಾಶ ಕೊಡದಂತೆ ಅವಳನ್ನು ತಮ್ಮ ಕರುಣೆಯ ಅರಿವೆಯಲ್ಲಿ ಸುತ್ತಿಟ್ಟುಬಿಟ್ಟಿದ್ದರು. ನನ್ನ ಅಳು ಯಾರಿಗೂ ಕಾಣಲಿಲ್ಲ. ಅವತ್ತೆಲ್ಲ ಬಹಳ ಹೊತ್ತು ಹೊರಗೇ ಎಲ್ಲೆಲ್ಲೋ ಅಲೆದು ಮನೆಗೆ ಬಂದೆ. ನಾನು ಎಣಿಸಿದಷ್ಟು ಘೋರವಾದದ್ದು ಏನೂ ನಡೆಯಲಿಲ್ಲ. ಆದರೆ ಆ ಘಟನೆಯ ನಂತರ ಶ್ರುತಿ ಮತ್ತೆ ನಾನು ಮತ್ತೆ ಆಟ ಆಡಲಿಲ್ಲ. ಬಹುಶಃ ನನ್ನೊಂದಿಗೆ ಆಟವಾಡಲಿಕ್ಕೆ ಭಯವಾಯಿತಾ ಅವಳಿಗೆ, ಅಥವಾ ಅವಳ ಅಪ್ಪ ಅಮ್ಮನಿಗೆ ಬೇಸರವಾಗಿತ್ತಾ, ಅಥವಾ  ಬೇರೆ ಏನಾದರೂ ಆಯಿತಾ… ಏನೇನೋ ತಳಮಳಗಳು… ಅವರ ಕಣ್ಣೋಟಗಳು ವಿಚಿತ್ರವಾಗಿರುತ್ತಿದ್ದವು. ಅವುಗಳ ಅರ್ಥ ತಿಳಿಯುವಷ್ಟು ದೊಡ್ಡವಳಿರಲಿಲ್ಲ ನಾನು… ಆದರೆ ಶ್ರುತಿಯ ಬಗ್ಗೆ ನೆನೆದಾಗಲೆಲ್ಲ ಪಾಪ ಎನಿಸುತತಿತ್ತು. ಅವಳಿಗೆ ನಿಜಕ್ಕೂ ಬಹಳ ನೋವಾಗಿತ್ತು. ಅವಳ ಅಪ್ಪ ಅಮ್ಮನಿಗೂ ಬೇಸರವಾಗಿದ್ದಿರಬಹುದು… ಅದು ತಪ್ಪೂ ಅಲ್ಲ… ಆದರೆ ಬಹಳ ವರ್ಷಗಳ ನಂತರ ನಾನೀಗ ಶಿಕ್ಷಕಿ… ನನ್ನದೇ ಶಾಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳಿಗೆ ನಾನು ಪ್ರತಿನಿತ್ಯ ಸಾಕ್ಷಿಯಾಗುತ್ತಿರುತ್ತೇನೆ. ಆದರೆ ಇಂತಹ ಆಕಸ್ಮಿಕ ಪ್ರಕರಣಗಳಲ್ಲಿ ಸಹಾನುಭೂತಿ ಎನ್ನುವುದು ಅವಘಡಕ್ಕೆ ಗುರಿಯಾದವರಿಗೆ ಸಿಗುವಷ್ಟು ಸುಲಭವಾಗಿ ಅದನ್ನು ಮಾಡಿದವರಿಗೆ ಸಿಗುವುದಿಲ್ಲ. ಅವರ ಅರಿವನ್ನು ಮೀರಿ ನಡೆದ ಘಟನೆಯೊಂದು ಅವರನ್ನು ಅದೆಷ್ಟು ನೋಯುವಂತೆ, ಅವಮಾನ ಪಡುವಂತೆ ಮಾಡಿಬಿಡುತ್ತದೆಂದರೆ ಅದು ಅಳತೆಗೂ ಮೀರಿದ್ದು. ನಾನೀಗ ಶಿಕ್ಷಕಿಯಾಗಿ ಬಹಳಷ್ಟು ಸರ್ತಿ ಇಂತಹ ಘಟನೆಗಳು ನಡೆದಾಗ ಇಬ್ಬರ ಪರವಾಗಿಯೂ ನಿಲುವು ತೆಗೆದುಕೊಳ್ಳುತ್ತೇನೆ. ಗುರಿಯಾದವರಿಗೆ ಸಹಾನುಭೂತಿ ತೋರಿಸುವ ಹೊತ್ತಿನಲ್ಲೇ ಮಾಡಿದವರು ದುರುದ್ದೇಶದಿಂದಾಗಲೀ, ಉದ್ದೇಶ ಪೂರ್ವಕವಾಗಿಯೋ ಅಥವಾ ಕೆಟ್ಟ ಉದ್ದೇಶದಿಂದಲೋ ಖಂಡಿತ ಮಾಡಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಇಬ್ಬರಲ್ಲೂ ಒಂದು ಸ್ನೇಹ ಹಾಗೇ ಉಳಿದಿರುವಂತೆ ನೋಡಿಕೊಳ್ಳುತ್ತಿರುತ್ತೇನೆ. ಮತ್ತೆ ಮಾಡಿದವರಿಗೆ ಅದರ ಬಗ್ಗೆ ತಿಳುವಳಿಕೆ ಹೇಳಿ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಲು ತಿಳಿಸಿಕೊಡುತ್ತಿರುತ್ತೇನೆ. ಒಮ್ಮೆ ಹೀಗಾಯಿತು. ಊಟದ ವೇಳೆಯಲ್ಲಿ ಮೂರನೇ ತರಗತಿಯ ಹುಡುಗನೊಬ್ಬ ತರಗತಿಯ ಕೋಣೆಗೆ ಜೋರಾಗಿ ನುಗ್ಗುವಾಗ, ತನ್ನ ಸಹಪಾಟಿಯ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಆ ಹೊಡೆತಕ್ಕೆ ಇವನ ಮುಖ ಬೆಂಚಿಗೆ ತಗುಲಿ, ಮೂಗಲ್ಲಿ ರಕ್ತ ಸೋರತೊಡಗಿದೆ. ಅಂದು ಜೋರಾಗಿ ನುಗ್ಗಿದವನಿಗೆ ಹಾಗೆ ಒಳ ನುಗ್ಗಿದ್ದಕ್ಕಾಗಿ ಬೈದೆವಾದರೂ ನೋವಾದವನಿಗೆ, ಅವನು ಬೇಕಂತ ಮಾಡಿಲ್ಲ, ಮತ್ತೆ ಅವ ನಿನ್ನ ಸಹಪಾಠಿ ಮತ್ತು ಗೆಳೆಯ ತಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು ಮತ್ತೆ ಅವನಿಗೆ ಸೂಕ್ತ ಚಿಕಿತ್ಸೆಯನ್ನೂ ಮಾಡಿದೆವು (ಇಂತಹ ನಿತ್ಯದ ಅದೆಷ್ಟೋ ಘಟನೆಗಳಿಗೆ ಶಿಕ್ಷಕರಾದ ನಾವು ಸದಾ ಸಿದ್ಧರಿರಲೇಬೇಕಿರುತ್ತದೆ…). ಆದರೂ ಎಲ್ಲೋ ಒಂದು ಕಡೆ ಅವನ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಬಹುದು, ಬೀಳಿಸಿದ ಮಗುವಿಗೂ ಏನಾದರೂ ಬೈಯ್ಯಬಹುದು… ಅಂತೆಲ್ಲ ಭಯ ನಾವೆಲ್ಲ ಶಿಕ್ಷಕರಿಗೂ ಇತ್ತು. ಆದರೆ ಹಾಗಾಗಲಿಲ್ಲ. ಮರು ದಿನ ಅವ ಶಾಲೆಗೆ ಬಂದ. ಮೂಗಿನ ಗಾಯ ದೊಡ್ಡದಾಗಿ ಕಾಣುತ್ತಿತ್ತು. ಆದರೆ ಅವ ತನ್ನ ತಂದೆ ತಾಯಿಯರಿಗೆ ತಾನೇ ಹೇಗೋ ಶಾಲೆಯಲ್ಲಿ ಬಿದ್ದೆ ಎಂದು ಹೇಳಿದ್ದನಂತೆ. ಮತ್ತೆ ಮರುದಿನದಿಂದ ಅವರಿಬ್ಬರೂ ಏನೂ ಆಗಿಲ್ಲದಂತೆ ಪಕ್ಕ ಪಕ್ಕವೇ ಕೂತು ಆಡಿಕೊಂಡು, ಓದಿಕೊಳ್ಳತೊಡಗಿದರು… ಹೀಗೆ ಇಂತಹ ಘಟನೆಗಳಲ್ಲಿ ಎಲ್ಲ ಸುಖ ಅನ್ನಿಸಿದಾಗ ಸದಾ ನನ್ನ ಬಾಲ್ಯದ ಆ ಘಟನೆ ನೆನಪಾಗಿ, ಸಧ್ಯ ಈ ಮಕ್ಕಳಿಗೆ ಹಾಗಾಗಲಿಲ್ಲವಲ್ಲ ಅನಿಸಿ ಮನಸು ಹಗುರವಾಗುತ್ತದೆ… ************************************************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಕಾವ್ಯಯಾನ

ಮಣ್ಣಿಗೆ ವಿದಾಯ ಹೇಳುತ್ತೇವೆ!

ಕವಿತೆ ಮಣ್ಣಿಗೆ ವಿದಾಯ ಹೇಳುತ್ತೇವೆ! ಅಲ್ಲಾಗಿರಿರಾಜ್ ಕನಕಗಿರಿ ಗುಟ್ಕಾ- ತಂಬಾಕು ಬೀರ್ – ಬ್ರಾಂಡಿಮಾರುವವರು ದೇಶವಾಳುತ್ತಿದ್ದಾರೆ.ಅವರ ವಸ್ತುವಿಗೆ ಅವರೇ ಬೆಲೆ ನಿಗದಿ ಮಾಡಿಕೊಂಡು. ಆದರೆ ನಾವು ಇಡೀ ದೇಶಕ್ಕೆ ಅನ್ನ ಕೊಡುತ್ತೇವೆ.ಬೆಳೆಗೂ ಬದುಕಿಗೂ ಬೆಲೆ ಇಲ್ಲದೆ ಬೀದಿ ಪಾಲಾಗಿದ್ದೇವೆ. ಅನ್ನ ಉಂಡವರು ಒಂದು ಸಲ ಯೋಚಿಸಿ ನೋಡಿ.ಅನ್ನದಾತನ ನೋವು ಸಾವು ಸಂಕಟ ಏನೆಂದು. ಇಲ್ಲವೆಂದರೆ ನಾವೇ ಮಣ್ಣಿಗೆ ವಿದಾಯ ಹೇಳುತ್ತೇವೆ.ಮಕ್ಕಳ ಹೆಗಲ ಮೇಲೆ ಇಡಬೇಕೆಂದ ನೇಗಿಲು,ನಿಮ್ಮ ಮ್ಯೂಸಿಯಂನಲ್ಲಿ ಇಟ್ಟು ಸಲಾಂ ಹೊಡೆಯುತ್ತೇವೆ ***************************

ಮಣ್ಣಿಗೆ ವಿದಾಯ ಹೇಳುತ್ತೇವೆ! Read Post »

ಕಾವ್ಯಯಾನ

ಎದೆಯಲ್ಲಿ ಅಡಗಿದ ಬೆಳಕು

ಕವಿತೆ ಎದೆಯಲ್ಲಿ ಅಡಗಿದ ಬೆಳಕು ಡಾ ರೇಣುಕಾ ಅರುಣ ಕಠಾರಿ ನನಗೆ ನಾನಾಗುವಾಸೆನಿನ್ನನೂ ಒಳಗೊಂಡು ನೋವಿನ ನಡುವೆಯೂನನ್ನೆದೆಯಲಿ ಹೂವರಳಿಸಿನಕ್ಷತ್ರ ಪುಂಜಗಳ ಕಣ್ತಂಬಿಸಿಆ ಆಕಾಶದಲ್ಲಿ ದಾರಿ ಕಾಣುವಾಸೆ ಹೆಚ್ಚಾಗಿದೆ. ನನ್ನ ಪ್ರೀತಿ-ನೀತಿದುಃಖ-ದುಮ್ಮಾನಗಳ ನಡುವೆಆಸೆ ನಿರಾಸೆಗಳ ಕೇಂದ್ರದ ಸಾಗರದಲ್ಲಿಯುಬದುಕಿನ ಸಾಂದ್ರ ನೀನೇ. ಪುಟಿದೇಳುವುದು ಒಮ್ಮೊಮ್ಮೆ ನಿನ್ನಲೂಆರ್ಭಟ ದುರಂಕಾರಎದೆಯಲ್ಲಿ ಅಡಗಿದಶ್ರೇಷ್ಠತೆಯ ಹಾವ ಭಾವದಲ್ಲಿಅಲ್ಲಗಳಿದಾಗಲೆಲ್ಲ ನಾನುಅನುದಿನವು ಸಾಯುತಲಿರುವೆ. ಆಗಾಗಸಂಜೆಯ ತಂಗಾಳಿಯ ಬೊಗಸೆಯಲಿಕೆನ್ನೆಗಳ ತುಂಬಿಸಿಎದೆಗೇರಿಸಿಕೊAಡಾಗನಿನ್ನೆದೆಯ ಬಡಿತದ ಸದ್ದುಗಳಲೆಕ್ಕ ಹಾಕುವೆನು. ಪ್ರತಿ ಮಿಡಿತವೂಬದುಕಿನಜಮಾ ಖರ್ಚಿನ ಪುಟಗಳೇ.ಪುಟಗಳ ಲೆಕ್ಕವೆ ಮೀರಿ ನಿಂತಿರುವಚಿಲುಮೆಯ ಸಾಕ್ಷತ್ಕಾರ ನೀನು. ಇದಕ್ಕೆಎಲ್ಲವುಗಳ ನಡುವೆನಿನ್ನನೂ ಒಳಗೊಂಡುನನಗೆ ನಾನಾಗುವಾಸೆ. *******************************

ಎದೆಯಲ್ಲಿ ಅಡಗಿದ ಬೆಳಕು Read Post »

ಕಾವ್ಯಯಾನ

ಪಾತ್ರೆಗಳು ಪಾತ್ರವಾದಾಗ

ಕವಿತೆ ಪಾತ್ರೆಗಳು ಪಾತ್ರವಾದಾಗ ಶಾಲಿನಿ ಆರ್. ಬೇಳೆ ಬೇಯಿಸೋಕೆಪಾತ್ರೆ ಬೇಕೆ ಬೇಕು!ಹೊಟ್ಟೆ ತುಂಬಿಸೋಕೆಮನದ ಅಗಣಿತಭಾವಗಳತಣಿಸೋಕೆ? ಹುಟ್ಟಿದ ಹಸಿವಿಗೆತಿನುವ ಹಂಬಲಕೆರುಚಿ ನೋಡೋಕೆಕಾದ ಮನಗಳಿಗೆಉಣ ಬಡಿಸೋಕೆಹೇಗಾದರೂ ಸರಿ! ಹದವಾದ ರುಚಿತರಿಸಬೇಕು,ಬೆಂದ ಬೇಳೆಗಳಬತ್ತಿಸಿ,ಕರಗಿಸಿಗುರಾಡಿ ,ಬಾಡಿಸಿಮತ್ತಷ್ಟು ನೀರುಣಿಸಿನೆಪಕ್ಕೊಂದು ಪಾತ್ರೆಯಿರಿಸಿ! ಹಸಿದವರಿದ್ದರೆಹೇಳಿ?ಬೆಂದ ಬೇಳೆಗಳ ರುಚಿಗೆ!ಹಸಿವಿಲ್ಲದವರನ್ನುಕರೆತನ್ನಿ ,ಹಸಿವ ಇಂಗಿಸಲೋ?ಇಲ್ಲವಾದರೆ,ರುಚಿ ಸವಿಯಲು! ಸ್ವಲ್ಪ ಹುಳಿ,ಖಾರಒಗ್ಗರಣೆ ಸಾಕು!ಇನ್ನಿತರ ಮಸಾಲಪದಾರ್ಥಗಳುಬೇಕಿದ್ದರೆಪಾತ್ರಕ್ಕೊಪ್ಪುವಂತೆ!ರುಚಿಗೆ ಇಂತಿಷ್ಟೇ ಉಪ್ಪು,ಮುಖ ಕಿವುಚದಂತೆ ಮತ್ತೆ! ಹಿತ ಮಿತವಾದಪದಾರ್ಥಗಳುಪಾತ್ರಗಳ ಸೋಕಿನಾಲಿಗೆಯ ರುಚಿ!ಮನಕಿಳಿದ ಗೆಲುವೋ?ಬೆಂದ ಬೇಳೆಯದೋಮನದಗಲದಪಾ(ತ್ರೆ)ತ್ರ ದೋ??? ****************************************************

ಪಾತ್ರೆಗಳು ಪಾತ್ರವಾದಾಗ Read Post »

ಪುಸ್ತಕ ಸಂಗಾತಿ

ಸಾಧನೆಯ ಹಾದಿಯಲ್ಲಿ

ಎಂಭತ್ತರ ದಶ ಕದಲ್ಲಿ ಇನ್ನು ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಲೋಕಕ್ಕೆ ಅಂಬೆಗಾಲಿಡುತ್ತ ಸಾಗುತ್ತಿದ್ದ ದಿನಗಳಲ್ಲಿ ಇವರು ಉನ್ನತ ಶಿಕ್ಷಣ ಪಡೆದು ಮಹಿಳಾ ಅಧಿಕಾರಿಯಾಗಿ ಆಯ್ಕೆ ಯಾಗಿ ಬೀದರ್ ನಂತಹ ಹಲವಾರು ಸಮಸ್ಯೆ ಇರುವ ಜಿಲ್ಲೆಗೆ ಅಧಿಕಾರಿಯಾಗಿ ವೃತ್ತಿ ಆರಂಭಿಸಿರುವುದು ಗುರುತ್ತ ರವಾದ ಹೆಜ್ಜೆ

ಸಾಧನೆಯ ಹಾದಿಯಲ್ಲಿ Read Post »

ಕಥಾಗುಚ್ಛ

ಬದುಕು ಬಂದಂತೆ

ಕಥೆ ಬದುಕು ಬಂದಂತೆ ಅನಸೂಯ ಎಂ.ಆರ್. ಲತ ಮನೆಗೆ ಬಂದಾಗ ಎಂದಿನಂತೆ  ಸುಶೀಲಮ್ಮನು ಬಾಗಿಲು ತೆರೆಯದೆ  ಮನು ಬಂದಾಗ “ಅಜ್ಜಿ ಎಲ್ಲೊ” ಎಂದಳು. ” ಅಜ್ಜಿ ಮಲಗಿದಾರಮ್ಮ” ಎಂದ ಕೂಡಲೇ ವ್ಯಾನಿಟಿ ಬ್ಯಾಗ್ ಮತ್ತು ಲಂಚ್ ಬಾಕ್ಸ್ ನ್ನು ಟೇಬಲ್ ಮೇಲಿಟ್ಟು “ಅತ್ತೆ” ಎನ್ನುತ್ತಾ ರೂಂ ನೊಳಗೆ ಹೋದಳು ಮುಸುಕು ಹಾಕಿ ಮಲಗಿದ್ದ ಸುಶೀಲಮ್ಮ ಮುಸುಕನ್ನು ತೆಗೆಯುತ್ತಾ “ಯಾಕೋ, ಜ್ವರ ಬಂದಂತಾಗಿದೆ ಕಣಮ್ಮ” ಎಂದರು. ಅವರ ಹಣೆಯ ಮೇಲೆ ಕೈಯಿಟ್ಟು ನೋಡಿದ ಲತಾ ” ಬಹಳ ಜ್ವರ ಇದೆ. ನಡೀರಿ ಡಾಕ್ಟರ್ ಹತ್ರ ಹೋಗಿ ಬರೋಣ ಮೊದ್ಲು ಬಿಸಿ ಬಿಸಿ ಕಾಫಿ ಕುಡೀರಿ ಮಾಡ್ಕಂಡು ಬರ್ತಿನಿ ” ಎನ್ನತ್ತಾ ಅಡುಗೆ ಮನೆಗೆ ಹೋದಳು. ಮಗನಿಗೆ ಹಾರ್ಲಿಕ್ಸ್ ಕೊಟ್ಟು ತಮಗಿಬ್ಬರಿಗೂ ಕಾಫಿ ಮಾಡಿಕೊಂಡು ಬಂದು ಅತ್ತೆಗೂ ಕೊಟ್ಟು ತಾನು ಅಲ್ಲೆ ಕುಳಿತು ಕುಡಿದಳು  ನಂತರ ಮುಖ ತೊಳೆದು ಫ್ರೆಶ್ ಆದ ನಂತರ  ಮಗನಿಗೆ ಮನೆಯಲ್ಲಿರಲು ಹೇಳಿ ಆಟೋದಲ್ಲಿ ಅತ್ತೆಯನ್ನು ಕರೆದು ಕೊಂಡು ಕ್ಲಿನಿಕ್ ಗೆ ಹೊರಟಳು.ಪರಿಚಯದ ಡಾಕ್ಟರ್ ಗೆ ತೋರಿಸಿ ಮಾತ್ರೆ, ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ಬಂದಳು.ಅವರನ್ನು ಮಲಗಿಕೊಳ್ಳಲು ಹೇಳಿ ಅಡುಗೆಯ ಕೆಲ್ಸವನ್ನು ಮುಗಿಸಿ ಅತ್ತೆಗೆ ರವೆಗಂಜಿ ಮಾಡಿ ಕುಡಿಯಲು  ಕೊಟ್ಟು ಮಾತ್ರೆಗಳನ್ನು ನುಂಗಿಸಿ ಆರಾಮಾಗಿ ಮಲಗಲು ಹೇಳಿ ಮಗನ ಓದಿಸಿ ನಂತರ ಇಬ್ಬರೂ ಊಟ ಮುಗಿಸಿ ಮಲಗಿದರು.ಬೆಳಿಗ್ಗೆ ಅತ್ತೆಯ ಜ್ವರ ಕಡಿಮೆಯಾಗಿದ್ದರೂ ಸಹ ಶಾಲೆಗೆ ರಜೆ ಹಾಕಿದಳು.ಮನುವನ್ನು ಶಾಲೆಗೆ ಕಳಿಸಿ ಅತ್ತೆ ತಿಂಡಿ ತಿಂದ ನಂತರ ಮಾತ್ರೆ ಕೊಟ್ಟು ಮಲಗಿಸಿದಳು  ಕೆಲಸವೆಲ್ಲ ಮುಗಿದ ಮೇಲೆ ಬೆಂಗಳೂರಿನಲ್ಲಿದ್ದ ವಿನುತಳ ಜೊತೆ ಮಾತಾಡಿ ಅತ್ತೆಗೆ ಜ್ವರ ಬಂದಿರುವ ವಿಷಯವನ್ನು ತಿಳಿಸಿದಳು ಅತ್ತೆ ಇನ್ನೂ ನಿದ್ರೆ ಮಾಡುವುದನ್ನು  ನೋಡಿ ಪಡಸಾಲೆಗೆ ಬಂದು ಕುಳಿತಳು. ಸುಶೀಲಮ್ಮ ಲತಾಳಿಗೆ ತನ್ನ ಗಂಡನ ತಾಯಿ ಮಾತ್ರವಲ್ಲ ಸೋದರತ್ತೆಯೂ ಸಹ ಆಗಿದ್ದರು.ಲತಾಳ ತಂದೆ ವೆಂಕಟೇಶ್ ಮೂರ್ತಿಯವರ ಅಕ್ಕನೇ ಸುಶೀಲಮ್ಮ.ಸುಶೀಲಮ್ಮತಮ್ಮ ಮೊದಲನೆಯ ಮಗ ರಾಜೇಶನಿಗೆ ತಮ್ಮನ ಮಗಳಾದ ಲತಳನ್ನು ತಂದು ಕೊಂಡಿದ್ದರು ಸುಶೀಲಮ್ಮಲತಳಿಗೆ ತಾಯಿಯೇ ಆಗಿದ್ದರು ಲತ B.SC.ಪದವೀಧರೆಯಾಗಿ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಉಪನ್ಯಾಸಕನಾಗಿದ್ದ ರಾಜೇಶನಿಗೆ ಲತಾ ತಕ್ಕ ಜೋಡಿಯಾಗಿದ್ದಳು. ರಾಜೇಶನ ತಮ್ಮ ಸುರೇಶ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ಬೆಂಗಳೂರಿನಲ್ಲಿದ್ದನು. ಸುರೇಶ ತನ್ನ ಸಹೋದ್ಯೋಗಿಯೆ ಆದ ವಿನುತಳನ್ನು ಪ್ರೀತಿಸಿ ಮದುವೆಯಾಗಿದ್ದ. ಪತಿಯ ನಿಧನದ ನಂತರ ಪ್ರೀತಿಯಿಂದ ನೋಡಿಕೊಳ್ಳುವ ಇಬ್ಬರು ಮಕ್ಕಳ ಮನೆಯಲ್ಲಿ ಮೊಮ್ಮಕ್ಕಳೊಡನೆ ಕಾಲ ಕಳೆಯತ್ತ  ನೆಮ್ಮದಿಯಿಂದಿದ್ದರು.ಎಲ್ಲವು ಸರಿಯಾಗಿದ್ದ ಕಾಲದಲ್ಲೇ ಹಿರಿ ಮಗ ರಾಜೇಶನ ಸಾವು ಬರಸಿಡಿಲಿನಂತೆ ಎರಗಿತ್ತು. ಕಾಲೇಜ್ ಮುಗಿಸಿಕೊಂಡು ಬೈಕ್ ನಲ್ಲಿ ಬರುತ್ತಿರುವಾಗ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮರಣವನ್ನಪ್ಪಿದ್ದನು.ಆಗ ಮನು ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ. ಕಂಗಾಲಾಗಿದ್ದ ಲತ ಮಾನಸಿಕವಾಗಿ ಧೈರ್ಯವನ್ನು ಕಳೆದುಕೊಂಡಿದ್ದಳು.  ಇಂಥ ಸಮಯದಲ್ಲಿ ಅವಳಿಗೆ ಒತ್ತಾಸೆಯಾಗಿ ನಿಂತವರು ಅವಳ ತಮ್ಮ ವಿಜಯ್ ಹಾಗು ಮೈದುನ ಸುರೇಶ.ಲತಳ ತಂದೆ ತಾಯಿಯರಂತೂ ಮಗಳ ಪರಿಸ್ಥಿತಿಯನ್ನು ಕಂಡು  ಜರ್ಜರಿತವಾಗಿ ಬಿಟ್ಟಿದ್ದರು. ವರ್ಷ ಕಳೆಯುವಷ್ಟರಲ್ಲಿಯೆ ಅವಳಿಗೆ ಅನುಕಂಪ ಆಧಾರದ ಮೇಲೆ  ಅದೇ ಊರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗಕ್ಕೆ ಪ್ರಥಮ ದರ್ಜೆ ಸಹಾಯಕಿಯ ಕೆಲಸ ಸಿಕ್ಕಿತು.ಹೊಸ ಪರಿಸರಕ್ಕೆ ಹೊಂದಿಕೊಂಡು ಗಮನವನ್ನು ಕೊಡುವ ಅನಿವಾರ್ಯತೆಯಲ್ಲೇ ರಾಜೇಶನ ಮರಣದ ದು:ಖವನ್ನು ಮರೆಯಲೆತ್ನಿಸಿದಳು. ಸುಶೀಲಮ್ಮ ಎಲ್ಲೂ ಹೋಗದೆ ಸೊಸೆ ಹಾಗೂ ಮೊಮ್ಮಗನ ಜೊತೆಯಲ್ಲಿರಲು ನಿರ್ಧಾರ ಮಾಡಿ ಅವರಿಗೆ ಆಸರೆಯಾಗಿದ್ದರು. ಎರಡನೆ ಮಗ ಸೊಸೆ ಅವರೇ ಇಲ್ಲಿಗೆ ಬಂದು ಹೋಗುವ ರೂಢಿ ಮಾಡಿಕೊಂಡರು. ಮಾರನೆ ದಿನ ಶಾಲೆಗೆ ಹೊರಡುವ ತಯಾರಿಯಲ್ಲಿದ್ದಾಗ ಅವಳ ಮೊಬೈಲ್ ಗೆ ರಂಜಿತಾಳ ಕರೆ.”ಇವತ್ತು ಬರ್ತಿರಾ ಸ್ಕೂಲ್ ಗೆ” “ಬರ್ತೀನಿ ರಂಜಿತ, ಅತ್ತೆ ಹುಷಾರಾಗಿದಾರೆ” ಎಂದು ಹೇಳಿ ಫೋನಿಟ್ಟಳು. ಶಾಲೆಗೆ ಹೊರಟು ನಿಂತು “ಅತ್ತೆ,ಬರಲಾ”. ಬಾಗಿಲು ಹಾಕಿಕೊಳ್ಳಲು ಬಂದ ಅತ್ತೆಗೆ “ಚೆನ್ನಾಗಿ ರೆಸ್ಟ್ ಮಾಡಿ”ಎಂದು ಹೊರಟಳು. ದಾರಿಯಲ್ಲಿ ಸಿಕ್ಕ ರಂಜಿತಳೊಡನೆ ಮಾತನಾಡುತ್ತ ಶಾಲೆ ತಲುಪಿದರು ಗಣಿತ ಶಿಕ್ಷಕಿ ರಂಜಿತಾಳ ಮನೆ ತಾನು ಶಾಲೆಗೆ ಹೋಗುವ ದಾರಿಯಲ್ಲೆ ಇದ್ದ ಕಾರಣ ಇಬ್ಬರಲ್ಲೂ ಆತ್ಮೀಯತೆಯಿತ್ತು ರಂಜಿತಾಳಿಗೆ ಇನ್ನು ಮದುವೆಯಾಗಿರಲಿಲ್ಲ. ಸಾದಾಸೀದ ಹುಡುಗಿಯಾಗಿದ್ದ ರಂಜಿತಾ ಲತಾಳೊಂದಿಗೆ ಮುಕ್ತವಾಗಿ ಎಲ್ಲವನ್ನು ಹೇಳಿಕೊಳ್ಳುತ್ತಿದ್ದಳು. ಅವಳಿಗೆ  ಒಬ್ಬ ತಂಗಿ ಹಾಗೂ ಒಬ್ಬ ತಮ್ಮ ಇದ್ದಾರೆ. ಅವರ ತಂದೆಯು ಶಿಕ್ಷಣ ಇಲಾಖೆಯಲ್ಲೆ ಕೆಲಸ ಮಾಡುತ್ತಿದ್ದರು. ಬೇಜವಾಬ್ಧಾರಿ ಮನುಷ್ಯನೆಂದು ಇಸ್ಪೀಟಾಡುವ ಚಟವಿದ್ದು ಬಹುಪಾಲು ಹಣವನ್ನೆಲ್ಲಾ ಕಳೆಯುತ್ತಾರೆಂದು ಅವಳಿಗೆ ಅವರಪ್ಪನ ಮೇಲೆ ಬೇಸರವಿತ್ತು.” ಸಾಯಂಕಾಲ ನೀವು ನಮ್ಮನೆಗೆ ಬರಬೇಕು. ನಮ್ಮಮ್ಮನಿಗೆ ಹೇಳಿ ಬಂದಿದ್ದೇನೆ. ನಿಮ್ಮನ್ನು ಕರ್ಕೊಂಡು ಬರ್ತೀನಿ ಅಂತ”ಎಂದುರಂಜಿತಾ ಹೇಳಿದಳು “ಏನಿವತ್ತುಮನೆಯಲ್ಲಿ ಸ್ಪೆಷಲ್ ರಂಜಿತ” “ಇವತ್ತು ನನ್ನ ತಮ್ಮನ ಹುಟ್ಟಿದ ಹಬ್ಬ.ಅಮ್ಮ ಸ್ಟೀಟ್ ಮಾಡಿರ್ತಾಳೆ. ನೀವು ಬರ್ತಿದೀರಾ ಅಷ್ಟೆ” PUC ಓದುತ್ತಿದ್ದ ತಮ್ಮನನ್ನು ಕಂಡರೆ ಅವಳಿಗೆ ಬಲು ಪ್ರೀತಿ.ಇಲ್ಲವೆನ್ನಲು ಮನಸ್ಸಾಗದೆ ಸರಿ ಎಂದಳು. ಮಧ್ಯಾಹ್ನ ಲಂಚ್ ಬ್ರೇಕ್ ನಲ್ಲಿ ಶಾಲೆಯ ಬಳಿಯಲ್ಲಿದ್ದ ಬುಕ್ ಸ್ಟಾಲ್ಗೆ ಹೋಗಿ ಇಂಗ್ಲೀಷ್ ಡಿಕ್ಸ್ ಷ್ಣರಿ ಕೊಂಡು ಕೊಂಡಳು. ಅವರ ಮನೆಗೆ ಹೋಗುತ್ತಿರುವುದು ಎರಡನೆ ಬಾರಿ. ಸಂಜೆ ರಂಜಿತಾಳೊಡನೆ ಅವರ ಮನೆಗೆ ಹೋದಾಗ ಅವರ ತಾಯಿ ಊಟ ಮಾಡಲು ಬಲವಂತ ಮಾಡಿದರು.ಊಟ ಬೇಡವೆಂದಾಗ ಆಗ ತಾನೆ ಮಾಡಿದ ಬಿಸಿ ಬಿಸಿ ಹೋಳಿಗೆ,ವಾಂಗೀಬಾತ್ ಮತ್ತು ಕೋಸಂಬರಿ ತಟ್ಟೆಯಲ್ಲಿ ಹಾಕಿಕೊಂಡು ಲತ ಹಾಗೂ ರಂಜಿತ ಇಬ್ಬರಿಗು   ಕೊಟ್ಟರು. ಮಾತಾಡುತ್ತಾ ತಿಂದಾದ ಮೇಲೆ ರಂಜಿತ ತಟ್ಟೆ ಒಳಗಿಡಲು ಹೋದಳು.ಡಿಕ್ಸ್ ಷ್ಣರಿ ಬುಕ್ ನ್ನು ತೆಗೆಯಲು ಎಡಭಾಗದಲ್ಲಿದ್ದ ಬ್ಯಾಗ್ ಕಡೆ ತಿರುಗಲು ರಂಜಿತಳ ತಂದೆ ಎಡಭಾಗದ ರೂಂ ನಲ್ಲಿ ನಿಂತುಕೊಂಡು ತನ್ನತ್ತಲೇ ವಿಕೃತ ದೃಷ್ಟಿಯಿಂದ ನೋಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಳು ಮೈಯೆಲ್ಲ ಭಯದಿಂದ ನಡುಗಿತು.ತಕ್ಷಣ ಎದ್ದು ರಂಜಿತಾ ಎಂದು ಕೂಗುತ್ತ ಅಡುಗೆ ಮನೆ ಕಡೆ ನೆಡೆದಳು ಹೊರಗಡೆ ಬಂದ ರಂಜಿತಾಳ ಕೈಗೆ ಬುಕ್ ಕೊಡುತ್ತ “ನಿನ್ನ ತಮ್ಮನಿಗೆ ಕೊಡು ಲೇಟಾಗುತ್ತೆ ಹೋಗ್ತೀನಿ”ಎನ್ನುತ್ತ ಹೊರಟು ರೂಂ  ಕಡೆ ನೋಡಿದರೆ ಇನ್ನೂ ಅಲ್ಲೇ ನಿಂತಿದ್ದಾನೆ.”ಯಾಕಿಷ್ಟೂ  ಬೇಗ ಹೊರಟ್ರಿ” ರಂಜಿತಾಳ ತಾಯಿ ಹೇಳಿದಾಗ”ನಮ್ಮತ್ತೆ ಯವರಿಗೆ ಜ್ವರ ಬಂದಿತ್ತಲ್ವ ಬೇಗ ಹೋಗ್ಬೇಕು” ಎನ್ನುತ್ತಲೆ  ಮನೆಯಿಂದ ಹೊರ ಬಂದು ಅಲ್ಲೇ ಹೋಗುತ್ತಿದ್ದ ಆಟೋ ನಿಲ್ಲಿಸಿ ಕುಳಿತು ಬೆವರಿದ ಮುಖವನ್ನು ಒರೆಸಿಕೊಂಡಳು.  ಬಾಗಿಲು ತೆಗೆದ ಅತ್ತೆ ಇವಳ ಮುಖವನ್ನು ನೋಡುತ್ತಾ “ಯಾಕಮ್ಮ ಒಂಥರಾ ಇದೀಯಾ”ಎಂದರು.”ತುಂಬಾನೆ ತಲೆ ನೋಯ್ತಿದೆ ಅತ್ತೆ” ಮುಖ ತೊಳೆದು ಬರಲು “ನಿಂಗು ಜ್ವರ ಬಂತ ಕಾಫಿ ಕುಡಿದು ಮಲಗಿಬಿಡು ನನಗೂ ಎರಡು ದಿನದಿಂದ ಒಂದೆ ಸಮನಾಗಿ ಮಲಗಿ ಸಾಕಾಗಿದೆ ನಾನೇ ಅಡುಗೆ ಮಾಡ್ತೀನಿ”ಎಂದರು.ಆಗ ಲತ ತಾನು ರಂಜಿತಳ ಮನೆಯಲ್ಲಿ ತಿಂದಿದ್ದನ್ನು ಹೇಳಿ ತನಗೆ ರಾತ್ರಿಯ ಊಟ ಬೇಡ ಎಂದು ರೂಂ ಗೆ ಹೋಗಿ ಮಲಗಿ ಬಿಟ್ಟಳು. ಆಟ ಆಡಿಕೊಂಡು ಬಂದ ಮಗನಿಗೆ “ತಲೆ ನೋಯ್ತಿದೆ ಕಣೋ ಇವತ್ತು ನೀನೇ ಓದ್ಕೊ”ಎಂದು ಮುಸುಕು ಹಾಕಿ ಮಲಗಿ ಬಿಟ್ಟಳು. ಆ ವಿಕೃತ ನೋಟ ಕಣ್ಣೆದುರು ಬಂದು ನಿಂತಾಗ ಮುಳ್ಳಿಂದ ಚುಚ್ಚಿದ ಅನುಭವ ಅವನೇಕೆ ನನ್ನನ್ನು ಹಾಗೇ ನೋಡಿದ ? ಎಷ್ಟು ಹೊತ್ನಿಂದ ನೋಡುತ್ತಿದ್ದನೊ? ನಾನು ರಂಜಿತ ಇಬ್ಬರು ಹೋಳಿಗೆ ತಿನ್ನುತ್ತಿರುವಾಗ ಎಡಭಾಗದ ರೂಂ ರಂಜಿತಳ ಬೆನ್ನಿನ ಕಡೆಯಿತ್ತೆಂಬುದು ನೆನಪಾಯ್ತು. ಹಾಗಾದ್ರೆ ಅಲ್ಲೆ ನಿಂತು ತುಂಬ ಹೊತ್ನಿಂದ ನೋಡುತ್ತಿದ್ದನೆ ನನಗೇಕೆ ಅದರ ಅರಿವಾಗಲಿಲ್ಲ? ಅಥವಾ ಬಾಗಿಲ ಹಿಂದೆ ನಿಂತು ನೋಡುತ್ತಿದ್ದು ರಂಜಿತ ತಟ್ಟೆ ಒಳಗಿಡಲು ಹೋದ ಕ್ಷಣದಲ್ಲಿ ನನಗೆ ಕಾಣುವಂತೆ ನಿಂತು ಕೊಂಡನೆ? ಆ ರೀತಿ  ಕೆಟ್ಟದಾಗಿ ನೋಡಲು ಕಾರಣವೇನು?ವಿಧವೆಯಾದವಳು ಗಂಡನಿಲ್ಲದ ಬದುಕೆಂದೇ?ಅಷ್ಟೊಂದು ತಾತ್ಸಾರವಾಯ್ತೆ ನನ್ನ ಬಾಳು? ಎಂಬ ಭಾವನೆಯಿಂದ ದು:ಖ ಒತ್ತರಿಸಿತು ರಾಜೇಶನ ನೆನಪಿನಿಂದ ಅಳುವೇ ಬಂದಂತಾಗಿ ಪಕ್ಕದಲ್ಲೆ ಓದಿಕೊಳ್ಳುತ್ತಿದ್ದ ಮಗನಿಗೆ ತಾನು ಅಳುತ್ತಿರುವುದು ಕೇಳ ಬಾರದೆಂದು ಮೌನವಾಗಿ ತುಟಿ ಕಚ್ಚಿಕೊಂಡೆ ಸಹಿಸಿದಳು ಬಿಗಿಮಾಡಿಕೊಂಡ ಮುಸುಕಿನೊಳಗಿನ ಕತ್ತಲಲ್ಲಿ ಅವಳ ಕಣ್ಣೀರು ಕರಗುತ್ತಿತ್ತು. ಬೆಳಕು ಬೇಡವೆನಿಸಿ”ಮನು,ಲೈಟ್ ಆರಿಸಿ ಅಜ್ಜಿ ರೂಂಗೆ ಹೋಗಿ ಓದಿಕೋ”ಎಂದಳು.ಕತ್ತಲು ಆಪ್ತವೆನಿಸಿತು.ತನ್ನನ್ನು ಬೆಚ್ಚಿ ಬೀಳಿಸಿದ ಅವನ ನೋಟ ಇರಿದಂತಾಗುತ್ತಿತ್ತು.ಯಾವತ್ತೂ ಯಾರೂ ಅಂತಹ ಕೆಟ್ಟ ಭಾವನೆಯಿಂದ ತನ್ನನ್ನು ನೋಡಿಲ್ಲ.ಇಂದೇಕೆ ಹೀಗಾಯ್ತು  ನನ್ನ ನಡೆನುಡಿಗಳಲ್ಲೆ ಏನಾದರು ದೋಷವಿದೆಯೆ ಎಂಬ ಭಾವನೆ ಬಂದರೂ ಅದಕ್ಕೆಡೆ ಮಾಡಿಕೊಡದಂತೆ ಅವಳು ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿರುವಾಗ ಅದು ಸಾಧ್ಯವೇ ಇಲ್ಲ ಎಂದವಳ ಮನಸ್ಸಿಗನಿಸಿದಾಗ ಕೊಂಚವೆ ನಿರಾಳವಾಯಿತು. ಈ ಯೋಚನೆಯಲ್ಲೆ ಯಾವಾಗ ನಿದ್ರೆ ಬಂತೆಂಬುದೆ ಗೊತ್ತಾಗಿಲ್ಲ.ಬೆಳಿಗ್ಗೆ ಎಚ್ಚರವಾಗಿ ನೋಡಲು ಮನು ಆಗಲೇ ಶಾಲೆಗೆ ಹೊರಡುತ್ತಿದ್ದ. ಅವನು ಶಾಲೆಗೆ ಹೋದ ಮೇಲೆ ಪ್ರಭಾರೆ ಮುಖ್ಯೋಪಧ್ಯಾಯಿನಿಯಾದ ಸುನಂದ ಮೇಡಂವರಿಗೆ ತಾನು ಈ ದಿನ ರಜೆ ಹಾಕುತ್ತೇನೆ ಎಂದು ತಿಳಿಸಿ, ಸ್ನಾನವಾದ ಮೇಲೆ ದೇವರ ಪೂಜೆಯನ್ನು ಮಾಡಿ ಅತ್ತೆಯ ಜೊತೆ ತಿಂಡಿಯನ್ನು ತಿಂದಳು. ಅತ್ತೆಯು ಟಿ.ವಿ ನೋಡುತ್ತಾ ಕೂತಾಗ ತಾನೆ ಆಡುಗೆ ಮಾಡಿದಳು. ಆಡುಗೆ ಮಾಡುತ್ತ ನೆನ್ನೆ ನಡೆದುದೆಲ್ಲವನ್ನೂ ಅತ್ತೆಗೆ ಹೇಳಿ ನಿರಾಳವಾಗುವ ಯೋಚನೆ ಬಂದ ಬೆನ್ನಲ್ಲೇ ಅತ್ತೆ ತಪ್ಪಾಗಿ ತಿಳಿದರೆ ಎಂಬ ಭಾವನೆಯೂ ಬಂದರೂ ಅತ್ತೆ ಹಾಗೆಲ್ಲಾ ತಿಳಿಯಲಾರರೆಂಬ ನಂಬಿಕೆ ಮಾತ್ರ ಬಲವಾಗಿತ್ತು ಕೆಲಸ ಮುಗಿಸಿ ಬಂದು ಅತ್ತೆ ಪಕ್ಕದಲ್ಲಿ ಕುಳಿತಳು.ಲತ ಅತ್ತೆಯ ತೊಡೆ ಮೇಲೆ ತಲೆಯಿಟ್ಟು ಅಳ ತೊಡಗಿದಳು “ಏನಾಯ್ತೆ ಲತಾ”ಅವಳ ತಲೆ ಸವರುತ್ತ ಕಣ್ಣೀರು ಹಾಕಿದರು.ಗಂಡನ  ನೆನಸಿಕೊಂಡು ದು:ಖ ಪಡುತ್ತಿರಬಹುದೆಂದು ಭಾವಿಸುತ್ತ “ಲತ ಸಮಾಧಾನ ಮಾಡ್ಕೊಳೆ ನಮ್ಮ ಪಾಲಿಗೆ ಬಂದಿದ್ದು ಅನುಭವಿಸ್ಲೆ ಬೇಕು. ಮಗನ ಮುಖ ನೋಡ್ಕಂಡು ನಮ್ಮ ಕಷ್ಟಗಳನ್ನು ಮರೀಬೇಕು.”ಎನ್ನುತ್ತಲೆ ಅವಳ ತೋಳನ್ನೆತ್ತಿ ಸೋಫಾದ ಮೇಲೆ ಪಕ್ಕಕ್ಕೆ ಕೂಡ್ರಿಸಿಕೊಂಡರು. ಪಕ್ಕದಲ್ಲಿ ಕೂತ ಲತ ಕಣ್ಣೊರೆಸಿಕೊಂಡು”ಅತ್ತೆ”ಎನ್ನುತ್ತ ಅವರ ಕೈ ಹಿಡಿದಳು.”ಯಾಕೆ, ಏನಾಯ್ತು ಹೇಳಮ್ಮ ಲತ” ಎಂದರು ಆಗ ಲತ ಹಿಂದಿನ ದಿನದ ಘಟನೆಯನ್ನು ಹೇಳಿಕೊಂಡು ನಿರಾಳವಾದಳು. “ಮದ್ವೆ ವಯಸ್ಸಿನ ಮಗಳಿದಾಳೆ ಅಂತ ಹೇಳ್ತಿಯ ಅವನಿಗೇನು ಬಂತೇ ಕೇಡುಗಾಲ. ಅದಕ್ಯಾಕೆ ಕೊರಗ್ತೀಯಾ ಇದ್ರಲ್ಲಿ ನಿನ್ನ ತಪ್ಪೇನೂ  ಇಲ್ವಲ್ಲ ಇನ್ಮೇಲೆ ಅವರ ಮನೆಗೆ ಹೋಗಲೇ ಬೇಡ ಇದನ್ನೆಲ್ಲ ಯಾರತ್ರನೂ ಹೇಳ್ಬೇಡ .ಇಂಥದಕ್ಕೆಲ್ಲ ಹೆದರಿಕೊಂಡ್ರೆ ಮುಗಿತು ನಮ್ಮ ಕಥೆ. ನಮ್ಮಹುಷಾರಿನಲ್ಲಿ ನಾವಿದ್ರೆ ಆಯ್ತು ಏಳು ಊಟ ಮಾಡಿ ಆರಾಮಾಗಿ ನಿದ್ದೆ ಮಾಡು. ಮನು ಬರೋ ಟೈಂಗೆ ಏನಾದ್ರು ತಿಂಡಿ ಮಾಡು” ಎಂದಾಗ ಲತಾ ಗೆಲುವಾದಳು  ಮಾರನೆ ದಿನ ಶಾಲೆಗೆ ಬಂದಾಗ ರಂಜಿತಳೊಡನೆ ಏನನ್ನು ತೋರಿಸಿಕೊಳ್ಳದೆ ಮಾಮೂಲಿನಂತಿದ್ದಳು. ರಂಜಿತಳದು ಇದ್ರಲ್ಲಿ ಏನೂ ತಪ್ಪಿಲ್ಲ ಎನಿಸಿತು.ಆ ಮಧ್ಯಾಹ್ನದ ವೇಳೆಗೆ ವೇಳೆಗೆ ಅನಿರೀಕ್ಷಿತವಾಗಿ ಯಾರೂ ನಿರೀಕ್ಷಿಸದೇ ಇದ್ದಂತೆ ಹೊಸ ಮುಖ್ಯೋಪಧ್ಯಾಯರ ಆಗಮನವಾದಾಗ ಸ್ವಲ್ಪ ಗಲಿಬಿಲಿ ಸೃಷ್ಟಿಯಾಯಿತು. ಕರ್ತವ್ಯಕ್ಕೆ ಹಾಜರಾದ ಬಗ್ಗೆ ಪ್ರಕ್ರಿಯೆಗಳು ಮುಗಿದ ನಂತರ ಸುನಂದ ಮೇಡಂರವರು  ಶಾಲಾ ಸಿಬ್ಬಂದಿ ವರ್ಗದವರನ್ನೆಲ್ಲಾ ಕರೆಸಿ ಹೊಸ ಉಪ ಪ್ರಾಂಶುಪಾಲರಾದ ರವಿಯವರನ್ನು ಪರಿಚಯಿಸಿದರು ಅಷ್ಟರಲ್ಲಿ ಶಾಲೆಯ ಅವಧಿ ಮುಗಿಯುತ್ತ ಬಂದಿದ್ದರಿಂದ ಎಲ್ಲರು ಮನೆಗೆ ಹೊರಟರು ಹೊಸ ಉಪ ಪ್ರಾಂಶುಪಾಲ  ರವಿ KES ಶ್ರೇಣಿಯ ಆಫೀಸರ್ ಎಂದು ತಿಳಿದು ಕಾರಣ ದಾರಿಯಲ್ಲಿ ರಂಜಿತ “ಇವರು ತುಂಬ ಸ್ತ್ರಿಕ್ಟ್ ಆಗಿರುತ್ತಾರೆ ಅನ್ಸುತ್ತೆ”ಎಂದು ಅಂದಾಜು ಮಾಡಿದ ಹಿಂದೆಯೆ “ನಮ್ಮ

ಬದುಕು ಬಂದಂತೆ Read Post »

You cannot copy content of this page

Scroll to Top