ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚಪ್ಪರದ ಗಳಿಕೆ

ಅನುಭವ ಚಪ್ಪರದ ಗಳಿಕೆ ಶಾಂತಿವಾಸು ನಮ್ಮ ಮನೆಗೆ ಹೊದ್ದಿಸಿದ ಸಿಮೆಂಟ್ ಶೀಟ್ ಮೇಲೆ ಹತ್ತಿ ನಡೆಯಲಾರಂಭಿಸಿದರೆ ಸುಮಾರು ಇಪ್ಪತ್ತು ಮನೆಗಳನ್ನು ದಾಟಬಹುದಿತ್ತು.  ನಲವತ್ತು ವರ್ಷಗಳ ಮೊದಲು ನಮ್ಮ ರಸ್ತೆಯಲ್ಲಿ ಯಾವುದೇ ಮಹಡಿ ಮನೆ ಇರಲಿಲ್ಲ. ನೆರಳಿಗಾಗಿ ನಮ್ಮ ಮನೆಯ ಹೊಸ್ತಿಲಿನ ನಂತರ ಹತ್ತು ಅಡಿಗಳಷ್ಟು ಮುಂದಕ್ಕೆ, ಮೇಲೆ ಕವಲುಹೊಡೆದ ಉದ್ದದ ಊರುಗೋಲುಗಳನ್ನು ನಿಲ್ಲಿಸಿ ಮೇಲೆ ಚೌಕಟ್ಟು ಮಾಡಿ  ಇಪ್ಪತ್ತು ಅಡಿಗಳಷ್ಟು ಅಗಲಕ್ಕೆ ತೆಂಗಿನ ಗರಿಗಳನ್ನು ಹೊದಿಸಿದ್ದರು. ನಮ್ಮ ಮನೆ ಬಿಟ್ಟು ಎಡಗಡೆಗೆ ಬಾಡಿಗೆ ಮನೆಗಳು ಹಾಗೂ ಬಲಗಡೆಗೆ ಗಿಡಮರಗಳು (ಮಾವು ಹಾಗೂ ಸೀಬೆ), ಬಟ್ಟೆ ಒಗೆಯುವ ಕಲ್ಲು ಹಾಗೂ ಬಾಡಿಗೆ ಮನೆಯವರಿಗಾಗಿ ಒಂದು ನೀರಿನ ತೊಟ್ಟಿ ಇದ್ದಿತು.  ಬೆಳಗ್ಗೆ ಸಂಜೆ ಕಾಫೀ ಕುಡಿಯಲು ಚಪ್ಪರದ ನೆರಳು ಒಳ್ಳೆಯ ಜಾಗವಾಗಿತ್ತು.    ನಮ್ಮ ಮನೆಯಲ್ಲಿ ಮೊದಲೇ ಬಾಡಿಗೆಗಿದ್ದ ತಮ್ಮನ ಸಂಸಾರದೊಡನೆ ಸೇರಿಕೊಳ್ಳಲು ಆಂಧ್ರದ ಒಂದು ಹಳ್ಳಿಯಿಂದ ಇಪ್ಪತ್ತು ವರ್ಷ ವಯಸ್ಸಿನ ಮಗನೊಡನೆ ಬಂದ ಕುಂಟಮ್ಮನಿಗೆ (ಶಾಂತಮ್ಮ ಇವರ ಹೆಸರು) ಒಂದು ಕಾಲು ಚಿಕ್ಕದಾದ್ದರಿಂದ ಕುಂಟುತ್ತಾ ಸ್ವಲ್ಪ ದೂರವೂ ನಡೆಯಲಾಗುತ್ತಿರಲಿಲ್ಲ. ಅಲ್ಲದೆ ಒಂದೇ ಕಡೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರಿಂದ ತುಂಬಾ ದಪ್ಪಗಾಗಿದ್ದರಲ್ಲದೆ   ಸೋರುವಂತೆ ತಲೆಗೆ ಹಚ್ಚುತ್ತಿದ್ದ ಎಣ್ಣೆ, ಕಪ್ಪಾಗಿದ್ದ ಮುಖವನ್ನು ಫಳಫಳನೆ ಹೊಳೆಯುವಂತೆ ಮಾಡಿತ್ತು. ವಿಧವೆಯಾದ್ದರಿಂದ ಕುಂಕುಮವಿರದ ಬೋಳು ಹಣೆ, ಕೈಗಳಿಗೊಂದೊಂದು ಮಾಸಿದ ಹಿತ್ತಾಳೆಯ ಬಳೆ, ಕಿವಿಗಳಿಗೆ  ತೆಳುವಾದ ಪುಟ್ಟ ಚಿನ್ನದ ಓಲೆ, ಏಳುಕಲ್ಲಿನ ಮೂಗುತ್ತಿ ಧರಿಸಿದ್ದಾಕೆಗೆ ಬೇರೆ ಒಡವೆಗಳಿರಲಿಲ್ಲ.  ಬೆಳಗ್ಗೆ ಎಂಟು ಗಂಟೆಗೆಲ್ಲಾ ಚಪ್ಪರದ ಕೆಳಗೆ ಕುಳಿತು ಮುತ್ತುಗದ ಎಲೆಗಳನ್ನು ಒಪ್ಪ ಮಾಡಿ, ಊಟದ ಎಲೆಗಳನ್ನು ಕಡ್ಡಿಗಳಿಂದ ಹೊಲಿಯುತ್ತಿದ್ದರು. ಮಗ ಎಲೆಗಳು ಹಾಗೂ ಅವನ್ನು ಹೊಲಿಯಲು ಕಡ್ಡಿಗಳನ್ನು ತಂದು ಕೊಟ್ಟು ಹೊಲಿದ ಎಲೆಗಳನ್ನು ತೆಗೆದುಕೊಂಡು ಹೋಗಿ ಅಂಗಡಿಗಳಿಗೆ  ಮಾರಿ ಬರುತ್ತಿದ್ದ. ಅದರಲ್ಲಿಯೇ ಅಮ್ಮ ಮಗನ ಜೀವನ  ನಡೆಯುತ್ತಿತ್ತು. ಅಲ್ಲದೆ ಮತ್ತೊಂದು ಜೊತೆ  ಬಿಳಿಕಲ್ಲಿನ ದೊಡ್ಡ ಓಲೆ ಕೊಳ್ಳುವ ಉದ್ದೇಶದಿಂದ ಕಷ್ಟಪಟ್ಟು ಹಣ ಕೂಡಿಡುತ್ತಿದ್ದರು. ನಾವು ಯಾರೇ ಮನೆಯಲ್ಲಿರಲಿ ಬಿಡಲಿ ಕುಂಟಮ್ಮ ಮಾತ್ರ ತಮ್ಮ ವಸ್ತುಗಳೊಡನೆ ನಿಶ್ಚಿತ ಸ್ಥಳದಲ್ಲಿ ಇದ್ದೇ ಇರುತ್ತಿದ್ದರು. ಆರು ಗಂಟೆಯ ನಂತರ ಅವರ ಎಲ್ಲ ವಸ್ತುಗಳನ್ನು ಸುಣ್ಣಬಳಿದ ಗೋಡೆಗೊತ್ತಿ ಬಿಟ್ಟು ಹೋಗುತ್ತಿದ್ದರು. ನಮ್ಮ ಮನೆಗೆ ಬರುವವರಾಗಲಿ ಅಥವಾ ಅವರ ಮನೆಗೆ ಬರುವವರಾಗಲಿ ಚಪ್ಪರದ ಕೆಳಗೆ ಕುಳಿತುಕೊಳ್ಳುತ್ತಿದ್ದರು. ಗಂಡಸರಾದರೆ ಹಲಗೆ ಮುಚ್ಚಿದ ತೊಟ್ಟಿಯ ಮೇಲೆ ಇಬ್ಬರು ಹಾಗೂ ಕಬ್ಬಿಣದ ಮಡಚುವ ಖುರ್ಚಿಯಲ್ಲಿ ಒಬ್ಬರು ಕೂರಬಹುದಿತ್ತು. ಹೆಂಗಸರು ಮಕ್ಕಳೆಲ್ಲಾ ಸಗಣಿಯಿಂದ ಸಾರಿಸಿದ ನೆಲದ ಮೇಲೆ ಕೂರುವುದು ಸಾಮಾನ್ಯವಾಗಿತ್ತು. ಬಂದವರೊಡನೆ ಮಾತನಾಡುತ್ತಲೇ ಪ್ಲಾಸ್ಟಿಕ್ ಬುಟ್ಟಿಗಳನ್ನು ಹೆಣಿಯುತ್ತಿದ್ದ ನಮ್ಮ ತಾಯಿ, ಕೇಳಿದವರಿಗೆ ಮಾರುತ್ತಿದ್ದರು. ನಮ್ಮಮ್ಮ, ಚಪ್ಪರದಾಚೆ ಬಲಗಡೆ ಮಣ್ಣು ಅಗೆದು ಗೊಬ್ಬರ ಹಾಕಿ ಮನೆಯ ಸಿಮೆಂಟ್ ಶೀಟಿನ ಮೇಲೆ ಬರುವಂತೆ ಸಿಹಿಗುಂಬಳ, ಬೂದುಗುಂಬಳ, ಪಡವಲ, ಹೀರೆ, ತುಪ್ಪೀರೆಕಾಯಿಗಳನ್ನು (ಇವ್ಯಾವುದನ್ನೂ ನಮ್ಮ ಮನೆಯಲ್ಲಿ ಯಾರೂ ತಿನ್ನುತ್ತಿರಲಿಲ್ಲ) ಹಾಗೂ ಚಪ್ಪರದ ಮೇಲೆ ಹವಾಮಾನಕ್ಕೆ ತಕ್ಕಂತೆ ಚಪ್ಪರದ ಅವರೆ ಅಥವಾ ಹಾಗಲಕಾಯಿ ಹಾಗೂ ಮನೆಯ ಮುಂದಿನ ಮಣ್ಣಿನ ಜಾಗದಲ್ಲಿ ಹಲವು ಬಗೆಯ ಹೂವುಗಳು, ಟೊಮ್ಯಾಟೋ, ಬೆಂಡೆಕಾಯಿಗಳನ್ನು ಬೆಳೆದು, ಅಗತ್ಯವಿರುವಷ್ಟನ್ನು ಉಪಯೋಗಿಸಿ ಮಿಕ್ಕಿದ್ದನ್ನು ಮಾರುತ್ತಿದ್ದರು. ಇವುಗಳಿಂದ ಬರುವ ವರಮಾನ ನಮ್ಮಮ್ಮನದು. ಮಧ್ಯಾನ್ಹದವರೆಗೂ ಕೆಲಸ, ಊಟ ಮುಗಿಸಿ ಬರುವ ಅಕ್ಕಪಕ್ಕದ ಮನೆಯ ನಮ್ಮಮ್ಮನ ಗೆಳತಿಯರು ಶಾಂತಮ್ಮನ ಊಟದೆಲೆ ಹಾಗೂ ನಮ್ಮಮ್ಮನ ಬುಟ್ಟಿ, ಹೂವು ಹಾಗೂ ತರಕಾರಿಗಳ                      ಗ್ರಾಹಕರುಗಳಾಗಿದ್ದರು. ನಮ್ಮ ತಾತ ಸ್ವಂತದ ಸೌದೆ ಡಿಪ್ಪೋ ಹೊಂದಿದ್ದರು. ವಯಸ್ಸಾದ ನಂತರ ಅದನ್ನು ಮಾರಿ ಮನೆಯಲ್ಲಿಯೇ ಇರುತ್ತಿದ್ದರು. ಮೂರು ಜನರು ಕೂರಬಹುದಾದ ಮರದ ಬೆಂಚೊಂದನ್ನು ಬೆಳಗ್ಗಾದರೆ ಮನೆಯೊಳಗಿನಿಂದ ಚಪ್ಪರದ ಕೆಳಗೆ ಹಾಕಿಸಿಕೊಂಡು ಕೂರುತ್ತಿದ್ದರು, ಸೊಂಟ ನೋಯುವಾಗ ಮಲಗುತ್ತಿದ್ದರು. ಹಲವಾರು ಮನೆಯ ಪಂಚಾಯಿತಿಗಳು, ಮದುವೆಯ ಮಾತುಕತೆ, ಪಂಚಾಂಗ(ತೆಲುಗು) ನೋಡಿ ಮದುವೆ ದಿನ ಗೊತ್ತು ಮಾಡುವುದೆಲ್ಲವೂ ಈ ಚಪ್ಪರದ ಕೆಳಗೇ ನಮ್ಮ ತಾತನ ಮೇಲುಸ್ತುವಾರಿಯಲ್ಲಿ ನಡೆಯುತ್ತಿತ್ತು. ತಾತನನ್ನು ನೋಡಲು ಬರುವವರು ಕಡಲೆಕಾಯಿ, ಗೆಣಸು, ತೆಂಗಿನಕಾಯಿಗಳನ್ನು ತಂದುಕೊಡುತ್ತಿದ್ದರು.   ನಮ್ಮ ತಂದೆ ಆಂಧ್ರದ ಕಡೆಯವರು, ತಾಯಿ ತಮಿಳುನಾಡಿನ ತೆಲುಗು ಭಾಷಿಕರು. ಹೀಗಾಗಿ ಎರಡೂ ಕಡೆಯ ನೆಂಟರಿಂದ ಸದಾ ತುಂಬಿರುತ್ತಿದ್ದ ಮನೆ ನಮ್ಮದು. ಬಂದವರು ಎರಡು ಮೂರು ದಿನ ತಂಗಿ ವಾಪಸ್ಸು ಹೊರಟರೆ, ಈ ಚಪ್ಪರದ ಕೆಳಗೆ ಒಲೆ ಬಾಣಲೆ ಇಟ್ಟು, ಚೆಕ್ಕುಲಿ ಇಲ್ಲದಿದ್ದರೆ ಕರ್ಜಿಕಾಯಿ ಮಾಡಿ ಊರಿಗೆ ಕೊಟ್ಟುಕಳಿಸುವ ದೃಶ್ಯ ಆಗಾಗ ನೆನನಾಗುತ್ತದೆ. ಯಾಕೆಂದರೆ ಅಪ್ಪಿತಪ್ಪಿ ಹುಷಾರಿಲ್ಲದೆಯೋ ಅಥವಾ ಸಮಯ ಒದಗಿ ಬರದೆ ಕುರುಕಲು ಮಾಡಿಕೊಡಲಿಲ್ಲವೆಂದರೆ  ಮುಖ ತಿರುವಿ ಹೋದ ನೆಂಟರನ್ನು ಮರೆಯಲಾದೀತೇ??  ದೀಪಾವಳಿ ಹಬ್ಬದ ಹಿಂದಿನ ದಿನ ನಮ್ಮ ಸೋದರಮಾವಂದಿರು ಬಂದು, ಇದೇ ಚಪ್ಪರದ ಕೆಳಗೆ ಕಲ್ಲುಗಳನ್ನು ಪೇರಿಸಿ,  ತಲೆಯಮೇಲೆ ಗರಿಕೆ ಹುಲ್ಲು ಸಿಕ್ಕಿಸಿದ ಸಗಣಿಯ ಗಣಪನನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ, ಒಲೆ ಹಚ್ಚಿ, ಸುತ್ತ ಕುಳಿತು ರಾಶಿರಾಶಿ ಕಜ್ಜಾಯ ಮಾಡುತ್ತಿದ್ದ ಸಂಭ್ರಮವನ್ನು ಎಲ್ಲರೂ ನೆನಪಿಸಿಕೊಳ್ಳುವುದುಂಟು.    ನಮ್ಮಲ್ಲಿಯ ಹೆಣ್ಣು ಮಕ್ಕಳು ದಾಟದ ಹತ್ತನೇ ತರಗತಿಯನ್ನು ನಮ್ಮಕ್ಕ ಪಾಸು ಮಾಡಿಬಿಟ್ಟಿದ್ದರು. ನಮ್ಮಪ್ಪ ಹಾಗೂ ತಾತನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ಸಂತೋಷ ಹಂಚಿಕೊಳ್ಳಲು ಲಾಡು ಮಾಡುವವರನ್ನು ಕರೆಸಿ, ಇನ್ನೂರು ಲಾಡುಗಳನ್ನು  (ಚಪ್ಪರದ ಕೆಳಗೆ) ಮಾಡಿಸಿ, ಮನೆಗೆ ಬಂದವರಿಗೆ, ರಸ್ತೆಯಲ್ಲಿ ಓಡಾಡುವ ಪರಿಚಯದವರಿಗೆ,  ಕೆಲವು ಮನೆಗಳಿಗೆ ನಡೆದು ಮತ್ತು ಬಸ್ಸಿನಲ್ಲಿಯೂ ಹೋಗಿ ಕೊಟ್ಟು ಬಂದರು ನಮ್ಮ ತಂದೆ. ನಮ್ಮ ಚಪ್ಪರದ ಊರುಗೊಲಿಗೆ ಬಾಡಿಗೆ ಮನೆಯ ನಾಗಮ್ಮ ತಮ್ಮ ಒಂದೂವರೆ ವರ್ಷದ ಮಗ, ರಾಜನ ಒಂದು ಕಾಲು ಕಟ್ಟಿಹಾಕಿ ಮನೆಗೆ ಹೋಗಿಬಿಡುವರು. ಅವರು ಕೆಲಸ ಮುಗಿಸಿ ಬರುವವರೆಗೂ  ಅಳುತ್ತಲೋ, ಅರಚುತ್ತಲೋ ಉಚ್ಛೆಹುಯ್ದುಕೊಂಡು ಅದರಲ್ಲಿಯೇ ಒದ್ದಾಡಿಕೊಂಡು ಅವನು ಕುಳಿತಿರುತ್ತಿದ್ದ ಕೆಲವೊಮ್ಮೆ ಅಲ್ಲಿಯೇ ನಿದ್ರಿಸಿಯೂ ಬಿಡುತ್ತಿದ್ದ. ರಜಾ ದಿನಗಳಲ್ಲಿ ನಾನು, ನನ್ನ ತಂಗಿ ಉಮಾ ಕೆಲವು ಗೆಳತಿಯರೊಡನೆ ಸೇರಿ ಚಪ್ಪರಕ್ಕೆ ಸೀರೆಗಳನ್ನು ಪರದೆಯಂತೆ ಸಿಕ್ಕಿಸಿ ಒಳಾಂಗಣವನ್ನು ವೇದಿಕೆಯನ್ನಾಗಿಸಿ, ಐದೈದು ಪೈಸೆ ವಸೂಲಿ ಮಾಡಿ ವಿಧವಿಧವಾದ ನಾಟಕಗಳನ್ನಾಡಿ, ಬಂದ ಹಣವನ್ನು ಹಂಚಿ ಕಮ್ಮರ್ಕಟ್ಟು ತಿಂದುಬಿಡುತ್ತಿದ್ದೆವು. ಇಂಥ ಬಹುಪಯೋಗಿ ಚಪ್ಪರವು ನೋಡಲು ಬಹು ಸುಂದರವಾಗಿತ್ತು. ಮೇಲೆ ಬೀಳುವ ಮುಂಜಾವಿನ ಬಿಸಿಲಿನ ತೆಳುಕಿರಣಗಳು ಚಪ್ಪರಕ್ಕೆ ಹಾಸಿದ್ದ ಗರಿಗಳ ಸಂದುಗಳಿಂದ  ಓರೆಯಾಗಿ ಬಿದ್ದು ನೆಲವನ್ನು ಒಂದು ತೆರನಾಗಿ ಅಂದಗೊಳಿಸಿದರೆ, ಬೇಸಿಗೆಯಲ್ಲಿ ನೆಲದ ಮೇಲೆ ಮೂಡುವ ದಟ್ಟ ಕಪ್ಪು ನೆರಳಿನೊಂದಿಗಿನ ಬೆಳಕು ವರ್ಣನಾತೀತವಾದದ್ದು. ಮಳೆಗಾಲದಲ್ಲಿ ಪಟಪಟನೆ ಸದ್ದು ಮಾಡಿ ನೀರು ಸೋರುತ್ತಿದ್ದ ಚಪ್ಪರವು, ಚಳಿಗಾಲದ ಬೆಳಗು ಹಾಗೂ ಸಂಜೆ ಕಣ್ಣಿಗೆ ಕಾಣದಷ್ಟು ದಟ್ಟವಾದ ಹಿಮದಿಂದ ಮುಚ್ಚಿ ಹೋಗಿರುತಿತ್ತು. ಈ ಹಿಮದ ಮದ್ಯೆ ಬುಟ್ಟಿ ಹೊತ್ತು ಬಂದ ಹೂವಿನವಳು ಮೊಳ ಹಾಕುತ್ತಿದ್ದ ಮಲ್ಲಿಗೆ ಹೂವಿನ ವಾಸನೆಯ ಅಮಲು, ನೆನೆದಾಗಲೆಲ್ಲಾ ನನ್ನನ್ನು ಸ್ವರ್ಗದಲ್ಲಿ ತೇಲಿಸುತ್ತದೆ. ಇಷ್ಟೆಲ್ಲಾ ಮೇರು ಮಹಿಮೆಯುಳ್ಳ ಚಪ್ಪರದ ಕೆಳಗೆ, ಬೆಳದಿಂಗಳ ಚಂದ್ರನು ಮೂಡಿಸಿದ ಅಂದದ ಚಿತ್ತಾರದ ಮೇಲೆ ಕುಳಿತು  ನನ್ನಮ್ಮ ಬೇಳೆ, ಒಣಮೆಣಸಿನಕಾಯಿ  ಜೊತೆಗೆ ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು ಹಾಕಿ ಬೇಯಿಸಿ ಮಸೆದ ಸಾರು, ನೆಂಚಿಕೊಳ್ಳಲು ಒಂದು ಅಥವಾ ಎರಡು ವರ್ಷ ಹಳೆಯದಾದ ಒಣಗಿಸಿದ ಮಾವಿನಕಾಯಿಯಿಂದ ಮಾಡಿದ ಉಪ್ಪಿನಕಾಯಿ ರುಚಿಯನ್ನು ಬಾಯಿಚಪ್ಪರಿಸುತ್ತಾ ಅಕ್ಕತಂಗಿಯರೊಂದಿಗೆ ಊಟವನ್ನು ಹಂಚಿ ತಿಂದ ನನ್ನ ಭಾಗ್ಯಕ್ಕೆ ಮಿತಿಯೇ ಇಲ್ಲ… *******************************************

ಚಪ್ಪರದ ಗಳಿಕೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಶುಭಲಕ್ಷ್ಮಿ ಆರ್ ನಾಯಕ ಹೃದಯ ಸಿರಿವಂತಿಕೆಗೆ ಅರಮನೆ ಗುಡಿಮನೆಗಳೆಂಬ ಭೇದವುಂಟೇ ಸಖೀಗುಣ ಅವಗುಣಗಳಿಗೆ ಬಡವನು ಬಲ್ಲಿದನೆಂಬ ಅಂತರಗಳುಂಟೇ ಸಖೀ ಅವರವರ ಭಾವಗಳಲಿ ಅವರವರ ಅರಿವಿಂಗೆ ಬಂದಂತೆ ಮಾಡುತಿಹರುಸನ್ನಡತೆ ದುರ್ನಡತೆಗಳಿಗೆ ನಾನು ನೀನೆಂಬ ದೂರಗಳುಂಟೇ ಸಖೀ ಸಂಕುಚಿತ ಭಾವದಲಿ ಸ್ವಾರ್ಥದ ಬೆಂಬತ್ತಿ ತಮ್ಮ ತನಗಳ ಮರೆತಿಹರುಜೀವನದಿ ಸ್ವಾರ್ಥವೆಂಬ ಮುಸುಕಿಗೆ ಬಲಿಯಾಗಿ ಗೆದ್ದವರುಂಟೇ ಸಖೀ ಬಡವನಲಿ ಕಾಣಬಹುದಲ್ಲವೇ ನಯ ವಿನಯತುಂಬಿರುವ ವಿಶಾಲ ಹೃದಯವಅವನ ಕಷ್ಟ ತ್ಯಾಗ ಸಹನೆಗಳ ಅಸಹನೆಯಿಂದ ಮರೆಯಲುಂಟೇ ಸಖೀ ಸಂಕುಚಿತ ಸ್ವಾರ್ಥದ ಬದುಕ ಕಂಡು ಶುಭ ಳ ಕೋಮಲ ಹೃದಯ ಚೂರಾಗಿದೆಭೇದ ಭಾವ ಸ್ವಾರ್ಥ ಮೋಹಗಳಿಂದ ಮಹಲುಗಳ ಕಟ್ಟಲುಂಟೇ ಸಖೀ *****************************

ಗಝಲ್ Read Post »

ಕಾವ್ಯಯಾನ

ಮಂಜು

ಕವಿತೆ ಮಂಜು ನಳಿನ ಡಿ ಕಾಡುಮಲ್ಲಿಕಾರ್ಜುನನ ಚರಣ ಸೇರಲು ಹಾಡುಹಗಲೇ ಹಂಬಲಿಸಿ,ಬಿದ್ದ ವರುಣನ ತಿರಸ್ಕರಿಸಿ,ಮಾಟಗಾರ ಮಹಾಮಹಿಮ, ಓಜಸ್ವಿ ಓಡೋಡಿ ಹಿಡಿಯಲಾರೆ,ತಪ್ಪಾದರೂ ತಿರುಗಿ ಬರಲಾರೆ,ಕನವರಿಸಿ ಕಾಡಹಾದಿಯ ತಪ್ಪಿಸಿ,ಊರಿಗೆ ದಾರಿ ಒಪ್ಪಿಸಿ,ಗೂಬೆ ಕೂಗಿಗೆ ಕಾಗೆ ಓಡಿಸಿ,ಮುಸ್ಸಂಜೆ ಕಳೆಯಲು, ಬೆಟ್ಟದ ಬಂಡೆಗೆ ಬೆನ್ನುಹಾಸಿ,ಮರೆತು ಹೋದರೂ ಹುಡುಕಿ ತರುವ ಯಾಚಕ,ಸುಭದ್ರ ಸನಿಹದ ಇಳಿಮುಖ ಪ್ರತಿಫಲನ,ಪ್ರೇಮದ ವಕ್ರೀಭವನ,ಘಟಿಸುವವರೆಗೂ,ಮಂಜು ಅರಸಿ ಹಬ್ಬಿ ಕವಿಯುವವರೆಗೂ,ತಬ್ಬಿಬ್ಬು ಮನಸು…ಮಂಜು ನಗಲಿ,ಮಳೆ ಬರಲಿ..ನನ್ನಿರವು ನಿನ್ನಲ್ಲಿ ಸದಾ ಇರಲಿ.. ***********************************

ಮಂಜು Read Post »

ಕಾವ್ಯಯಾನ

ಓ.. ಮನಸೇ

ಕವಿತೆ ಓ.. ಮನಸೇ ವಿಭಾ ಪುರೋಹಿತ್ ಕ್ಷಣದ ಏಕಾಂತದಲಿಅಮೂರ್ತವಾಗಿನನ್ನೆದುರಲ್ಲೇಯಿರುವಿಎದೆಯಲ್ಲಿ ಗೆಜ್ಜೆ ಕಟ್ಟಿ ಥಕಥಕಕುಣಿಸಿ ಅಟ್ಟಕ್ಕೇರಿದ ಅತಿರೇಕನಿನ್ನ ನೋಡಬೇಕೆಂಬಉತ್ಕಟತೆ ಜಲಪಾತಕ್ಕೂಜೋರಾಗಿ ಜೀಕಿದೆಹಾರಿದ ಹನಿಗಳುಚಂದಿರನ ಗಲ್ಲಕ್ಕೆ ಸವರಿದ್ದೇ ತಡತಂಪಿನಲ್ಲೇ ತಾಪ ಅನುಭವಿಸಿಧಗಧಗ ಉರಿಯುತ್ತ ಉರುಳಿಅವಳ ಸ್ಪರ್ಶಕ್ಕೆ ಘರ್ಷಕ್ಕೆಆತು ಕೂತಿರುವೆಮರಿ ಭಾಷ್ಪವಾಗಿನುಡಿಯುತಿರೆ ಮಿಡಿಗಾವ್ಯ ಓ… ಮನಸೇ ಅದ್ಭುತ !ಏನೋ ಭೋರ್ಗರೆತಅದರಲ್ಲೊಂದು ಥಳುಕುಸಣ್ಣ ಸೆಳೆತ ದೇದೀಪ್ಯಮಾನಊಹಿಸಿರಲಿಲ್ಲಶಬ್ದಾತೀತ ಅನುಭೂತಿಮನಸ್ಸು ವಿಚಾರಗಳುಆಯಸ್ಸಿನ ಅಂಕೆವಯಸ್ಸಿನ ಶಂಕೆಇವೆರಡನ್ನೂ ಮೀರಿದನಳನಳಿಸುವ ತಾಜಾತನನವೊನವೋನ್ಮೇಶಎಂಥ ವಿಚಿತ್ರ !ಮನಸಿಗೆ ಪ್ರವಾಸ ಪ್ರಯಾಸಇದ್ದಂತಿಲ್ಲಥಟ್ಟಂತ ಪ್ರತ್ಯಕ್ಷಥಟ್ಟಂತ ಅಂತರ್ಧಾನಸೇರದ ದಾರಿಯೇನಲ್ಲಸೇರುವೆ ಎಂದಾದರೊಮ್ಮೆ

ಓ.. ಮನಸೇ Read Post »

ಕಾವ್ಯಯಾನ

ಎರಡು ಕವಿತೆಗಳು

ಕವಿತೆ ಧನಪಾಲ ನಾಗರಾಜಪ್ಪ ಧನ ನಿನ್ನದನಿಕೇಳರಾರೂನಿನ್ನಪಾಡುನೋಡರಾರೂನೆಲ, ಜಲಜನ, ಮನಅಂತೆಲ್ಲಾ ಯಾಕೆ‌ ಬಡಬಡಿಸುವೆ?ಧನವೇ ಇಂಧನಧನವೇ ಪ್ರಧಾನಜಮಾನ ಇದರ ದೀವಾನನಿನಗೆ ಅರ್ಥವಾಗದೆ ಧನು? ಜಾಡ್ಯ ಇಲ್ಲಿಯ ತನಕಏಡ್ಸ್ ಒಂದರ ಹೊರತುಬಹುತೇಕ ಜಾಡ್ಯಗಳಿಗೆಇಲಾಜು ಮಾಡಬಲ್ಲರುಈಗಿನ ವೈದ್ಯರುಶ್ಲಾಘನೀಯ ಸಾಧನೆಯೇ ಸರಿ ಜಾತಿಯ ಅಹಂ ಕೂಡಾಮಾರಕ ಜಾಡ್ಯ ಅಲ್ಲವೆ?ದೂರವಿರಿ ಇದು ಸಾಂಕ್ರಾಮಿಕಮುಂದೆ ಎಂದಾದರೂಏಡ್ಸಿಗೂ ಸಹಔಷಧ ಕಂಡುಹಿಡಿಯಬಹುದೇನೋ!ಆದರೆ ಜಾತಿಯ ಜಾಡ್ಯಕ್ಕೆಮದ್ದು ಅದೆಂದು ಸಿಗುವುದೋ ಧನು? ***************************************

ಎರಡು ಕವಿತೆಗಳು Read Post »

ಕಾವ್ಯಯಾನ

ಸತ್ಯಕ್ಕೆ ಸಾಕ್ಷಿ ಬೇಕಾಗಿದೆ

ಕವಿತೆ ಸತ್ಯಕ್ಕೆ ಸಾಕ್ಷಿ ಬೇಕಾಗಿದೆ ಆರ್.ಉಷಾ ಸತ್ಯ ಸುಳ್ಳುಗಳ ಮಧ್ಯೆ ಬೆಸುಗೆ ಬೆಳೆದುಸುಳ್ಳು ಎಲ್ಲೆಲ್ಲೂ ಝೇಂಕರಿಸಿ ವಾಮನನಂತೆ ಬೆಳೆದುಬಲಿಗೊಟ್ಟು ಸತ್ಯವನುಮೋಸದ ಜೊತೆ ಒಡನಾಡಿಯಾಗಿದ್ರೋಹದ ಜೊತೆ ಸ್ನೇಹ ಪಲ್ಲವಿಸಿಅಪನಂಬಿಕೆಯ ಮಿತ್ರನ ನೆರವು ಪಡೆದುದ್ರೋಹದ ಬಲೆಯಲ್ಲಿ ಸತ್ಯವನು ಮೂಲೆಗುಂಪು ಮಾಡಿಕಾರ್ಗತ್ತಲಿನ ಖೋಲಿಯಲ್ಲಿ ಬಂಧಿಯನ್ನಾಗಿಸಿತು ಸುಳ್ಳು ಕಟ್ಟಿದ ಅರಮನೆಯಲ್ಲಿ ಕೂಪಮಂಡೂಕದಂತೆಸೂರ್ಯೋದಯವನ್ನೇ ಕಾಣದ ಸತ್ಯಕತ್ತಲಲ್ಲೇ ಕುರುಡಾಗಿಇರುಳ ಕರುಳ ಬಗೆದುಬಟ್ಟ ಬಯಲಾಗಲಾರದೆಸುಳ್ಳಿನ ವಿದ್ರೋಹದ ಮುಳ್ಳು ಬೇಲಿಯಲಿ ಸಿಲುಕಿನರಳಿ ನರಳಿ ನರ ಸತ್ತು ಗಂಟಲ ಪಸೆ ಆರಿಬೊಬ್ಬಿರಿಯಲಾಗದೆ ಕಗ್ಗತ್ತಲ ಕೂಪದಲಿ ಬೆಂದು ಒಂಟಿಯಾಗಿ ಸಾಕ್ಷಿಯ ಸಹಚರನಿಲ್ಲದ ಸತ್ಯ ಕಾಯುತಿದೆ ಬಿಡುಗಡೆಗಾಗಿಅರಸುತ್ತಿದೆ ತನ್ನ ಪರ ವಕಾಲತ್ತು ವಹಿಸುವ ಮಿತ್ರನನ್ನುತನ್ನ ಅಸ್ತಿತ್ವ ನಿರೂಪಿಸಲು ಇಂದಿಗೂ ಚಾತಕಪಕ್ಷಿಯಂತೆ *************************************************

ಸತ್ಯಕ್ಕೆ ಸಾಕ್ಷಿ ಬೇಕಾಗಿದೆ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಪಿಂಜರ್ ಶೋಷಣೆಗೊಳಗಾಗಿ ಅಸ್ಥಿಪಂಜರಗಳಾಗುವ ಹೆಣ್ಣುಮಕ್ಕಳ ಕಥೆ ಅಮೃತಾ ಪ್ರೀತಮ್ ಪಿಂಜರ್ಮೂಲ : ಅಮೃತಾ ಪ್ರೀತಮ್ಕನ್ನಡಕ್ಕೆ : ಎಲ್.ಸಿ.ಸುಮಿತ್ರಾಪ್ರ : ಅಂಕಿತ ಪುಸ್ತಕಪ್ರ.ವರ್ಷ :೨೦೦೬ಬೆಲೆ : ರೂ.೬೦ಪುಟಗಳು : ೧೦೪          ದೇಶ ವಿಭಜನೆಯ ಕಾಲದಲ್ಲಿ  ಶೋಷಣೆಗೊಳಗಾದ ಅಮಾಯಕ ಹೆಣ್ಣು ಮಕ್ಕಳ ಕರುಣ ಕಥೆಯಿದು. ಪೂರೋ ಎನ್ನುವವಳು ಇಲ್ಲಿ ಕಥಾ ನಾಯಕಿ.       ತನ್ನ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿರುವ ಒಂದು ಸುಖಿ ಕುಟುಂಬದಲ್ಲಿ ಹಾಯಾಗಿ ಬೆಳೆದ ಹುಡುಗಿ ಪೂರೊ. ಸೌಮ್ಯ ಸ್ವಭಾವದವಳೂ ವಿಧೇಯಳೂ ಆದ ಅವಳು ತಾಯಿ ತಂದೆಯರ ಮುದ್ದಿನ ಮಗಳು. ತಾಯ್ತಂದೆಯರು ಅವಳಿಗಾಗಿ ನೋಡಿಟ್ಟ ರಾಮಚಂದನನ್ನು ಮದುವೆಯಾಗುವ ಕನಸು ಕಾಣುತ್ತಿರುತ್ತಾಳೆ. ಅಷ್ಟರಲ್ಲಿ ಸಂಭವಿಸುತ್ತದೆ ಆ ದುರ್ಘಟನೆ. ಪೂರೋಳ ಮಾವನಿಂದಾದ ಒಂದು ಅನ್ಯಾಯಕ್ಕೆ ಪ್ರತೀಕಾರವಾಗಿ ಒಂದು ಮುಸ್ಲಿಂ ಕುಟುಂಬವು ರಷೀದನೆಂಬ ಅವರ ಯುವಕನನ್ನು ಪೂರೋಳನ್ನು ಬಲಾತ್ಕಾರವಾಗಿ ಎತ್ತಿ ಹಾಕಿಕೊಂಡು ಬರಲು ನಿರ್ಬಂಧಿಸುತ್ತದೆ. ಇಲ್ಲಿಂದಾಚೆ ಅವಳ ಜೀವನ ಸೂತ್ರ ಕಡಿದ ಗಾಳಿಪಟವಾಗುತ್ತದೆ. ರಷೀದನು ಅವಳ ಮೇಲೆ ಲೈಂಗಿಕ ಅತ್ಯಾಚಾರ ಮಾಡುವುದಿಲ್ಲವಾದರೂ ಪೂರೋ ಮಾನಸಿಕ ಹಿಂಸೆ ಅನುಭವಿಸುತ್ತಾಳೆ.    ಪೂರೋ ಹೇಗೋ ಒದ್ದಾಡಿ ರಷೀದನ ಬಂಧನದಿಂದ ತಪ್ಪಿಸಿಕೊಂಡು ತನ್ನ ಮನೆಗೆ ಓಡಿ ಬರುತ್ತಾಳೆ. ಆದರೆ ಇಲ್ಲಿ ಅವಳಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಬೇರೊಂದು ಧರ್ಮದವರಿಂದ ಒಯ್ಯಲ್ಪಟ್ಟು ಅವರ ಜತೆಗೆ ಕೆಲವು ದಿನಗಳನ್ನು ಕಳೆದವಳ ಪಾವಿತ್ರ್ಯವನ್ನು   ಶಂಕಿಸಿ ಅವಳ ತಂದೆ ಅವಳನ್ನು ಸ್ವೀಕರಿಸುವುದಿಲ್ಲ. ತನ್ನ ಮಾನವನ್ನು ಕಳೆದುಕೊಂಡ ಅವಳಿಗೆ ಇನ್ನು ಮದುವೆಯೂ ಆಗಲಾರದೆಂದು ತಂದೆ ಅವಳನ್ನು ತಿರಸ್ಕರಿಸುತ್ತಾನೆ. ಬೇರೆ ದಾರಿ ಕಾಣದೆ ಅವಳು ರಷೀದನ ಜತೆಗೆ ಜೀವಿಸಲು ತಿರುಗಿ ಹೋಗುತ್ತಾಳೆ. ರಷೀದ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ. ಆದ್ದರಿಂದ ಪ್ರಾಯಶ್ಚಿತ್ತವಾಗಿ ಅವಳನ್ನು ಸ್ವೀಕರಿಸಿ ಅವಳಿಗೊಂದು ಬದುಕು ಕೊಡಲು ಸಿದ್ಧನಾಗುತ್ತಾನೆ. ಆದರೆ ಅವಳ ಹೆಸರನ್ನು ಮಾತ್ರ ಹಮೀದಾ ಎಂದು ಬದಲಾಯಿಸುತ್ತಾನೆ. ಹೀಗೆ ಪೂರೋ ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬದುಕ ಬೇಕಾಗುತ್ತದೆ. ಸ್ವಾಭಿಮಾನಿಯೂ ಸಂವೇದನಾಶೀಲೆಯೂ ಆದ ಪೂರೋಗೆ ಇದು ಅಸಹನೀಯವೆನ್ನಿಸುತ್ತದೆ.   ಪೂರೋಳ ಹಾಗೆಯೇ ಪಿತೃ ಸಂಸ್ಕೃತಿಯ ಅಸಮಾನ ಧೋರಣೆಯಿಂದಾಗಿ  ಸ್ಥಾನ ಭ್ರಷ್ಟರಾಗಿ ಬೇರೆ ಬೇರೆ ರೀತಿಯಿಂದ ಅನ್ಯಾಯಕ್ಕೊಳಗಾದ ಲಾಜೋ, ಟಾರೋ ಮತ್ತು ಕಮ್ಮೋ ಎಂಬ ಇನ್ನು ಮೂವರು ಹೆಣ್ಣುಮಕ್ಕಳೂ ಈ ಕಾದಂಬರಿಯಲ್ಲಿದ್ದಾರೆ.ಹೆಣ್ಣಿನ ಬೆತ್ತಲೆ ಮೆರವಣಿಗೆ, ಲೈಂಗಿಕ ದೌರ್ಜನ್ಯಗಳಂತಹ ಕ್ರೌರ್ಯ ಪ್ರದರ್ಶನದ ಚಿತ್ರಣಗಳೂ ಇಲ್ಲಿವೆ.       ಹೆಣ್ಣು ಗಂಡಿನ ಆಕ್ರಮಣಕ್ಕೊಳಗಾಗಿ ಅವನಿಂದ ಇಷ್ಟ ಬಂದಂತೆ ಬಳಸಲ್ಪಡಬಹುದೆನ್ನುವ  ಸಮಾಜದ ಅಮಾನವೀಯ ನಿಲುವನ್ನು ಇಲ್ಲಿ ಪರೋಕ್ಷವಾಗಿ ಖಂಡಿಸಲಾಗಿದೆ.  ಸಂಸ್ಕೃತಿ, ಧರ್ಮ ಹಾಗೂ ಸಾಮಾಜಿಕ ನಿಯಮಗಳನ್ನು ಕಾಪಾಡಿಕೊಳ್ಳುವ ನೆಪದಲ್ಲಿ  ಸ್ತೀ ಯರಿಗೆ ನೀಡುವ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು, ಆ ಯಾತನೆಗಳನ್ನು ಸಹಿಸಲಾರದೆ ಒದ್ದಾಡುತ್ತ ಅಸಹಾಯಕರಾಗುವ ಸ್ತ್ರೀ ಯರ ದಾರುಣ ಪರಿಸ್ಥಿತಿಯನ್ನೂ ಈ ಕಾದಂಬರಿ ಯಥಾವತ್ತಾಗಿ ಸ್ವಲ್ಪವೂ ಉತ್ಪ್ರೇ.ಕ್ಷೆಯಿಲ್ಲದೆ ಚಿತ್ರಿಸುತ್ತದೆ.ದೇಶ ವಿಭಜನೆಯ ಕಾಲದಲ್ಲಿ ನಡೆದ ಪೂರೋಳಂತಹ ಸಾವಿರಾರು ಹೆಣ್ಣುಮಕ್ಕಳು ಅನುಭವಿಸಿದ ನರಕ ಯಾತನೆ ಇಲ್ಲಿ ಭೀಭತ್ಸ ರೂಪವನ್ನು ತಾಳಿದೆ.    ಕನ್ನಡ ಅನುವಾದದ ಭಾಷಾ ಶೈಲಿ ತುಂಬಾ ಸುಂದರವಾಗಿದ್ದು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತದೆ.. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಇತರೆ, ಜೀವನ

ಲೆಕ್ಕಕ್ಕೊಂದು ಸೇರ್ಪಡೆ

ಲೇಖನ ಲೆಕ್ಕಕ್ಕೊಂದು ಸೇರ್ಪಡೆ ಶಾಂತಿ ವಾಸು ಚೀನಿಯರ ಕೆಟ್ಟ ಮನಸ್ಥಿತಿಯ ಕನ್ನಡಿ ಕೊರೊನ, ಭಾರತವನ್ನು ಪ್ರವೇಶಿಸುವ ಮೊದಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ಸಂಪೂರ್ಣ ದೇಹವನ್ನು ಅದೇನೋ ಹೊಸತರಹದ ದಿರಿಸಿನಿಂದ ಮುಖಸಹಿತ ಮುಚ್ಚಿಕೊಂಡ ಜನರು ಪ್ಲಾಸ್ಟಿಕ್ ಚೀಲದಲ್ಲಿ ಬಿಗಿಯಾಗಿ ಸುತ್ತಿದ ನೂರಾರು ಜನರ ಮೃತದೇಹಗಳನ್ನು ಒಟ್ಟೊಟ್ಟಿಗೇ, ಆಳವಾದ ಒಂದೇ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚುವುದು ಹಾಗೂ ಪೆಟ್ರೋಲ್ ಸುರಿದು ಸಾಮೂಹಿಕವಾಗಿ ಸುಡುವುದನ್ನು ನೋಡಿಯೇ ಪ್ರಪಂಚವು ನಡುಗಿಹೋಗಿತ್ತು. ಇದೇನು?? ಹೊಸದಾಗಿ ನಡೆದದ್ದೇ? ಅಥವಾ ಯಾವುದಾದರೂ ಸಿನಿಮಾಗಾಗಿ ಇರಬಹುದೇನೋ ಎಂದು ಗೊಂದಲಗೊಂಡ ಕೋಟ್ಯಂತರ ಭಾರತೀಯರಲ್ಲಿ ನಾನೂ ಒಬ್ಬಳು. ನಂತರದ ದಿನಗಳಲ್ಲಿ ಗುಂಪುಗುಂಪಾಗಿ ಚೀನೀ ಜನರು ನಿಂತಲ್ಲಿಯೇ ಹುಳುಗಳಂತೆ ಮುದುರಿ ಬೀಳುವ ದೃಶ್ಯವನ್ನು ಮಾಧ್ಯಮಗಳಲ್ಲಿ ತೋರಿಸಲಾಯಿತು. ಇದನ್ನು ಕಂಡ ನಮ್ಮನ್ನು ಹೆಚ್ಚಾಗಿ ಕಾಡಿದ್ದೆಂದರೆ, ಬಿದ್ದವರನ್ನು ಗಮನಿಸುವುದಾಗಲೀ ಏನಾಯಿತೆಂದು ತಿರುಗಿಯೂ ನೋಡುವ ವ್ಯವಧಾನವೋ ಕರುಣೆಯೋ ಇಲ್ಲದವರಂತೆ ಭಾವನಾರಹಿತರಾಗಿ ಓಡಾಡುತ್ತಿದ್ದ ಮಾಸ್ಕ್ ಧರಿಸಿದ ಚೀನಾ ಜನರ ಹೃದಯಹೀನತೆ. ಆಸ್ಪತ್ರೆಯ ದೃಶ್ಯಗಳಲ್ಲಿ ವೆಂಟಿಲೇಟರ್ ಹಾಕಿದ್ದರೂ ಉಸಿರಾಡಲು ಕಷ್ಟಪಡುವ ರೋಗಿಗಳ ನರಳಾಟ ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಕೊರೊನ ಎಂಬ ಹೊಸ ಖಾಯಿಲೆಯಿಂದ ಸಾವಿರಾರು ಸಂಖ್ಯೆಯ ಜನರು ಬೀದಿ ಹೆಣಗಳಾಗುತ್ತಿದ್ದಾರೆಂದೂ ಅವರನ್ನೆಲ್ಲಾ ಸಾಮೂಹಿಕವಾಗಿ ಹೂಳುತ್ತಿದ್ದಾರೆಂಬುದನ್ನೂ ನಾವೆಲ್ಲಾ ಅರಗಿಸಿಕೊಳ್ಳುವಷ್ಟರಲ್ಲಿ ನಮ್ಮೆಲ್ಲರ ಮಧ್ಯೆ ತನ್ನ ಕದಂಬಬಾಹುಗಳನ್ನು ಚಾಚಲು ಪ್ರಾರಂಭಿಸಿಯೇ ಬಿಟ್ಟಿತ್ತು ಅದೇ ಚೀನಾದ ಅನಾಮಿಕ ವೈರಸ್.. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯರ ಜೀವನದಲ್ಲೂ ಪ್ರಬಲ ಬದಲಾವಣೆ ತಂದ ಈ ವೈರಸ್ ಇಲ್ಲಿಯ ತನಕ ಲಕ್ಷಾಂತರ ಮಂದಿಯ ಪ್ರಾಣವನ್ನು ಬಲಿ ಪಡೆದಿದೆ. ಹಾಗೂ ಇನ್ನೂ ಮುಂದುವರೆಯುವ ಲಕ್ಷಣಗಳು ನಿಚ್ಚಳವಾಗಿವೆ.. ಪ್ರತಿ ಧರ್ಮದವರೂ ಅವರವರದೇ ರೀತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮೃತರ ಆತ್ಮವನ್ನು ಅಂತರಾತ್ಮನಲ್ಲಿ ವಿಲೀನಗೊಳಿಸುವ ಶ್ರೇಷ್ಠಪದ್ಧತಿಯನ್ನು ರೂಢಿಸಿಕೊಂಡು ಬಂದ ನಮ್ಮ ಭಾರತದಂತಹ ಪುಣ್ಯಭೂಮಿಯಲ್ಲಿ ಬದುಕಿದ ಮನುಷ್ಯರು ಬೀದಿ ಹೆಣಗಳಾಗಿಸುವುದನ್ನೂ, ಸತ್ತವರನ್ನು ದರದರನೇ ಎಳೆದೊಯ್ದು ಎತ್ತಿ ಹಳ್ಳಕ್ಕೆ ಬಿಸಾಡುವುದನ್ನು ಎಂದಿಗೂ ಯಾರೂ ಕಲ್ಪಿಸಿಯೂ ಇರಲಾರರು. ನಮ್ಮ ಸಂಸ್ಕೃತಿಯಲ್ಲಿಲ್ಲದ ಅನೇಕ ವಿಷಯಗಳಲ್ಲಿ ಅನ್ಯರನ್ನು ಅನುಸರಿಸುತ್ತಿರುವ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನುಷ್ಯರ ಸಂಸ್ಕಾರವನ್ನೂ ಅಮಾನುಷ್ಯವಾಗಿ ನಡೆಸಿಬಿಟ್ಟೆವು. ತನ್ನ ದೇಹಕ್ಕೆಂಥಹ ಅವಮಾನವಾಗುತ್ತಿದೆ ಎಂದು ಮೃತರಿಗೆ ತಿಳಿಯುವುದಿಲ್ಲವಾಗಲೀ, ಹತ್ತಿರ ಸುಳಿಯಲು ಅವಕಾಶವಿಲ್ಲದೆ ದೂರದಲ್ಲಿ ನಿಂತು ನೋಡುತ್ತಿರುವ ಸಂಬಂಧಿಕರು ಅಥವಾ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದ ಸಾರ್ವಜನಿಕರಲ್ಲಿ ಎಂಥ ಭಾವನೆ ಹಾಗೂ ಭಯ ಹುಟ್ಟಿಸುತ್ತಿವೆ ಎಂದು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಮೋದಿ ಬೇಕಾ ಮನಮೋಹನ್ ಸಿಂಗ್ ಬೇಕಾ ಎಂದು ಕೇಳಿ, ಒಂದನ್ನು ಒತ್ತಿ ಎರಡನ್ನು ಒತ್ತಿ ಎನ್ನುತ್ತಾ, ಮುಂದಿನ ಪ್ರಧಾನಿ ಯಾರೆಂಬ ದೊಡ್ಡ ಸಮೀಕ್ಷೆಯನ್ನು ಸರಳವಾಗಿ ಸದ್ದಿಲ್ಲದೇ ನಡೆಸಿ ನಿಂತಗಳಿಗೆಯಲ್ಲಿಯೇ ಮುಂದಿನ ಪ್ರಧಾನಿ ಯಾರೆಂದು ನಿಖರತೆ ಸಾರುವ ಆಪ್ಗಳು(app), ಕೇವಲ ಒಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ, ಕೋವಿಡೇತರ ರೋಗಿಗಳು ಯಾವ ಆಸ್ಪತ್ರೆಯನ್ನು ಎಡತಾಕಬೇಕು ಎಂಬ ವಿವರ ಒದಗಿಸುವುದನ್ನು ನಿರಾಕರಿಸುತ್ತಿವೆ ಏಕೆ?? ಪ್ರಮಾದಗಳನ್ನು ತಡೆಯಲಾಗದ ಇಚ್ಚಾಶಕ್ತಿಯ ಕೊರತೆ, ಕೊರೊನಾದಿಂದ ಧಿಡೀರನೆ ವ್ಯಕ್ತಿಯನ್ನು ಕಳೆದುಕೊಂಡ ದುಃಖ, ಮುಂದೇನು ಎಂದು ದಿಕ್ಕುತೋರದೆ ಚಿಂತೆಗೊಳಗಾದ ಕುಟುಂಬಸ್ಥರಿಗೆ, ಕೊನೆಪಕ್ಷ ಮೃತರ “ಮರ್ಯಾದಾ ಶವಸಂಸ್ಕಾರ”ದ ಭರವಸೆ ನೀಡುವಲ್ಲಿ ವಿಫಲವಾಯಿತು. ಸಾರ್ವಜನಿಕರಾದ ನಾವು ಅರಿತಿರಲೇಬೇಕಾದ ವಿಷಯವೆಂದರೆ ಯಾವುದೇ ಪಕ್ಷವಾಗಲಿ ಪ್ರಜಾಪ್ರಭುತ್ವದಲ್ಲಿ ಹಲವರು ಆಶಿಸಿದಂತೆ ಆಳಲು ಬರುವ ಜನನಾಯಕರ ಪ್ರಭುತ್ವವನ್ನೇ, ಆಯ್ಕೆ ಮಾಡದವರೂ ಸಹಾ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಆರಿಸಿದ ವ್ಯಕ್ತಿಯು ನಮ್ಮನ್ನು ಅವರಾಯ್ಕೆಯ ಹಲವರ ಅಧೀನಕ್ಕೆ ತಳ್ಳಿಬಿಡುವ ಸತ್ಯವನ್ನು ನಾವು ಅರಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಂತಹ ಲೋಕವ್ಯಾಪಿ ಸಮಸ್ಯೆಯ ಸನ್ನಿವೇಶವನ್ನೆದುರಿಸಿದ ಯಾವುದೇ ಜನರು ನಮ್ಮ ಮಧ್ಯೆ ಇಲ್ಲ. ನಮ್ಮ ದೇಶದ್ದಲ್ಲದ ಹಂತಕ ವೈರಸ್ಸಿನ ದಮನ ಮಾಡುವ ಔಷಧ ಬರುವ ತನಕ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ದೊಡ್ಡದಿದೆ. ಆದರೆ ಅದನ್ನು ಸರಳಗೊಳಿಸಿಕೊಂಡು,ಆದಷ್ಟು ಮನೆಯಲ್ಲಿರುವುದು, ಹೊರಹೋಗುವಾಗ ಮೂಗುಬಾಯಿ ಮುಚ್ಚುವ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುವುದರಿಂದ ಕೊರೊನ ತಡೆಯಬಹುದೆಂದಾದರೆ, ಇವೆಲ್ಲವನ್ನು ಅನುಸರಿಸಿ ಹೊಸ ಔಷದಕ್ಕೆ ಪ್ರಯೋಗ ಶಿಶುವಾಗುವುದನ್ನು ಹಾಗೂ ಸರ್ಕಾರೀ ಲೆಕ್ಕ ಪುಸ್ತಕದ ಖಾಯಿಲೆಗೋ ಅಥವಾ ಸಾವಿಗೋ ನಾವು ಒಂದು ಸಂಖ್ಯೆಯಾಗುವುದನ್ನು ತಪ್ಪಿಸಬಹುದು. ***********************

ಲೆಕ್ಕಕ್ಕೊಂದು ಸೇರ್ಪಡೆ Read Post »

ಪುಸ್ತಕ ಸಂಗಾತಿ

ಬೊಗಸೆ ತುಂಬಾ ಕನಸು

ಪುಸ್ತಕ ಪರಿಚಯ ಬೊಗಸೆ ತುಂಬಾ ಕನಸು ಬೊಗಸೆ ತುಂಬಾ ಕನಸುಲೇಖಕರು: ಡಾ. ಬಿ. ಪ್ರಭಾಕರ ಶಿಶಿಲ ಸುಳ್ಯ)ಪ್ರಕಾಶಕರು: ರಾಜ್ ಪ್ರಕಾಶನ, ಮೈಸೂರುಪುಟಗಳು: 688ಬೆಲೆ: 650 ರೂಪಾಯಿಗಳು ಸ್ವಾತಂತ್ರ್ಯ ಎಂಬುದು ದೇವರಿಗಿಂತ ದೊಡ್ಡ ಮೌಲ್ಯ! –  ಡಾ| ಪ್ರಭಾಕರ ಶಿಶಿಲ ಒಂದಾನೊಂದು ಕಾಲದಲ್ಲಿ ಚಂದ್ರಾವತಿ. ಬಿ ಆಗಿ ಬದುಕುತ್ತಿದ್ದ ನನ್ನನ್ನು ಚಂದ್ರಾವತಿ ಬಡ್ಡಡ್ಕ ಆಗಿಸಿದ್ದು ನಮ್ಮ ಅರ್ಥಶಾಸ್ತ್ರ ಉಪನ್ಯಾಸಕರಾದ ಮಾನ್ಯ ಡಾ| ಪ್ರಭಾಕರ ಶಿಶಿಲ ಸರ್. ನಮ್ಮ ಕಾಲೇಜು ದಿನಗಳ ವೇಳೆಯಲ್ಲಿ, ಸ್ವಂತಿಕಾ ಪ್ರಕಾಶನದಿಂದ ಪುಸ್ತಕ ಪ್ರಕಟವಾಗುವ ವೇಳೆ, ಅದರ ಸದಸ್ಯರ ಪಟ್ಟಿಯಲ್ಲಿ ನಮ್ಮನ್ನೆಲ್ಲ ಸೇರಿಸಿದ್ದರು. ಅಲ್ಲಿ ನಾನು, ನನ್ನನ್ನೇ ನಾನು ಚಂದ್ರಾವತಿ ಬಡ್ಡಡ್ಕ ಅಂತ ಕಂಡು ಖುಷಿಗೊಂಡಿದ್ದೆ-ಪುಳಕಿತಳಾಗಿದ್ದೆ. ಅಲ್ಲಿಂದ ಖಾಯಂ ಆಗಿ ಬಡ್ಡಡ್ಕ ನಾನು ಹೋದಲ್ಲೆಲ್ಲ ನನ್ನ ಹೆಸರಿನ ಜೊತೆಗಿದೆ. * ಸದ್ರೀ ಶಿಶಿಲರ ಆತ್ಮ ಕಥನ ‘ಬೊಗಸೆ ತುಂಬಾ ಕನಸು’. ದಣಿವರಿಯದ, ದಣಿವಿಲ್ಲದ ಬರಹಗಾರರಾಗಿರುವ ಶ್ರೀಯುತರ ಈ ಕನಸನ್ನು ಇತ್ತೀಚೆಗೆ ಓದಿದಾಗ ಒಂದೆರಡು ಮಾತು ಬರಿಯೋ ತುಡಿತ ಒದ್ದುಕೊಂಡು ಬಂದಿತ್ತು. ಇನ್ನೇನೋ ಕೆಲಸಕಾರ್ಯಗಳಲ್ಲಿ ನಿರತಳಾಗಿ ಬಿದ್ದು ಹೋಗಿದ್ದರಿಂದ ಮೀನಾ-ಮೇಷಾವಾಗಿ ಇಂದಿಗೆ ಬಂದು ನಿಂತಿದೆ. ಪುಸ್ತಕ ಬಿಡುಗಡೆಯ ಬಳಿಕ ಸುಳ್ಯದ ಶ್ರೀದೇವಿ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಲಭ್ಯವಿದೆ ಎಂದು ಗೊತ್ತಾದ ತಕ್ಷಣ ಹೋಗಿ ಪುಸ್ತಕ ‘ಕೊಂಡು’ ತಂದಿದ್ದೆ (ಇದನ್ನು ಯಾಕೆ ಒತ್ತಿ ಹೇಳುತ್ತೇನೆಂದರೆ ಕಾಲೇಜು ದಿನಗಳಿಂದಲೇ ಅವರ ಧ್ಯೇಯವಾಕ್ಯ ‘ಪುಸ್ತಕ ಕೊಂಡು ಓದಿ’ ಕಿವಿಗೆ ಬೀಳುತ್ತಲೇ ಇತ್ತಲ್ಲ). ಹೀಗೆ ಕೊಂಡು ತಂದ ಬಳಿಕ, ಬೇರೆ ಕೆಲಸಗಳೊಂದಿಗೇ 688 ಪುಟಗಳ ಬೃಹತ್ ಪುಸ್ತಕವನ್ನು ನಾಲ್ಕೈದು ದಿನಗಳಲ್ಲಿ ಮಧ್ಯರಾತ್ರಿಯ ತನಕವೂ ಕುಳಿತು, ನಿಂತು, ಒರಗಿ, ಅಡ್ಡಬಿದ್ದು ಗಬಗಬ ಓದಿ ಮುಗಿಸಿದ್ದೆ. ಪುಸ್ತಕದಲ್ಲಿ ಬರುವ ಕೆಲವು ಪಾತ್ರಗಳನ್ನು, ಕ್ಷಣಗಳನ್ನು ನಾನು ಲೈವ್ ಆಗಿ ಕಂಡಿದ್ದೇನೆ ಮತ್ತು ಬೆರೆತಿದ್ದೇನೆ. ಇನ್ನು ಕೆಲವು ಚಿರಪರಿಚಿತ, ಮತ್ತೆ ಹಲವು ಅರೆ ಪರಿಚಿತ ಮತ್ತು ಬಹಳವು ಅಪರಿಚಿತ. ಅಗಾಧವಾದ ಈ ಪುಸ್ತಕವನ್ನು ಓದಿ ಕೆಳಗಿರಿಸಿದಾಗ ಮನದಲ್ಲಿ ನನಗೆ ಅಬ್ಬಾಬ್ಬಾ ಎಂಬ ಉದ್ಗಾರ ಹೊರಡಿಸದಿರಲಾಗಲಿಲ್ಲ. ಇದರಲ್ಲಿನ ಜೀವನ ಕಥನ ಹಾಗಿದೆ. ಕುಂಡಪ್ಪ, ಸುಬ್ಬಪ್ಪನಾಗದೆ ಪ್ರಭಾಕರನಾಗಿ ಪ್ರಭೆಯನ್ನು ಬೀರಬೇಕು ಎಂಬ ಅವರ ಅಮ್ಮನ ಕನಸನ್ನು ನನಸಾಗಿಸಿದ್ದಾರೆ. ಅಂತೆಯೇ ಆರಂಭದಲ್ಲೇ ಹೇಳುತ್ತಾರೆ, ಅಜ್ಜಿ ನನಗೆ ಕನಸು ಕಾಣಲು ಕಲಿಸಿದರು; ನಾನು ಕನಸು ಕಾಣತೊಡಗಿದೆ. ಕನಸುಗಳನ್ನು ಸಾಕ್ಷಾತ್ಕರಿಸಲು ಯತ್ನಿಸಿದೆ. ಕನಸುಗಳಲ್ಲೇ ಜೀವಿಸಿದೆ. ಈಗಲೂ ಕನಸು ಕಾಣುತ್ತಿದ್ದೇನೆ! ಅದನ್ನೇ ನಿಮಗೆ ಕೊಡುತ್ತಿದ್ದೇನೆ, ಬೊಗಸೆ ತುಂಬಾ ಕನಸು! ಅನ್ನುತ್ತಾ ತಮ್ಮ ಬಾಲ್ಯದಿಂದ ಹಿಡಿದು ಕಳೆದ ವರ್ಷ ಪುಸ್ತಕ ಪ್ರಕಟಗೊಳ್ಳುವ ತನಕದ ತಮ್ಮ ಅಗಾಧವಾದ ಜೀವನಾನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಬಿಕಾಂ ವಿದ್ಯಾರ್ಥಿನಿಯಾಗಿ ನೆಹರೂ ಸ್ಮಾರಕ ಮಹಾವಿದ್ಯಾಲಯಕ್ಕೆ ಸೇರುವ ಮುನ್ನ ಶಿಶಿಲ ಸರ್ ಅವರನ್ನು ನಾನು ನೋಡಿರಲಿಲ್ಲ. ಆದರೆ, ಅವರ ಬಗ್ಗೆ ಕೇಳಿದ್ದೆವು. 80ರ ದಶಕದಲ್ಲಿ ಸುಳ್ಯದಂತ ಚಿಕ್ಕ ಊರಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಅವರು ಹಲವರಿಗೆ ಹಲವು ಭಾವಗಳಲ್ಲಿ ಬಿಂಬಿತವಾಗಿದ್ದರು. ಹಲವಾರು ಕೃತಿಕರ್ತ, ಯಕ್ಷಗಾನ ಪಾತ್ರಧಾರಿ ಎಲ್ಲವೂ ಆಗಿದ್ದ ಅವರ ಬಗೆಗೆ ಎನ್ನೆಂಸಿ ಸೇರುವಾಗ ಒಂದು ಬೆರಗಿತ್ತು. ಅದಲ್ಲದೆ, ನಾನು ಅ..ಆ..ಇ..ಈ ಕಲಿತ ಬಡ್ಡಡ್ಕ ಶಾಲೆಯ ಸಂಸ್ಥಾಪಕರಾದ, ಅಪ್ರತಿಮ ಈಡುಗಾರರೂ ಆಗಿದ್ದ ದಿ| ಬಡ್ಡಡ್ಕ ಅಪ್ಪಯ್ಯಗೌಡರ ಬೇಟೆಯ ಅನುಭವದ ಕುರಿತ ‘ಶಿಕಾರಿಯ ಸೀಳುನೋಟ’ ಪುಸ್ತಕ ಬರೆದಿದ್ದರು. ಹಾಗಾಗಿ ಕುತೂಹಲವೂ ಹೆಚ್ಚೇ ಇತ್ತು. ಆದರೆ, ಅವರ ಸರಳ ವ್ಯಕ್ತಿತ್ವ, ಅಂತರ ಕಾಯ್ದುಕೊಳ್ಳದೆ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವರು ನಮಗೆ ಅಚ್ಚರಿ ಮೂಡಿಸಿದ್ದರು. ಮೇಲಿನಿಂದ ಸರಳವಾಗಿ ಕಂಡರೂ ಒಳಗಿನ ಅವರ ಗಟ್ಟಿತನ ಮತ್ತು ಕಾವು ನಿಜವಾಗಿಯೂ ಏನು ಎಂಬುದು ಪೂರ್ಣವಾಗಿ ತಿಳಿಯಬೇಕಿದ್ದರೆ ಬೊಗಸೆ ತುಂಬಾ ಕನಸನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಓದಿಯೇ ತಿಳಿದುಕೊಳ್ಳಬೇಕು. ಬಡತನದಲ್ಲೇ ಹುಟ್ಟಿ ಬೆಳೆದರೂ, ಕಡುಕಷ್ಟದಿಂದಾಗಿ ಹೊಟ್ಟೆಗೆ ಸಾಕಷ್ಟು ಆಹಾರವಿಲ್ಲದಿದ್ದರೂ, ಉಡಲು-ತೊಡಲು ಸರಿಯಾದ ಬಟ್ಟೆ ಇಲ್ಲದಿದ್ದರೂ, ಇದಕ್ಕೂ ಪ್ರತಿಭೆಗೂ, ಯಶಸ್ಸಿಗೂ ತಾಳಮೇಳವಿಲ್ಲ ಎಂಬುದನ್ನು ಬುದುಕಿ ತೋರಿದವರು. ಅವರ ಬಾಲ್ಯದ ಜೀವನವನ್ನು ಓದುತ್ತಿದ್ದಾಗ ಕೆಲವೆಡೆ ಗಂಟಲುಬ್ಬಿ ಬಂದಿತ್ತು. ಅರಸಿನಮಕ್ಕಿ ಶಾಲೆಯಲ್ಲಿ ಏಳನೇ ಕ್ಲಾಸು ಕಲಿಯುತ್ತಿದ್ದಾಗ ರಾತ್ರಿಯ ಸ್ಪೆಷಲ್ ಕ್ಲಾಸಿಗಾಗಿ ಅಲ್ಲೇ ಉಳಿಯುವ ಸಂದರ್ಭದಲ್ಲಿ, ಮಾವ ತಂದು ಕೊಡುತ್ತಿದ್ದ ಬುತ್ತಿಯನ್ನು ಸಮ ಪಾಲುಮಾಡಿ ಮೂರು ಹೊತ್ತಿಗೆ ಭರಿಸಿಕೊಳ್ಳಬೇಕಿತ್ತು ಎಂದು ದಾಖಲಿಸುತ್ತಾ ಹೋಗುತ್ತಾರೆ ಇಂಥ ಘಟನೆಗಳು ಬೇಕಾದಷ್ಟಿವೆ. ಕಷ್ಟಾತಿಕಷ್ಟದಿಂದಾಗಿ ಇನ್ನೇನು ಶಾಲೆ ಕಲಿಕೆ ಕೊನೆಗೊಂಡಿತು, ಕೃಷಿ ಕಾರ್ಮಿಕನಾಗಿಯೋ ಇಲ್ಲ ಟೈಲರ್ ಆಗಿಯೋ ಮುಂದುವರಿಯುವುದೇ ಮುಂದಿನ ದಾರಿ ಎಂದಾಗ, ಮತ್ತೆಲ್ಲೋ ಇನ್ನಾವುದೋ ಎಳೆಸಿಕ್ಕಿ ವಿದ್ಯೆ ಮುಂದುವರಿದಿದೆ. ಒಂದು ಹಂತದಲ್ಲಿ ಹತ್ತನೇ ಕ್ಲಾಸು ಬಳಿಕ ಕಲಿಕೆ ನಿಂತೇ ಹೋಗಿ ಅಳಿಕೆಯಲ್ಲಿ ವಲಲನಾಗಿ ಮತ್ತೆ ಬ್ರೇಕ್ ತಗೊಂಡು ಮುಂದೆ ಸಾಗಿದ್ದು ಎಲ್ಲವೂ ಅನೂಹ್ಯ . ಅರಸಿನಮಕ್ಕಿ ಶಾಲೆಯ ಹೆಡ್ಮಾಸ್ಟ್ರು “ಇವನು ಮುಂದೊಂದು ದಿನ ಒಂದೋ ಒಳ್ಳೆಯ ಯಕ್ಷಗಾನ ಕಲಾವಿದನಾಗುತ್ತಾನೆ ಇಲ್ಲವೇ ಸಾಹಿತಿಯಾಗುತ್ತಾನೆ” ಅಂದಿದ್ದರಂತೆ. ಅವರಂದಂತೆ, ಒಬ್ಬ ಆದರ್ಶನೀಯ ಉಪನ್ಯಾಸಕ ಹಾಗೂ ಸಾಹಿತಿ, ಕಲಾವಿದ ಎಲ್ಲವೂ ಆಗಿದ್ದಾರೆ. ಅಂತೆಯೇ, ಹಾಸನ ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕರಾಗಿದ್ದು, ಬೀಳ್ಕೊಳ್ಳುವ ವೇಳೆ ಅವರ ವಿದ್ಯಾರ್ಥಿನಿ ನಿಶಾ ಎಂಬವರು, “ನೀವು ಎಲ್ಲಿ ಹೋದ್ರು ಸಕ್ಸಸ್ ಆಗ್ತೀರಿ. ನಿಮ್ಮಲ್ಲಿ ಪೊಟೆನ್ಷಿಯಲ್ ಇದೆ” ಅಂದಿದ್ದರಂತೆ. ಇದನ್ನು ಅವರ ಹೆಜ್ಜೆ ಗುರುತು ಮೂಡಿದಲ್ಲೆಲ್ಲ ಕಾಣಬಹುದು. ತರಗತಿಯಲ್ಲಿ ಅರ್ಥಶಾಸ್ತ್ರ ಹೇಳಲು ಹೊರಟರೆ ವಿದ್ಯಾರ್ಥಿಗಳನ್ನು ಸೆಳೆದು ಪಾಠಕೇಳಿಸುವ ಪರಿ ಆಕರ್ಷಣೀಯ. “ರೇಷ್ಮೆ ಹುಳು ಹಿಪ್ಪುನೇರಳೆ ಎಲೆಯನ್ನು ತಿಂದಂತೆ”. ಗ್ಯಾಪೇ ಇಲ್ಲದಂತೆ ನಿರರ್ಗಳವಾಗಿ ಪಠಿಸುತ್ತಿದ್ದರೆ, ಬೋರೇ ಆಗದಂತೆ ವಿದ್ಯಾರ್ಥಿಗಳು ಮಂತ್ರ ಮುಗ್ದರಾಗಿ ಕೇಳುತ್ತಿದ್ದರು. ಹಳ್ಳಿಗಾಡಿನ ಕನ್ನಡಶಾಲೆಗಳಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂಗ್ಳೀಷು ಬರುವುದಿಲ್ಲ ಎಂಬ ಅರಿಮೆಯನ್ನು ಹೋಗಲಾಡಿಸಲು ಅವರು ಕನ್ನಡದಲ್ಲಿ ಬರೆದ ಅರ್ಥಶಾಸ್ತ್ರ ಪುಸ್ತಕಗಳು ನೆರವಾಗಿವೆ. ಕನ್ನಡದಲ್ಲಿ ಅರ್ಥಶಾಸ್ತ್ರ ಪುಸ್ತಕಗಳನ್ನು ಬರೆದು ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಬರೆಯಲು ಪ್ರೇರೇಪಿಸಿದ್ದಾರೆ ಕೂಡ. ಒಬ್ಬ ಅಪ್ರತಿಮ ಸಂಘಟಕ. ಇದು ಅವರ ಬಾಲ್ಯದಿಂದಲೇ ಕಂಡು ಬರುತ್ತಿದೆ. ಪ್ರೈಮರಿ ಶಾಲಾ ದಿನಗಳಲ್ಲಿ ಲಾಗ ಹಾಕಿ ಬೊಬ್ಬೆ ಹೊಡೆಯುವಾಗ, ಹೋದಲ್ಲೆಲ್ಲ ಸಮವಯಸ್ಕರನ್ನು ಕೂಡಿಸಿ ಭಜನೆ ಮಾಡುವಾಗ, ಉಜಿರೆಯ ಸಿದ್ಧವನದಲ್ಲಿ ತರಲೆಗಳನ್ನು ಮಾಡಿದಾಗ, ಸುಳ್ಯದಲ್ಲಿ ಸ್ವಂತಿಕಾ ಪ್ರಕಾಶನ, ಅಭಿನಯ ಸುಳ್ಯ, ತೆಂಕುತಿಟ್ಟು ವೇದಿಕೆಗಳಲ್ಲಿ ತೊಡಗಿಕೊಂಡಾಗ, ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಚಾರಣ, ಜಲಪಾತ, ಸೈಕಲ್ ಜಾಥ ಎಂದು ತಿರುಗಾಡಿದಾಗ, ರೋಟರಿ ಅಧ್ಯಕ್ಷರಾಗಿ ಹತ್ತು ಹಲವುಕಾರ್ಯಕ್ರಮಗಳನ್ನು ನಡೆಸಿದಾಗ… ಅಲ್ಲಲ್ಲಿ ಅವರ ನಾಯಕತ್ವದ ಗುಣ ಅನಾವರಣ ಆಗುತ್ತಲೇ ಹೋಗುತ್ತದೆ. ಅವರು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದಾಗ ದೊಡ್ಡೇರಿಗೆ ಸಂಪರ್ಕ ಸಾಧಿಸಲು ಪಯಸ್ವಿನಿ ನದಿಗೆ ತೂಗು ಸೇತುವೆ ನಿರ್ಮಿಸಲು ಪಟ್ಟ ಬವಣೆಯನ್ನು ವಿವರಿಸಿದ್ದಾರೆ. ನದಿಗೆ ಮಾತ್ರವಲ್ಲ, ಅಂತೆಯೇ ಹಲವು ಹೃದಯಗಳಿಗೂ ಸೇತುವೆ ನಿರ್ಮಿಸಿದ ಉದಾಹರಣೆ ಇದೆ ಈ ಪುಸ್ತಕದಲ್ಲಿ. ಅವರ ಯೂರೋಪ್, ಥಾಯ್ಲೆಂಡ್ ಪ್ರವಾಸವನ್ನು ಕಣ್ಣಿಗೆ ಕಟ್ಟಿದಂತೆ ಛಾಪಿಸಿದ್ದಾರೆ. ವಿದೇಶಿ ಪ್ರವಾಸದುದ್ದಕ್ಕೂ ನಡೆದ ಘಟನೆಗಳು, ದೇಶದೇಶಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮಾಹಿಯುಕ್ತ ಅಧ್ಯಾಯಗಳಾಗಿವೆ. ದೇವರು ಧರ್ಮದ ಬಗ್ಗೆ ಅಭಿಪ್ರಾಯಿಸುತ್ತಾ ಸ್ವಾತಂತ್ರ್ಯ ಎಂಬುದು ದೇವರಿಗಿಂತ ದೊಡ್ಡ ಮೌಲ್ಯ ಅಂದಿದ್ದಾರೆ. ಬದುಕಿನುದ್ದಕ್ಕೂ ವೈಚಾರಿಕತೆಯನ್ನು ಪ್ರತಿಪಾದಿಸುತ್ತಾ, ಸಂಘರ್ಷವನ್ನು ಎದುರಿಸುತ್ತಾ ಸ್ವಾಂತ್ರ್ಯವನ್ನು ಸವಿಯುತ್ತಾ ಮುಂದೆ ಸಾಗಿದ್ದಾರೆ.ಅನೇಕ ವಿವಾದಗಳೂ (ವಿವಾಹವೂ ಸೇರಿದಂತೆ) ಅವರನ್ನು ಸುತ್ತಿಕೊಂಡಿದೆ. ಅವುಗಳೆಲ್ಲವನ್ನೂ ಎದುರಿಸುತ್ತಾ ನಿಭಾಯಿಸುತ್ತಾ ಸಾಗಿದ್ದಾಗಿ ಬರೆದು ಕೊಂಡಿದ್ದಾರೆ. ಪ್ರೀತಿ ಪ್ರೇಮ, ನೋವು, ತಲ್ಲಣ, ತಳಮಳ, ವಿವಾದ, ವಿಷಾದ ಎಲ್ಲವೂ ಇರುವ ಈ ಪುಸ್ತಕ ಒಂದು ಸಿಹಿ, ಕಹಿ, ಉಪ್ಪು, ಹುಳಿ, ಕಾರ, ಒಗರು ಮಿಶ್ರಿತ ರಸಪಾಕದಂತಿದೆ. ಮೂಲತ ಉಪನ್ಯಾಸಕರಾದರೂ, ಯಕ್ಷಗಾನ ಕಲಾವಿದ, ನಟ, ಸಾಹಿತಿ, ಭಾಷಣಕಾರ ಹೀಗೆ ಹಲವು ರಂಗಗಳ ಪ್ರತಿಭಾಸಂಪನ್ನ ವ್ಯಕ್ತಿತ್ವ. ಅರ್ಥಶಾಸ್ತ್ರ ಮಾತ್ರವಲ್ಲ, ಯಕ್ಷಗಾನದಲ್ಲಿನ ಅರ್ಥಗಾರಿಕೆಯೂ ಅಷ್ಟೇ ಪ್ರಖರವಾದುದು. ಅರ್ಥಶಾಸ್ತ್ರದಲ್ಲಿ 180ಕ್ಕಿಂತಲೂ ಹೆಚ್ಚು ಅರ್ಥಶಾಸ್ತ್ರದ ಕೃತಿಗಳು ಮತ್ತು ಇತರ ಸಾಹಿತ್ಯ ಕೃತಿಗಳು ಹೀಗೇ ಸುಮಾರು 250 ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಇವರಿಗಿದೆ. ತಮಗೆ ಎದುರಾದ ಸಂಕಷ್ಟ, ತೊಂದರೆ ತಾಪತ್ರಯ, ಕಷ್ಟ ಕೋಟಲೆಗಳನ್ನೆಲ್ಲಾ ಮೆಟ್ಟಿಲಾಗಿಸಿಕೊಂಡು ಬದುಕಿನ ಏಣಿಯಲ್ಲಿ ಇವರು ಏರುತ್ತಾ ಹೋಗಿರುವುದು ಒಂದು ರೋಚಕ ಕಥನ. ಸದಾಕ್ರಿಯಾಶೀಲರು. ಅಪಘಾತವಾಗಿ ಆಸ್ಪತ್ರೆ ವಾಸಿಯಾಗಿದ್ದಾಗಲೂ ಸುಮ್ಮನಿರದೆ ಪುಸ್ತಕ ಬರೆದು ಅಲ್ಲಿಯೇ ಬಿಡುಗಡೆಗೊಳಿಸಿ ಹುಬ್ಬೇರುವಂತೆ ಮಾಡಿದವರು. ಯಾವುದೇ ಸಂಘರ್ಷವಿರಲಿ, ಎಂಥಾ ಕಷ್ಟದ, ಸಂದಿಗ್ಧದ ಪರಿಸ್ಥಿತಿಗಳಿದ್ದರೂ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಅಡೆತಡೆಯನ್ನು ಮುರಿದು ಮುಂದೆ ಸಾಗಬಹುದು ಎಂಬುದನ್ನು ಈ ಪುಸ್ತಕ ನಿರೂಪಿಸುತ್ತದೆ. ಪುಸ್ತಕ ಓದಿ ಮುಗಿಸಿದಾಗ ಒಂದು ಲವಲವಿಕೆಯ ಅನುಭೂತಿ ನಮ್ಮದಾಗುತ್ತದೆ. ತಮ್ಮ ಏಳಿಗೆಗೆ ಕಾರಣರಾದವರನ್ನೆಲ್ಲ ಸ್ಮರಿಸುತ್ತಾರೆ. ಇವರ ಅಗಾಧವಾದ ಜ್ಞಾಪಕ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ತೀರಾ ಪ್ರೈಮರಿ ಶಾಲೆಯಲ್ಲಿ ಕಲಿಯುತ್ತಿರುವಾಗ ಇದ್ದ ಸಹಪಾಠಿಗಳ ಹೆಸರೂ ಅವರ ಮಸ್ತಕದಲ್ಲಿದೆ. ಬಾಲ್ಯದಲ್ಲಿ ತಮ್ಮ ಭಾವತೀವ್ರತೆಗೆ ಸಹಭಾಗಿಯಾಗಿರುತ್ತಿದ್ದ ಕುಂಡಪ್ಪ ಎತ್ತಿನಿಂದ ಹಿಡಿದು ಅವರ ವಿದ್ಯಾರ್ಥಿಗಳ ತನಕ ಜೀವನದಲ್ಲಿ ಬಂದುಹೋದ ಎಲ್ಲರನ್ನು ಪ್ರಸ್ತಾಪಿಸಿ ಸ್ಮರಿಸಿಕೊಂಡಿದ್ದಾರೆ. ಕೊನೆಯಲ್ಲಿ ಒಂಚೂರು ತಮಾಷೆಯನ್ನು ಮಿಕ್ಸ್ ಮಾಡಿ ಲಘುದಾಟಿಯಿಂದ ಹೇಳುವುದಾದರೇ, ಪುಸ್ತಕವನ್ನು ಓದುತ್ತಾ ಓದುತ್ತಾ ಹೋದಂತೆ ನನಗೂ ಅವರಿಗೂ ತಂಬಾ ಸಾಮ್ಯತೆ ಮತ್ತು ಅಷ್ಟೇ ವ್ಯತ್ಯಾಸಗಳಿವೆ ಎಂದು ತಿಳಿಯಿತು. ಅವರು ಬಾಲ್ಯದಲ್ಲಿ ನನ್ನಂತೆ ಬಡವರಾಗಿದ್ದರು ಮತ್ತು ಪೆದ್ದರೂ ಆಗಿದ್ದರೂ. ಆದರೆ ನಾನು ನನ್ನ ಪೆದ್ದುತನವನ್ನು ಇನ್ನೂ ಜತನದಿಂದ ಕಾಯ್ದುಕೊಂಡಿದ್ದರೆ, ಅವರು ಇದಕ್ಕೆ ವ್ಯತಿರಿಕ್ತವಾಗಿ ಬುದ್ಧಿವಂತರಾಗಿ ಮಿಂಚು ಹರಿಸಿದ್ದಾರೆ. ಪುಸ್ತಕದುದ್ದಕ್ಕೂ, ಗಂಭೀರತೆಯೊಂದಿಗೆ, ಭಾವುಕತೆ, ತುಂಟತನ, ಪೋಲಿತನ, ಖಾಲಿತನ ಎಲ್ಲವೂ ಇದೆ. ಸರಳ ಭಾಷೆ, ಸುಲಲಿತ ನಿರೂಪಣೆಯೊಂದಿಗೆ ಓದಿಸಿಕೊಂಡು ಹೋಗುವ 29 ಅಧ್ಯಾಯಗಳನ್ನು ಹೊತ್ತ ಈ ಬೃಹತ್ ಸಂಚಿಕೆಯ ಅನುಬಂಧದಲ್ಲಿ ‘ಗುರುವುನು ಮಿಂಚಿನ ಶಿಷ್ಯುಡು’ ಎಂಬ ಅಧ್ಯಾಯವಿದೆ. ಅಲ್ಲಿ 71 ವಿದ್ಯಾರ್ಥಿಗಳ ಪ್ರಸ್ತಾಪ-ಪರಿಚಯವಿದೆ. ಇದನ್ನು ಓದಿದಾಗ ಇಲ್ಲಿ ನಾನೂ ಇರಬೇಕಿತ್ತು ಅಂತ ಅನ್ನಿಸಿದ್ದು ಸುಳ್ಳಲ್ಲ. ಅಲ್ಲಿ ಸೇರುವಂತ ಸಾಧನೆ ನನ್ನದೇನಿಲ್ಲ ಅನ್ನುವುದೂ ಅಷ್ಟೇ ಸತ್ಯ. ಆದರೂ, “ಈ ಅಧ್ಯಾಯದಲ್ಲಿ ಯಾರದಾದರೂ ನೆನಪು ಬಿಟ್ಟು ಹೋಗಿದ್ದರೆ ಅದಕ್ಕೆ ನನ್ನ ಮರೆಗುಳಿತನ ಕಾರಣ” ಎಂದಿದ್ದಾರೆ. ಅವರ ಮರೆಗುಳಿತಕ್ಕೆ ಒಂದಿಷ್ಟು ಬೆಂಕಿಹಾಕ ಅಂತ ಮನದಲ್ಲೇ ಗುರುವಿಗೇ ತಿರುಮಂತ್ರ ಹಾಕಿ ನಕ್ಕು ಸುಮ್ಮನಾದೆ (ಅವರ ವಿದ್ಯಾರ್ಥಿನಿಯಾಗಿದ್ದ ಕಾಲದ ಅಂದಿನ ಅದೇ ಸಲಿಗೆಯಲ್ಲಿ)! ********************************************* ಚಂದ್ರಾವತಿ ಬಡ್ಡಡ್ಕ

ಬೊಗಸೆ ತುಂಬಾ ಕನಸು Read Post »

ಕಾವ್ಯಯಾನ

ನಂಬಿಕೆ

ಕವಿತೆ ನಂಬಿಕೆ ರೇಷ್ಮಾ ಕಂದಕೂರು ಮನುಜತೆಯ ಸಾಕಾರ ರೂಪಅರಿವಿನ ಮಹಾಪೂರಅವಿನಾಭಾವದ ಸರದಿ ಶುದ್ಧ ಮನದ ರಿಂಗಣಅಭಿಮಾನದ ಗೂಡುಒಲುಮೆಯ ಹರಕೆ ಕಾರುಣ್ಯದ ಬದುಕುಸತ್ವರಜದ ತೇಜಸ್ಸುಪರಿಪೂರ್ಣ ಬಂಧುತ್ವ ವಿಶ್ವಾಸದ ಹೊನಲುಆಸರೆಯ ತೋರಣನೆರಳು ಬೆಳಕಿಗೆ ಸಮಸ್ಥಿತಿ ***************************

ನಂಬಿಕೆ Read Post »

You cannot copy content of this page

Scroll to Top