ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ. ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ. ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ.. ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ ಇರುತ್ತವೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ. ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು. ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ. ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು!…… (ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ) ****************************************

ಶರದದ ಹಗಲಲ್ಲಿ ಆಷಾಢದ ಮೋಡಗಳು… Read Post »

ನಿಮ್ಮೊಂದಿಗೆ

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ  ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ. ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ  ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ.. ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ  ಇರುತ್ತವೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ. ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು. ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ  ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ. ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು! …… (ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ) *****************************************

ಶರದದ ಹಗಲಲ್ಲಿ ಆಷಾಢದ ಮೋಡಗಳು… Read Post »

ಇತರೆ, ಲಹರಿ

ಭಾವಲಹರಿ

ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ  ಇಲ್ಲ..!  ನಮ್ಮ ಮನೆಗೆ ಬಂದಾಗಲೆಲ್ಲ ಹಣೆಗೆ ಕುಂಕುಮವಿಟ್ಟುಕೊಂಡು, ಕೆನ್ನೆಗೆ ಅರಿಶಿನ ಲೇಪಿಸಿಕೊಂಡು ಉಡಿ ತುಂಬಿಸಿ, ಹೊಸಿಲಿಗೆ ಕೈ ಮುಗಿದು ಹೋಗುತ್ತ್ದಿದ ಮೊಮ್ಮ . ಆ ಕ್ಷಣ ನೋಡಿದರೆ ಇವರು ಅನ್ಯಧರ್ಮೀಯರೇ… ಮುಸ್ಲಿಂ ಮನೆತನದವರೇ ಎಂಬ ಸಂಶಯ ಮೂಡುತ್ತಿತ್ತು. ಆದರೆ ಪ್ರತಿ ವರ್ಷದ ಗೌರಿ ಹಬ್ಬಕ್ಕೆ ನಮ್ಮ ಮನೆಯ ಬಾಗಿನ ಪಡೆಯಲು ಬಂದಾಗಲೆಲ್ಲ ಕುಂಕುಮ ಅವರ ಹಣೆಯ ಮೇಲೆ ರಾರಾಜಿಸುತ್ತಿತ್ತು. ಆಗ ಅಲ್ಲಿ ಯಾವ ಮತಾಂಧ ನಂಬಿಕೆಗಳೂ ಇರಲಿಲ್ಲ. ಕೇವಲ ಪ್ರೀತಿ ಇತ್ತು.  ಮತಗಳಿಗೂ ಮೀರಿದ ಬಾಂಧವ್ಯವಿತ್ತು. ಮೊಮ್ಮ  ಬೀದರ್‌ನ ಮುಲ್ತಾನಿ ಮನೆತನ ಸೊಸೆ. ಬೆಳಗಾವಿ ಖಾನ್ ಮನೆತನದ ಮಗಳು. ಬೀದರ್‌ಗೆ ಸೊಸೆಯಾಗಿ ಬಂದಾಗ ಅದಿನ್ನೂ ರಜಾಕರ ಹಾವಳಿಯ ಕೆಟ್ಟ ನೆನಪುಗಳಿಂದ ಹೊರಬರುವ ಕಾಲ. ಅಲಿ ಇಕ್ಬಾಲ್ ಮುಲ್ತಾನಿ ಅವರ ವಧುವಾಗಿ ಬೀದರ್‌ಗೆ ಬಂದಾಗ ಹಬ್ಬದ ಚಂದ್ರನಂತೆ ಕಂಗೊಳಿಸುವ ಸೊಸೆ ಬಂದಳು ಎಂದು ಸಂಭ್ರಮಿಸ್ದಿದರಂತೆ ಓಣಿಯ ಜನ. ಎಳೆನಿಂಬೆ ವರ್ಣದ ಮೊಮ್ಮ ಕೆಂಪು ಚರ್ಮದ ಜ್ಯಾಕೆಟ್, ಗಂಬೂಟ್ಸ್ ಧರಿಸಿ, ಏರ್‌ಗನ್ ಹಿಡಿದು ಎನ್‌ಫೀಲ್ಡ್ ಬುಲೆಟ್ ಮೇಲೆ ಪತಿಯೊಡನೆ ಬೇಟೆಗೆ ಹೊರಟರೆ, ಓಣಿಯ ಹೆಂಗಳೆಯರೆಲ್ಲ ಕಿಟಕಿಯಿಂದಲೇ ಇಣುಕುತ್ತ್ದಿದರಂತೆ. ಬೀದರ್‌ನಲ್ಲಿ ಹೆಂಗಳೆಯರೆಲ್ಲ ಪರದೆಯಲ್ಲಿಯೇ ಬಾಳಬೇಕಾದ ದಿನಗಳು ಅವು. ದೊಡ್ಡ ಮನೆತನದವರು ಏನು ಮಾಡಿದರೂ ಚಂದವೇ ಎಂದು ಅದೆಷ್ಟೋ ಜನ ಮೂಗು ಮುರಿದ್ದಿದರಂತೆ. ಆದರೆ ಹಿತ್ತಲು ಮನೆಯ ಬಾಗಿಲು ಈ ಹೆಂಗಳೆಯರಿಗೆ ಸದಾ ತೆರೆದಿರುತ್ತಿತ್ತು. ಪ್ರತಿ ಮನೆಯ ವಿಚಾರವನ್ನೂ ಕಾಳಜಿಯಿಂದ ಕೇಳುತ್ತ್ದಿದರು.ಎಲ್ಲ ಮನೆಯ ಸುಖದುಃಖಗಳಲ್ಲೂ ಭಾಗಿಯಗುತ್ತ್ದಿದರು. ಸುಮ್ಮನೆ ಮಾತನಾಡುವ ಕುತೂಹಲದ ಬದಲು ಕಾಳಜಿಯ ಕಣಜವಾಗಿದ್ದರು ಅವರು. ದಲಿತ ಮಹಿಳೆಯ ಶೋಷಣೆಯನ್ನು ಸಹಿಸದೆ ಅವರ ಮನೆಯಂಗಳಕ್ಕೇ ಹೋಗಿ ಜಗಳ ಬಿಡಿಸಿ ಬಂದವರು. ಮತಾಂತರವಾದ ದಲಿತ ಮಹಿಳೆಯನ್ನು ಗಂಡ ಬಿಟ್ಟು ಹೋದಾಗ ಅವಳನ್ನೂ ಮನೆಗೆ ಕರೆತಂದವರೇ ಅವರು. ಕಾಶಮ್ಮ ಎಂಬ ಆ ಮಹಿಳೆಯ ಮಗಳಿಗೆ ಮದುವೆ ಮಡಿಕೊಟ್ಟ್ದಿದು ಎಲ್ಲವೂ ಕೇವಲ ಅಂತಃಕರಣದಿಂದ. ಈ ಅಂತಃಕರಣಕ್ಕೆ ಗೊತ್ತ್ದಿದ್ದಿದು ಕೇವಲ ಒಂದೇ ಭಾಷೆ. ಅದು ಪ್ರೇಮದ್ದು. ಪರಿಪೂರ್ಣ ಪ್ರೇಮದ್ದು. ಯಾವುದೇ ಕೊಡುಕೊಳ್ಳುವ ವ್ಯವಹಾರವಿಲ್ಲದ ಪ್ರೇಮವದು. ತನ್ನ ಸುತ್ತಲಿನವರು ಸಂತಸದಿಂದ ಇದ್ದರೆ ತನ್ನ ಪರಿಸರ ಸಮೃದ್ಧ ಎಂದು ನಂಬಿದ ಜೀವವದು. ಅಲ್ಲಿ ಯಾವ ಧರ್ಮಗಳೂ ಅಡ್ಡ ಬಂದಿರಲಿಲ್ಲ. ಅಮ್ಮ ಮದುವೆಯ ನಂತರ ೧೦ ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸ್ದಿದರು. ನಾನಾಗ ಕೈ ಕೂಸು. ಅಮ್ಮನ ಮಡಿಲಿನಿಂದ ಮೊಮ್ಮ ನ ಮಡಿಲಿಗೆ ಜಾರ‍್ದಿದೇ ಆಗ. ನನಗೆ ಯಶೋದಾ ಸಿಕ್ಕ್ದಿದಳು. ಅವರ ಮಗ ಫಿರೋಜ್‌ನೊಂದಿಗೆ ನಾನೂ ಬೆಳೆಯುತ್ತ್ದಿದೆ. ಫಿರೋಜ್‌ನ ಆಟಕ್ಕ್ದಿದ ಕೋಳಿ ಮರಿಗಳು ನನ್ನ ಗೆಜ್ಜೆ ಕುಕ್ಕಲು ಬಂದರೆ ಓಡಿ ಹೋಗಿ ಮೊಮ್ಮ ಳ ಮಡಿಲಿಗೆ ಹಾರುತ್ತ್ದಿದೆ. ಅವರೂ ಬಾಚಿ ತಬ್ಬುತ್ತ್ದಿದರು. ಆ ಬೆಚ್ಚನೆಯ ಅಪ್ಪುಗೆಯಲ್ಲಿ ಈಗಿರುವ ಮತಾಂಧ ದಳ್ಳುರಿ ಇರಲಿಲ್ಲ. ಮಮತೆಯ ಬಿಸುಪು ಇತ್ತು. ಫಿರೋಜ್‌ಗೊಂದು ತುತ್ತು, ನನಗೊಂದು ತುತ್ತು. ತುತ್ತಿಗೊಮ್ಮೆ ‘ಶೇರ್ ಬೇಟಾ ಹಿಮ್ಮತ್ ರಖೇಗಾ, ಕಭಿ ನ ಹಾರೇಗಾ’ ಎಂಬ ಮಾತುಗಳು. ಅದೆಷ್ಟೋ ಆತ್ಮಸ್ಥೈರ್ಯ ನೀಡುವ ಕತೆಗಳು. ಎಲ್ಲಿಯೂ ಗುಮ್ಮ ಬರುವ, ನಮ್ಮನ್ನು ಕಾಡುವ ಕತೆಗಳಿರಲಿಲ್ಲ. ನಾವೇ ಗುಮ್ಮನನ್ನು, ಸೈತಾನನನ್ನು ಹೊಡೆದು ಮುಗಿಸುವ ಕತೆಗಳು. ನಮ್ಮ ಬಾಲ್ಯದಲ್ಲಿ ಭಯವಿಲ್ಲದ, ಎಲ್ಲವನ್ನು ಎದುರಿಸಬಹುದಾದ ಮನೋಸ್ಥೈರ್ಯ ತುಂಬಿದವರು ಮೊಮ್ಮ.  ಪ್ರತಿ ಹಬ್ಬಕ್ಕೆ ರಂಜಾನ್‌ಗೆ ಅಮ್ಮನಿಗೆ ಮುತ್ತೈದೆಯ ಬಾಗಿನವಾಗಿ ‘ಸೋಲಾ ಸಿಂಗಾರ್’ನ ಎಲ್ಲ ಪ್ರಸಾಧನಗಳನ್ನೂ ಕಳುಹಿಸುತ್ತ್ದಿದರು. ಸೀರೆ, ಮೆಹೆಂದಿ, ಬಳೆ, ಕುಂಕುಮ, ನೂತನ ವಿನ್ಯಾಸದ ಮುತ್ತು, ಹರಳು ಅಲಂಕಾರದ ಟಿಕಳಿಗಳು, ವೀಳ್ಯ, ಹೂ ಮುಂತಾದವುಗಳ ಉಡುಗೊರೆಯ ಮೆರವಣಿಗೆಯೇ ಮನೆಗೆ ಬರುತ್ತಿತ್ತು. ನಾಗರ ಪಂಚಮಿಗೆ ಅಮ್ಮ ಅವರಿಗೆ ಉಡುಗೊರೆ ಕಳುಹಿಸುತ್ತ್ದಿದರು. ಅಣ್ಣನ ಮನೆಯ ಕೊಡುಗೆ ಎಂದು. ಗಣೇಶ ಚೌತಿ, ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ಶ್ರಾವಣ ಮಸದ ಪಾರಾಯಣ ಇವೆಲ್ಲಕ್ಕೂ ಮೊಮ್ಮ  ಮನೆಯಲ್ಲೂ ಮಾಂಸದಡುಗೆ ವರ್ಜ್ಯವಾಗಿತ್ತು. ಸಂಜೆ ಸೆರಗು ಹ್ದೊದು, ಅರಿಶಿನ ಕುಂಕುಮ ಪಡೆದು, ಪೂಜೆಯ ವೀಳ್ಯ ಕಟ್ಟಿಸಿಕೊಂಡು ಪ್ರಸಾದ ಕೋಸಂಬರಿಯನ್ನು ಹಣೆಗೊತ್ತಿ ಸ್ವೀಕರಿಸುತ್ತಿದ್ದರು. ರಂಜಾನ್, ಈದ್ ಮಿಲಾದ್ ಹಬ್ಬಗಳಿಗೆ ಪ್ರಾರ್ಥನೆಯ ನಂತರ ದುವಾ ಓದುತ್ತ್ದಿದ ಮೊಮ್ಮ  ತಮ್ಮ ಮಕ್ಕಳೊಂದಿಗೆ ನಮ್ಮನ್ನೂ ಕರೆದು ಹಣೆಯ ಮೇಲೆ ಊದುತ್ತ್ದಿದರು. ಅಲ್ಲಿ ಪ್ರಾರ್ಥನೆಯೊಂದಿಗೆ ನಮ್ಮ ಮೇಲೆ ಅವರ ಚೇತನದ ಒಂದು ಭಾಗ ಪಸರಿಸುವ ಅನುಭವ ಅದು. ಹಣೆಗೂದಿ, ಹಣೆಗೊಂದು ಮುತ್ತಿಟ್ಟರೆ ಅಲ್ಲಿ ಪ್ರೀತಿಯ ಮುದ್ರೆ ಇರುತ್ತಿತ್ತು. ಅಯೋಧ್ಯೆ- ಬಾಬ್ರಿ ಮಸೀದಿ ಗಲಭೆಯಲ್ಲಿ ಇಡೀ ಬೀದರ್ ಹೊತ್ತಿ ಉರಿಯುತ್ತ್ದಿದರೆ ನಾವು ನಮ್ಮ ಮನೆಯ ಅಂಗಳದಲ್ಲಿ ಮೊಮ್ಮ ನ ಕುಟುಂಬದೊಡನೆ ಬೆಚ್ಚಗ್ದಿದೆವು. ಕಂಡಲ್ಲಿ ಗುಂಡು ಆದೇಶವಿತ್ತು. ಆಗಾಗ ಸೇನಾದಳದವರು ಗಾಳಿಯಲ್ಲಿ ಗುಂಡು ಹಾರಿಸುತ್ತ್ದಿದರು. ಆದರೆ ನಮ್ಮ ಮನೆಯಲ್ಲಿ ನಗೆ ಬುಗ್ಗೆಗಳು ಸ್ಫೋಟಿಸುತ್ತ್ದಿದವು. ಗಲಭೆ ಕಾಲಕ್ಕೆ ದೊಡ್ಡ ಮನೆಯ ಗೇಟೊಳಗೆ ಪ್ರವೇಶ ಪಡೆದ ಹಾಲು ತರುವ ಮುಸ್ತಫಾ, ಕ್ರೆಸ್ತ ಧರ್ಮಕ್ಕೆ ಸೇರಿದ ಬಟ್ಟೆ ಹೊಲಿಯುವ ಬಾಬು, ದಲಿತ ಮಹಿಳೆ ಕಾಶೆಮ್ಮ, ಅಮ್ಮನ ವಿದ್ಯಾರ್ಥಿ ರಾಜಶೇಖರ್ ಎಲ್ಲರೂ ಒಟ್ಟಾಗಿದ್ದೆವು. ಯಾವ ಕೋಮುಗಲಭೆಗಳ ಬಿಸಿ ತಾಕದೇ, ಸುರಕ್ಷಿತ ಬೆಚ್ಚನೆಯ ಭಾವ ನೀಡ್ದಿದೇ ಆ ಮುಲ್ತಾನಿ ಮನೆತನ. ಸಂಜೆ ವಚನ ಮತ್ತು ಸೂಫಿ ಗಾಯನ, ಮಕ್ಕಳೊಟ್ಟಿಗೆ ಆಟ… ಇಡೀ ಜಗತ್ತಿಗೆ ಸೇರದ ಲೋಕವೊಂದಿದ್ದರೆ ಅದು ಆ 18 ಕಮಾನುಗಳ ಮನೆಯಲ್ಲಿತ್ತು. ಮೂರು ಕುಟುಂಬಗಳು… ಸಂತಸವೇ ಆ ಮನೆಗಳ ಬಾಂಧವ್ಯದ ಕೊಂಡಿಯಾಗಿತ್ತು. ನನಗೆ ಮೊಮ್ಮಾ ಮಾಡುವ ಖಿಚಡಿಯಷ್ಟೇ ಪ್ರೀತಿ, ಅವರಿಗೆ ನಮ್ಮನೆಯ ಸಾಂಬರ್‌ ಮೇಲಿತ್ತು.  ನಮ್ಮ ಮನೆ ಎರಡು, ಧರ್ಮ ಬೇರೆ, ಜಾತಿ ಬೇರೆ, ನಂಬಿಕೆ ಬೇರೆ… ಆದರೆ ನಮ್ಮಲ್ಲಿ ಹುಟ್ಟ್ದಿದು ಬೆಳೆಸ್ದಿದು ಎರಡೇ ಭಾವ. ಅದು ಪರಸ್ಪರ ಗೌರವ ಮತ್ತು ಪ್ರೀತಿಯದು. ಈಗ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವ ಚಿಗುರು ಮೀಸೆಯೂ ಮೂಡದ ಹುಡುಗರನ್ನು ಕಂಡಾಗ ಇವರ‍್ಯಾರಿಗೂ ‘ಮೊಮ್ಮ ’ನಂಥವರು ಸಿಗಲಿಲ್ಲವೇ ಎನಿಸುತ್ತದೆ. ಕಳೆದುಕೊಂಡ ಮೊಮ್ಮ ರ ಕುಂಕುಮ ಅಳಿಸದ ಹಣೆ ನೆನಪಾಗುತ್ತದೆ. ನಮ್ಮ ಹಣೆಗೂದಿದ ದುವಾ ನೆನಪಾಗುತ್ತದೆ. ಅದರೊಂದಿಗೆ ದೇವರಿಗೆ ಇನ್ನೊಂದು ದುವಾ ಕೇಳುತ್ತೇನೆ… ಓಹ್ ದೇವರೇ ಎಲ್ಲ ಮನೆಯ ನೆರೆಯಲ್ಲಿಯೂ ಮೊಮ್ಮ ನಂಥ ಜೀವವೊಂದಿರಲಿ… ಆಮೇನ್…! ***********************************************

ಭಾವಲಹರಿ Read Post »

ಇತರೆ, ವರ್ತಮಾನ

ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ

ಲೇಖನ ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ ಅಕ್ಷತಾ ರಾಜ್ ಪೆರ್ಲ         “ಆಂಟೀ ಸ್ವಲ್ಪ ನಿಲ್ಲಿ” ಗೇಟಿನ ಬಳಿಯೇ ಪುಟಾಣಿಯೊಬ್ಬಳು ನಿಲ್ಲಿಸಿದಾಗ “ಯಾಕೆ?” ಕೇಳಿದೆ. “ನಿಮ್ದು ಬಿಸಿ ನೋಡ್ಲಿಕ್ಕಿದೆ” ಮುದ್ದಾಗಿ ಹೇಳುತ್ತಾ ಪಟಾಕಿ ಸಿಡಿಸುವ ಪಿಸ್ತೂಲೊಂದನ್ನು ನನ್ನ ಹಣೆಗೆ ತೋರಿಸಿದಳು. “ಬಿಸಿ ಇದ್ರೆ ಏನ್ಮಾಡ್ತೀಯಾ?” ಮತ್ತೆ ಕೇಳಿದೆ. “ಅಲ್ಲಿಗೆ ಹಾಕ್ತೇನೆ” ಅವಳು ತೋರಿಸಿದ ದಿಕ್ಕಿನತ್ತ ನೋಡಿದೆ, ಆಗಷ್ಟೇ ತನ್ನ ಮರಿಗಳೊಡನೆ ಸೇರಿಕೊಂಡ ಕೋಳಿಗೂಡು ಕಂಡಿತು. ಮನದಲ್ಲೇ ನಗುತ್ತಾ “ಅದ್ಯಾಕೆ ಹಾಗೆ?ನನ್ನ ಅಲ್ಲೇ ಯಾಕೆ ಹಾಕ್ಬೇಕು?” ಗಲ್ಲ ಚಿವುಟಿ ಪ್ರಶ್ನಿಸಿದೆ. “ಟಿ.ವಿ, ಪೇಪರ್ ಎಲ್ಲ ಏನೂ ನೋಡಲ್ವಾ! ಅಮ್ಮ ಈ ಆಂಟಿಗೆ ಏನೂ ಗೊತ್ತಿಲ್ಲ” ಸರ್ಟಿಫಿಕೇಟ್ ಕೊಟ್ಟೇ ಬಿಟ್ಟಳು ಪೋರಿ. “ಹೌದು ಇದೆಲ್ಲ ಎಲ್ಲಿ ಕಲಿತೆ ನೀನು” ಪುನಹ ಕೇಳಿದಾಗ “ಈಗ ಎಲ್ಲಾ ಕಡೆ ಮಾಡ್ತಾರೆ ಹೀಗೆ, ನನ್ನ ಮನೆಗೂ ಬರಬೇಕಾದರೆ ಟೆಸ್ಟು ಮಾಡಿಸ್ಬೇಕು” ಎಂದವಳೇ ಪಿಸ್ತೂಲನ್ನು ಕೆಳಗಿಳಿಸಿ ಪಕ್ಕದಲ್ಲಿದ್ದ ಪುಟ್ಟತಮ್ಮನಲ್ಲಿ “ನಾಲ್ಕು” ಹೇಳಿದಾಗ ಆತ ಪುಟ್ಟ ಚೀಟಿಯಲ್ಲಿ ಬರೆದು ನನ್ನ ಕೈಗಿತ್ತು ಸಾಬೂನು ನೀರನ್ನು ಪಿಚಕಾರಿಯಲ್ಲಿ ಸಿಡಿಸಿ ಗೇಟು ತೆರೆದ. “ಹ್ಞೂಂ, ಈಗ ಹೋಗ್ಬಹುದಾ ಒಳಗೆ?” ಕೇಳಿದಾಗ “ಹೋಗ್ಬಹುದು, ಹತ್ತು ಬಂದ್ರೆ ಮಾತ್ರ ಅಲ್ಲಿಗೆ” ಕೋಳಿ ಗೂಡು ತೋರಿಸಿದಾಗ “ಓಹೋ ಇವರ ಲೆಕ್ಕದಲ್ಲಿ ನಾಲ್ಕಾದರೆ ನಾರ್ಮಲ್, ಹತ್ತಾದರೆ ಅಬ್‌ನಾರ್ಮಲ್” ನನಗೆ ನಾನೇ ಹೇಳಿಕೊಳ್ಳುತ್ತಿರುವಾಗ “ಬಂದ್ರಾ! ನಿಮ್ಮನ್ನೂ ಕಾಡಿಸಿದ್ವಾ ಈ ಮಕ್ಳು? ಈಗ ಇದೇ ಆಟ ಇವುಗಳಿಗೆ….ಯಾರು ಬಂದ್ರೂ ಥರ್ಮಲ್ ಸ್ಕ್ಯಾನ್, ಮೊನ್ನೆ ತೆಂಗಿನಕಾಯಿ ಕೊಯ್ಯೋಕೆ ಬಂದ ಶಂಕ್ರನನ್ನು ಕೋಳಿಗೂಡಿಗೆ ಹಾಕ್ತೇವೆ ಅಂಥ ಎಳ್ಕೊಂಡು ಹೋಗಿದ್ದಾರೆ, ಶಾಲೆ ಆದ್ರೂ ಶುರು ಆಗ್ಬಾರ್ದಾ!” ಗೆಳತಿ ಗೊಣಗುತ್ತಾ ನನ್ನನ್ನು ಒಳಕರೆದೊಯ್ದಾಗ ಪುಟಾಣಿಗಳೂ ಓಡುತ್ತಾ ಬಂದು ಸೋಫಾದಲ್ಲಿ ಕುಳಿತರು.           ಅದ್ಯಾಕೋ ಈ ಮಕ್ಕಳ ಆಟ ಕಂಡಾಗ ಬಾಲ್ಯ ನೆನಪಾಯಿತು. ಮನೆ ತುಂಬಾ ಮಕ್ಕಳಿದ್ದ ಕಾಲದಲ್ಲಿ ಹೀಗೆ ಇತ್ತಲ್ಲವೇ ನಮ್ಮ ಬಾಲ್ಯ? ಅಪ್ಪ ಅಮ್ಮನ ಕಣ್ಗಾವಲಿರಲಿಲ್ಲ, ‘ಅಲ್ಲಿ ಹೋದರೆ ಬೀಳುವೆ, ಇಲ್ಲಿ ಬಂದರೆ ಅಳುವೆ” ಎಂಬ ಮುಂಜಾಗರೂಕತೆಯಿರಲಿಲ್ಲ. ಮರ ಹತ್ತುವಾಗಲೂ, ನೀರಿನೊಳಗೆ ಬೀಳುವಾಗಲೂ ಸಿಕ್ಕ ಕೈಗಳು ನಮ್ಮ ಕೈಗಳಿಗಿಂತ ತುಸುವೇ ನೀಳವಾಗಿದ್ದವು ಅಷ್ಟೇ! ಅಡುಗೆಮನೆಯಿಂದ ಉಮೇದುಗೊಂಡು ಯಾವುದೋ ಮರದ ಕೆಳಗೆ ಹಾಕುತ್ತಿದ್ದ ಒಲೆಯಲ್ಲಿ ಅದೆಷ್ಟು ವಿಧದ ಅಡುಗೆಗಳು ತಯಾರಾಗುತ್ತಿದ್ದವೆಂದರೆ ಮುಂದೆ ಅಡುಗೆಯ ಬಗೆಗಿನ ಆಸಕ್ತಿಗೆ ಅದೂ ಒಂದು ಪಾಠವಾಗುವಷ್ಟು ! ಅಪ್ಪನೊಡನೆ ಹೋಗುತ್ತಿದ್ದ ಆ ದಿನಸಿ ಅಂಗಡಿಯಿಂದ ಪಡಸಾಲೆಯಲ್ಲಿ ತಲೆಯೆತ್ತಿದ ಗೂಡಂಗಡಿಗೆ ಎಣ್ಣೆಯ  ಹಳೆಯ ಶೀಶೆಯೋ ಅಥವಾ ತೂತು ಮಂಡಗೆಯೋ ಭರಣಿಯಾಗಿ ಅದ್ಯಾವಾಗಲೋ ಅಪ್ಪ ಕೊಟ್ಟ ಚಿಲ್ಲರೆಕಾಸಿನಲ್ಲಿ ಕೊಂಡ ಕಟ್ಲೀಸುತುಂಡು ಅದರಲ್ಲಿ ತುಂಬಿಕೊಳ್ಳುತ್ತಿತ್ತು. ಆಗಿನ ಕೆಲವು ಗೆಳೆಯರು ಇಂದು ಯಶಸ್ವಿ ವ್ಯಾಪಾರಿಗಳಾಗಲು ಈ ಪಡಸಾಲೆ ಗೂಡಂಗಡಿ ಬಹುಮುಖ್ಯ ಭೂಮಿಕೆ. ಸುರೇಶ ಮಾಸ್ತರರ ದಪ್ಪ ಕನ್ನಡಕ ಎಷ್ಟರ ಮಟ್ಟಿಗೆ ಆಕರ್ಷಿಸಿತ್ತೆಂದರೆ ಹುಣಸೇಮರದ ಕೆಳಗೆ ಅಮ್ಮನ ಹಳೆಯ ಸೀರೆ ಮದೆ ಕಟ್ಟಿ ಆಡುತ್ತಿದ್ದ ಶಾಲೆಯಾಟಕ್ಕೆ ಅಜ್ಜನ ದಪ್ಪ ಕನ್ನಡಕ ಮೇಸ್ತರಾಗಿ ನಿಂತ ದಿನಗಳು ಇಂದಿಗೂ ಟೀಚರ್ ಎಂದರೆ ಇಂತಹುದೇ ಗಾಂಭೀರ್ಯ ಬೇಕೆನ್ನುವಷ್ಟು ಛಾಪು ಮೂಡಿಸಿದ್ದು ಹೌದು. ಇವೆಲ್ಲವೂ ಒಳಾಂಗಣ ಆಟಗಳ ಪಟ್ಟಿಗೆ ಸೇರಿದರೆ ಹೊರಾಂಗಣ ಆಟಗಳ ರುಚಿಯೇ ಬೇರೆ ರೀತಿಯದ್ದು.  ಲಗೋರಿಯಾಟದಲ್ಲಿ ಬೀಳುತ್ತಿದ್ದ ಚೆಂಡಿನ ಪೆಟ್ಟು, ಕಣ್ಣಾಮುಚ್ಚಾಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದ ಗಲ್ಲಿಯ ಮೂಲೆಮೂಲೆಗಳು, ಕಬ್ಬಡ್ಡಿ – ಖೋಖೋ, ಮುಟ್ಟಾಟಗಳಲ್ಲಿ  ಬಿದ್ದ ಗಾಯಕ್ಕೆ ಯಾವುದೋ ಕಾಡುಸೊಪ್ಪನ್ನು ಅರೆದು ಕಟ್ಟುತ್ತಿದ್ದ ಬ್ಯಾಂಡೇಜ್  ಇಂದು ನೆನಪಾದಾಗ ಅನ್ನಿಸುವುದಿದೆ ಬಹುಶಃ ಸ್ವರಕ್ಷಣಾ ಪದ್ಧತಿ ಅದಾಗಿದ್ದಿರಬಹುದೇನೋ ! ಚಕ್ರವೇ ಇರದ ಬಸ್ಸಿನ ಚಾಲಕ, ನಿರ್ವಾಹಕನಲ್ಲೂ ಬದುಕಿನ ಬಂಡಿಯನ್ನು ನಾನು ಮುನ್ನಡೆಸಬಲ್ಲೆಯೆಂಬ ಆತ್ಮವಿಶ್ವಾಸ ಇದ್ದಂತಿತ್ತು. ವಿಭಿನ್ನ ವ್ಯಕ್ತಿತ್ವಗಳನ್ನು ಆವಾಹಿಸಿಕೊಂಡು ಆಡುತ್ತಿದ್ದ ಆ ಆಟಗಳು ಆಟವಷ್ಟೇ ಆಗಿರದೆ ಪ್ರತಿನಿತ್ಯದ ಕಲಿಯುವಿಕೆಯ ಒಬ್ಬ ಪ್ರತಿನಿಧಿಯಾಗಿ ನಿಲ್ಲುತ್ತಿದ್ದ.  ಇಲ್ಲಿ ಕೌಟುಂಬಿಕ ಸಂಬಂಧದ ಜೊತೆಗೆ ಸಮಾಜದೊಳಗೆ ನಾವು ಹೇಗೆ ಗುರುತಿಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ನಾವೇನು? ಎಂಬ  ನೈತಿಕ ಪಾಠವೂ ಸಿಗುತ್ತಿತ್ತು. ಆಟದಿಂದ ದೂರ ಉಳಿದುಬಿಟ್ಟರೆ ‘ಬೆಕ್ಕಿನ ಬಿಡಾರ ಬೇರೆ” ಎಂದೂ ಆಟದಲ್ಲಿ ಮೂಗೇಟಾದರೆ ಅಥವಾ ಸೋತೆನೆಂದು ಅತ್ತರೆ ‘ಅಳುಮುಂಜಿ’ಯೆಂದು ಕರೆಯುತ್ತಾರೆಂಬ ಅಂಜಿಕೆಯ ಒಳಗೆ ಹೊಸ ನಾಯಕ ಹುಟ್ಟುತ್ತಿದ್ದುದು ನಮ್ಮ ಅರಿವಿಗೆ ಬಾರದ್ದು. ಅಂದು ಆಟವಾಡಲು ಸಮಯ ಬೇಕಾದಷ್ಟು ಇತ್ತೇ ಎಂಬುದನ್ನು ಪ್ರಶ್ನಿಸಿದರೆ ಸಿಗುವ ಉತ್ತರ ‘ಅಪ್ಪನೊಡನೆ ಗೊಬ್ಬರ ಹೊರಲು ಹೆಗಲು ಕೊಟ್ಟದ್ದು, ಅಮ್ಮ ಕಟ್ಟುತ್ತಿದ್ದ ಬೀಡಿಗೆ ಸುರುಟುತ್ತಿದ್ದ ನೂಲು ಅಥವಾ ಶಾಲೆಯ ಪುಸ್ತಕಗಳಿಗಾಗಿ ಮಾಡುತ್ತಿದ್ದ ಅಂದಿನ ಕಾಲದ ಪಾರ್ಟ್ಟೈಮ್ ಕೆಲಸಗಳು’. ಆದುದರಿಂದ ಅಂದು ಆಡುತ್ತಿದ್ದ ಯಾವುದೇ ಆಟಗಳಾದರೂ ಅದು ಸಮಯ ಕಳೆಯಲು ಆಡುವಂತಹದ್ದಾಗಿರಲಿಲ್ಲ; ಬದಲಾಗಿ  ದಣಿದ ದೇಹಗಳಿಗೆ ಚೈತನ್ಯ ತುಂಬುವಂತಹದ್ದಾಗಿತ್ತು. ಆ ಕಾರಣಕ್ಕಾಗಿಯೇ ಅಂದಿನ ಬಹುತೇಕ ಆಟಗಳು ಒಬ್ಬನೇ ಆಡುವ ಆಟವಾಗಿರದೆ ಅಲ್ಲೊಂದು ಸಂಘ ಅನಿವಾರ್ಯವಾಗಿತ್ತು. ಲಗೋರಿಯ ಪಲ್ಲೆಯನ್ನು ನುಣುಪಾಗಿಸುವವನು ಒಬ್ಬನಾದರೆ, ಸಮಗಾತ್ರದ ಕಲ್ಲುಗಳನ್ನು ಆಯ್ಕೆ ಮಾಡುವವನೊಬ್ಬ, ಗೆರೆಯೆಳೆದು ಕೋಟೆ ಕಟ್ಟುವವನೊಬ್ಬ, ಉರುಳಿಸುವವನು ಇನ್ನೊಬ್ಬ!  ಬಿದ್ದೆದ್ದರೂ, ಅತ್ತು ನಕ್ಕರೂ, ಗುದ್ದಾಡಿ ಬಡಿದಾಡಿಕೊಂಡರೂ ನಡೆದುದು ದೊಡ್ಡವರ ತನಕ ಹೋಗಲೇಬಾರದೆಂಬ ಅಲಿಖಿತ ಒಪ್ಪಂದದ ಸಣ್ಣವರ ಆಟದಲ್ಲಿ ನಾವು ನೀವೆಲ್ಲರೂ ‘ಮಕ್ಕಳ ಸಮಾಜ’ದ ಅಧಿನಾಯಕರಾಗಿದ್ದವರು. ಡಿಜಿಟಲ್ ಬಾಲ್ಯ                 ‘ಆಡಿ ಬಾ ನನ ಕಂದ ಅಂಗಾಲ ತೊಳೆದೇನ’ ಎಂಬಲ್ಲಿAದ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು’ ಎಂಬ ಕಾಲಘಟ್ಟಕ್ಕೆ ಬಂದು ನಿಂತಾಗ ಮನೆಯಿಂದ ಮಗು ಹೊರಗೆ ಕಾಲಿಟ್ಟರೆ ಕಾಲಿಗೆಲ್ಲಿ ಮಣ್ಣು ಮೆತ್ತಿಸಿಕೊಳ್ಳುವುದೋ ! ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿ ಬಿದ್ದರೆ ಮಗು ನೋವೆಲ್ಲಿ ತಡೆದುಕೊಂಡೀತು ಎಂಬ ಭಯ, ಜೊತೆಯಲ್ಲಿ ನಾವಿಲ್ಲದಿದ್ದರೆ ಮಗು ಹೇಗೆ ಸಂಭಾಳಿಸಿಕೊಂಡೀತು? ಎಂಬ ಅತಿಯಾದ ಜಾಗರೂಕತೆ ಕರೆದೊಯ್ದಿದ್ದು ಡಿಜಿಟಲ್ ಬಾಲ್ಯದತ್ತ. ಯಂತ್ರಯುಗಕ್ಕೆ ವಿಭಕ್ತ ಕುಟುಂಬ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿದಾಗ ಅಜ್ಜನ ಕೋಲೆಲ್ಲಿ? ಅಜ್ಜಿಯ ಕತೆಯೆಲ್ಲಿ? ಅತ್ತಾಗೊಂದು ಕಾರ್ಟೂನ್, ನಕ್ಕಾಗೊಂದು ಚಾಕ್ಲೇಟು ಎಂಬ ದಿನಗಳಲ್ಲಿ ಮರಕೋತಿಯಾಟ, ಪೆಪ್ರ‍್ಮೆಂಟು ಸವಿ ಸವಕಲು ನಾಣ್ಯವಾಗಿದ್ದೂ ಹೌದು. ಅಪ್ಪ ಅಮ್ಮ ಒಬ್ಬ ಮಗು ಹೀಗಿರುವ ಕಾಲದಲ್ಲಿ ಒತ್ತಡಗಳ ನಡುವೆ ಚೌಕಾಬಾರ, ಚೆನ್ನೆಯ ಮಣೆಗಳಿಗೆ ಜಾಗವಿಲ್ಲದಾದಾಗ ಆ ಸ್ಥಳವನ್ನು ಆಕ್ರಮಿಸಿಕೊಂಡಿದ್ದೇ ವೀಡಿಯೋ ಗೇಮ್ಸ್ಗಳು. ಇದು ಎಲ್ಲಿಯ ತನಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತೆಂದರೆ ಅಂತರ್ಜಾಲವೆಂಬ ಹೊಸಲೋಕ ತೆರೆದುಕೊಳ್ಳುವವರೆಗೆ, ನಂತರದ ಮಿಂಚಿನ ಬದಲಾವಣೆಗಳು ನಮ್ಮನ್ನು ಎಷ್ಟು ದೂರ ತಂದು ನಿಲ್ಲಿಸಿಬಿಟ್ಟಿತೆಂದರೆ ಮನೆಯವರಿಗೆ ಅಪರಿಚಿತರಾಗಿ ಲೋಕಕ್ಕೆ ಪರಿಚಿತರಾಗುವಷ್ಟು. ಇಷ್ಟು ರೂಪಾಂತರಗೊಂಡಾಗ ಆ ಆಟಗಳು ಉಳಿದೀತೇ? ದಣಿವಾರಿಸಿಕೊಳ್ಳಲು ಆಡುತ್ತಿದ್ದ ಆಟಗಳು ಮರೆಯಾಗಿ ಹೊತ್ತು ಕಳೆಯಲು ಬಹಳಷ್ಟು ಆಟಗಳು ಬಂದವು. ಸಮಯವಿಲ್ಲವೆಂದು ಹಲುಬುವ ಜೊತೆಗೆ ಆಟಕ್ಕೆಂದೇ ಸಮಯ ಮೀಸಲಿಡುವಂತಾಯಿತೆಂದರೆ ಅಭ್ಯಾಸ ಚಟವಾಗುವ ಎಲ್ಲಾ ಸೂಚನೆಗಳೂ ಸಿಕ್ಕಿಬಿಟ್ಟಿತ್ತು. ಆಟಗಳು ಗೇಮ್ಸ್ಗಳಾಯಿತು ಹಾಗೂ ಅದರದ್ದೇ ಜಗತ್ತಿನಲ್ಲಿ ಒಂದಿಷ್ಟು ಜಿದ್ದು ಮತ್ತು ಕ್ರೌರ್ಯಗಳು ಬುಸುಗುಡಲಾರಂಭಿಸಿ ಅವುಗಳಿಗೆ ಒಗ್ಗಿಹೋಗಿದ್ದೇವೆಂಬುದು ಸ್ಪಷ್ಟವಾಗಿದ್ದೇ ಕೆಲವೊಂದು ಗೇಮ್ಸ್ಗಳು ನಿಷೇಧಿಸಲ್ಪಟ್ಟಾಗ ಜಗತ್ತೇ ಮುಳುಗಿಹೋಯಿತೆನ್ನುವಷ್ಟು ಅತ್ತವರು ಸಾಕ್ಷಿಯಾದಾಗ, ಯಾಕೆ ಹೀಗೆ? ಅಂದಿನ ನಮ್ಮ ಬಾಲ್ಯದ ಆಟಗಳು ವಯಸ್ಸಿನ ಒಂದು ಹಂತಕ್ಕೆ ತಲುಪಿದಾಗ ತನ್ನಷ್ಟಕ್ಕೇ ನಿಂತು ಹೊಸತಕ್ಕೆ ಒಗ್ಗಿಕೊಳ್ಳುತ್ತಿತ್ತು ಮತ್ತು ಅವು ಬೇಕೇ ಬೇಕೆಂದು ಅನ್ನಿಸಿಯೇ ಇರಲಿಲ್ಲ. ಆದರೆ ಡಿಜಿಟಲ್ ಗೇಮ್ಸ್ಗಳು ಹಾಗಿವೆಯೇ! ‘ಹಳ್ಳಿಗೂ – ದಿಲ್ಲಿಗೂ ಎಲ್ಲಿಯ ದೂರ’ ಎನ್ನುವ ಜಮಾನದಲ್ಲಿ ಈ ಗೇಮ್‌ಗಳು ವಯಸ್ಸಿನ ಅಂತರವಿಲ್ಲದೆಯೇ ಪ್ರಿಯವಾಗುತ್ತಾ ಹೋಗುತ್ತದೆ ಬಿಟ್ಟಿರಲಾರದಷ್ಟು, ಅಲ್ಲಿ ತೆರೆದುಕೊಳ್ಳುವ ಲೋಕ ‘ಮಕ್ಕಳ ಸಮಾಜ’ ಎಂಬ ಕಾರಕವಾಗಿ ಅಲ್ಲ ‘ಚಟ’ ಎಂಬ ಮಾರಕವಾಗಿ ! ಮತ್ತೆ ಬರುತ್ತಿದೆ ಆಟಗಳು                        ಕಾಲ ಬಹಳಷ್ಟು ಪಾಠಗಳನ್ನು ಇತ್ತೀಚಿನಿಂದ ಕಲಿಸಲಾರಂಭಿಸಿದೆ. ನಮ್ಮ ಮನೆಯೊಳಗೆ ನಾವು ಬಂಧಿಯಾಗಿದ್ದಾಗ ಹಳೆಯದೆಲ್ಲವೂ ನೆನಪಾಗಲಾರಂಭಿಸಿದೆ. ಏನು ಪಡೆದುಕೊಂಡೆವು? ಏನನ್ನು ಕಳೆದುಕೊಂಡೆವು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದೇ ಮೊದಲ ಉತ್ತರವಾಗಿ ಸಿಕ್ಕಿದ್ದು ಅದೇ ಆಟಗಳು. ಒಂದು ಕಾಲಕ್ಕೆ ಮಕ್ಕಳನ್ನು ಓಲೈಸಲು ಮೊಬೈಲ್ ಕೊಟ್ಟು ಕುಳ್ಳಿರಿಸುತ್ತಿದ್ದೆವು, ನಂತರ ಮಕ್ಕಳು ಅದಕ್ಕೆ ಸಮ್ಮೋಹಿತರಾಗುತ್ತಾರೆಯೆಂದು ತಿಳಿದೊಡನೆ ಮೊಬೈಲಿಗೂ ಟೈಮ್ ಟೇಬಲ್ ಮಾಡಿಕೊಟ್ಟೆವು. ಆದರೆ ಕಾಲಚಕ್ರ ! ಇವೆಲ್ಲವನ್ನೂ ಗಮನಿಸಿಕೊಂಡು ಮುನ್ನಡೆಯುತ್ತಿದೆ. ಮೊಬೈಲ್ ಹಿಡಿದರೆ ಮಕ್ಕಳು ಕೆಡುತ್ತಾರೆಂಬ ಆತಂಕದಲ್ಲಿದ್ದವರಿಗೆ ಈ ಕೋವಿಡ್ ಮಹಾಮಾರಿ ಕೊಟ್ಟ ಬಹುದೊಡ್ಡ ಶಿಕ್ಷೆ ‘ಆನ್ಲೈನ್ ಕ್ಲಾಸ್‌ಗಳು’. ಅಪ್ಪ ಅಮ್ಮನ ಮೊಬೈಲಿಗಾಗಿ ಹಠ ಮಾಡುತ್ತಿದ್ದ ಮಕ್ಕಳು ಇಂದು ಅವುಗಳೊಡನೆ ಕಲಿಯಬೇಕಾಗಿದೆ. ‘ಸಿಗದಿರುವುದಕ್ಕೆ ಆಸೆ ಹೆಚ್ಚು ಮತ್ತು ಬಳಿಯಿರುವುದಕ್ಕೆ ಬೆಲೆ ಕಡಿಮೆ’ ಎಂಬ ಮಾತಿನಂತೆ ಮೊಬೈಲ್ ಯಾವಾಗ ಮಕ್ಕಳ ಪಾಠದ ಒಂದು ಸಾಧನವಾಗಿ ಬಳಕೆಯಾಗತೊಡಗಿತೋ ಅಂದಿನಿಂದ ಮಕ್ಕಳು ಮೊಬೈಲಿನಿಂದಾಚೆಯ ಹೊಸ ಬೆಳಕನ್ನು ಹಂಬಲಿಸತೊಡಗಿದ್ದಾರೆ. ದಿನವಿಡೀ ಹೈರಾಣಾಗಿಸುವ ಆನ್ಲೈನ್ ಕ್ಲಾಸುಗಳಿಂದ ದಣಿದ ಜೀವಗಳಿಗೆ ಇಂದು ಮತ್ತೆ ಆಹ್ಲಾದ ಬೇಕಾಗಿದೆ; ಆ ಕಾರಣಕ್ಕಾಗಿ ತಾನು ನೋಡಿದ ವಿಷಯಗಳ ಬಗ್ಗೆ, ಅನುಭವಿಸಿದ ಅನುಭವಗಳ ಮೇಲೆ ಆಟಗಳ ಸ್ಕ್ರಿಪ್ಟ್ ಬರೆಯಲಾರಂಭಿಸಿದ್ದಾರೆಯೆಂದರೆ ನಾವೂ ಮಕ್ಕಳ ಈ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲುವುದು ಕರ್ತವ್ಯವಾಗುತ್ತದೆ. ಮತ್ತೆ ಮರೆಯಾಗುತ್ತಿರುವ ಆ ಆಟಗಳ ದಿನಗಳು ಮರಳುತ್ತಿದೆಯೇನೋ! ಅನ್ನಿಸಿದ್ದು ಈ ಮಕ್ಕಳನ್ನು ನೋಡಿದಾಗ. ಮಕ್ಕಳಿಗೆ ಈಗ ಮೊಬೈಲ್ ಆಟದ ವಸ್ತುವಾಗಿರದೆಯೇ ಬ್ಯಾಗ್ ತುಂಬಿಸಿಕೊಳ್ಳುತ್ತಿದ್ದ ಪುಸ್ತಕಗಳಾಗಿವೆ. ಎಲ್ಲೋ ನೋಡಿದ ಆ ಥರ್ಮಲ್ ಸ್ಕ್ಕಾನ್ ಅದೆಷ್ಟು ಸೂಕ್ಷ್ಮ ವಾಗಿ ಗಮನಿಸಿ ಟೆಂಪರೇಚರ್ ಹೆಚ್ಚಾಗಿದ್ದರೆ ಕ್ವಾರೆಂಟೈನ್ ಅನುಸರಿಸಬೇಕೆಂಬುದನ್ನು ಕೋಳಿಗೂಡಿನ ಮೂಲಕ ಹೇಳಿದಾಗ ಈ ಬುದ್ಧಿ ದೊಡ್ಡವರಿಗೆ ಸರಿಯಾಗಿ ಬಂದಿದ್ದರೆ ರೋಗವೊಂದು ಹೀಗೆ ಆಕ್ರಮಿಸಿಕೊಳ್ಳುತ್ತಿರಲಿಲ್ಲ ಅಂದುಕೊಳ್ಳುತ್ತಿರುವಾಗಲೇ “ಆಂಟೀ ಕೊರೊನಾ ಯಾವಾಗ ಹೋಗುತ್ತೆ? ಮತ್ತೆ ಎಚ್ಚರಿಸಿದಳು ಪೋರಿ. “ಯಾಕೆ?” ಕೇಳಿದಾಗ “ಶಾಲೆಗೆ ಕೊರೊನಾ ಬಂದಿದೆ, ಹೊಸ ಚೀಲ, ಛತ್ರಿ ಯಾವುದೂ ಇಲ್ಲ ಪುಟ್ಟತಮ್ಮ ಹೇಳಿದ. “ನಿಮ್ಮ ಶಾಲೆಗೆ ಮಾತ್ರ ಅಲ್ಲಪ್ಪಾ, ಲೋಕಕ್ಕೇ ಬಂದಿದೆ” ನುಡಿದೆ. “ಅದು ಗೊತ್ತಿಲ್ಲ, ನಮ್ಮ ಶಾಲೆಯಿಂದ ಹೋದ್ರೆ ಸಾಕು, ಪೋಲಿಸ್ ಮಾಮನಲ್ಲಿ ಹೇಳ್ಬೇಕು ಕೊರೊನಾ ಅರೆಸ್ಟ್ ಮಾಡ್ಲಿಕ್ಕೆ” ತುಂಟಿ ಮಾತು ಮುಗಿಸುವಷ್ಟರಲ್ಲಿ ಮತ್ತೆ ಗೇಟಿನ ಸದ್ದು ಕೇಳಿ “ಬಾರೋ ಚೆಕ್ ಮಾಡ್ಬೇಕು” ತಮ್ಮನನ್ನು ಎಳ್ಕೊಂಡು ಹೋದವಳನ್ನು ಕಂಡಾಗ ‘ಏನು ಮುದವಿದೆ ಈ ಬಾಲ್ಯಕ್ಕೆ! ಎಲ್ಲವನ್ನೂ ಒಪ್ಪಿಕೊಳ್ಳುವಷ್ಟು ಮತ್ತು ಪ್ರಶ್ನಿಸುವಷ್ಟು” ಅಂದುಕೊಂಡೆ ನನ್ನೊಳಗೆ. **********************************************************

ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗಹಗಹಿಸಿದೆನರನರವು ನಿತ್ರಾಣವೈಧ್ಯನ ಬಾಣ ಹಾಳಾದ ಗೋರಿಕೂಗಿ ಕರೆದಿದೆ ಕವಿಯಕಾವ್ಯ ಗೀಚಲು. ಗೋರಿಯ ಮೇಲೆಕೊನೆಯ ದಿನ-ಹಚ್ಚಿದಕಣ್ಣೀರ ದೀಪ. ಹಸಿದ ಹೊಟ್ಟೆಅವ್ವ-ಕಾವಿನ ಜೀವತುಂಬಿದೊಲವು. ನಿದ್ರೆಯಲೆದ್ದುರುದ್ರ ಲೀಲೆ ಕುಣಿತಕಾಂಚಣ ರಾಣಿ ಗಾಳಿಯ ಗುಟ್ಟುಬದುಕಿನಡಿ ಹೇಡಿಜೊಳ್ಳಿನ ಸುಳ್ಳು ಹೊನ್ನ ಬಳ್ಳಿಹೊತ್ತ ಹಾದಿಯ ಬುತ್ತಿಕನ್ನಡ ಪದ. ಒಂದೇ ‘ಎನಲು’ಗುಡಿ ಚರ್ಚು ಮಸೀದಿನಲಿವು ನಾಡು. ಎಳೆ ಹಸುಳೆತೊದಲು ನುಡಿದವುಮಾಗೀ-ಚಳಿಗೆ ಶಿಶಿರ ಋತುಭೂದೇವಿ-ಹೆಡಿಗೆಹುಗ್ಗಿ ಹೋಳಿಗೆ. ಮುಗುದೆ ‘ಒಲ್ಲೆ’ಮೂಕ ಮಾತಿನ ಎದಿಗೆನಲ್ಲನುರಿಗಾವು ಎಲೆಲೆ-ಬಾಳುಹಿತ ಮಿತಕೆ ಸೋಲುನೆಲೆ-ನೆರಳು ಕಾಗೆ ಗೂಗೆ ಬಾವ್ಲಿಬೇತಾಳ-ತಾಳಮೇಳರಾಜಕೀಯ. ಒಡಲೊಳಗಿದೆಕೊಳೆತನಾರು ಬೆಳೆಕಲ್ಮಶ ದೊರೆ ಒಳ-ಹೊರಗೆಕುರುಡು ಕುಂಟೆ ಬಿಲ್ಲೆಮೀರಿದ ಎಲ್ಲೆ. ಕಾವಿಯ ಚಿತ್ತಕಾಯ್ದ ಹಂಚಿನ ಮೇಲೆತತ್ವದ ಮಾತು. ಮನದ ಮಾಯೆಹಿಡಿಯೆ ಕಣ್ಣು ಕತ್ತಲುಉಲಿ-ಬದುಕು ಎಲೆಲೆ-ಕೀಟಜಗದ ತಲೆಕೆದರಿನಗದಿರಿಣುಕಿ ನವ-ತುಡುಗಎದೆಗೆ ಮುತ್ತಿಟ್ಟಬಾನಿಗೇರುತ ತೂತಾದ ಕೊಡದಾರಿಗೆ ನೀರ ಬಿತ್ತಿದಚಿತ್ತದ-ಗತ್ತು. ಬಣ್ಣದ ಬೆಕ್ಕುತುತ್ತನದು ನೆಕ್ಕಿತುಬಹು ವಿಲಾಸಿ. ನಾನೇ-ದುರುಳಯಾರು-ಯಾರನು ದೂರಲಿಪಾತಕೀ ಲೋಕ. ಜಿದ್ದಿನ ಪೀಳಿಗೆಬಕ್ಷಣಕೆ ಬಾಯ್ದೆರೆದರಣ ಹದ್ದುಗಳು. ****************************************************************

ಹಾಯ್ಕುಗಳು Read Post »

ಕಾವ್ಯಯಾನ

ಕುಸುಮಾಂಜಲಿ

ಕವಿತೆ ಕುಸುಮಾಂಜಲಿ ಅಭಿಜ್ಞಾ ಪಿ ಎಮ್ ಗೌಡ ಕುಸುಮವು ನಗುತಿರೆನಸುಕಿನ ವೇಳೆಯುಮುಸುಕನು ತೆರೆಯುತ ನಲಿಯುತಿದೆಕಸವರ ವರ್ಣದಿಜಸದಲಿ ಬೀಗುತರಸಮಯ ಸೃಷ್ಟಿಸಿ ಜೀಕುತಿದೆ|| ಕುಹಕವ ಕೇಳದೆಕಹಿಯನು ಮರೆಯುತಮಹಿಯಲಿ ಹಾಸವ ಚೆಲ್ಲುತಿದೆಸಹನೆಯ ದಳವದುಸಹಿಸುತ ಬಿಸಿಲನುಬಹಳಾಕರ್ಷಣೆ ಗಳಿಸುತಿದೆ|| ಶುದ್ಧತೆ ಭಾವವುಬದ್ದತೆಯಿಂದಲೆಸಿದ್ಧತೆ ಹೊಂದುತ ಪಸರಿಸಿದೆಮುದ್ದಿನ ಹೂವಿದುಮದ್ದಲು ಮುಂದಿದೆಸದ್ದನು ಮಾಡದೆ ನಗುತಲಿದೆ|| ಭ್ರಾಂತಿಯ ತೊಲಗಿಸಿಶಾಂತಿಯ ಹರಡುವಕಾಂತಿಯು ದೇವರ ಮುಡಿಯಲ್ಲಿಕಾಂತನು ಕೊಟ್ಟಿಹಕಾಂತೆಗೆ ಸುಮವನುಕಾಂತಿಯು ಗುಂದದೆ ಹೊಳೆಯುತಿದೆ|| ನೋಡುವ ಕಣ್ಣಿಗೆಮಾಡಿದೆ ಮೋಡಿಯಕಾಡುತ ನಿತ್ಯವು ಕಚಗುಳಿಯಬೇಡುವ ಮನಸಿಗೆಕೇಡನು ಬಯಸದೆಬಾಡುವ ನಿರ್ಮಲ ಕುಸುಮವಿದು|| **********************************************

ಕುಸುಮಾಂಜಲಿ Read Post »

ಅನುವಾದ

ತಕ್ಕ ಪಾಠ

ಅನುವಾದಿತ ಕವಿ ತಕ್ಕ ಪಾಠ ತೆಲುಗಿನಲ್ಲಿ: ಆದೋನಿ ಬಾಷಾ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು. ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು. ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ ನಮ್ಮ ಕುಟುಂಬವೆಲ್ಲಾ ಕಾರಲ್ಲಿ ಹೊರಟು ವೈಷ್ಣೋದೇವಿಯ ದರ್ಶನ ಮಾಡಿಕೊಳ್ಳುತ್ತೇವೆ. ಈ ಸಲ ನನ್ನ ಹೆಂಡತಿ ಅನಾರೋಗ್ಯದಿಂದ ಬರಲಿಲ್ಲ. ಅವಳನ್ನ ನೋಡಿಕೊಳ್ಳಲು ನನ್ನ ಸೊಸೆ ಸಹ ಉಳಿದಳು. ನಾನು, ನನ್ನ ಮಗ ಮಾತ್ರ ಹೊರಟೆವು.ಕೆಲ ವರ್ಷಗಳ ಹಿಂದೆ ನನಗೆ ಲಕ್ವ ಹೊಡೆದಿದ್ದು ನನ್ನ ಕಾಲುಗಳೆರಡೂ ಸ್ವರ್ಶೆಯನ್ನು ಕಳೆದುಕೊಂಡಿದ್ದವು. ಗಾಲಿಕುರ್ಚಿಯಲ್ಲೇ ನನ್ನ ಓಡಾಟ. ಎಂದಿನ ಹಾಗೇ ಅದರೊಂದಿಗೆ ಕಾರಲ್ಲಿ ಹೊರಟಿದ್ದೆವು. ಪಲ್ಲಕಿಯಲ್ಲೇ ದೇವಿಯ ದರ್ಶನ ಮಾಡಿಕೊಂಡು ಮರು ಪ್ರಯಾಣದಲ್ಲಿ ಜಮ್ಮುವಿನಲ್ಲಿ ನನ್ನ ಮೊಮ್ಮಗನ ಸಲುವಾಗಿ ಕೆಲ ಆಟದ ವಸ್ತುಗಳನ್ನು ಕೊಂಡುಕೊಂಡೆವು. ಅಷ್ಟರಲ್ಲಿ ಮಳೆ ಶುರುವಾಗಿತ್ತು. ದಿನವಿಡೀ ಬೀಳುತ್ತಲೇ ಇತ್ತು. ಹಾದಿಯಲ್ಲಿ ನೆಲ ಜಾರಿಕೆಗಳಾಗಿವೆಯೆಂದು ತಿಳಿದು ಬಂದದ್ದರಿಂದ ಕಾರನ್ನ ಚಾಲಕನ ಸುಪರ್ದಿಗೆ ಒಪ್ಪಿಸಿ ನಾವಿಬ್ಬರೂ ರೈಲಿನಲ್ಲಿ ದೆಹಲಿ ಸೇರಬೇಕೆಂದಿದ್ದೆವು.ಜಮ್ಮು ನಿಲ್ದಾಣದಲ್ಲಿ ನನ್ನ ಮಗ ಮತ್ತು ಕಾರಿನ ಚಾಲಕ ಸೇರಿ ನನ್ನನ್ನ ನನ್ನ ಕುರ್ಚಿಯ ಸಮೇತ ಡಬ್ಬಿಯೊಳಕ್ಕೆ ಹತ್ತಿಸಿದರು. ಅವರಿಬ್ಬರೂ ಸಾಮಾನು ತರಲು ಹೊರಗಡೆಗೆ ಹೋದಾಗ ರೈಲು ಹೊರಟಿದ್ದು, ನನ್ನ ಮಗ ಬರುವ ವೇಳೆಗೆ ವೇಗ ತಳೆದಿತ್ತು. ಹಾಗಾಗಿ ಅವನು ರೈಲು ಹತ್ತಲಾಗಲಿಲ್ಲ. ನಾನು ಒಬ್ಬಂಟಿಗನಾಗಿ ಪ್ರಯಾಣಸ ಬೇಕಾಗಿ ಬಂದಿತ್ತು.ನಾನು ಡಬ್ಬಿಯ ಬಾಗಿಲ ಹತ್ತಿರ ನನ್ನ ಕುರ್ಚಿಯಲ್ಲಿ ಕೂತಿದ್ದೆ. ರೈಲು ಹತ್ತಿದ ವ್ಯಕ್ತಿ ನನ್ನ ಎದುರು ಸೀಟಿನಲ್ಲಿ ಕೂತ. ನಾನು ನನ್ನ ಸೀಟಿನಲ್ಲಿ ಕೂರಲು ಆತನ ಸಹಾಯ ಪಡೆಯಬೇಕೆಂದಿದ್ದೆ. ಅವನ ಕಡೆಗೆ ನೋಡಿದವನು ಬೆಚ್ಚಿಬಿದ್ದೆ.ಎಲ್ಲೋ ನೋಡಿದ ಮುಖ ! ಎಲ್ಲಿ ಅಂತ ನೆನಪು ಬರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಎಷ್ಟೋ ಜನರನ್ನ ನೋಡಿದ್ದೇನೆ. ಅವರುಗಳಲ್ಲಿ ಕೆಲವರಂತೂ ಅಪರಾಧಿಗಳು. ನನ್ಗೆಲ್ಲೋ ಹುಚ್ಚು ! ದೇಶದ ಈ ಮೂಲೆಯಲ್ಲಿ ನನಗೆ ಗೊತ್ತಿರುವ ಮನುಷ್ಯ ಹೇಗೆ ಸಿಕ್ಕಿಯಾನು ? ಮನುಷ್ಯನನ್ನ ಹೋಲಿದ ಮನುಷ್ಯರಿರಬಹುದು ಅಥವಾ ನನ್ನ ಕಣ್ಣೇ ನನ್ನನ್ನು ಮೋಸಮಾಡುತ್ತಿರಬಹುದು. ಅಷ್ಟರಲ್ಲೇ ಆ ವ್ಯಕ್ತಿಯೇ ನನ್ನ ಗುರ್ತುಹಿಡಿದು ಮಾತಾಡಿದ. “ ಸಾರ್ ! ನೀವು ಇನಸ್ಪೆಕ್ಟರ್ ಚಂದ್ರ ಅವರಲ್ವಾ ? ನನ್ನ ಗುರ್ತು ಹಿಡಿದಿದೀರಾ ? ನಾನು ರಾಜೇಶ್ ಸಾರ್. ಇಪ್ಪತ್ತೈದು ವರ್ಷಗಳ ಹಿಂದೆ ಅನಂತಪುರದಲ್ಲಿ ನನ್ನ ಹೆಂಡತಿಯ ಕೊಲೆ ಕೇಸನ್ನ ನೀವೇ ಪತ್ತೇದಾರಿ ಮಾಡಿದ್ದು .” ಅಂದ. ಆದ್ರೂ ನನಗೆ ನೆನಪಿಗೆ ಬರಲಿಲ್ಲ. “ ನಿನ್ನ ಹೆಂಡತಿ ಹೆಸರೇನಪ್ಪಾ “ ಅಂತ ಕೇಳಿದೆ.“ ಆಶಾ “ ಅಂತ ಅವನು ಹೇಳಿದ ತಕ್ಶಣ ನನ್ನ ತಲೆಯಲ್ಲಿ ಒಂದು ತುಮುಲವೇ ಎದ್ದಿತು. ನೆನಪಿನ ಪೊರೆಗಳ ಕೆಳಗಿಂದ ಒಂದು ಸುಂದರವಾದ ಮತ್ತು ಮುಗ್ಧ ಮುಖ ಎಲ್ಲ ಪೊರೆಗಳನ್ನ ಸೀಳುತ್ತ ಮೇಲ್ಬಂದು ನನ್ನ ಕಣ್ಣ ಮುಂದೆ ನಿಂತಿತು. ಅವಳ ಆ ಮುಖವನ್ನು ನಾನು ಹೇಗೆ ಮರೆತೇನು ? ತುಂಬಾ ಧೈರ್ಯವಂತನೆಂದು ಬೀಗುತ್ತಿದ್ದ ನನ್ನನ್ನೇ ಅವಳ ಕೊಲೆ ಬೆಚ್ಚಿ ಬೇಳಿಸಿತ್ತು. ಎಷ್ಟೋ ವರ್ಷಗಳ ವರೆಗೆ ಅವಳ ಮುಖ ನನ್ನ ಕನಸಲ್ಲಿ ಬರುತ್ತಿತ್ತು. “ಅಂಕಲ್ ! ನನ್ನ ಕೊಂದ ಆ ಕೊಲೆಪಾತಕಿಯನ್ನ ಹಿಡಿಯಿರಿ ಪ್ಲೀಜ್ “ ಅಂತ ಬೇಡುತ್ತಿತ್ತು. ಆದರೇ ನಾನೆಷ್ಟು ಪ್ರಯತ್ನಿಸಿದರೂ ಆ ಕೊಲೆಗಾರ ಸಿಕ್ಕಿರಲಿಲ್ಲ. ನನ್ನ ಸರ್ವೀಸಿನಲ್ಲಿ ಕೊಲೆಗಾರನನ್ನು ಹಿಡಿಯದೇ ಉಳಿದ ಕೇಸು ಅದೊಂದೇ ಆಗಿತ್ತು. ಆಗಲೇ ರಾಜೇಶ್ ನನ್ನ ಕುರ್ಚಿಯನ್ನ ನೋಡಿದ. “ ನಿಮ್ಮ ಕಾಲಿಗೇನಾಗಿದೆ ಸಾರ್ “ ಅಂತ ಕೇಳಿದ.ನಾನು ನನ್ನ ವಿವರಗಳನ್ನು ಹೇಳಿದೆ. “ ಇನ್ನು ದೆಹಲಿಯಲ್ಲಿ ನನ್ನ ಸೊಸೆ ಬಂದು ನನ್ನ ಇಳಿಸಿಕೊಳ್ಳೂವವರೆಗೂ ನಂದು ಒಬ್ಬಂಟಿ ಪ್ರಯಾಣವೇ ! ಅದ್ಸರಿ. ಈ ಮೂಲೆಯಲ್ಲಿ ನೀನೇನ್ಮಾಡ್ತಿದ್ದೀಯಾ “ ಅಂತ ಕೇಳಿದೆ.“ ವ್ಯಾಪಾರದ ಸಂಬಂಧ ನಾನು ಇಡೀ ದೇಶ ಸುತ್ತುತ್ತಾ ಇರ್ತೇನೆ ಸಾರ್” ಎಂದ.ಅವನ ವ್ಯಾಪಾರದ ಬಗ್ಗೆ ಕೇಳಬೇಕೆನಿಸಿತು. ಆದರೇ ನಮ್ಮ ಮಾತು ಆಶಾಳ ಕೊಲೆಯ ಕಡೆಗೆ ತಿರುಗಿತು.“ ಸಾರ್ ! ನನ್ನ ಹೆಂಡತಿಯ ಕೊಲೆಗಾರ ಇನ್ನೂ ವರೆಗೆ ಸಿಕ್ಕಿಲ್ಲ. ಕೊನೆಗೆ ಆ ಕೊಲೆ ರಹಸ್ಯವಾಗೇ ಉಳಿದು ಹೋಯ್ತು.” ನಿರಾಶಾ ದನಿಯಲ್ಲಿ ಹೇಳಿದ ರಾಜೇಶ್.ಅವನ ಮಾತು ಕೇಳಿದ ನನಗೆ ಬೇಜಾರಾಯಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ರೈಲು ಮುಂದೆ ಹೋಗುತ್ತಿತ್ತು. ನನ್ನ ಮೆದಳು ಹಿಂದಿನ ನೆನಪಿಗೆ ಮರಳಹತ್ತಿತು. ನಾನು ಅನಂತಪುರದಲ್ಲಿ ಸರ್ಕಲ್ ಇನ್ಸ್ಪೆಕ್ಟರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ನಮ್ಮ ಪಟ್ಟಣದಲ್ಲಿ ಇದ್ದಕ್ಕಿದ್ದಹಾಗೇ ಕಳ್ಳರ ತಂಡ ಒಂದು ತಲೆ ಎತ್ತಿತ್ತು. ಬೀಗ ಹಾಕಿದ ಮನೆಗಳು ಅಥವಾ ಒಬ್ಬಂಟಿಗರಾಗಿ ಯಾರಾದರೂ ಇದ್ದ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆಗಳನ್ನ ಮಾಡುತ್ತಿದ್ದರು. ಕಾವಲಿಗೆ ನಾಯಿ ಇದ್ದರೇ ಅದಕ್ಕೆ ವಿಷ ಬೆರೆಸಿದ ಬಿಸ್ಕತ್ತುಗಳನ್ನ ತಿನಿಸಿ ಕೊಲ್ಲುತ್ತಿದ್ದರು. ಮುಂಜಾಗರೂಕತೆಯಾಗಿ ಟೆಲಿಫೋನ್ ವೈರುಗಳನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದರು. ಉಡ್ ಕಟ್ಟರಿನಿಂದ ಹಿಂಬಾಗಿಲಿಗೆ ತೂತು ಕೊರೆದು ಚಿಲಕ ತೆಗೆದು ಒಳಗೆ ನುಸುಳುತ್ತಿದ್ದರು. ಕುರುಹು ಕಾಣದ ಹಾಗೆ ಕೈಗಳಿಗೆ ಕೈಚೀಲ ಹಾಕಿ ದರೋಡೆ ಮಾಡುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರಾದರೂ ಕಂಡಲ್ಲಿ ಅವರ ಕತ್ತಿಗೆ ಪ್ಲಾಸ್ಟಿಕ್ ವೈರ್ ಬಿಗಿಸಿ ಕೊಂದುಬಿಡುತ್ತಿದ್ದರು.ಪೋಲೀಸರಿಗೆ ಯಾವುದೇ ತರದ ಸಾಕ್ಷಾಧಾರಗಳು ಸಿಗದ ಹಾಗೆ ಕೆಲಸ ಮಾಡುತ್ತಿದ್ದರು. ನಾವು ಏನೇ ಪ್ರಯತ್ನ ಮಾಡಿದರೂ ಅವರುಗಳನ್ನು ಹಿಡಿಯಲಾಗಿರಲಿಲ್ಲ. ರಾತ್ರಿಯಲ್ಲಿ ನಾನೇ ಸ್ವತಃ ಗಸ್ತು ತಿರುಗುತ್ತಿದ್ದೆ. ಆದರೂ ಇಂಥ ಕಳ್ಳತನಗಳು ಕಮ್ಮಿಯಾಗಲಿಲ್ಲ. ವಾರದಲ್ಲಿ ಎಲ್ಲೋ ಒಂದುಕಡೆ ಕಳವು ನಡೆಯುತ್ತಿತ್ತು. ಒಂದು ದಿನ ಬೆಳಗಿನ ಜಾವದಲ್ಲಿ ಸ್ಟೇಷನ್ ನಿಂದ ಫೋನ್ ಬಂತು. ಊರ ಹೊರಗಿನ ಬಡಾವಣೆಯಲ್ಲಿಯ ಒಂದು ಮನೆಯಲ್ಲಿ ಒಬ್ಬಂಟಿಗಳಾಗಿದ್ದ ಆಶಾ ಎನ್ನುವ ಗೃಹಿಣಿಯನ್ನು ಕೊಂದು ಕಳ್ಳರು ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಡ್ಯೂಟಿಯಲ್ಲಿದ್ದ ಪೇದೆ ಹೇಳಿದ. ನಂಗೆ ತುಂಬಾ ಆಶ್ಚರ್ಯವಾಯಿತು. ಯಾಕೆ ಅಂದ್ರೆ, ಆಶಾ ನಂಗೆ ಗೊತ್ತಿದ್ದ ಹೆಂಗಸಾಗಿದ್ದಳು. ಕಳೆದ ವರ್ಷ ತನ್ನ ಮದುವೆಯಾಗುವ ವರೆಗೆ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಒಳ್ಳೆಯ ಹುಡುಗಿ. ತಂದೆ ತಾಯಿ ಇಲ್ಲದ ಅನಾಥೆ. ಕಂದನಿರುವಾಗಲೇ ಅವರು ಅವಳನ್ನು ಗುಡಿಯಲ್ಲಿ ಬಿಟ್ಟಿದ್ದರಂತೆ. ಅನಾಥಾಶ್ರಮದಲ್ಲಿದ್ದುಕೊಂಡು ಬೆಳಿದಿದ್ದಳು. ಸ್ವಯಂಕೃಷಿಯಿಂದ ಚೆನ್ನಾಗಿ ಓದಿಕೊಂಡು ಊರಿನಲ್ಲಿನ ಒಂದು ಹೆಸರಾಂತ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿದ್ದಳು. ಒಳ್ಳೆ ಹೆಸರು ಗಳಿಸಿದ್ದಳು. ಅದಕ್ಕೇ ನನಗೆ ಅವಳೆಂದರೇ ತುಂಬಾ ಅಭಿಮಾನ. ನನ್ನ ಮಕ್ಕಳಿಬ್ಬರೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರು ಓದಿನ ಮೇಲೆ ಅಷ್ಟೇನೂ ಶ್ರದ್ಧೆ ತೋರಿಸುತ್ತಿರಲಿಲ್ಲ. ಹಾಗಾಗಿ ನಾನು ಆಶಾಳನ್ನ ನಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಲು ಕೇಳಿಕೊಂಡೆ. ಅವಳು ಒಪ್ಪಿ ಮನೆಗೆ ಸಂಜೆಗಳಲ್ಲಿ ಬಂದು ಪಾಠ ಹೇಳಿಕೊಡುತ್ತಿದ್ದಳು. ಅವಳು ಬಂದಮೇಲೆ ನನ್ನ ಮಕ್ಕಳ ಓದಿನಲ್ಲಿ ತುಂಬಾ ಸುಧಾರಣೆ ಕಂಡು ಬಂತು. ಅದಕ್ಕೆ ಕೃತಜ್ಞತೆಯಾಗಿ ನಾವು ಅವಳ ಮದುವೆಯಲ್ಲಿ ಒಂದು ಬಂಗಾರದ ಲಾಕೆಟ್ ಕೊಟ್ಟೆವು. ಅದನ್ನೋ ನೋಡಿ ಅವಳು, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆ ಲಾಕೆಟ್ಟನ್ನ ತನ್ನ ಜೀವನವಿಡೀ ಜತನವಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಳು. ಆಶಾಳನ್ನು ಪ್ರೀತಿಸಿ ಮದುವೆಯಾದ ರಾಜೇಶ್ ಮುಂಚೆ ಕಾರುಗಳ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಎದುರಲ್ಲೇ ಇತ್ತು ಅವನ ಷೆಡ್. ಒಂದು ದಿನ ಅವನಿಗೆ ಆಶಾಳ ಜೊತೆ ಪರಿಚಯವಾಯಿತು. ಅದು ಪ್ರೀತಿಯಾಯ್ತು. ನಂತರ ರಾಜೇಶ್ ಕಾರುಗಳ ಮಧ್ಯವರ್ತಿಕೆಯಲ್ಲಿ ತುಂಬಾ ಹಣ ಗಳಿಸಿದ. ನಂತರ ಆಶಾಳ ಕೆಲಸ ಬಿಡಿಸಿ ಅವಳನ್ನು ಮದುವೆಯಾದ. ಊರಿನ ಹೊರಗಡೆಯ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಹಿಡಿದು ಸಂಸಾರ ಹೂಡಿದ್ದರು. ಆಶಾ ಅದೃಷ್ಟವಂತಳೆಂದು ನಾನು, ನನ್ನ ಹೆಂಡತಿ ಸಂತೋಷಪಟ್ಟೆವು. ಆದರೇ ಮದುವೆಯಾದ ಒಂದು ವರ್ಷದಲ್ಲಿ ಹೀಗೆ ಅವಳಿಗೆ ನೂರು ವರ್ಷ ತುಂಬುತ್ತದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ.ಅವತ್ತು ನಾನು ಘಟನಾಸ್ಥಳಕ್ಕೆ ಸೇರುವ ಮೊದಲೇ ನನಗಿಂತಾ ಮುಂಚೆ ಬಂದ ಪೋಲೀಸ್ ತಂಡ ತಮ್ಮ ತನಿಖೆ ಶುರುಮಾಡಿತ್ತು. ಎಸ್ಸೈ,ಫೋಟೋಗ್ರಾಫರ್, ಬೆರಳಚ್ಚು ತಜ್ಞ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಬೆಡ್ ರೂಮಿನಲ್ಲಿ ಆಶಾಳ ಹೆಣ ಇತ್ತು. ಅರಳಿದ ಅವಳ ಕಣ್ಣಲ್ಲಿ ಭಯ ಮತ್ತು ಆಶ್ಚರ್ಯಗಳ ಮಿಶ್ರಿತ ಭಾವಗಳಿದ್ದವು. ಆಕೆಯ ಕೊರಳ ಮೇಲೆ ಕಾಣಿಸಿದ ಕಲೆಗಳಿಂದ ಅವಳ ಕತ್ತಿಗೆ ಹಗ್ಗ ಬಿಗಿದು ಕೊಂದಿರುವರೆಂದು ತಿಳಿಯುತ್ತಿತ್ತು. ಆಕೆಯ ಮೈಮೇಲಿನ ಒಡವೆಗಳೂ ಸೇರಿ ಕಬ್ಬಿಣದ ಪೆಟ್ಟಿಗೆಯೊಳಗಿನ ಹಣವೆಲ್ಲಾ ಚೋರೀಯಾಗಿತ್ತು.ಹಿತ್ತಲಬಾಗಿಲ ಚಿಲಕ ಬಿಚ್ಚಿತ್ತು. ಅಲ್ಲಿ ಅವರು ಸಾಕಿದ ನಾಯಿ ಸತ್ತು ಬಿದ್ದಿತ್ತು. ಅದರ ಪಕ್ಕದಲ್ಲಿ ಬಿಸ್ಕತ್ತುಗಳ ತುಂಡುಗಳು ಬಿದ್ದಿದ್ದವು. ಟೆಲಿಫೋನ್ ವೈರುಗಳೆಲ್ಲಾ ಕತ್ತರಿಸಲ್ಪಟ್ಟಿದ್ದವು.ಕೊಲೆನಡೆದ ವಿಧಾನ ನೋಡಿದರೇ ಖಂಡಿತವಾಗಿ ಇದು ಆ ಕಳ್ಳರ ತಂಡದ ಕೆಲಸಾನೇ ಅನಿಸುತ್ತಿತ್ತು.ಮೃತದೇಹವನ್ನು ಮೊದಲು ನೋಡಿದ ಮನೆ ಕೆಲಸದವಳು ಕಾಂತಂಳನ್ನು ವಿಚಾರಿಸಿದಾಗ ಕಣ್ಣೊರೆಸಿಕೊಳ್ಳುತ್ತಾ ತಾನು ನೋಡಿದ್ದೆಲ್ಲಾ ಹೇಳಿದ್ದಳು.“ ಎಂದಿನಹಾಗೇ ನಾನು ಆರುಗಂಟೆಗೆ ಮನೆಕೆಲಸಕ್ಕೆ ಬಂದೆ. ಹಿತ್ತಲಲ್ಲಿ ಸತ್ತು ಬಿದ್ದಿದ್ದ ನಾಯಿ ನೋಡಿ ಭಯವಾಯಿತು. ರಂಗನಾಥ್ ಅಯ್ಯರವರನ್ನು ಕರೆತಂದೆ. ಬಾಗಿಲು ತೆಗೆದಿದ್ದರಿಂದ ಇಬ್ಬರೂ ಒಳಗೆ ಹೋಗಿ ನೋಡಿದೆವು. ಬೆಡ್ ರೂಮಿನಲ್ಲಿ ಅಮ್ಮ ಹೀಗೆ ಕಂಡರು. ನಾನಂತೂ ಭಯದಿಂದ ನಡುಗಿಹೋದೆ. ಇವರು ತಕ್ಷಣ ಪೋಲಿಸರಿಗೆ ಫೋನ್ ಮಾಡಿದರು “ ಎಂದಳು.ರಂಗನಾಥ್ ರವರು ಪಕ್ಕದ ಮನೆಯವರು. ಅವರು ಕಾಂತಂ ಮಾತುಗಳಿಗೆ ಪುಷ್ಟಿ ಕೊಡುತ್ತಾ “ ನೆನ್ನೆ ರಾತ್ರಿ ಹತ್ತು ಗಂಟೆಗೆ ನಾನು ಮನೆಗೆ ಬರುವಾಗ ರಾಜೇಶ್ ಕಾರಿನಲ್ಲಿ ಹೋಗ್ತಾ ಎದುರಾದರು. ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಯಾವುದೋ ಹಳೇ ಕಾರುಗಳ ಲಿಲಾಮಿನಲ್ಲಿ ಭಾಗವಹಿಸಬೇಕು ಅಂತ ಹೇಳಿದರು. ಅವರು ಹೀಗೆ ತುಂಬಾಸರ್ತಿ ಹೈದರಾಬಾದ್ ಗೆ ಹೋಗ್ತಿರ್ತಾರೆ. ಅಲ್ಲ್ಲಿ ಪ್ಯಾರಡೈಜ್ ಲಾಡ್ಜಿನಲ್ಲಿ ಇಳ್ಕೊತಾರೆ. ಆ ಲಾಡ್ಜ್ ನ ಫೋನ್ ನಂಬರ್ ನನ್ನ ಹತ್ತಿರವಿದೆ. ಇಷ್ಟಕ್ಕೂ ಮುಂಚೆ ಎಸ್ಸೈನವರು ಅಲ್ಲಿಗೆ ಫೋನ್ ಮಾಡಿ ರಾಜೇಶ್ ಜೊತೆಗೆ ಮಾತಾಡಿದಾರೆ. ಅವರು ತಕ್ಷಣ ಹೊರಟಿದ್ದಾರೆ ಇಲ್ಲಿಗೆ ಬರಲು “ ಅಂದರು. “ ನೆನ್ನೆ ಅರ್ಧರಾತ್ರಿಯ ನಂತರ ನಿಮಗೆ ಈ ಮನೆಯಿಂದ ಏನಾದ್ರೂ ಶಬ್ದಗಳು, ಕೂಗಾಟ ಕೇಳಿಬಂತಾ ?” ಅಂತ ಕೇಳಿದೆ.“ ಇಲ್ಲ ಸಾರ್ ! ಆದರೇ ನಮ್ಮಿಬ್ಬರ ಮನೆಗಳಿಗೆ ತುಂಬಾ ದೂರವಿದೆ. ಶಬ್ದಗಳೆಲ್ಲ ಕೇಳಿಬರೋ ಅವಕಾಶ ಕಮ್ಮಿ “ ಎಂದರು ರಂಗನಾಥ್.ಪಂಚನಾಮೆ ಮುಗಿದನಂತರ ಹೆಣವನ್ನ ಮಾರ್ಚುರಿಗೆ ಕಳಿಸಿದೆ. ನಂತರ ನಂಗೊಂದು ಆಲೋಚನೆ ಬಂತು. ನೆನ್ನೆ ರಾತ್ರಿ ಆಶಾ ಒಬ್ಬಂಟಿಗಳಾಗಿದ್ದಾಳೆಂದು ಕಳ್ಳರಿಗೆ ಹೇಗೆ ಗೊತ್ತಾಯಿತು ? ಸಾಧಾರಣವಾಗಿ ಕಳ್ಳರಿಗೆ ಇಂಥ ಮಾಹಿತಿ ಸಿಗುವುದು ಮನೆ ಕೆಲಸದವರಿಂದಲೇ. ಅದಕ್ಕೆ ನಾನು ಕಾಂತಂಳ ಮೇಲೆ ನಿಗಾ ಇರಿಸಲು ಹೇಳಿದೆ.ಸಂಜೆ ಹೈದರಾಬಾದ್ ನಿಂದ ತಿರುಗಿಬಂದ ರಾಜೇಶ್ ಹೆಂಡತಿಯ ಹೆಣ ನೋಡಿ ಬಿಕ್ಕಿ ಬಿಕ್ಕಿ ಅತ್ತ. “ ನನ್ನ ಹೆಂಡತಿಗೆ ಕಳ್ಳರನ್ನು ಎದುರಿಸೋಷ್ಟು ಧೈರ್ಯವಿರಲಿಲ್ಲ. ಆದರೂ ಕಳ್ಳ್ರು ಅವಳನ್ನೇಕೆ ಕೊಂದರೋ ಅರ್ಥವಾಗುವುದಿಲ್ಲ.” ಅಂತ ಗೋಳಿಟ್ಟ.“ಆಶಾ ಅವರ ಮುಖಗಳನ್ನು ನೋಡಿರ್ತಾಳೆ. ಸಾಕ್ಷ್ಯವಿರಬಾರದೆಂದು ಅವಳನ್ನ ಮುಗಿಸಿದಾರೆ “ ಅಂತ ನಾನಂದೆ. ನಂತರ

ತಕ್ಕ ಪಾಠ Read Post »

ಕಾವ್ಯಯಾನ

ಹೈಕುಗಳು

ಹೈಕುಗಳು ಕೆ.ಸುನಂದಾ. ಬಾನಲ್ಲಿ ನಕ್ಕಶಶಿ ; ಕಂಡು ತಂಪಾಯ್ತುನೊಂದ ಮನಕ್ಕೆ* ತಳಮಳವತಾಳೆನಾ ; ಕೇಳು ಸಖಿಯಾರಿ ಸುಂದರಿ* ಅಡವಿಯಲ್ಲಿಬಿರಿದ ಮಲ್ಲೆ ಕಾಯ್ವೆನೀ ಯಾರಿಗಿಲ್ಲಿ* ವೃಕ್ಷಗಳಲ್ಲಿಸಾಕ್ಷಾತ್ ದೇವನಿಹನುಎಲ್ಲರ ಭಾಗ್ಯ * ಕಾಣೋ ಕಣ್ಣಿಗೆಸಂಭ್ರಮ ; ಈ ನಿಸರ್ಗಬೇಕು ಜೀವಿಗೆ* ಸೃಷ್ಟಿಯೇ ದೈವತಿಳಿದಂತೆ ಇರುವನಮ್ಮಂತೆ ಅವ* ಪ್ರೀತಿಯ ಗೂಡುಅನುಭವಿಸಿ ಹಾಡುಎನಿಲ್ಲ ನೋಡು ************************************

ಹೈಕುಗಳು Read Post »

ಇತರೆ, ವರ್ತಮಾನ

ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು

ಕನಕ ಜಯಂತಿಯ ವಿಶೇಷ ಲೇಖನ ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು ಡಾ.ಸುಜಾತಾ ಸಿ. ವಿಜಯಪುರ ಕನ್ನಡ ನಾಡು ಕಂಡ ಶ್ರೇಷ್ಠ ಭಕ್ತ ಕವಿ ದಾರ್ಶನಿಕ ಸಮಾಜ ಸುಧಾರಕ ಮಹಾಮಾನವತಾವಾದಿ ಕನಕದಾಸರು. ವರ್ಗ ವರ್ಣಗಳ ಸಂಘರ್ಷದಲ್ಲಿ ನಲುಗುತ್ತಿದ್ದ ಸಮಾಜವನ್ನು ತೆರೆದ ಹೃದಯ ಮತ್ತು ಮನಸ್ಸುಗಳಿಂದ ಕಂಡು ವರ್ಗ ವರ್ಣರಹಿತ ತಳಹದಿಯ ಮೇಲೆ ನಿರ್ಮಿಸಬೇಕೆಂಬ ಅವರ ಆಶಯವಾಗಿತ್ತು. ಇಹಲೋಕದ ಜಂಜಾಟಗಳಿಂದ ತತ್ತರಿಸಿದ ಮನುಕುಲಕ್ಕೆ, ವಿಶ್ವಮಾನವ ಸಮತಾವಾದದ ಸಿದ್ಧಾಂತವನ್ನು ಕೀರ್ತನೆಗಳ ಮೂಲಕ ಬೋಧಿಸಿದರು. ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಚಾತುರ್ವರ್ಣ ವ್ಯವಸ್ಥೆಯೇ ತಳಹದಿಯಾಗಿತ್ತು. ಕನಕದಾಸರು ಕೇವಲ ತಮ್ಮ ಸಾಹಿತ್ಯದಲ್ಲಿ ಜಾತಿಯನ್ನು ಕರಾಳತೆಯನ್ನು ಹೇಳಲಿಲ್ಲ ಬದಲಾಗಿ ಸ್ವತಃ ತಾವೂ ಅನುಭವಿಸಿದವರು.ವ್ಯಾಸರಾಯರು ತಮ್ಮ ಗರಡಿಯಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಾರೆ. ಹಾಗೇ  ಉಡುಪಿಯ ಶ್ರೀ ಕೃಷ್ಣನ ದೇವಾಲಯದಲ್ಲಿ ಕೀಳು ಕುಲದವರು ಎಂದು ಪ್ರವೇಶವನ್ನು ನಿಷೇಧಿಸಿದಾಗ ಅವರಿಗೆ ಭಕ್ತಿಮಾರ್ಗದಿಂದ ಕೃಷ್ಣನ ದರ್ಶನ ಕೂಡಾ ಆಗಬಹುದು ಎಂದು ತೋರಿಸಿಕೊಟ್ಟರು. ಕನಕನ ಕಿಂಡಿ ಕೇವಲ ಭಕ್ತಿಯ ಪರಾಕಾಷ್ಠೆಯ ಆಗದೇ ನಮ್ಮೆಲ್ಲರ ಎದುರಿಗಿದ್ದ ಜಾತಿಯ ಗೊಡೆಯನ್ನು ಒಡೆಯುವ ಕೆಲಸ ಮಾಡುತ್ತದೆ.  ಋಗ್ವೇದದ ಪುರುಷಸೂಕ್ತಕ್ಕೆ ಸಂಬಂಧಿಸಿದ ವರ್ಣಸಿದ್ದಾಂತಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿತ್ತು. ಇವರ ಮೂಲ ಗುಣಕರ್ಮ ಭಾಗಶಃ ಆದರೂ ಕಾಲಾಂತರದಲ್ಲಿ ಮೇಲು-ಕೀಳುಗಳೆಂಬ ವೃತ್ತಿಪರ ಸಮಾಜವನ್ನು ನಿರ್ಮಾಣ ಮಾಡಲಿಕ್ಕೆ ಕಾರಣವಾದವು. ಇದನ್ನು ಕಂಡ ಕನಕದಾಸರು ಕುಲದ ವಿಚಾರವಾಗಿ ಹೀಗೆ ತಿಳಿಸಿದ್ದಾರೆ.               ಕುಲ ಕುಲ ಕುಲವೆಂದು ಹೊಡೆದಾಡದಿರಿ               ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ. ಎಂಬ ಮೇಲಿನ ವಿಚಾರಗಳು ನವಸಮಾಜ ನಿರ್ಮಾಣಕ್ಕೆ ಸಮಾನತೆಯನ್ನು ಸಾರಲು, ವರ್ಗ-ವರ್ಣ ವ್ಯವಸ್ಥೆಗೆ ಎದಿರೇಟು ನೀಡಿದ್ದು, ವಿಶ್ವಸಂದೇಶವನ್ನು ಸಾರಿವೆ ಎಂಬುದನ್ನು ಸರ್ವರೂ ಒಪ್ಪಿಕೊಳ್ಳಬೇಕಾದ ವಿಚಾರವಾಗಿದೆ.  ಅಸಮಾನತೆಯನ ವಕ್ತಾರರನ್ನು ಪ್ರಶ್ನಿಸುವಾಗ ಅವರು ಬಳಸುವ ನಿದರ್ಶನಗಳೆಲ್ಲವೂ ದೇವರನ್ನು ಕೇಂದ್ರವಾಗಿಸಿಕೊಂಡಿದ್ದರಿಂದ ಒದಗಿದ ತಿಳುವಳಿಕೆ ಕೂಡಾ ಹೌದು ಎನ್ನುವುದನ್ನು ಮರೆಯುವಂತಿಲ್ಲ. ಅವರ ಮೌಖಿಕ ಸಾಹಿತ್ಯವು ಕೀರ್ತನೆ ಭಜನೆಗಳ ರೂಪಗಳಲ್ಲಿ ಸಮಾಜದ ಏರು ಪೇರುಗಳನ್ನು ಕರಿಯ-ಬಿಳಿಯ, ಸತ್ಯ-ಅಸತ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿವೆ. ಮತ್ತು ಸದಾಚಾರ ಮಾರ್ಗವನ್ನು ತೋರಿಸಿವೆ. ಸಾಮಾಜಿಕ ಆಂದೋಲನಗಳಲ್ಲಿ ಎಲ್ಲ ದಾಸರೂ ಭಾಗಿಗಳಾಗಿ ಸರ್ವರೂ ಒಪ್ಪಿಕೊಳ್ಳುವ ಜೀವನ ಮೌಲ್ಯಗಳನ್ನು ಜನರ ಹೃದಯಗಳಿಗೆ ಕೀರ್ತನೆಗಳ ಮೂಲಕ ತಲುಪುವಂತೆ ಮಾಡಿರುತ್ತಾರೆ.               “ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ               ಅಟ್ಟು ಉಣ್ಣದ ವಸ್ತುಗಳಿಲ್ಲವೊ               ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು               ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ” ನಮ್ಮ ಭೌತಿಕ ಕಾಯದ ಪಾಡುಗಳನ್ನು ಈ ಮಾತುಗಳು ವಿವರಿಸುತ್ತವೆ. ಭೂಮಿಯಲ್ಲಿಯ ಎಲ್ಲ ಜೀವಿಗಳ ಹುಟ್ಟು  ಸಾವಿನಲ್ಲಿ ವ್ಯತ್ಯಾಸಗಳೇನೂ ಇರವು; ಆದರೆ ಈ ವಿದ್ಯಮಾನದ ನೆಲೆ ಬೆಲೆಗಳು ನಮಗೆ ತಿಳಿದಿದೆಯೇ? ಸೃಷ್ಟಿಯ ಹಿಂದಿರುವ ಗುಟ್ಟುಗಳ ಅರಿವು ನಮಗಿಲ್ಲ; ಜನನ ಮರಣ ಅದರ ನಡುವೆ, ಊಟ ಕೂಟಗಳ ಆಟದ ಪ್ರೇಕ್ಷಕರಷ್ಟೆ ನಾವು.  ಹೀಗಿರುವಾಗ ಎಲ್ಲವನ್ನು ತಿಳಿದಿರುವ ಎಲ್ಲವನ್ನು ನಿಯಂತ್ರಿಸುವ ‘ಸರ್ವಜ್ಞ’ನನ್ನು ನಾವು ಮನನ ಮಾಡಿದರೆ ಆಗ ಸಹಜವಾಗಿಯೇ ನಮ್ಮ ಶ್ರೇಷ್ಠ ಕನಿಷ್ಟಗಳ ಸೀಮಿತ ಲೆಕ್ಕಾಚಾರ ಕೊನೆಯಾಗದಿದ್ದೀತೆ? ಕುಲವನ್ನು ನಿರಾಕರಿಸಲು ಕನಕದಾಸರಿಗೆ ಒದಗಿದ ಮೊದಲ ವಿಚಾರ ನಮ್ಮ ಗೋಚರ ಪ್ರಪಂಚಕ್ಕೆ ಸೇರಿದ ವಿವರಗಳು.                 ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ                 ಜಲದ ಕುಲವನೇನಾದಾರೂ ಬಲ್ಲಿರಾ                 ಜಲದ ದೊಬ್ಬೂಳಿಯಂತೆ ಸ್ಥಿರವಲ್ಲ ಈ ದೇಹ                 ನೆಲೆಯನರಿತು ನೀ ಹರಿದು ನೆನೆ ಮನುಜ ಸೃಷ್ಟಿ ಕ್ರಮದಲ್ಲಿ ಯಾವುದು ಹುಟ್ಟಿತು ಎಂಬ  ಎಣಿಕೆಯ ವಿನಿಕೆ ನಡೆಯುತ್ತಲೇ ಬಂದಿದೆ. ಈ ಎಣಿಕೆಯಲ್ಲಿ ಪರಿಣಾಮವಾದವೋ ವಿಕಾಸವಾದವೊ ಯಾವ ವಾದವೇ ಆಗಿರಲಿ, ಅದು ಯಾವುದೋ ಒಂದು ಮೂಲವಸ್ತುವಿಗೆ ಬಂದು ನಿಲ್ಲಲೇಬೇಕು. ಸೃಷ್ಟಿಯ ಮೂಲ ನೀರು ಎನ್ನುವುದು ಅಂಥದೊಂದು ಎಣಿಕೆ. ಇದನ್ನು ಒಪ್ಪೋಣ: ಹೀಗೆ ಒಪ್ಪಿದರೂ ಪ್ರಶ್ನಾಪರಂಪರೆ ಅಲ್ಲಿಗೆ ನಿಲ್ಲದು; ಆ ನೀರಿನ ಮೂಲ ಯಾವುದು? ಇದಕ್ಕೆ ಉತ್ತರವನ್ನು ಹೇಳಬಲ್ಲವರು ಯಾರು? ಕುಲದ ಘೋಷಣೆ, ತಾನೆ? ನಮ್ಮೆಲ್ಲರಿಗೂ ಮೂಲವಾಗಿರುವ ನೀರಿನ ಮೂಲವೇ ನಮಗೆ ಗೊತ್ತಿಲ್ಲ; ಹೀಗಾಗಿ ನಮ್ಮ ಕುಲಗಳ ಘೋಷಣೆಯಲ್ಲಿ ಎಷ್ಟು ಖಚಿತತೆ ಇದ್ದೀತು? ಕನಕದಾಸರು ಜಲವನ್ನು ‘ತಾಯಿ’ ಎಂದು ಕರೆದಿರುವುದು ಇಲ್ಲಿ ಧ್ವನಿ ಪೂರ್ಣವಾಗಿದೆ. ನಮ್ಮ ತಿಳಿಗೇಡಿತನದ ವಿಕೃತಬುದ್ಧಿಯು ಎಲ್ಲ ಕೊಳೆಯನ್ನು ತೊಳೆದು ಹಾಕಲು ನೀರೆಂಬ ತಾಯಿಯನ್ನು ಅವರು ಬಳಸಿಕೊಳ್ಳುತ್ತಿರುವುದು ಮನನೀಯವಾಗಿದೆ. ನೀರಿನ ಮೂಲವನ್ನು ಕಂಡು ಹಿಡಿಯಲಾಗಿದ್ದ ನಮ್ಮ ಮಂದಮತಿಗೆ ಆ ನೀರಿನ ಶರೀರವೇ ಇಂಥ ಹುಡುಕಾಟದ ಸಾಪೇಕ್ಷತನವನ್ನೂ ನಶ್ವರತೆಯನ್ನೂ ಪ್ರಕಟಿಸುತ್ತಿರುವ ದೃಕ್–ದೃಶ್ಯ ವಿವೇಕವಾಗಿದೆ ಎನ್ನುವುದನ್ನು ಅವರು ತಿಳಿಸಿಕೊಡುತ್ತಿದ್ದಾರೆ.                 “ಏನೆಂತೆಂದೊಲಿವೆ ನಿನ್ನವರಂತೆ ಕೇಡಬುದ್ದಿ ಎನ್ನೊಳಿಲ್ಲ                 ಗುಣಹೀನರಲ್ಲದೆ ದೀನರ ಪಾಲಿಪ ಬುದ್ದಿ ನಿನ್ನೊಳಿಲ್ಲ                 ತರಳ ಪ್ರಹ್ಲಾದನಂದದಿ ನಿನ್ನ ರೂಪವ ಕೆಡಿಸಲಿಲ್ಲ                 ನರನಂತೆ ಬಂಡಿಯ ಬೋಧನ ಮಾಡಿ ನಾ ಹೊಡೆಸಲಿಲ್ಲ                 ಆತ್ಮನಿವೇದನಾಭಕ್ತಿ” ಆತ್ಮನಿವೇದನವು ಎಲ್ಲದಕ್ಕಿಂತ ಹಿರಿದಾಗಿರುವುದು ಎಂದು ಕೀರ್ತನಾಚಾರ್ಯ ಬೇಲೂರು ಕೇಶವದಾಸರು ಹೇಳಿದ್ದಾರೆ.                  “ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ                   ಆಯುಷದ ರಾಸಿಯನು ಅಳೆಯಿರಯ್ಯಾ||                   ಇದು ಕಾರಣ ಕಾಗಿನೆಲೆಯಾದಿಕೇಶವನ||                   ಮುದದಿಂದ ನೆನೆನೆದು ಸುಖಿಯಾಗಿರಯ್ಯಾ ನಮ್ಮ ಜೀವನದ ಪೂರ್ತಿ ಕೃಷಿ ಮಾಡಿ ಒಟ್ಟು ಮಾಡಿದ ಧಾನ್ಯದ ರಾಶಿಯೆಂದರೆ ಅದು ನಮ್ಮ ಜೀವನವಲ್ಲದೆ ಬೇರಲ್ಲ. ಇದನ್ನು ಅಳೆಯುವ ಕೊಳಗ ಎಂದರೆ ಉದಯ ಅಸ್ತಮಾನ: ಎಂದರೆ ನಮ್ಮ ನಿತ್ಯದ ಬದುಕು. ನಾವು ಅಳೆಯ ಬೇಕಾದದ್ದು ನಾರಾಯಣ ಎಂಬ ಧಾನ್ಯವನ್ನು ನಮ್ಮ ಹೃದಯದಲ್ಲಿ ಎಷ್ಟು ಬೆಳೆದಿದ್ದೇವೆ ಎನ್ನುವದನ್ನು ‘ನೆನೆನೆನೆದು’ ಎನ್ನುವಾಗ ಅಳೆಯುವ ಪ್ರಕ್ರಿಯೆಯ ನಿರಂತರತೆಯನ್ನೆ ಅಭಿನಯಿಸಿದಂತಾಗುತ್ತದೆ. ಬೆಳೆ ಹೆಚ್ಚು ಬೆಳೆದಷ್ಟು ಕೃಷಿಕನಿಗೆ ಸಂತೋಷ; ಸುಖ; ಅಂತೆಯೇ ಆದಿಕೇಶವನನ್ನು ನೆನೆದಷ್ಟು ಖುಷಿಗೆ ಸಂತೋಷ; ಸುಖ ಅಂತರAಗದ ಕೃಷಿಕಾರನೇ ದಿಟನಾದ ಖುಷಿ ಎನ್ನುತ್ತಿದ್ದಾರೆ. ಮೇಲುನೋಟಕ್ಕೆ ಜೀವನದ ತತ್ವ ಸಾರವನ್ನು ಹೇಳುವ ಅವರ ಜನಪ್ರಿಯ ಕೀರ್ತನೆಯಾದ            ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ            ತುತ್ತು ಹಿಟ್ಟಿಗಾಗಿ  ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ            ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕೀರ್ತನೆಯೂ ಸಹ ಆಲಯವನ್ನು ಬಿಡಿಸಿಕೊಳ್ಳುವುದರ ಕಡೆಗಿನ ದಾಸರ ನಿರಾಕರಣೆಯ ಕಥನವನ್ನು ಹೇಳುತ್ತದೆ.                         “ಜಪವ ಮಾಡಿದರೇನು, ತಪವ ಮಾಡಿದರೇನು                         ಕಪಟ ಗುಣ ವಿಪರೀತ ಕಲುಷವಿದ್ದವರು” ಎಂದು ಯಾವ ನೇಮ,ಜಪ ತಪ ಮಾಡಿದರು ಫಲವಿಲ್ಲವೆಂದು ಹೇಳುತ್ತಲೇ “ನೇಮವಿಲ್ಲದ ಹೋಮವೇತಕಯ್ಯಾ” ಎಂದು ಢಾಂಬಿಕ ಭಕ್ತಿಯನ್ನು ಖಂಡಿಸುತ್ತಾರೆ.             ಮೇಲ್ವರ್ಗದವರು ಜಾತಿಯನ್ನು ತಮ್ಮ ಹಿರಿಮೆಗೆ ಅಂತಸ್ತಿಗೆ ಅಸ್ತ್ರವಾಗಿ ಬಳಸಿಕೊಂಡರೆ, ಕನಕದಾಸರು ಜಾತಿಯ ಬಳಕೆ ಅಪಾಯವೆಂದು; ಮನುಷ್ಯಕುಲದ ಅನಿಷ್ಟವೆಂದು ವಿರೋಧಿಸಿದರು. ಆದರೆ ಜಾತಿಯ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ಸ್ಪರ್ಶಿಸುವುದನ್ನು ಕೈಬಿಡಲಿಲ್ಲ. ಅವರು ಜಾತಿಯನ್ನು ಭೇದಿಸಿದ ರೀತಿ ಆಶ್ಚರ್ಯವೆನಿಸುತ್ತದೆ. ಕನಕದಾಸರನ್ನು ಸುತ್ತುವರಿದ ಕತೆಗಳು, ಐತಿಹ್ಯಗಳೂ ಈ ಮೂಲವನ್ನು ನೆನಪಿಸುತ್ತವೆ. ಹೀಗೆ ಹರಿದಾಸ ಸಾಹಿತ್ಯದಲ್ಲಿ ಮೊಟ್ಟ ಮೊದಲು ಹರಿದಾಸ ಕೀರ್ತನೆ ಎಂದು ಪ್ರಖ್ಯಾತಿಯಾದವರು ‘ಎಂತು ಮರುಳಾದೆ ನಾನೆಂತು ಮರುಳಾದೆ’, ಮತ್ತು ‘ಹರಿಯೇ ಇದು ಸರಿಯೇ!’ “ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ” ಎಂದು ತಮ್ಮ ಕೀರ್ತನೆಗಳಲ್ಲಿ ಹರಿಗೆನೇ ಪ್ರಶ್ನಿಸುತ್ತಾನೆ. ಶ್ರೀಪಾದರಾಜನದು ನರಹರಿತೀರ್ಥರ ನಂತರ ದಾಸಸಾಹಿತ್ಯವನ್ನು ಮುಂದುವರಿಸಿದ ಕೀರ್ತಿ ಇವರದಾಗಿದೆ. ‘ರಂಗವಿಠಲ’ ಎಂಬ ಅಂಕಿತನಾಮ ಅನೇಕ ದೇವರ ನಾಮಗಳನ್ನು ರಚಿಸಿದ್ದಾರೆ. ಆಧ್ಯಾತ್ಮ ಅನುರಾಗ ಮಹಿಮಾನ್ವಿತನಾಗಿ ಇತನು ಕಂಡು ಬರುತ್ತಾನೆ. ‘ಭಕ್ತಿ ಬೇಕು, ವಿರಕ್ತಿ ಬೇಕು, ಶಕ್ತಿ ಬೇಕು, ಮುಂದೆ ಮುಕ್ತಿ ಬಯಸುವಗೆ’ ಎಂಬುದು ಈತನ ಆಧ್ಯಾತ್ಮಕ ನಿಲುವಾಗಿದೆ. ವ್ಯಾಸರಾಯರು,ಶ್ರೀಪಾದರಾಜನ ಶಿಷ್ಯನಾದ ವ್ಯಾಸರಾಯನು ನ್ಯಾಯಾಂಮೃತ ತರ್ಕತಾಂಡವ, ತಾತ್ರ‍್ಯಚಂದ್ರಿಕಾ ಮೂರು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾನೆ. ಇವರ ಕೀರ್ತನೆಗಳ ಅಂಕಿತನಾಮ ಕೃಷ್ಣ, ಶ್ರೀಕೃಷ್ಣ, ಸಿರಿಕೃಷ್ಣ ವ್ಯಾಸರಾಯನಿಂದ ವ್ಯಾಸಪಥ, ದಾಸಪಥಗಳೆರಡು ಶ್ರೀಮಂತವಾದವು. ವಿಜಯದಾಸರು ಪ್ರಸನ್ನ ವೆಂಕಟದಾಸರ ಸಮಕಾಲೀನರು. ‘ಹಯವದನ ವಿಠಲ’ ಎಂಬ ಅಂಕಿತದಿಂದ ಅನೇಕ ಹಾಡುಗಳನ್ನು ರಚಿಸಿದ್ದಾರೆ. ಗೋಪಾಲದಾಸರು ‘ಗೋಪಾಲ ವಿಠಲ’ ಇವರ ಅಂಕಿತನಾಮ. ಜಗನ್ನಾಥದಾಸರು ‘ಜಗನ್ನಾಥ ವಿಠಲ’ ಎನ್ನುವ ಅಂಕಿತನಾಮವನ್ನು ಹೊಂದಿದ್ದಾರೆ. ಜಗನ್ನಾಥದಾಸರು ೨೦೦ ಕೀರ್ತನೆಗಳು ಲಭ್ಯವಾಗಿವೆ. ಕೀರ್ತನೆ, ಸುಳಾದಿಗಳನ್ನು ಮಾತ್ರವೇ ಅಲ್ಲದೆ ತ್ರಿಪದಿಯ ಛಂದಸ್ಸಿನಲ್ಲಿ ಭಕ್ತಿ ಭರಿತವಾದ ‘ತತ್ವಸುವಾಲಿಗಳನ್ನು’ ವಿಷ್ಣುಸ್ತುತಿರೂಪವಾದ ೨೭ ನುಡಿಗಳನ್ನು ಒಳಗೊಂಡ ತಂತ್ರಸಾರವನ್ನು ರಚಿಸಿದ್ದಾರೆ. ಹೀಗೆ ಒಟ್ಟಾರೆಯಾಗಿ ಪುರಂದರದಾಸರು ಹಾಗೂ ಕನಕದಾಸರ ವಿಚಾರಗಳು ದಾರ್ಶನಿಕ ಸಮಾಜವನ್ನು ಕಟ್ಟುವಲ್ಲಿ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ನೈತಿಕ ಪ್ರಜ್ಞೆ, ಗುರುವಿನೊಂದಿಗೆ ಗೌರವದ ಮನೋಭಾವನೆ ಅಸ್ಪೃಶ್ಯತಾ ನಿವಾರಣೆ, ಮೌಢ್ಯತನದ ಖಂಡನೆ ಇದೆ. ಎಲ್ಲ ದಾಸರು ಭಕ್ತಿಯ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದ ದಾಸರಾಗಿದ್ದಾರೆ. **********************************************

ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಸಾಮಾನ್ಯ ಸಂಗತಿಗಳಲ್ಲೇ ಅಸಾಮಾನ್ಯ ಬೆರಗನ್ನು ಹಿಡಿದಿಡುವ ಉಮಾ ಮುಕುಂದರ ಕವಿತೆಗಳು . ಸಂಗಾತಿಗಾಗಿ ಈ ಅಂಕಣವನ್ನು ಆರಂಭಿಸಿದಾಗ ಫೇಸ್ಬುಕ್ಕಿನ ಕವಿತೆಗಳ ವಿಶ್ಲೇಷಣೆ ಅಷ್ಟೇನೂ ಕಷ್ಟವಾಗದು ಮತ್ತು ನನ್ನ ಇಷ್ಟೂ ದಿನದ ಕಾವ್ಯದ ಓದು ಅದನ್ನು ಪೊರೆಯುತ್ತದೆಂದೇ ಅಂದುಕೊಂಡಿದ್ದೆ. ಆದರೆ ಫೇಸ್ಬುಕ್ಕಿನಲ್ಲಷ್ಟೇ ಮೊದಲು ಪ್ರಕಟಿಸಿ ಆ ಮಾಧ್ಯಮದ ಮೂಲಕವೇ ಬೇರೆಡೆಯೂ ಖ್ಯಾತರಾದ ಅನೇಕ ಹೆಸರುಗಳು ಆನಂದ ಮತ್ತು ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೇ ಈವರೆವಿಗೂ ಪತ್ರಿಕೆಗಳಲ್ಲಿ ಪ್ರಕಟಿಸದೆಯೂ ತಮ್ಮ ಆಳದನುಭವಗಳಿಗೆ ಕವಿತೆಯ ರೂಪ ಕೊಡುವುದಕ್ಕಷ್ಟೇ ಸೀಮಿತವಾಗದೇ ಇಷ್ಟೂ ದಿನದ ಕಾವ್ಯ ಪರಂಪರೆಯ ಮೂಲಕ ಅರಿತ ಕಾವ್ಯದ ನಡಿಗೆಗೆ ಹೊಸದೇ ದಿಕ್ಕು ತೋರುತ್ತಿರುವ ಮತ್ತು ಫೇಸ್ಬುಕ್ ಕವಿಗಳನ್ನು ಲಘುವಾಗಿ ಕಾಣದೆ ಅವರನ್ನೂ ಮುಖ್ಯ ವಾಹಿನಿಯ ಜೊತೆಗೇ ಪರಿ ಗಣಿಸಲೇಬೇಕೆಂಬ ಎಚ್ಚರವನ್ನೂ ಆ ಅಂಥ ಹೆಸರುಗಳು ಎಚ್ಚರಿಸಿವೆ. ಆ ಅಂಥ ಹೆಸರುಗಳ ಪೈಕಿ ಶ್ರೀಮತಿ ಉಮಾ ಮುಕುಂದರ ಹೆಸರು ಅತಿ ಮುಖ್ಯವಾದುದು. ಓದಿನ ಮೂಲಕ ಅರಿತು ಕವಿತೆಗಳೆಂದು ಯಾವುದನ್ನು ನಾವು ಸಾಮಾನ್ಯವಾಗಿ ಅಂದುಕೊಂಡಿದ್ದೇವೋ ಹಾಗಿರದೆ  ಮೇಲ್ನೋಟಕ್ಕೆ ಸಾಮಾನ್ಯ ಸಾಲುಗಳಂತೆ ಕಂಡರೂ ಆಳದಾಳದಲ್ಲಿ ಬೆಡಗು ಬೆರಗು ಮತ್ತು ಹೊಳಹನ್ನು ಉಮಾ ಮುಕುಂದರು ಈತನಕ ಪ್ರಕಟಿಸಿರುವ ಫೇಸ್ಬುಕ್ ಕವಿತೆಗಳು ಇಟ್ಟುಕೊಂಡಿವೆ. ಉಮಾ ಮುಕುಂದ ಈವರೆಗೂ ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ೩೬ ಕವಿತೆಗಳನ್ನು ಅವಧಿಯ ಜಿ.ಎನ್.ಮೋಹನರ “ಬಹುರೂಪಿ” ಪ್ರಕಾಶನವು “ಕಡೇ ನಾಲ್ಕು ಸಾಲು” ಹೆಸರಿನಲ್ಲಿ ಪ್ರಕಟಿಸಿದೆ. ಸಂಕಲನದ ನಾಡಿಮಿಡಿತವನ್ನು ಅದ್ಭುತವಾಗಿ ಹಿಡಿದ ಹೆಚ್. ಎಸ್. ರಾಘವೇಂದ್ರರಾವ್ ಅವರ ಮುನ್ನುಡಿ ಮತ್ತು ಇಲ್ಲಿನೆಲ್ಲ ಪದ್ಯಗಳ ಉಸಿರಲ್ಲೂ ಇರುವ ಬಗೆಬಗೆಯ ಏರಿಳಿತಗಳನ್ನು ವೈದೇಹಿಯವರ ಬೆನ್ನುಡಿ ದಾಖಲಿಸಿ ಉಳಿದವರು ಇನ್ನು ಈ ಕುರಿತು ಬರೆಯಲು ಸಾಧ್ಯವೇ ಇಲ್ಲದಂಥ ಅದ್ಭುತ ನೋಟವನ್ನು ಈ ಇಬ್ಬರೂ ಕೊಟ್ಟಿದ್ದಾರೆ. ಈ ಪುಸ್ತಕಕ್ಕೆ ಹಾಸನದ ಮಾಣಿಕ್ಯ ಪ್ರಕಾಶನದ “ಕಾವ್ಯ ಮಾಣಿಕ್ಯ” ಪ್ರಶಸ್ತಿಯೂ ಲಭಿಸಿದೆ. ನಿತ್ಯ ದಂದುಗದ ಸಂತೆಯಲ್ಲಿ ಯಾವ ಕಾರಣಕ್ಕೂ ಕಳೆದು ಹೋಗ(ಲೇ)ಬಾರದೆಂಬ ಅತಿ ಎಚ್ಚರದ ಸೂಕ್ಷ್ಮತೆಯ ಜೊತೆಗೇ ಎಂಥ ರಿಕ್ತತೆಯಲ್ಲೂ ಸಂವೇದನಾಶೀಲತೆಯನ್ನು ಬಿಟ್ಟುಕೊಡದೆ ಕಾಪಿಟ್ಟುಕೊಳ್ಳಲೇ ಬೇಕೆಂಬ ಹೆಬ್ಬಯಕೆಯ ಈ ಕವಿಯ ಕವಿತೆಗಳು ಸ್ವಗತದಂತೆ ಮತ್ತು ಮನುಷ್ಯತ್ವದ ಮೇರು ಯಾಚ(ತ)ನೆಗಳಂತೆ ಸರಳವಾದ ಕವಿತೆಗಳಾಗಿ ಅರಳಿವೆ ಮತ್ತು ಮೇಲ್ನೋಟದ ಯಾವ ಸಂಕೀರ್ಣತೆಯನ್ನು ತೋರದೆಯೂ ಆ ಸಂಕೀರ್ಣತೆಯನ್ನೇ ಆಭರಣವನ್ನಾಗಿ ಹೊದ್ದ ಅನುಪಮ ಅನುಭವದ ಸಾರ ಸರ್ವಸ್ವವೇ ಆಗಿ ಬದಲಾಗಿವೆ. ಬದುಕ ಪಯಣದ ನಿರಂತರದ ಹಾದಿಯಲ್ಲೂ ನಿತ್ಯ ಹೊಸತನ್ನೇ ಕಾಣುವ ಬಯಸುವ ಈ ಕವಿ ಮನಸ್ಸು ಅನುಭವದಿಂದ ಮಾಗಿದ ನಿಜದ ಅನುಭಾವವೇ ಆಗಿ ಬದಲಾಗಿದೆ. ಉದಾಹರಣೆಗಾಗಿ “ದೈನಿಕ” ಪದ್ಯದ ಪೂರ್ಣ ಪಾಠವನ್ನು ಗಮನಿಸಿ; ದೈನಿಕ ಅದೇ ಸೂರ್ಯ ಅದೇ ಹಗಲು ಬೆಳಕಿನಾಟ ಬೇರೆ ಬೇರೆ ಅದೇ ಗಿಡ ಅದೇ ಮರ ಎಲೆ ಎಲೆಯ ನವಿರು ಬೇರೆ ಅದೇ ಹಕ್ಕಿ ಅದೇ ಹಾಡು ಪಾಡು ಮಾತ್ರ ಬೇರೆ ಬೇರೆ ಅದೇ ನಡಿಗೆ ಅದೇ ಜನ ಉಸಿರ ಭಾರ ಬೇರೆ ಬೇರೆ ಅದೇ ಅಡುಗೆ ಅದೇ ಸಾರು ಅಂದಂದಿನ ರುಚಿ ಬೇರೆ ಅದೇ ಉಡುಗೆ ಅದೇ ತೊಡುಗೆ ತನುಭಾವ ಬೇರೆ ಬೇರೆ ಅದೇ ನಾನು ಅದೇ ಅವನು ಅನುದಿನದ ಸಾಂಗತ್ಯ ಬೇರೆ ಬೇರೆ ಬೇರೆ. ಪದ್ಯದ ಬಗ್ಗೆ ಬರೆಯುವಾಗ ಅಥವ ಮಾತನಾಡುವಾಗ ಕವಿಯೊಬ್ಬನ ಕವಿತೆಯ ಯಾವುದೋ ಒಂದು ಸಾಲನ್ನು ಕೋಟ್ ಮಾಡುತ್ತ ತನ್ನ ಹೇಳಿಕೆಗಳನ್ನು ಆ ವಿಮರ್ಶಕ/ ಬರಹಗಾರ ಸಮರ್ಥಿಸಿಕೊಳ್ಳುವುದುಂಟು. ಆದರೆ ಈಗ ಮೇಲೆ ಕಂಡಿರಿಸಿದ ಪದ್ಯದ ಯಾವ ಸಾಲನ್ನು ಹೇಳಿದರೂ ಇಡೀ ಪದ್ಯ ಹೇಳಲು ತವಕಿಸುತ್ತಿರುವ ಸಂಗತಿ “ಬೇರೆ ಬೇರೆ ಬೇರೆ” (different, root & totally inter depending) ಅನ್ನುವುದನ್ನು ಮುಟ್ಟಿಸಲಾಗುವುದೇ ಇಲ್ಲ ಮತ್ತು ಅನಿವಾರ್ಯವಾಗಿ ಇಡೀ ಪದ್ಯವನ್ನು ಓದದೇ ಇದ್ದರೆ ಕವಿ ಹೇಳ ಹೊರಟ ಅನುಭೂತಿ ಓದುಗನನ್ನು ತಟ್ಟುವುದೇ ಇಲ್ಲ. ಈ ಇಂಥ ಕಸುಬುದಾರಿಕೆ, ಹೇಳಿಕೆ ಅಥವ ಘೋಷಣೆಗಳ ಮೂಲಕವೇ ಮೊರೆಯುವ ಸಾಮಾನ್ಯ ಕವಿಗೆ ಸಾಧ್ಯವಿಲ್ಲದ ಸಂಗತಿ. ಈ “ತಿಳಿ”ವಳಿಕೆ ಅಗಾಧ ಓದು ಮತ್ತು ಬದುಕಿನ ಆಳ ಅನುಭವಗಳಿಂದ ದಕ್ಕಿದ ಮತ್ತು ಸಾಮಾನ್ಯ ಸಂಗತಿಗಳಿಂದಲೂ “ಅರಿವ”ರೀತಿಯಿಂದ ಮಾಗಿದ ಪದ್ಯಗಳೇ ಆಗಿವೆ. ಹಾಗೆಂದು ಇವು ಮುಕ್ತಕಗಳೂ ಅಲ್ಲ. ಉಪನಿಷತ್ತುಗಳ ಪರಿಚಯ ಇರುವವರಿಗೆ ಅಲ್ಲಿ ಬರುವ ಪ್ರಶ್ನೋತ್ತರಗಳ ಪರಿ ಅರಿತವರಿಗೆ ಇಲ್ಲಿನ ಎಲ್ಲ ಕವಿತೆಗಳೂ ಕವಿತೆಯ ವೇಷ ಧರಿಸಿದ ಅನುಭವ ಪಾರಮ್ಯದ ಬಿಕ್ಕುಗಳು ಎಂದು ಹೇಳಿದರೆ ಈ ಕವಿಗೆ ಸಮಾಧಾನವಾದೀತು. ಏಕೆಂದರೆ ಈ ಕವಿತೆಗಳಲ್ಲಿ ಕೃತ್ರಿಮತೆಯಾಗಲೀ, ಜಿದ್ದಿಗೆ ಬಿದ್ದು ಕವಿತೆ ಬರೆಯಲೇಬೇಕೆಂಬ ಆವುಟವಾಗಲೀ ಅಥವ ಬೇರೆ ಯಾರೂ ಹೇಳದ ಸಂಗತಿಯನ್ನು ತಾನು ಹೇಳಿದ್ದೇನೆ ಎಂಬ ಬಿಂಕವಾಗಲೀ ಎಳ್ಳಷ್ಟೂ ಇಲ್ಲವೇ ಇಲ್ಲ. ” ದಾರಿ” ಹೆಸರಿನ ಪದ್ಯದ ಕಡೆಯ ಸಾಲುಗಳನ್ನು ಗಮನಿಸಿ. ಬಾಗಿ ನೆಲದ ಮೇಲೆ ಚೆಲ್ಲಾಡಿದ್ದ ಕಾಸ ಒಂದೊಂದನ್ನೇ ಹೆಕ್ಕಿ ಮೆಲ್ಲನೆ ಅವಳ ಹೆಗಲು ಬಳಸಿ ಅಂಗೈಯಲ್ಲಿಟ್ಟಾಗ ಥಟ್ಟನೆ ನನ್ನ ಕೈಯನ್ನು ಗಟ್ಟಿ ಹಿಡಿಯುತ್ತಾಳೆ ಇಬ್ಬರ ಉಸಿರೂ ಬೆರೆತು ನಿಟ್ಟುಸಿರಾಗುತ್ತದೆ ಮೆಲ್ಲನೆ ಕೈ ಸಡಿಲಿಸಿ ಮನೆ ದಾರಿ ಹಿಡಿದಾಗ ಹೆಜ್ಜೆಗಳು ವಜ್ಜೆಯಾಗುತ್ತವೆ ಮನುಷ್ಯ ಮನುಷ್ಯರ ಸಾಂಗತ್ಯದ ದ್ವೈತ ಅದ್ವೈತಗಳ ಮತ್ತು ಅಸ್ಮಿತೆ- ಅನುಸಂಧಾನದ  ತಾಕಲಾಟಗಳು  ‘ಬಯಕೆ’, ‘ಹೀಗೊಂದು ಬೆಳಗು’ ‘ನೆನಪು’ ‘ನಾನೂ ನೀನೂ’ ‘ನಡೆ’ ಇತ್ಯಾದಿ ಪದ್ಯಗಳಲ್ಲಿವೆ. ಇಷ್ಟು ಹೇಳಿದ ಮಾತ್ರಕ್ಕೆ ಸಹಿಸದೇ ಈ ಕವಿಯ ಮೂಲ ಆಶಯವೇನು ಅವರು ಬದುಕಿನ ಬಗೆಗೆ ಕೊಡುವ ವ್ಯಾಖ್ಯೆಯೇನು ಎಂದೂ ರಿಪಿರಿಪಿ ಮಾಡುವವರು ಖಂಡಿತ “ಆ ದಿನ ಈ ದಿನ” ಕವಿತೆಯ ಈ ಸಾಲನ್ನು ಗಮನಿಸಬೇಕು; ಆ ದಿನ.. ಈ ದಿನ.. ಒಬ್ಬೊಬ್ಬರಿಗೂ ಒಂದೇ ದಿನ!!!! ಎಲ್ಲ ದಿನ ಎಲ್ಲರ ದಿನವಾದ ದಿನ.. ಸುದಿನ. ಇದಕ್ಕಿಂತ ಉತ್ತಮವಾದ ಸರ್ವರನ್ನೂ ಒಳಗೊಳ್ಳುವ ಸುದಿನವನ್ನು ಬಯಸುವ ಕವಿ ಮನಸ್ಸು ಇನ್ನು ಹೇಗೆ ತಾನೇ ಲೌಕಿಕದ ತರ ತಮಗಳನ್ನು ಸಹಿಸೀತು? ಹಾಗಾಗಿಯೇ ತೀರ ಸಾಮಾನ್ಯರಲ್ಲೂ ಇರುವ ಅಸಾಮಾನ್ಯ ಸಂಗತಿಗಳ ಶೋಧ ಇವರ ಕಾವ್ಯ ಕಸುಬಿನ ಮೂಲ ಸ್ರೋತ. ಹಾಗೆಂದು ಸ್ವಂತದ ಶೋಧವೂ ಕೂಡ ಬಲು ಮುಖ್ಯವಾದ ಸಂಗತಿಯೇ. ಅದನ್ನು ಈ ಪದ್ಯದಲ್ಲಿ ಗಮನಿಸಿ; ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಾನಲ್ಲ ಎನಿಸುತ್ತಿದೆ ನನಗೆ ಇನ್ನು ಫೋಟೋದಲ್ಲಿರುವ ನಾನು ನಾನಾಗಲು ಹೇಗೆ ಸಾಧ್ಯ? ಈ ಇಂಥ “ತಿಳಿ”(ಳು ಅಲ್ಲವೇ ಅಲ್ಲ)ವಳಿಕೆ ಬರುವುದು ನಿರಂತರವಾಗಿ ಕವಿ ಸಾಮಾಜಿಕನಾದಾಗ ಮಾತ್ರ ಸಾಧ್ಯ ಆಗುವ ಮಾತು. ಎಲ್ಲರಿಗೂ ತಿಳಿದಂತೆ ಶ್ರೀಮತಿ ಉಮಾ ಬಾಳ ಸಂಗಾತಿ ಮುಕುಂದ್ ಪ್ರಖ್ಯಾತ ಫೋಟೋಗ್ರಾಫರ್. ಅವರ ಕಪ್ಪು ಬಿಳುಪಿನ ಛಾಯಾಚಿತ್ರಗಳಿಗೆ ಸೆರೆ ಸಿಕ್ಕದ ಖ್ಯಾತನಾಮರು ವಿರಳಾತಿವಿರಳ. ” ಮುಖ ಮುದ್ರೆ” ಅವರ ಛಾಯಾಚಿತ್ರಗಳ ವಿಶೇಷ ಆಲ್ಬಂ. ಛಾಯಾ ಚಿತ್ರ ತೆಗೆಯುವುದು ಕೂಡ ಸವಾಲಿನ ಕೆಲಸವೇ ಹೌದು. ಒಂದು ಮಿಂಚಿನ ಕ್ಷಣದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನೇ ಇಡಿಕರಿಸಿದಂಥ ಫೋಸು ಸಿಕ್ಕಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಅವನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ. ಇದೆಲ್ಲದರಲ್ಲೂ ಮುಕುಂದರಲ್ಲಿ ತಜ್ಞತೆ ಇರುವುದರಿಂದಲೇ “ಮುಖ ಮುದ್ರೆ”ಯಲ್ಲಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಚಿತ್ರಗಳ ಜೊತೆಗೆ ಅವರ ಕುರಿತ ಟಿಪ್ಪಣಿ ಕೂಡ ಈ ಪುಸ್ತಕದಲ್ಲಿ ಇರುವುದು ವಿಶೇಷ. ಸೂಕ್ಷ್ಮತೆ ಮತ್ತು ವ್ಯಕ್ತಿಯೊಬ್ಬರ ಸಹಜತೆಯನ್ನು ಚಿತ್ರಕ್ಕಿಳಿಸುವ ವ್ಯವಧಾನ ಮುಕುಂದರಿಂದ ಉಮಾ ಕಲಿತರೋ ಅಥವಾ ಮುಕುಂದರ ಜೊತೆಗೇ ಇರುತ್ತಾ ಇರುತ್ತಾ ಅವರ ಪಟಗಳಿಗೆ ಆಹ್ವಾನಿತ ಗಣ್ಯರನ್ನು ರೂಪದರ್ಶಿಯಾಗಿಸುವ ಕಾಯಕದಲ್ಲಿ ಉಮಾ ಕಂಡುಕೊಂಡ ಅನುಭವವೆ ಹೀಗೆ ಬದಲಾಯಿತೋ ಈ ದಂಪತಿಗಳೇ ಹೇಳಬೇಕು. ಹೆಗ್ಗೋಡಿನ ನೀನಾಸಂ ಶಿಬಿರ, ಬೆಂಗಳೂರಿನ ಬಹುತೇಕ ಸಾಹಿತ್ಯಕ ಕಾರ್ಯಕ್ರಮಗಳು, ಡಾ.ಎಚ್ಚೆಸ್ವಿ ನಡೆಸಿ ಕೊಡುತ್ತಿದ್ದ ” ಅಭ್ಯಾಸ” ತರಗತಿಗಳಲ್ಲಿ ಈ ದಂಪತಿಗಳನ್ನು ಕಾಣದೇ ಉಳಿದವರಿಲ್ಲ. ಹಾಗೆಂದ ಮಾತ್ರಕ್ಕೆ ದಾಂಪತ್ಯದ ಏಳು ಬೀಳುಗಳು, ಸರಸ ವಿರಸಗಳು ಇವರನ್ನು ಬಾಧಿಸದೇ ಬಿಡದು. ಅದನ್ನು ಕವಿ “ನಡೆ” ಅನ್ನುವ ಹೆಸರಿನ ಪದ್ಯದಲ್ಲಿ  ಹೀಗೆ ಹೇಳುತ್ತಾರೆ; ನಡೆ ಎಲ್ಲೋ ಹುಟ್ಟಿದ ಅವನು ಮತ್ತೆಲ್ಲೋ ಹುಟ್ಟಿದ ನಾನು ಹೇಗೋ ಬೆಸೆದು ಬಂಧ ಶುರುವಾದ ಪಯಣ ಸಾಗಿದೆ ಮೂರು ದಶಕಗಳಿಂದ ಅಂದ ಮಾತ್ರಕ್ಕೆ ನಾವೇನು ಅಪರೂಪವಲ್ಲ ಸಿಟ್ಟು ಸೆಡವು, ಸಣ್ಣತನ ಎಲ್ಲವೂ ಇದ್ದು ಶರಂಪರ ಜಗಳವಾಡಿ ಮುಖ ತಿರುಗಿಸಿ ಮಾತು ಬಿಟ್ಟು ವಾರ ಕಳೆವಷ್ಟರಲ್ಲಿ ಸಾಕೆನಿಸಿ, ‘ಟೋಕಿಯೋ ಸ್ಟೋರಿ’ ಸಿನೆಮಾ ನೋಡೋಣವೇ ಇಂದು ಮತ್ತೆ? ಎಂದು ಕರೆದಾಗ ಅವನು, ಸೊರಗಿ ಸುಕ್ಕಿಟ್ಟ ಶುಂಠಿ ಕೊಂಬೊಂದು ಕೊನರಿದೆ ಕಾಣು ಬಾ.. ಎಂದು ಕರೆದಾಗ ನಾನು ಮರೆತು ಬಿಡುತ್ತೇವೆ ಮಾತು ಬಿಟ್ಟದ್ದನ್ನು ಮುಂದಾಗಿರಬಹುದೊಮ್ಮೆ ಅವನು ಮತ್ತೊಮ್ಮೆ ನಾನು. ಸಾಲ, ಸೋಲುಗಳಲ್ಲಿ ರೋಗ ರುಜಿನಗಳಲ್ಲಿ ದುಃಖ ದುಮ್ಮಾನದಲಿ ಹಮ್ಮು ಬಿಮ್ಮುಗಳಳಿದು ಮುಂದುವರಿದಿದೆ ನಡಿಗೆ ಹೊರಳಿ ನೋಡುತ್ತೇವೆ ಕಂಡ ಕನಸುಗಳನ್ನು ನೆನೆನೆನೆದು ನಗುತ್ತೇವೆ ಹಾರುಗುದುರೆಯನೇರಿ ಹಾರಾಡಿ ಬಿದ್ದದ್ದನ್ನು. ವಸಂತಗಳುರುಳಿ.. ಕೂದಲು ನೆರೆತು ಮಂಡಿ ಸವೆದರೂ ನಡೆಯುತ್ತಿದ್ದೇವೆ ನಿಂತರೂ ಆಗಾಗ ಜೊತೆಗೇ. ರಾಮಾನುಜನ್ ತಮ್ಮ ಯಾವುದೋ ಸಂಕಲನದ ಬಗ್ಗೆ ಮಾತನಾಡುತ್ತ ಆಡುತ್ತ “ಇದು ಯಾಕೋ ಮಾತು ಅತಿಯಾಯಿತು” ಎನ್ನುತ್ತಾರೆ. ಹಾಗೆ ನೀವು ಹೇಳುವ ಮೊದಲು ಮತ್ತು ಸೀಮಿತ ಚೌಕಟ್ಟಿನ ಈ ಅಂಕಣದ ಬರಹವನ್ನು ಎಂದಿನ ಹಾಗೆ ಕವಿಯ ನಾಲ್ಕೋ ಐದೊ ಕವಿತೆಗಳನ್ನು ಆಯ್ದು ಓದಿ ಎಂದು ಹೇಳುವ ಬದಲು ಉಮಾ ಮುಕುಂದರ ಫೇಸ್ಬುಕ್ ಅಕೌಂಟನ್ನು ತೆರೆದು ಅವರ ಎಲ್ಲ ಕವಿತೆಗಳನ್ನು ಓದಿಕೊಂಡರೆ ಸಿಕ್ಕುವ ಅನುಭೂತಿ ನಿಮ್ಮದೂ ಆಗಲಿ ಎಂದು ಹೇಳುತ್ತಲೇ ಹಾಗೆ ಪುರುಸೊತ್ತು ಇಲ್ಲದವರು ಓದಲೇ ಬೇಕಾದ ಐದು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮತ್ತು “ಕಡೇ ನಾಲ್ಕು ಸಾಲು” ಸಂಕಲನವು ಬಹುರೂಪಿ ಅಂತರ್ಜಾಲ ಮಳಿಗೆಯಲ್ಲಿ ಮಾರಾಟಕ್ಕೆ ಇದೆ ಎಂದೂ ಸೂಚಿಸಬಯಸುತ್ತೇನೆ ———————————————————————– . ಉಮಾ ಮುಕುಂದ್ ಅವರ ಕವಿತೆಗಳು ೧. ಅಲ್ಲೂ.. ಇಲ್ಲೂ.. ಅಂದೊಂದು ದಿನ ಅವಳು                                            ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು ಕೂದಲಿಳಿಬಿಟ್ಟು ಬೀಸಿ ನಡೆದವಳು ಥಟ್ಟನೆ ಹಿಂತಿರುಗಿ ತುರುಬುಕಟ್ಟಿ ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು ಇನ್ನೊಂದು ದಿನ ಅವರು ಇದ್ದಕ್ಕಿದ್ದಂತೆ ಬಂದಿಳಿದಾಗ                             ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ ಖಮ್ಮನೆ ಮಾಡಿಟ್ಟ ಖಾದ್ಯವ ಮುಚ್ಚಿಟ್ಟು ಮೆಣಸು ಜೀರಿಗೆ ಸಾರು ಮಾಡುಣಿಸಿದಳು ಮತ್ತೊಂದು ದಿನ ಇವರು ಹಾಡು ಹಾಡೆಂದು ಕಾಡಿದಾಗ ಒತ್ತರಿಸಿ ಬಂದ ‘ನಾನು ಬಳ್ಳಿಯ ಮಿಂಚ’ ಕತ್ತಲ್ಲೆ ಕತ್ತರಿಸಿ ‘ರಾಮ ಮಂತ್ರವ..’ ಹಾಡಿ ಮುಗಿಸಿದಳು ಕೊನೆಗೊಂದು ದಿನ ಸೋನೆ ಮಳೆ ಸಂಜೆ.. ಬಿಸಿಬಿಸಿ ಚಳಿ ಕೋಣೆ ಬಾಗಿಲು ಜಡಿದು, ತೆರೆದಿಟ್ಟು ಕಿಟಕಿ ಸಿಪ್ಪು ಸಿಪ್ಪಾಗಿ ಬಿಯರು ಚಪ್ಪರಿಸುವಾಗ            ಈಗಿಂದೀಗಲೆ ನಿಂತೇಹೋದರೆ ಉಸಿರು ಏನೆಂದುಕೊಳ್ಳುವರೊ ಜನರು ಎಂದೆಣಿಸಿ..  ಎಣಿಸಿ..  ಧಡಕ್ಕನೆದ್ದು ಬಾಗಿಲು ತೆರೆದಿಟ್ಟು                                            ‘ಜ಼ಿಂದಗಿ ಭರ್ ಭೂಲೇಂಗಿ ನಹಿ..’ ಎಂದು ದೊಡ್ಡಕೆ ಹಾಡತೊಡಗಿದಳು. ೨. ಸೊಪ್ಪಿನವಳು ನಟ್ಟ ನಡು ಹಗಲು ಹೊತ್ತು

Read Post »

You cannot copy content of this page

Scroll to Top