ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸಾವಿನಂಗಡಿಯಲ್ಲಿ

ಅಬ್ಳಿ,ಹೆಗಡೆ

Virus, Microscope, Infection, Illness

ಈಗ..ಇದೊಂದು ಭ್ರಹತ್ ಅಂಗಡಿ
   ಜಗದ ಮೂಲೆ,ಮೂಲೆಗೂ
   ಕೋಟಿ,ಕೋಟಿ ಶಾಖೆಗಳ ತೆರೆದು
   ಕುಳಿತಿದ್ದಾನೆ ಯಜಮಾನ ನಗುತ್ತಾ
   ಎಲ್ಲ ಶಾಖೆಗಳಲ್ಲೂ ಭರ್ಜರಿ ವ್ಯಾಪಾರ
   ಒಂದು ಕೊಂಡರೆ ಒಂದು ಫ್ರೀ,
   ಗಿರಾಕಿಗಳಿಗೆ ಆಮಿಷ,ನೂಕು ನುಗ್ಗಲು
   ಮೇಲಾಟ,ತಳ್ಳಾಟ ಕೊಂಡುಕೊಳ್ಳಲು
   ಅಂತರಕಾಯ್ದುಕೊಳ್ಳುವವರ,ಇಲ್ಲದವರ
   ಮುಖವಿದ್ದೂ ಮುಖವಾಡ ದರಿಸಿದವರ
   ದರಿಸಿಲ್ಲದವರ,ಸಂದೋಹ ಎಲ್ಲೆಡೆಗೂ
   ಹೊಸ,ಹೊಸ ಆವಿಷ್ಕಾರ
   ಶೋ ಕೇಸುಗಳಲ್ಲಿ ಗ್ಯಾರಂಟಿ ಕಾರ್ಡುಗಳ
   ಸಹಿತ.ಹಳೇ ಸಾಮಾನುಗಳೂ ಇವೆ
   ಎಲ್ಲೋ ಅಪರೂಪಕ್ಕೊಮ್ಮೆ ಬೇಡಿಕೆ
   ಅದಕ್ಕೆಂದೇ ಇಟ್ಟ ಕಪಾಟುಗಳಲ್ಲಿ
   ಅಂಗಡಿಯ ಹಿಂದೆ,ಹಿಂದೆ ಕಾಣುವಂತೆ
   ಅಪರೂಪಕ್ಕೆ ಕೊಳ್ಳಲು ಬಂದಾಗಲೂ
   ಚೌಕಾಸಿ ಗಿರಾಕಿಗಳಿಗಾಗಿ ಕಿರಿ,ಕಿರಿ
   ಯೆನಿಸಿದರೂ ಕೊಡುತ್ತಾನೆ ಯಜಮಾನ
   ನಸುನಗುತ್ತ ಅವುಗಳನ್ನ.
   ಈಗೀಗ ಲಭ್ಯವಿರುವ ಹೊಸ ಅವಿಷ್ಕಾರ
   ಗಳಿಗೇ ಹೆಚ್ಚು ಬೇಡಿಕೆ ತುಂಬ
   ಅಗ್ಗ ಅದಕ್ಕಾಗಿ.ಇಲ್ಲಿ ಕೊಳ್ಳಲು ಬೇಕಾದದ್ದು
   ಹಣ ಅಲ್ಲ,ಮಾನ,ಪ್ರಾಣ,ಧರ್ಮ,ಅಧರ್ಮ
   ನೀತಿ,ಅನೀತಿ,ಒಳಿತು,ಕೆಡುಕು,ಸತ್ಯ,ಸುಳ್ಳು
   ನೋವು,ನಲಿವು,ಬಣ್ಣ,ಭಾಷೆ,ಸಾಕ಼ರ,ರಾಕ಼ಸ
   ಯಾವುದಾದರೂ ಆದೀತು.
   ಅಸಲಿಗೆ ಇಲ್ಲಿ ಸಿಗುವ ಸಾಮಾನುಗಳು
   ಯಾವವು ಗೊತ್ತೇ….?
   ಗುಣಿತಕ್ಕೆ ಸಿಗದ ಅಗಣಿತ,ಕಲ್ಪನೆಗೂ
   ಎಟುಕದ ‘ಸಾವಿಲ್ಲ’ದ ಸಾವುಗಳು….!!

   ಸಾವಿನಂಗಡಿ ಇದು,ಹೊಸ ಆಕರ್ಷಣೆ
   ‘ಕೊರೋನಾ’ಕೊಳ್ಳಲು ಗಿರಾಕಿಗಳ
   ಜಿದ್ದಾಜಿದ್ದಿ ಕಂಡು ಖುಷಿಯಿಂದಲೋ
   ವಿಷಾದದಿಂದಲೋ…
   ನಗುತ್ತಿದ್ದಾನೆ ಯಜಮಾನ,
   ಲೋಕಾತೀತ,ಕಾಲಾತೀತ,ನಿರ್ಮೋಹಿ
             ಅತೀತ ಎತ್ತರದಲ್ಲಿ ಕುಳಿತು….!!!

*******************************

About The Author

Leave a Reply

You cannot copy content of this page

Scroll to Top